ಡೆಲ್ಲಿ ಕ್ಯಾಪಿಟಲ್ಸ್​ಗೆ ಪಂತ್ ಗುಡ್ ಬೈ? – CSKಗೆ ಎಂಟ್ರಿ.. ಧೋನಿ ಸ್ಥಾನಕ್ಕೆ ಆಯ್ಕೆ?
ಟೀಂ ಇಂಡಿಯಾದಿಂದ್ಲೂ ರಿಷಬ್ ಔಟ್?

ಡೆಲ್ಲಿ ಕ್ಯಾಪಿಟಲ್ಸ್​ಗೆ ಪಂತ್ ಗುಡ್ ಬೈ? – CSKಗೆ ಎಂಟ್ರಿ.. ಧೋನಿ ಸ್ಥಾನಕ್ಕೆ ಆಯ್ಕೆ?ಟೀಂ ಇಂಡಿಯಾದಿಂದ್ಲೂ ರಿಷಬ್ ಔಟ್?

2025ರ ಐಪಿಎಲ್​ಗೆ ಇನ್ನೂ ಏಳೆಂಟು ತಿಂಗಳು ಬಾಕಿ ಇದೆ. ಡಿಸೆಂಬರ್​ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಆದ್ರೆ ಈಗಾಗ್ಲೇ ಹಲವು ಫ್ರಾಂಚೈಸಿಗಳಲ್ಲಿ ಮೇಜರ್ ಸರ್ಜರಿ ನಡೀತಿದೆ. ಅದ್ರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಹೆಡ್​​ಕೋಚ್ ರಿಕಿ ಪಾಂಟಿಂಗ್​ಗೆ ಗೇಟ್​ಪಾಸ್ ನೀಡಲಾಗಿದ್ದು, ಹೊಸ ಕೋಚ್ ನೇಮಕಕ್ಕೆ ಹುಡುಕಾಟ ನಡೀತಿದೆ. ಹೀಗಿರುವಾಗ್ಲೇ ಡೆಲ್ಲಿ ತಂಡದ ನಾಯಕ ರಿಷಬ್​ ಪಂತ್​ ಕೂಡ ತಂಡದಿಂದ ಹೊರ ಬರೋಕೆ ನಿರ್ಧರಿಸಿದ್ದಾರೆ ಎಂಬ ಶಾಕಿಂಗ್ ವಿಚಾರ ಸಂಚಲನ ಸೃಷ್ಟಿಸಿದೆ. 18ನೇ ಆವೃತ್ತಿಯ ಐಪಿಎಲ್​ ಆರಂಭಕ್ಕೂ ಮುನ್ನ ಪ್ರತಿ ತಂಡಗಳಿಗೆ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ. ಆದರೆ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರಿಟೈನ್ ಆಸಕ್ತಿ ಹೊಂದಿಲ್ಲ ಎನ್ನಲಾಗ್ತಿದೆ. ಹೀಗಾಗಿ ಮೆಗಾ ಹರಾಜಿನಲ್ಲಿ ಪಂತ್ ಅವರ ಹೆಸರು ಸಹ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಐಪಿಎಲ್​ 2025 ರ ಹರಾಜಿನಲ್ಲಿ ಕಾಣಿಸಿಕೊಳ್ಳಲು ಪಂತ್ ಬಯಸಿದ್ದು, ಹೀಗಾಗಿ ಮುಂದಿನ ಸೀಸನ್​ನಲ್ಲಿ ಅವರು ಡೆಲ್ಲಿ ಪರ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ. ಅಷ್ಟಕ್ಕೂ ಪಂತ್ ತಂಡವನ್ನು ತೊರೆಯುತ್ತಿರೋದೇಕೆ ಮಾಹಿತಿ ಇಲ್ಲಿದೆ.

ಡೆಲ್ಲಿಯಿಂದ ರಿಷಬ್ ಪಂತ್ ಔಟ್?

ಮೊನ್ನೆಯಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ತಂಡದ ಮುಖ್ಯ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್ ಅವರನ್ನು ತೆಗೆದು ಹಾಕಿದೆ. ಈ ಸುದ್ದಿ ಬೆನ್ನಲ್ಲೇ ಇದೀಗ ನಾಯಕ ರಿಷಭ್ ಪಂತ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 2021 ರಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆಗಿ ನೇಮಕವಾಗಿದ್ದರು. ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಪಂತ್ ತಮ್ಮ ನಾಯಕತ್ವದ ಕೌಶಲ್ಯಗಳನ್ನು ಪ್ರದರ್ಶಿಸಿದ್ದರು. ಆದ್ರೆ ಪಂತ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಮ್ಮೆಯೂ ಫೈನಲ್​ಗೆ ಪ್ರವೇಶಿಸಿಲ್ಲ. ಇದೀಗ ಡೆಲ್ಲಿ ಕ್ಯಾಪಿಟಲ್ಸ್​ ತಂಡದಿಂದ ರಿಕಿ ಪಾಂಟಿಂಗ್ ಹೊರ ಬಿದ್ದಿದ್ದಾರೆ. ಅಲ್ಲದೆ ಮುಂಬರುವ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಪಂತ್ ಹೊಸ ತಂಡದ ಪರ ಕಣಕ್ಕಿಳಿಯಲು ಇಚ್ಛಿಸಿದ್ದಾರೆ ಎನ್ನಲಾಗಿದೆ. ಅಲ್ದೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೂಡ 2025ರ ಮೆಗಾ ಹರಾಜಿನ ಮೂಲಕ ಹೊಸ ತಂಡ ಕಟ್ಟುವ ಪ್ಲ್ಯಾನ್​ನಲ್ಲಿದೆ. ಇದರ ಮೊದಲ ಹೆಜ್ಜೆ ಎಂಬಂತೆ ರಿಕಿ ಪಾಂಟಿಂಗ್ ಅವರನ್ನು ಕೋಚ್ ಸ್ಥಾನದಿಂದ ತೆಗೆದು ಹಾಕಿದ್ದಾರೆ. ಅಲ್ಲದೆ ಭಾರತೀಯ ಕೋಚ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಹೊಸ ತಂಡವನ್ನು ರೂಪಿಸಲು ಯೋಜನೆ ಹಾಕಿಕೊಂಡಿದ್ದಾರೆ. ಮತ್ತೊಂದೆಡೆ ಮಹೇಂದ್ರ ಸಿಂಗ್​ ಧೋನಿ ಮುಂದಿನ ವರ್ಷ ಐಪಿಎಲ್​ ಆಡ್ತಾರೋ ಇಲ್ವೋ ಕನ್ಫರ್ಮ್ ಇಲ್ಲ. ಇಂಪ್ಯಾಕ್ಟ್​ ನಿಯಮ ಇದ್ದರೆ ಆಡೋದಾಗಿ ಫ್ರಾಂಚೈಸಿ ಮೂಲಗಳು ಈಗಾಗಲೇ ಮಾಹಿತಿ ನೀಡಿದೆ. ಌಕ್ಚುಲಿ ಈ ಸಲವೇ ಧೋನಿ ಐಪಿಎಲ್​ನಿಂದ ನಿವೃತ್ತಿಯಾಗಬೇಕಿತ್ತು. ಆದರೆ ಅವರು ಇನ್ನೂ ನಿವೃತ್ತಿ ಪ್ರಕಟಿಸಿಲ್ಲ. ತಂಡದಲ್ಲಿ ಸೂಕ್ತ ವಿಕೆಟ್​ ಕೀಪರ್​ ಇಲ್ಲದ ಕಾರಣ ಧೋನಿ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್​ ನಡೆಸಿದ್ದರು. ಇದೀಗ ಧೋನಿ ಸ್ಥಾನಕ್ಕೆ ಪಂತ್​ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂಬ ಬಗ್ಗೆ ಚರ್ಚೆಯಾಗ್ತಿದೆ. ಅಲ್ದೇ ಧೋನಿಯವ್ರ ಮನೆಯ ಯಾವುದೇ ವಿಶೇಷ ಕಾರ್ಯಕ್ರಮದಲ್ಲೂ, ರಿಷಭ್​ ಪಂತ್​ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅಣ್ಣನ ಸ್ಥಾನದಲ್ಲಿ ನಿಂತು ಧೋನಿ ಅವರು ಪಂತ್​ಗೆ ಸಲಹೆ ನೀಡುತ್ತಾರೆ. ಪಂತ್​ ಕೂಡ ಧೋನಿ ಪರಿವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಧೋನಿಯೇ ಪಂತ್​ ಅವರನ್ನು ಸಿಎಸ್​ಕೆ ತಂಡಕ್ಕೆ ಆಹ್ವಾನಿಸಬಹುದು. ಪಂತ್​ ಚೆನ್ನೈ ಸೇರಿದರೆ ಕೀಪಿಂಗ್​ ನಡೆಸಬಹುದು. ಧೋನಿ ಇಂಪ್ಯಾಕ್ಟ್​ ಆಟಗಾರನಾಗಿ ಬ್ಯಾಟಿಂಗ್​ ಮಾತ್ರ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಈ ಎಲ್ಲಾ ಬೆಳವಣಿಗೆಗಳ ನಡುವೆ ಟೀಂ ಇಂಡಿಯಾದಲ್ಲಿ ಪಂತ್ ಸ್ಥಾನ ತೂಗುಯ್ಯಾಲೆಯಲ್ಲಿ ಇದ್ದಂತೆ ಕಾಣ್ತಿದೆ. ಗೌತಮ್​​ ಗಂಭೀರ್​ ಟೀಮ್​ ಇಂಡಿಯಾ ಮುಖ್ಯ ಕೋಚ್​ ಆಗಿ ಅನೌನ್ಸ್​ ಆಗಿದ್ದಾರೆ. ಈಗಾಗಲೇ ಟೀಮ್​ ಇಂಡಿಯಾದಲ್ಲಿ ಹಲವು ಬದಲಾವಣೆಗಳನ್ನು ತರಲು ಗಂಭೀರ್​ ಮಾಸ್ಟರ್​ ಪ್ಲಾನ್​ ಮಾಡಿದ್ದಾರೆ. ಇದಕ್ಕಾಗಿ ಗಂಭೀರ್ ಯಾವುದೇ ರೀತಿಯ ಡೇರಿಂಗ್​ ಡಿಸಿಷನ್ಸ್​ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ.  ಹೀಗಾಗಿ ಪಂತ್ ಅಷ್ಟೇನು ಉತ್ತಮ ಪ್ರದರ್ಶನ ನೀಡದ ಕಾರಣ ಪಂತ್ ಬದಲಿಗೆ ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಲು ಗೌತಮ್ ಗಂಭೀರ್ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಅಲ್ದೇ ಅವಕಾಶ ನೀಡಿದ್ರೂ ಪಂತ್​ ಇತ್ತೀಚೆಗೆ ನಡೆದ ಟಿ20 ವಿಶ್ವಕಪ್​ನಲ್ಲಿ ಒಂದೆರಡು ಪಂದ್ಯ ಹೊರತುಪಡಿಸಿ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಿಲ್ಲ. ಅಷ್ಟೇ ಅಲ್ಲ ಪಂತ್ ಇದುವರೆಗೂ ಆಡಿರೋ 74 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕೇವಲ 1158 ರನ್​ ಕಲೆ ಹಾಕಿದ್ದಾರೆ. ಆವರೇಜ್​​ ಕೇವಲ 22 ಇದ್ದು, ಸ್ಟ್ರೈಕ್​ ರೇಟ್​ ಕೂಡ 127 ಇದೆ. ಹಾಗಾಗಿ ಪಂತ್​ ಜಾಗಕ್ಕೆ ಸಂಜು ಸ್ಯಾಮ್ಸನ್​ ಅವರನ್ನು ಗಂಭೀರ್​ ತಂದು ಕೂರಿಸೋ ಸಾಧ್ಯತೆ ಇದೆ. ಒಟ್ನಲ್ಲಿ ಭೀಕರ ಅಪಘಾತದಲ್ಲಿ ಮರುಜನ್ಮ ಪಡೆದು ಬಂದ ಪಂತ್ ಮತ್ತೆ ಮೈದಾನಕ್ಕೆ ಇಳಿದು ಇಡೀ ಜಗತ್ತನ್ನೇ ಬೆರಗುಗೊಳಿಸಿದ್ರು. ಇದೀಗ ಅವ್ರ ಕ್ರಿಕೆಟ್ ಕರಿಯರ್​ನಲ್ಲಿ ಸಾಕಷ್ಟು ಬದಲಾವಣೆಗಳಾಗ್ತಿದ್ದು ಬಾರೀ ಕುತೂಹಲ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *