ಮೂರನೇ ಪಂದ್ಯಕ್ಕೂ ಮಳೆ ಅಡ್ಡಿ – ಟಿ20 ಕ್ರಿಕೆಟ್ ಸರಣಿ ಗೆದ್ದ ಟೀಮ್ ಇಂಡಿಯಾ
ಕಿವೀಸ್ ನೆಲದಲ್ಲಿ ಗೆದ್ದು ಬೀಗಿದ ಭಾರತ
ಕಿವೀಸ್ ನೆಲದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧದ ಟಿ20 ಕ್ರಿಕೆಟ್ ಸರಣಿಯನ್ನ ಟೀಮ್ ಇಂಡಿಯಾ ಗೆದ್ದುಕೊಂಡಿದೆ. ನ್ಯೂಜಿಲೆಂಡ್ ಮತ್ತು ಭಾರತದ ಮೊದಲ ಟಿ20 ಪಂದ್ಯ ಮಳೆಗೆ ಸಮರ್ಪಣೆಗೊಂಡಿತ್ತು. ಎರಡನೇ ಪಂದ್ಯದಲ್ಲಿ ಭಾರತ ಗೆದ್ದು ಬೀಗಿತ್ತು. ಮೂರನೇ ಪಂದ್ಯಕ್ಕೂ ಮಳೆರಾಯ ಕಾಟ ಕೊಟ್ಟಿದ್ದು, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ . ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಭಾರತ 1-0ಯಿಂದ ವಶಪಡಿಸಿಕೊಂಡಿದೆ.
ಇದನ್ನೂ ಓದಿ: “ಚಿನ್ನದ ಮೀನು” ಹಿಡಿದು ದಾಖಲೆ ಬರೆದ ಮೀನುಗಾರ: ಫೊಟೋ ವೈರಲ್
ಮಂಗಳವಾರ ನಡೆದ ಮೂರನೇ ಪಂದ್ಯದಲ್ಲಿ ಮೊದಲು ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡಿತ್ತು. ಆತಿಥೇಯರು 19.4 ಓವರ್ಗಳಲ್ಲಿ 160 ರನ್ಗಳಿಗೆ ಆಲೌಟ್ ಆಗಿದ್ದರು. ಕಿವೀಸ್ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ 9 ಓವರ್ಗಳಲ್ಲಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆರಂಭಿಕ ಜೋಡಿ ರಿಷಬ್ ಪಂತ್ ಮತ್ತು ಇಶಾನ್ ಕಿಶನ್ ಬೇಗನೆ ಪೆವಿಲಿಯನ್ಗೆ ಮರಳಿದರು. ಶ್ರೇಯಸ್ ಅಯ್ಯರ್ ಕೂಡ ಸೌದಿ ಬೌಲಿಂಗ್ನಲ್ಲಿ ಖಾತೆ ತೆರೆಯದೆ ಔಟಾದರು. ಸೂರ್ಯಕುಮಾರ್ ಯಾದವ್ ಕೂಡ ಕೇವಲ 16 ರನ್ ಗಳಿಸಿ ಇಶ್ ಸೋಧಿ ಎಸೆತದಲ್ಲಿ ಪೆವಿಲಿಯನ್ಗೆ ಮರಳಿದರು.
ಟೀಮ್ ಇಂಡಿಯಾ 75 ರನ್ ಗಳಿಸಿದಾಗ ಮಳೆ ಸುರಿಯಲಾರಂಭಿಸಿತು. ಇದರಿಂದಾಗಿ ಆಟ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಂಪೈರ್ಗಳು ಪಂದ್ಯವನ್ನು ಟೈ ಎಂದು ಘೋಷಿಸಿದರು. 11 ರನ್ ಗಳಿಸಲಷ್ಟೇ ಶಕ್ತರಾದ ಪಂತ್ ಟಿಮ್ ಸೌಥಿಗೆ ಬಲಿಯಾದರು. ಆ ಬಳಿಕ ಬಂದ ಶ್ರೇಯಸ್ ಅಯ್ಯರ್ ಕೂಡ ಸೌದಿ ಬೌಲಿಂಗ್ನಲ್ಲಿ ಖಾತೆ ತೆರೆಯದೆ ಔಟಾದರು. ಸೂರ್ಯಕುಮಾರ್ ಯಾದವ್ ಕೂಡ ಕೇವಲ 16 ರನ್ ಗಳಿಸಿ ಇಶ್ ಸೋಧಿ ಎಸೆತದಲ್ಲಿ ಪೆವಿಲಿಯನ್ಗೆ ಮರಳಿದರು.