ಕತ್ರಿನಾ ಕೈಫ್ ಫೋಟೋಗೆ ಪೂಜೆ – ಕ್ಯಾಟ್ ಬೇಬಿ ದೇವರಾಗಿದ್ದು ಯಾಕೆ?
ಬದುಕಿರುವಾಗಲೇ ದೇವತೆ ಮಾಡಿದ್ರಾ?

ಮನೆಯಲ್ಲಿ ದೇವರ ಫೋಟೋ, ಮೂರ್ತಿಗಳನ್ನ ಇಟ್ಟು ಪೂಜೆ ಮಾಡೋದನ್ನ ನಾವು ನೋಡಿದ್ದೇವೆ.. ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಅವರವರ ಇಷ್ಟದ ದೇವರನ್ನ ಇಟ್ಟು ಪೂಜೆ ಮಾಡ್ತಾರೆ. ಇದು ಸಾಮಾನ್ಯ ಕೂಡ ಹೌದು.. ಆದ್ರೆ ಇಲ್ಲೊಂದು ಕುಟುಂಬ ನಟಿ ಕತ್ರಿತಾ ಕೈಫ್ ರನ್ನೇ ದೇವರು ಅಂತ ಆರಾಧಿಸ್ತಾರೆ.. ಮನೆಯಲ್ಲಿ ಆಕೆಯ ಫೋಟೋ ಇಷ್ಟು ಪೂಜೆ ಮಾಡ್ತಾರೆ. ಅಷ್ಟಕ್ಕೂ ಕತ್ರಿನಾರನ್ನ ಪೂಜೆ ಮಾಡೋದೇಕೆ ಅನ್ನೋದ್ರ ಬಗ್ಗೆ ಇನ್ಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: PAK ಸದ್ದಡಗಿಸಲು IND ರೆಡಿ! – ಬದ್ಧವೈರಿ ಬೇಟೆಗೆ ಸ್ಮೃತಿ & ಕೌರ್ ಸಜ್ಜು
ಕತ್ರಿನಾ ಕೈಫ್ ಬಾಲಿವುಡ್ನಲ್ಲಿ ಸಕತ್ ಹಿಟ್ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಬಾಲಿವುಡ್ಗೆ ಎಂಟ್ರಿಕೊಟ್ಟ ನಟಿ, ತಮ್ಮ ಅಭಿನಯದ ಮೂಲಕ ಎಲ್ಲರಿಂದಲೂ ಮೆಚ್ಚುಗೆ ಗಳಿಸ್ತಾ ಇದ್ದಾರೆ. ನಟನೆಯಿಂದಲೇ ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಪೇಜ್ ಮಾಡಿ, ಅವರ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಆದ್ರೆ ಈ ಒಂದು ಹಳ್ಳಿಯ ಕುಟುಂಬ ಕತ್ರಿನಾರನ್ನು ದೇವರಂತೆ ಆರಾದಿಸ್ತಾ ಇದ್ದಾರೆ.. ಮನೆಯಲ್ಲಿ ಫೋಟೋ ಇಟ್ಟು ಪೂಜಿಸ್ತಾರೆ..
ಕತ್ರಿನಾ ಇತ್ತೀಚೆಗೆ ತಮ್ಮ 41ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ನಟಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ. ಈ ಮಧ್ಯೆ ಈ ಒಂದು ಹಳ್ಳಿಯಲ್ಲಿ ದಂಪತಿಯೊಬ್ಬರು ಕಳೆದ 11 ವರ್ಷಗಳಿಂದ ಕತ್ರಿನಾ ಅವರನ್ನು ಪೂಜಿಸುತ್ತಿದ್ದಾರೆ. ನಟಿಯ ಹುಟ್ಟುಹಬ್ಬವನ್ನೂ ಅದ್ದೂರಿಯಾಗಿ ಆಚರಿಸಿದ್ದಾರೆ.
ಹೌದು, ಹರಿಯಾಣದ ಚಾರ್ಖಿ ದಾದ್ರಿ ಜಿಲ್ಲೆಯ ದಂಪತಿಗಳು ಪ್ರತಿದಿನ ಕತ್ರಿನಾರನ್ನು ಪೂಜಿಸುತ್ತಾರೆ. ಧನಿ ಫೋಗಟ್ ಗ್ರಾಮದ ನಿವಾಸಿಗಳಾದ ಕರಂಬಿರ್ ಅಲಿಯಾಸ್ ಬಂಟು ಮತ್ತು ಅವರ ಪತ್ನಿ ಸಂತೋಷಿ ನಟಿ ಕತ್ರಿನಾ ಕೈಫ್ ಅವರನ್ನು ತಮ್ಮ ದೇವರಂತೆ ಪೂಜಿಸುತ್ತಾರೆ. ಕಳೆದ 11 ವರ್ಷಗಳಿಂದ ಈ ಜೋಡಿ ಕತ್ರಿನಾ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ, ಲಾಡು ಹಂಚುವ ಮೂಲಕ ಸಡಗರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಕತ್ರಿನಾರನ್ನ ದೇವರಂತೆ ಪೂಜಿಸೋದಿಕ್ಕೆ ಕಾರಣ ಆಕೆಯನ್ನ ಒಂದು ಬಾರಿಯಾದ್ರೂ ಭೇಟಿಯಾಗಬೇಕೆಂಬ ಹಂಬಲ.
ಹೌದು, ಬಂಟು 2004 ರಲ್ಲಿ ಮೊದಲ ಬಾರಿಗೆ ಕತಿನಾ ಕೈಫ್ ಅವರ ಸಿನಿಮಾವನ್ನ ನೋಡಿದ್ರಂತೆ. ಅಲ್ಲಿಂದಲೇ ನಟಿಯ ಮೇಲೆ ಅಭಿಮಾನ ಹುಟ್ಟಿತಂತೆ. ಅದಾದ ಬಳಿಕ ಅಂದ್ರೆ ಸುಮಾರು 11 ವರ್ಷಗಳಿಂದ ಬಂಟು ನಟಿಯ ಫೋಟೋವನ್ನ ಮನೆಯಲ್ಲಿಟ್ಟು ಆರಾಧಿಸುತ್ತಿದ್ದಾರಂತೆ ಒಂದು ಬಾರಿಯಾದ್ರು ನಟಿಯನ್ನ ಭೇಟಿ ಮಾಡ್ಬೇಕು ಅಂತಾ ಕನಸು ಕಂಡಿದ್ದಾರಂತೆ. ಪತಿಯ ಈ ವರ್ತನೆ ನೋಡಿ ಹೆಂಡತಿಗೆ ಶಾಕ್ ಆಗಿತ್ತಂತೆ. ಈ ಹುಚ್ಚತನವನ್ನ ಬಿಟ್ಟು ಬಿಡು ಅಂತಾ ಕೂಡ ಹೇಳಿದ್ರಂತೆ. ನಟಿಯ ಮೇಲೆ ಬಂಟುಗೆ ಇರುವ ಅಭಿಮಾನವನ್ನ ಕಂಡು ಪತ್ನಿ ಕೂಡ ಆತನಿಗೆ ಬೆಂಬಲಿಸ್ತಾ ಇದ್ದಾರಂತೆ.
ಬಂಟು 14 ವರ್ಷ ವಯಸ್ಸಿನಿಂದಲೂ ಕತ್ರಿನಾ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರಂತೆ. ಈ ಬಾರಿಯೂ ಬಂಟು ಹಾಗೂ ಆತನ ಪತ್ನಿ ಕತ್ರಿನಾ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಕತ್ರಿನಾ ಬೇಗ ನಮ್ಮನ್ನು ಭೇಟಿಯಾಗಲಿ ಎಂದು ಕೈಮುಗಿದು ಪ್ರಾರ್ಥಿಸುತ್ತೇನೆ. ಕಳೆದ 11 ವರ್ಷಗಳಿಂದ ನಾವು ನಟಿಯನ್ನು ಪ್ರತಿನಿತ್ಯ ಪೂಜಿಸುತ್ತಿದ್ದೇವೆ ಅಂತಾ ಈ ವೇಳೆ ಹೇಳಿದ್ದಾರೆ.