“ಚಿನ್ನದ ಮೀನು” ಹಿಡಿದು ದಾಖಲೆ ಬರೆದ ಮೀನುಗಾರ: ಫೊಟೋ ವೈರಲ್
ನ್ಯೂಯಾರ್ಕ್: ವಿಶ್ವದ ಅತಿ ದೊಡ್ಡ ಹಾಗೂ ಅಪರೂಪದ ಗೋಲ್ಡ್ ಫಿಶ್ ಹಿಡಿಯುವ ಮೂಲಕ ಮೀನುಗಾರನೊಬ್ಬ ದಾಖಲೆ ನಿರ್ಮಿಸಿದ್ದಾರೆ. ಕಿತ್ತಳೆ ಬಣ್ಣದ ಮೀನಿಗೆ ʼದಿ ಕ್ಯಾರೆಟ್ ಫಿಶ್ʼ ಎಂಬ ಅಡ್ಡ ಹೆಸರಿದ್ದು, ಇದೀಗ ಫೋಟೋಗಳು ವೈರಲ್ ಆಗುತ್ತಿವೆ.
42 ವರ್ಷದ ಆಂಡಿ ಹ್ಯಾಕೆಟ್ ಫ್ರಾನ್ಸ್‌ನ ಶಾಂಪೇನ್‌ನಲ್ಲಿರುವ ಬ್ಲೂವಾಟರ್ ಕೆರೆಯಲ್ಲಿ ಮೀನಿಗೆ ಗಾಳ ಹಾಕುತ್ತಿದ್ದರು. ಈ ವೇಳೆ ದೈತ್ಯಕಾರದ ಗೋಲ್ಡ್ ಫಿಶ್ ಗಾಳಕ್ಕೆ ಸಿಕ್ಕಿದೆ. ಈ ಮೀನು ಸುಮಾರು 30.5 ಕೆಜಿ ತೂಕವಿದ್ದು, ಈ ಹಿಂದೆ ವಿಶ್ವದ ಅತಿದೊಡ್ಡ ಗೋಲ್ಡ್ ಫಿಶ್ ಎನಿಸಿಕೊಂಡಿದ್ದ 13. 6 ಕೆಜಿ ತೂಕದ ಮೀನಿಗಿಂತಲೂ ಒಂದು ಪಟ್ಟು ಹೆಚ್ಚಿದೆ ಎನ್ನಲಾಗಿದೆ.
ಇದನ್ನೂ ಓದಿ: ಈ ನಗರದಲ್ಲಿ ನೀವು ಮನೆ ಖರೀದಿಸಿದರೆ ಸಿಗಲಿದೆ 24 ಲಕ್ಷ ರೂ!
ಈ ಕುರಿತು ಮಾತನಾಡಿದ ಮೀನುಗಾರ ಆಂಡಿ ಹ್ಯಾಕೆಟ್, “ನನಗೆ ಮೊದಲೇ ಗೊತ್ತಿತ್ತು ಇಲ್ಲಿ ದೈತ್ಯಕಾರದ ಗೋಲ್ಡ್ ಫಿಶ್ ಇದೆ ಎಂದು. ನನ್ನ ಸ್ಟಿಕ್ ನ್ನು ಆ ಮೀನು ಎಳೆದಾಡಿತು. ಅದು ಕಿತ್ತಳೆ (ಆರೇಂಜ್) ಬಣ್ಣದಲ್ಲಿದೆ ಎನ್ನುವುದನ್ನು ಒಮ್ಮೆ ಸ್ಟಿಕ್ ನ್ನು ಎಳೆದಾಗ ನೋಡಿದೆ. ಸುಮಾರು 25 -30 ನಿಮಿಷದವರೆಗೆ ಮೀನನ್ನು ಹಾಗೆಯೇ ಸುತ್ತಾಡಿಸಿ ಬಳಿಕ ಮೀನನ್ನು ಮೇಲಕ್ಕೆ ತಂದೆ”ಎಂದು ಹೇಳಿದ್ದಾರೆ.
ಬ್ಲೂವಾಟರ್ ಲೇಕೆಸ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಮೀನಿನ ಫೋಟೋಗಳನ್ನು ಪೊಸ್ಟ್ ಮಾಡಲಾಗಿದೆ. ಈ ಮೀನನ್ನು 15 ವರ್ಷಗಳ ಹಿಂದೆ ಕೆರೆಗೆ ಬಿಡಲಾಗಿತ್ತು. ಮೀನನ್ನು ಹಿಡಿದ ಬಳಿಕ ಆಂಡಿ ಹ್ಯಾಕೆಟ್ ಮೀನನ್ನು ಪುನಃ ಕೆರೆಗೆ ಬಿಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಈ ಮೀನಿನ ತೂಕ 30.5 ಕೆ.ಜಿ. ಇದಕ್ಕೂ ಮುನ್ನ 2019 ರಲ್ಲಿ ಯುಎಸ್ ನ ಮಿನ್ನೇಸೋಟದಲ್ಲಿ ಜೇಸನ್ ಫುಗೇಟ್ ಎನ್ನುವವರು 13.6 ಕೆ.ಜಿ ತೂಕವುಳ್ಳ ಗೋಲ್ಡ್ ಫಿಶನ್ನು ಹಿಡಿದಿದ್ದರು. ಗೋಲ್ಡ್ ಫಿಶ್ ಮಾದರಿಯಲ್ಲಿ ಇಂಥಹ ದೈತ್ಯಕಾರದ ಮೀನು ಸಿಕ್ಕಿರುವುದು ಇದೇ ಮೊದಲು. ಆದುದರಿಂದ ಈ ಮೀನು ವಿಶ್ವ ದಾಖಲೆಯನ್ನು ಮುರಿಯಬಹುದು ಎಂದು ವರದಿ ತಿಳಿಸಿದೆ.