ವಿಂಬಲ್ಡನ್ ರಾಜ ಜೋಕೊ ಗರ್ವಭಂಗ – ಟೆನಿಸ್ ಹೊಸ ದೊರೆ ಅಲ್ಕರಾಜ್
ಯುವ ಸೂಪರ್ ಸ್ಟಾರ್ ಜರ್ನಿ ಹೇಗಿದೆ?

ವಿಂಬಲ್ಡನ್ ರಾಜ ಜೋಕೊ ಗರ್ವಭಂಗ – ಟೆನಿಸ್ ಹೊಸ ದೊರೆ ಅಲ್ಕರಾಜ್ಯುವ ಸೂಪರ್ ಸ್ಟಾರ್ ಜರ್ನಿ ಹೇಗಿದೆ?

ಕಳೆದ ವರ್ಷ 21 ಹರೆಯದ ಆಲ್ಕರಾಜ್ ವಿಂಬಲ್ಡನ್ಗೆ ಮುತ್ತಿಕ್ಕಿದಾಗ ಟೆನಿಸ್ ಲೋಕದಲ್ಲೊಂದು ಕೋಲ್ಮಿಂಚಿನ ಸಂಚಾರವಾಗಿತ್ತು.. ಸೋಲಿಸೋದಿಕ್ಕೆ ಅಸಾಧ್ಯ ಎಂಬಂತಿದ್ದ ಜೋಕೋವಿಕ್ಗೆ ಸೋಲಿನ ಕಹಿ ತಿನ್ನಿಸಿ, ಅಲ್ಕರಾಜ್ ಗೆದ್ದು ಬೀಗಿದ್ದರು.. ಆದ್ರೆ, ಈ ಗೆಲುವಿನ ಸಿಹಿಯ ಬೆನ್ನಲ್ಲೇ ಮತ್ತೊಮ್ಮೆ ಟೆನಿಸ್ ಯುವ ಸೂಪರ್ ಸ್ಟಾರ್ ಮತ್ತೊಂದು ಸಾಧನೆ ಮಾಡಿದ್ದಾರೆ. ಟೆನಿಸ್ ಲೋಕವನ್ನು ಆಳಲು ಬಂದಿರುವ ಹೊಸ ದೊರೆ ಎಂಬಂತೆ ಅಲ್ಕರಾಜ್ ಮತ್ತೊಂದು ಗೆಲುವಿನ ನಗೆ ಬೀರಿದ್ದಾರೆ. ಎರಡನೇ ಬಾರಿಗೆ ವಿಂಬಲ್ಡನ್ ಗೆದ್ದಿರುವ 21 ವರ್ಷದ ಆಲ್ಕರಾಜ್,  ಫ್ರೆಂಚ್ ಓಪನ್ ನ ನಂತರ ವಿಂಬಲ್ಡನ್ನಲ್ಲೂ ಗೆಲ್ಲುವ ಮೂಲಕ ತಾನು ಎಲ್ಲಾ ಬಗೆಯ ಕ್ರೀಡಾಂಗಣದಲ್ಲೂ ಆಡಬಲ್ಲ ಆಟಗಾರ ಎಂಬುದನ್ನು ಜಗತ್ತಿಗೆ ಸಾರಿದ್ದಾರೆ.. ಆಲ್ಕರಾಜ್ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್​ಗೆ ಪಂತ್ ಗುಡ್ ಬೈ? – CSKಗೆ ಎಂಟ್ರಿ.. ಧೋನಿ ಸ್ಥಾನಕ್ಕೆ ಆಯ್ಕೆ?

ಟೆನಿಸ್ ಲೋಕದ ಸುಲ್ತಾನ ನೊವಾಕ್ ಜೋಕೋವಿಕ್ ಗೆ ಈಗ ಹೊಸ ಎದುರಾಳಿ ಸಿಕ್ಕಿದ್ದಾನೆ. ಟೆನಿಸ್ನಲ್ಲಿ ಹೊಸ ಹೊಸ ದಾಖಲೆ ಬರೆಯುತ್ತಾ ಸಾಗಿದ್ದ ಜೋಕೋ ಅದೊಂದು ಸಾಧನೆಗಾಗಿ ಕಾಯ್ತಿದ್ದರು.. ಟೆನಿಸ್ನಲ್ಲಿ ಇದುವರೆಗೆ 25 ಗ್ರಾಂಡ್ ಸ್ಲಾಮ್ ಗೆದ್ದಿರುವ ದಾಖಲೆ ಯಾರ ಬಳಿಯೂ ಇಲ್ಲ.. ಅಷ್ಟೇ ಏಕೆ ಜೋಕೋ ಗೆದ್ದಷ್ಟು ಗ್ರಾಂಡ್ ಸ್ಲಾಮ್ಗಳನ್ನು ಯಾರೂ ಗೆದ್ದಿಲ್ಲ.. ಇದುವರೆಗೆ 24 ಗ್ರಾಂಡ್ಸ್ಲಾಮ್ಗಳನ್ನು ಗೆದ್ದಿರುವ ಜೋಕೋ 25ನೆಯ ಪ್ರಶಸ್ತಿಗಾಗಿ ಕಾಯ್ತಿದ್ದಾರೆ.. ಈ ಬಾರಿಯ ವಿಂಬಲ್ಡನ್ನಲ್ಲಿ ಗೆದ್ದು 25 ಗ್ರಾಂಡ್ಸ್ಲಾಮ್ ಗೆದ್ದ ಮೊದಲ ಮತ್ತು ಏಕೈಕ ಆಟಗಾರ ಎಂಬ ಸಾರ್ವಕಾಲಿಕ ದಾಖಲೆ ಬರೆಯಲು ಮುಂದಾಗಿದ್ದರು.. ಆದರೆ ಅವರ ಸಾಧನೆಯನ್ನ ಮತ್ತದೇ ಕಾರ್ಲೋಸ್ ಆಲ್ಕರಾಜ್ ಬ್ರೇಕ್ ಹಾಕಿದ್ದಾರೆ.. 21 ವರ್ಷದ ಆಲ್ಕರಾಜ್ ಮೂರು ನೇರ ಸೆಟ್ಗಳ ಮೂಲಕ ಜೋಕೋರನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.. ಈ ಮೂಲಕ ತಾನೇ ಟೆನಿಸ್ನ ಮುಂದಿನ ಸುಲ್ತಾನ ಎಂಬಂತೆ ಮೆರೆದಿದ್ದಾರೆ..

ಕಾರ್ಲೋಸ್‌ ಅಲ್ಕರಾಜ್‌ ಅವರು ಸ್ಪಾನಿಷ್‌ ಮೂಲದವರು. ಅವರ ತಂದೆ ಕಾರ್ಲೋಸ್ ಅಲ್ಕರಾಜ್ ಗೊನ್ಜಾಲೆಜ್.. ತಾಯಿ ವರ್ಜೀನಿಯಾ ಗಾರ್ಫಿಯಾ ಎಸ್ಕಾಂಡನ್. ಅಲ್ಕರಾಜ್‌ ಅವರು ಮೇ 5, 2003 ರಂದು ಸ್ಪೇನ್‌ನ ಮುರ್ಸಿಯಾದ ಪಾಲ್ಮಾರ್‌ನಲ್ಲಿ  ಜನಿಸಿದರು. ಅವರ ತಂದೆ ಅವರ ದೇಶದ ಅಗ್ರ 40 ಟೆನಿಸ್ ಆಟಗಾರರಲ್ಲಿ ಒಬ್ಬರಾಗಿದ್ದರು ಮತ್ತು 90 ರ ದಶಕದ ಆರಂಭದಲ್ಲಿ ವೃತ್ತಿಪರವಾಗಿ ಸ್ಪರ್ಧಿಸಿದರು. ಗೊನ್ಜಾಲೆಜ್ ಅವರು ನಾಲ್ಕು ವರ್ಷದವರಾಗಿದ್ದಾಗ ಅಲ್ಕರಾಝ್ ಅವರನ್ನು ಟೆನಿಸ್‌ಗೆ ಪರಿಚಯಿಸಿದರು ಮತ್ತು ವಿವಿಧ ಟೆನಿಸ್ ಕಾರ್ಯಕ್ರಮಗಳಲ್ಲಿ ತಂದೆ ಮಗ ಒಟ್ಟಿಗೆ ಆಟವಾಡಿದ್ರು.. ತಂದೆ ನಡೆದು ಬಂದ ಹಾದಿಯಲ್ಲೇ ಮಗ ಕೂಡ ನಡೆದು ಬಂದಿದ್ದಾರೆ. ಹೀಗಾಗಿಯೇ ಆಲ್ಕರಾಜ್ 4 ಬಾರಿ ಗ್ರಾಂಡ್ ಸ್ಲಾಮ್ ಫೈನಲ್ ನಲ್ಲೂ ಗೆಲ್ಲುವ ಮೂಲಕ ದಿಗ್ಗಜ ಆಟಗಾರ ರೋಜರ್ ಫೆಡರರ್ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಫೆಡರರ್ ತಮ್ಮ ಮೊದಲ 7 ಗ್ರಾಂಡ್ ಸ್ಲಾಮ್  ಫೈನಲ್ ಗಳಲ್ಲೂ ಗೆದ್ದಿದ್ದರು.

ಅಂದ್ಹಾಗೆ ಆಲ್ಕರಾಜ್ ಗ್ರಾಂಡ್ ಸ್ಲಾಮ್ ಟೂರ್ನಿಗಳಲ್ಲಿ ಫೈನಲ್ಗೇರಿದ ಎಲ್ಲಾ ಬಾರಿಯೂ ಪ್ರಶಸ್ತಿ ಗೆದ್ದು ಅಜೇಯ ಓಟ ಮುಂದುವರಿಸಿದ್ದಾರೆ.  ಆಲ್ಕರಾಜ್ 2022ರ ಯುಎಸ್ ಓಪನ್, 2023ರ ವಿಂಬಲ್ಡನ್ ಹಾಗೂ 2024ರ ಫ್ರೆಂಚ್ ಓಪನ್ ನಲ್ಲಿ ಗೆದ್ದಿದ್ದ ಆಲ್ಕರಾಜ್, ಇದೀಗ 2024ರ ವಿಂಬಲ್ಡನ್ ಫೈನಲ್ನಲ್ಲಿ ಗೆದ್ದು ಸಂಭ್ರಮಿಸಿದ್ದಾರೆ.

ಜೋಕೋವಿಕ್ ರನ್ನ ಗ್ರಾಂಡ್ ಸ್ಲಾಮ್ ಫೈನಲ್ ಗಳಲ್ಲಿ ಸತತ 2 ವರ್ಷ ಸೋಲಿಸಿದ ಕೇವಲ 2ನೇ ಆಟಗಾರ ಆಲ್ಕರಾಜ್. ಈ ಸಾಧನೆಯನ್ನು ಆಲ್ಕರಾಜ್ ಗೂ ಮೊದಲು ರಾಫೆಲ್ ನಡಾಲ್ ಮಾತ್ರ ಮಾಡಿದ್ದರು. ಫ್ರೆಂಚ್, ಯುಎಸ್ ಓಪನ್ ನಲ್ಲಿ ನಡಾಲ್ ಒಂದಕ್ಕಿಂತ ಹೆಚ್ಚು ಬಾರಿ ಜೋಕೋವಿಕ್ ರನ್ನು ಸೋಲಿಸಿದ್ದಾರೆ.

ಇನ್ನು ಕಾರ್ಲೋಸ್ ಅಲ್ಕರಾಜ್ ಆಟಕ್ಕೆ ಸೋಲದ ಮನಗಳಿಲ್ಲ. ಅದೇ ರೀತಿ ಈ ಯುವ ಸ್ಟಾರ್‌ ಆಟಗಾರರನ್ನು ಪ್ರೀತಿಸುವ ಹೃದಯಗಳು ಅಪಾರ ಸಂಖ್ಯೆಯಲ್ಲಿವೆ. ಆದರೆ ಅಲ್ಕರಾಜ್ ಅವರ ಹೆಸರು ಮಾತ್ರ ಒಂದು ಸುಂದರವಾದ ಚೆಲುವೆಯೊಂದಿಗೆ ತಳುಕು ಹಾಕಿಕೊಂಡಿದೆ.

ಹೌದು, ಕಾರ್ಲೋಸ್ ಅಲ್ಕರಾಜ್ ಅವರ ಗೆಳತಿಯ ಹೆಸರು ಮಾರಿಯಾ ಗೊನ್ಜಾಲೆಜ್. ಮಾರಿಯಾ ಗೊನ್ಜಾಲೆಜ್ ಕೂಡ ಟೆನಿಸ್ ಆಟಗಾರ್ತಿ ಆಗಿದ್ದಾರೆ. ಅಲ್ಕರಾಜ್ ಮತ್ತು ಮಾರಿಯಾ ಗೊನ್ಜಾಲೆಜ್ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಕಾರ್ಲೋಸ್ ಮತ್ತು ಮಾರಿಯಾ ಗೊನ್ಜಾಲೆಜ್ ಸ್ಪೇನ್‌ನ ಒಂದೇ ನಗರದವರಾಗಿದ್ದು, ಈ ಇಬ್ಬರ ಸಂಬಂಧ ಇನ್ನೂ ಬಹಿರಂಗಗೊಂಡಿಲ್ಲ. ಮಾರಿಯಾ ಗೊನ್ಜಾಲೆಜ್ ಅವರು ಅಲ್ಕರಾಜ್ ಗಿಂತ 3 ವರ್ಷ ದೊಡ್ಡವರಾಗಿದ್ದಾರೆ.

ವರದಿಗಳ ಪ್ರಕಾರ, ಕಾರ್ಲೋಸ್ ಮತ್ತು ಮಾರಿಯಾ ಟೆನಿಸ್ ಅಕಾಡೆಮಿಯಲ್ಲಿ ಭೇಟಿಯಾಗಿದ್ದ, ಕಾರ್ಲೋಸ್ ಕೂಡ ಅಲ್ಲಿ ತರಬೇತಿ ಪಡೆಯುತ್ತಿದ್ದರು. ಇಬ್ಬರೂ ಒಂದೇ ಟೆನಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಸ್ನೇಹಿತರಾದರು. ಕಾರ್ಲೋಸ್ ಮತ್ತು ಮಾರಿಯಾ ಅವರ ಸ್ನೇಹ ಪ್ರೀತಿಗೆ ತಿರುಗಿತು. ಟೆನಿಸ್ ಆಡುವುದಲ್ಲದೆ, ಮಾರಿಯಾ ಕಾನೂನು ಶಾಸ್ತ್ರ (ಎಲ್‌ಎಲ್‌ಬಿ) ಓದುತ್ತಿದ್ದಾರೆ.

ಈ ಅಲ್ಕರಾಜ್‌ಗೆ ಕೇವಲ 21 ವರ್ಷ. ಹೀಗಾಗಿಯೇ ಟೆನ್ನಿಸ್ ಅಂಗಳದಲ್ಲಿ ಯುವ ಸ್ಟಾರ್ ಅನ್ನೋ ಪಟ್ಟ ಕಟ್ಟಿರೋದು. ಕೇವಲ 21 ವರ್ಷಗಳಲ್ಲಿ ಟೆನ್ನಿಸ್ ದಿಗ್ಗಜರ ಬೇಟೆಯಾಡುತ್ತಾ ಒಂದೊಂದೇ ಗೆಲುವಿನ ನಗೆ ಬೀರುತ್ತಾ ಭವಿಷ್ಯದಲ್ಲಿ ವಿಂಬಲ್ಡನ್ ದೊರೆಯಾಗಲು ಹೊರಟಿದ್ದಾರೆ ಅಲ್ಕರಾಜ್. ಜೊತೆಗೆ ಜೋಕೋರಂತಹ ಟೆನಿಸ್ ದಿಗ್ಗಜರಿಗೆ ಸೋಲಿನ ಕಹಿ ಉಣಿಸಿದ ಪರಿಯಂತೂ ರೋಚಕ.

Shwetha M

Leave a Reply

Your email address will not be published. Required fields are marked *