ಲಂಕಾ ಸರಣಿಗೆ ರೋಹಿತ್ ಕ್ಯಾಪ್ಟನ್? – ಕೊಹ್ಲಿ & ಬುಮ್ರಾಗೆ ಇನ್ನೆಷ್ಟು ವಿಶ್ರಾಂತಿ?
ಗಂಭೀರ್ ಮಾತಿಗೂ ಕೇರ್ ಮಾಡಿಲ್ವಾ?

ಲಂಕಾ ಸರಣಿಗೆ ರೋಹಿತ್ ಕ್ಯಾಪ್ಟನ್? – ಕೊಹ್ಲಿ & ಬುಮ್ರಾಗೆ ಇನ್ನೆಷ್ಟು ವಿಶ್ರಾಂತಿ?ಗಂಭೀರ್ ಮಾತಿಗೂ ಕೇರ್ ಮಾಡಿಲ್ವಾ?

2024ರ ಟಿ-20 ವಿಶ್ವಕಪ್ ಗೆದ್ದಿರೋ ಭಾರತಕ್ಕೆ 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಗೆಲ್ಲೋದು ಮುಂದಿನ ಗುರಿ. ಫೆಬ್ರವರಿ ಮತ್ತು ಮಾರ್ಚ್​ನಲ್ಲಿ ನಡೆಯಲಿರುವ ಈ ಟೂರ್ನಿ ಟೀಂ ಇಂಡಿಯಾ ಪಾಲಿಗೆ ಮಹತ್ವದ ಟೂರ್ನಿಯಾಗಲಿದೆ. ಬಟ್ ಈ ಐಸಿಸಿ ಟೂರ್ನಮೆಂಟ್‌ಗೆ ಸಿದ್ಧತೆಯಾಗಿ ಭಾರತ ತಂಡವು ಎರಡು ಸರಣಿಗಳಲ್ಲಿ ಕೇವಲ ಆರು ಏಕದಿನ ಪಂದ್ಯಗಳಲ್ಲಿ ಮಾತ್ರ ಆಡಲಿದೆ. ಮೊದಲ ಸರಣಿಯು ಆಗಸ್ಟ್ 3ರಿಂದ 7ರವರೆಗೆ ಶ್ರೀಲಂಕಾದಲ್ಲಿ ನಡೆಯಲಿದ್ದು, ಎರಡನೇ ಸರಣಿಯು 2025ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿದೆ. ಸೋ 2025ರ ಚಾಂಪಿಯನ್ಸ್​ ಟ್ರೋಫಿ ಗೆಲ್ಬೇಕು ಅಂದ್ರೆ ಈ ಎರಡು ಸರಣಿಗಳು ತುಂಬಾನೇ ಇಂಪಾರ್ಟೆಂಟ್ ಆಗಲಿವೆ. ಆದ್ರೆ ಲಂಕಾ ವಿರುದ್ಧದ ಸರಣಿಗೆ ಭಾರತ ತಂಡದ ಸ್ಟಾರ್ ಕ್ರಿಕೆಟರ್ಸ್ ವಿಶ್ರಾಂತಿ ಕೇಳಿದ್ರು. ಬಟ್ ಈಗ ಟೀಂ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಸೀನಿಯರ್ ಪ್ಲೇಯರ್ಸ್​​​ಗೆ ಶಾಕ್ ಕೊಟ್ಟಿದ್ದಾರೆ. ಏನದು ಶಾಕ್? ಲಂಕಾ ಸರಣಿಗೆ ಸ್ಟಾರ್ ಪ್ಲೇಯರ್ಸ್ ಕಮ್​ಬ್ಯಾಕ್ ಮಾಡ್ತಾರಾ? ರೋಹಿತ್ ಶರ್ಮಾ ಕೊಟ್ಟ ಗುಡ್​ನ್ಯೂಸ್ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಬಿಗ್‌ಬಾಸ್‌‌ ಸೀಸನ್‌ 11 ಶುರು? – ರೀಲ್ಸ್ ರಾಣಿ ರೇಷ್ಮಾ, ಮಾನಸಾ, ರಾಘು

ಜಿಂಬಾಬ್ವೆ ಪ್ರವಾಸದ ಬಳಿಕ ಇದೀಗ ಟೀಂ ಇಂಡಿಯಾ ಲಂಕಾ ಪ್ರವಾಸಕ್ಕೆ ಸಜ್ಜಾಗಿದೆ. ಈಗಾಗಲೇ ಯಾವೆಲ್ಲಾ ಆಟಗಾರರು ಆಯ್ಕೆಯಾಗಬಹುದು ಎಂಬ ಬಗ್ಗೆ ಚರ್ಚೆ ಕೂಡ ನಡೀತಿದೆ. ಆದ್ರೆ ಈ ಸರಣಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್​ಪ್ರೀತ್ ಬುಮ್ರಾ ವಿಶ್ರಾಂತಿ ಬಯಸಿದ್ದಾರೆ ಎನ್ನಲಾಗಿತ್ತು. ಬಟ್ ಈಗ ಭಾರತದ ತಂಡದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಈ ಮೂವರೂ ಲಂಕಾ ಸರಣಿಯ ಏಕದಿನ ಪಂದ್ಯಗಳನ್ನ ಆಡುವಂತೆ ಕೇಳಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ಕೊಹ್ಲಿ, ರೋಹಿತ್ ಮತ್ತು ಬುಮ್ರಾ ಏಕದಿನ ಸರಣಿಯ ಭಾಗವಾಗಬೇಕೆಂದು ಗಂಭೀರ್ ಬಯಸಿದ್ದಾರೆ. ಬಿಸಿಸಿಐ ಈ ವಾರದಲ್ಲೇ ಈ ಎರಡು ಸರಣಿಗಳಿಗೆ ತಂಡವನ್ನು ಕೂಡ ಪ್ರಕಟಿಸಲಿದೆ.

ಟಿ20 ವಿಶ್ವಕಪ್ ಗೆಲುವಿನ ಬಳಿಕ ಆಟಗಾರರು ಪ್ರಸ್ತುತ ವಿರಾಮದಲ್ಲಿದ್ದಾರೆ. ಹೆಚ್ಚಿನ ಆಟಗಾರರು ತಮ್ಮ ಕುಟುಂಬಗಳೊಂದಿಗೆ ವಿದೇಶದಲ್ಲಿರುವುದರಿಂದ ಇನ್ನೂ ತವರಿಗೆ ಮರಳಿಲ್ಲ. ಹೀಗಾಗಿ ಈ ಮೂವರನ್ನು ಗಂಭಿರ್‌ ಸಂಪರ್ಕಿಸಿ ತಂಡಕ್ಕೆ ಮರಳುವಂತೆ ಕೇಳಿಕೊಂಡಿದ್ದಾರೆ. ಅಸಲಿಗೆ ಗಂಭೀರ್ ಈ ಮೂವರು ಆಟಗಾರರನ್ನ ಟೀಂ ಇಂಡಿಯಾಗೆ ಮರಳುವಂತೆ ಕೇಳೋಕೆ ಕಾರಣ ಕೂಡ ಇದೆ. ಮುಂದಿನ ವರ್ಷ ನಡೆಯಲಿರುವ ಮಹತ್ವದ ಐಸಿಸಿ ಟೂರ್ನಿಯಾಗಿರುವ ಚಾಂಪಿಯನ್ಸ್ ಟ್ರೋಫಿಗೂ ಮೊದಲು ಭಾರತವು ಬೆರಳೆಣಿಕೆಯಷ್ಟು ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದೆ. ಈ ವರ್ಷ ಶ್ರೀಲಂಕಾ ಸರಣಿಯಲ್ಲಿ ಮಾತ್ರ ಏಕದಿನ ಸ್ವರೂಪದಲ್ಲಿ ತಂಡ ಕಣಕ್ಕಿಳಿಯಲಿದೆ. ಹೀಗಾಗಿ ಗಂಭೀರ್ ವಿನಂತಿಯಲ್ಲೂ ಕೂಡ ಅರ್ಥವಿದೆ. ಎಲ್ಲಾ ಆಟಗಾರರು ತಂಡ ಸೇರಿಕೊಂಡರೆ, ಐಸಿಸಿ ಪಂದ್ಯಾವಳಿಗೆ ತಯಾರಿ ನಡೆಸಲು ಗಂಭೀರ್‌ಗೂ ಸುಲಭವಾಗಲಿದೆ. ಆ ಮೂಲಕ ಬಲಿಷ್ಠ ತಂಡ ಕಟ್ಟಲು ಈಗಿನಿಂದಲೇ ಯೋಜನೆ ರೂಪಿಸಬಹುದು. ಇನ್ನೊಂದು ಗುಡ್​ ನ್ಯೂಸ್ ಏನಪ್ಪ ಅಂದ್ರೆ ಗಂಭೀರ್‌ ಅವರ ಮನವಿ ಹಿನ್ನೆಲೆಯಲ್ಲಿ ವಿಶ್ರಾಂತಿಯಿಂದ ಹೊರಬಂದು ಸರಣಿಯಲ್ಲಿ ಪಾಲ್ಗೊಳ್ಳಲು ನಾಯಕ ರೋಹಿತ್‌ ಶರ್ಮಾ ಸಜ್ಜಾಗಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ ಲಂಕಾ ವಿರುದ್ಧದ ಟಿ-20 ಸರಣಿಯನ್ನ ಸೂರ್ಯಕುಮಾರ್ ಯಾದವ್ ಮುನ್ನಡೆಸೋ ಸಾಧ್ಯತೆ ಇದೆ. ಹಿತ್‌ ಶರ್ಮಾ ತಮ್ಮ ಟಿ20-ಐ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಭಾರತದ ಟಿ20 ಕ್ರಿಕೆಟ್‌ ತಂಡಕ್ಕೆ ಮುಂದಿನ ಕ್ಯಾಪ್ಟನ್‌ ಆಯ್ಕೆ ವಿಚಾರದಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಸಾಕಷ್ಟು ಕನ್ಫ್ಯೂಷನ್​ನಲ್ಲಿದೆ. ಸೂರ್ಯಕುಮಾರ್‌ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರಲ್ಲಿ ಯಾರನ್ನು ನಾಯಕನನ್ನಾಗಿ ಮಾಡಬೇಕು ಎಂದು ಟೀಮ್ ಇಂಡಿಯಾ ಆಯ್ಕೆ ಸಮಿತಿಗೆ ಗೊಂದಲ ಉಂಟಾಗಿತ್ತು. ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಟಿ20ಗೆ ಹಾರ್ದಿಕ್ ಮತ್ತು ಒಡಿಐ ಸರಣಿಗಳಿಗೆ ಕೆಎಲ್ ರಾಹುಲ್​ರನ್ನ ಕ್ಯಾಪ್ಟನ್‌ ಮಾಡಬೇಕು ಎಂದು ಟೀಮ್ ಇಂಡಿಯಾ ಸೆಲೆಕ್ಟರ್ಸ್‌ ನಿರ್ಧರಿಸಿದ್ದರು. ಆದರೆ, ಟಿ20 ಕ್ಯಾಪ್ಟನ್ಸಿ ಸಾಕು. ವೈಯಕ್ತಿಕ ಕಾರಣ ಸಲುವಾಗಿ ಒಡಿಐ ಸರಣಿ ಆಡಲು ಸಾಧ್ಯವಿಲ್ಲ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದರು. ಹೀಗಾಗಿ ಹೆಡ್‌ ಕೋಚ್‌ ಗೌತಮ್ ಗಂಭೀರ್‌ ಅಸಮಾಧಾನಗೊಂಡಿದ್ದು, ಹಾರ್ದಿಕ್‌ ಬದಲು ಸೂರ್ಯಕುಮಾರ್‌ ಯಾದವ್ ಅವರನ್ನು ಟಿ20 ಕ್ಯಾಪ್ಟನ್‌ ಮಾಡಿ ಎಂದು ಪಟ್ಟುಹಿಡಿದಿದ್ದಾರೆ.

ಸದ್ಯ ಲಂಕಾ ಸರಣಿಗೆ ಮರಳಲು ನಾಯಕ ರೋಹಿತ್ ಶರ್ಮಾ ಒಪ್ಪಿಗೆ ಸೂಚಿಸಿರೋದ್ರಿಂದ ಕನ್ನಡಿಗ ಕೆ.ಎಲ್ ರಾಹುಲ್​ಗೆ ಕ್ಯಾಪ್ಟನ್ಸಿ ಪಟ್ಟ ಕೈ ತಪ್ಪಲಿದೆ. ಯಾಕಂದ್ರೆ ಈ ಮೊದಲು 3 ಪಂದ್ಯಗಳ ಒಡಿಐ ಕ್ರಿಕೆಟ್‌ ಸರಣಿಗೆ ಕೆಎಲ್‌ ರಾಹುಲ್‌ ಅವರನ್ನು ಕ್ಯಾಪ್ಟನ್‌ ಮಾಡುವ ಬಗ್ಗೆ ಚರ್ಚೆಯಾಗಿತ್ತು. ಆದರೆ, ವಿಶ್ವಕಪ್‌ ಮುಗಿದ ಬಳಿಕ ವಿಶ್ರಾಂತಿಯಲ್ಲಿರುವ ರೋಹಿತ್‌ ಶರ್ಮಾ ಕಮ್​ಬ್ಯಾಕ್ ಮಾಡಲು ಒಪ್ಪಿಗೆ ನೀಡಿದ್ದಾರೆ. ಇನ್ನು ಶ್ರೀಲಂಕಾ ಪ್ರವಾಸದ ಬಳಿಕ ಭಾರತ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಂಡು ಟೆಸ್ಟ್‌ ಸರಣಿಯನ್ನು ಆಡಲಿದೆ. ಸೆಪ್ಟೆಂಬರ್ 19ಕ್ಕೆ ಈ ಸರಣಿ ಶುರುವಾಗುವುದರಿಂದ ಶ್ರೀಲಂಕಾ ಪ್ರವಾಸ ಮುಗಿದ ಬಳಿಕ ಅನುಭವಿ ಆಟಗಾರರಿಗೆ ಒಂದು ತಿಂಗಳ ವಿಶ್ರಾಂತಿ ಲಭ್ಯವಾಗಲಿದೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಒಡಿಐ ಸರಣಿಯಲ್ಲಿ ರೋಹಿತ್‌ ಮತ್ತು ವಿರಾಟ್‌ ಕೊಹ್ಲಿ ಪಾಲ್ಗೊಳ್ಳುವುದು ಉತ್ತಮ ಎಂದು ಚೀಫ್‌ ಸೆಲೆಕ್ಟರ್ ಅಜಿತ್‌ ಅಗರ್ಕರ್‌ ಮತ್ತು ಹೆಡ್‌ ಕೋಚ್‌ ಗಂಭೀರ್‌ ನಿರ್ಧಾರಕ್ಕೆ ಬಂದಿದ್ದಾರೆ. ಇಲ್ಲಿ ಲಂಕಾ ಸರಣಿಗೆ ರೋಹಿತ್ ಬಂದ್ರೂ ಕೂಡ  ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ. ಜಸ್‌ಪ್ರೀತ್‌ ಬುಮ್ರಾ ಕೂಡ ಈಗಾಗಗಲೇ ಮನವಿ ಮಾಡಿ ಹೆಚ್ಚುವರಿ ವಿಶ್ರಾಂತಿ ಮೊರೆ ಹೋಗಿದ್ದಾರೆ. ಈ ಇಬ್ಬರೂ ಆಟಗಾರರು ಬಾಂಗ್ಲಾ ಪ್ರವಾಸದಲ್ಲಿ ಭಾರತ ತಂಡ ಸೇರಿಕೊಳ್ಳಲಿದ್ದಾರೆ.

ಶ್ರೀಲಂಕಾ ಪ್ರವಾಸದಲ್ಲಿ ಭಾರತ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ. ಟಿ 20 ಪಂದ್ಯಗಳು ಜುಲೈ 27, 28 ಮತ್ತು 30 ರಂದು ನಡೆಯಲಿದ್ದು, ಏಕದಿನ ಪಂದ್ಯಗಳು ಆಗಸ್ಟ್ 2, 4 ಮತ್ತು 7 ರಂದು ನಡೆಯಲಿವೆ. ಶ್ರೀಲಂಕಾ ಪ್ರವಾಸದ ನಂತರ, ಭಾರತ ಕ್ರಿಕೆಟ್ ತಂಡ ಸೆಪ್ಟೆಂಬರ್ 19 ರಂದು ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಲಿದೆ. ಅಂದರೆ ಮುಂದಿನ ಪ್ರವಾಸಕ್ಕೆ 6 ವಾರಗಳ ಅಂತರವಿದೆ.  ಹೀಗಾಗಿ ಟೀಂ ಇಂಡಿಯಾಗೆ ಮರಳಬೇಕೆಂದು ಗೌತಮ್ ಗಂಭೀರ್ ಪಟ್ಟು ಹಿಡಿದಿದ್ದಾರೆ. ಅಲ್ದೇ ಲಂಕಾ ಸರಣಿಯ ಮೂಲಕ ಟೀಮ್ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಕಾರ್ಯಾರಂಭ ಮಾಡಲಿದ್ದಾರೆ. ಹೀಗಾಗಿ ಗೌತಿ ಪಾಲಿಗೂ ಇದು ತುಂಬಾ ಮಹತ್ವದ್ದು ಸರಣಿ. ಈ ಸರಣಿ ಮೂಲಕ 2025ರ ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ತಂಡವನ್ನ ಕಟ್ಟ ಪ್ಲ್ಯಾನ್​ನಲ್ಲಿದ್ದಾರೆ. ಲಂಕಾ ಸರಣಿ ವೇಳೆ ಟಿ-20 ವಿಶ್ವಕಪ್ ಮುಗಿದು ತಿಂಗಳೇ ಕಳೆಯುತ್ತೆ. ಹೀಗಾಗಿ ರೆಸ್ಟ್ ನಲ್ಲಿರುವ ಆಟಗಾರರು ತಂಡಕ್ಕೆ ಮರಳಲಿ ಅನ್ನೋದು ಆಯ್ಕೆ ಸಮಿತಿಯ ಆಶಯವಾಗಿದೆ.

Shwetha M

Leave a Reply

Your email address will not be published. Required fields are marked *