ರಿಂಕು- ಶೆಹನೀಲ್ ಗಿಲ್ ಲವ್ವಿಡವ್ವಿ  -ಪಾರ್ಕ್‌ ನಲ್ಲಿ ಯುವ ಜೋಡಿ ಸುತ್ತಾಟ
ಶುಭ್ಮನ್ ಗಿಲ್‌ ಒಪ್ಪಿಗೆ ಸಿಕ್ತಾ?

ರಿಂಕು- ಶೆಹನೀಲ್ ಗಿಲ್ ಲವ್ವಿಡವ್ವಿ  -ಪಾರ್ಕ್‌ ನಲ್ಲಿ ಯುವ ಜೋಡಿ ಸುತ್ತಾಟಶುಭ್ಮನ್ ಗಿಲ್‌ ಒಪ್ಪಿಗೆ ಸಿಕ್ತಾ?

ರಿಂಕು ಸಿಂಗ್. ಜಿಂಬಾಬ್ವೆ ಸರಣಿಯಲ್ಲಿ ರಿಂಕು ಸಿಂಗ್ ಹವಾ ಜೋರಾಗಿದೆ. ಜೊತೆಗೆ ಕ್ಯಾಪ್ಟನ್ ಶುಬ್ಮನ್ ಗಿಲ್ ಕೂಡಾ ಜಿಂಬಾಬ್ವೆ ಸರಣಿಯಲ್ಲಿ ಹೀರೋ ಆಗಿ ಮೆರೆಯುತ್ತಿದ್ದಾರೆ. ಇದ್ರ ಮಧ್ಯೆ ರಿಂಕು ಸಿಂಗ್ ಶುಭ್ಮನ್ ಗಿಲ್ ಸಹೋದರಿ ಜೊತೆ ಲಿಂಕ್ ಶುರುವಿಟ್ಕೊಂಡಿದ್ದಾರೆ. ಮ್ಯಾಚ್ ಇದ್ದಾಗ ರಿಂಕು ಸಿಂಗ್ ಶ್ರದ್ಧೆಯಿಂದ ಆಡಿದ್ರೆ, ಬಿಡುವು ಸಿಕ್ಕಾಗಲೆಲ್ಲಾ ಜಾಲಿ ಮೂಡ್ ನಲ್ಲಿರ್ತಾರೆ. ಅದು ಯಾರ ಜೊತೆ ಗೊತ್ತಾ? ರಿಂಕುನ ಹೀರೋ ಎಂದು ಅಂದು ಹೊಗಳಿದ ಸುಂದರಿಯೇ ಈಗ ರಿಂಕು ಜೊತೆ ಫುಲ್ ಸುತ್ತಾಟ ಮಾಡ್ತಿದ್ದಾಳೆ. ಆಕೆಗೂ ಕ್ಯಾಪ್ಟನ್ ಗೂ ಸಂಬಂಧವಿದೆ.

ಇದನ್ನೂ ಓದಿ: ಗಂಭೀರ್ ಕೊಹ್ಲಿ ಒಂದಾಗಿದ್ದು ಇದಕ್ಕಾ? – ಗೌತಮ್ ಗಂಭೀರ್‌ ಗಾಗಿ ಕೊಹ್ಲಿಯನ್ನೇ ಕಡೆಗಣಿಸಿತಾ BCCI

ಟೀಮ್ ಇಂಡಿಯಾ ಮ್ಯಾಚ್ ಫಿನಿಶರ್ ಅಂತಾನೇ ಕರೆಸಿಕೊಂಡ ರಿಂಕು ಸಿಂಗ್ ಮೈದಾನದೊಳಗೆ ಸ್ಟಾರ್ ಕ್ರಿಕೆಟರ್., ಮೈದಾನದ ಹೊರಗೆ ಕಟ್ಟುಮಸ್ತಾದ ಬಾಡಿ ತೋರಿಸ್ತಾ, ಎಂಜಾಯ್ ಮಾಡೋ ಕ್ರೇಜಿ ಮ್ಯಾನ್. ಈ ಹಿಂದೆ ಕೂಡಾ ರಿಂಕು ಸಿಂಗ್ ತನ್ನ ಮಸ್ತ್ ಮಸ್ತ್ ಬಾಡಿ ತೋರಿಸ್ತಾ ಅನೇಕ ಯುವತಿಯರ ಮನಗೆದ್ದಿದ್ರು. ಈಗ್ಲೂ ಕೂಡಾ ಜಿಂಬಾಬ್ವೆಯಲ್ಲೂ ರಿಂಕು ಸಿಂಗ್ ಮ್ಯಾಚ್ ಇಲ್ಲದ ದಿನ ತನ್ನನ್ನ ಹೀರೋ ಅಂತಾ ಕರೆದ ಚೆಂದುಳ್ಳಿ ಚೆಲುವೆ ಜೊತೆ ಪಾರ್ಕ್‌ನಲ್ಲಿ ಸುತ್ತಾಡ್ತಿದ್ದಾರೆ. ಯೆಸ್.. ರಿಂಕು ಸಿಂಗ್, ಕ್ಯಾಪ್ಟನ್ ಶುಭ್‌ಮನ್ ಗಿಲ್ ಸಹೋದರಿ ಶೆಹನೀಲ್ ಗಿಲ್ ಜೊತೆ ಸುತ್ತಾಡ್ತಿದ್ದಾರೆ. ಜೊತೆಗೆ ಇಬ್ರೂ ಕ್ಲೋಸ್ ಆಗಿಯೇ ಸೆಲ್ಫೀ ತಗೊಂಡ್ ಸೋಶಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದಾರೆ.

ಜಿಂಬಾಬ್ವೆ ಸರಣಿಯ ಟಿ20 ತಂಡದ ನಾಯಕ ಶುಭ್‌ಮನ್ ಗಿಲ್ ಸಹೋದರಿಯ ಜತೆ ರಿಂಕು ಕಾಣಿಸಿಕೊಂಡಿದ್ದು ನೋಡಿ ನೆಟ್ಟಿಗರಂತೂ ರಿಂಕು ಸಿಂಗ್ ಕಾಲನ್ನ ಚೆನ್ನಾಗಿಯೇ ಎಳೆದಿದ್ದಾರೆ. ಹರಾರೆಯಲ್ಲಿನ ಪಾರ್ಕ್‌ನ ಬಳಿ ಶುಭ್‌ಮನ್ ಗಿಲ್ ಸಹೋದರಿ ಶೆಹನೀಲ್ ಗಿಲ್, ರಿಂಕು ಸಿಂಗ್ ಸುತ್ತಾಟ ನಡೆಸಿದ್ರೆ, ನೆಟ್ಟಿಗರು ಪ್ರಶ್ನೆ ಮಾಡ್ತಿರೋದು ಶುಭ್‌ಮನ್ ಗಿಲ್ ಅವರನ್ನ. ಕ್ಯಾಪ್ಟನ್ ಗಿಲ್  ಉದ್ದೇಶಿಸಿ ಏನಿದು ಸಮಾಚಾರ, ರಿಂಕು ಸಿಂಗ್ ಸಂಬಂಧ ನಿಮ್ಗೆ ಒಪ್ಪಿಗೆನಾ ಅಂತಾ ಕೇಳ್ತಿದ್ದಾರೆ.

ಇದಕ್ಕೂ ಮೊದಲು ರಿಂಕು ಸಿಂಗ್ ಮತ್ತು ಶೆಹನೀಲ್ ವಿಚಾರ ಕೂಡಾ ಗಾಸಿಫ್ ಆಗಿತ್ತು. ಐಪಿಎಲ್ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಸೌಂಡ್ ಮಾಡಿದ್ದ ರಿಂಕು ಸಿಂಗ್ , ರಜೆಯ ದಿನಗಳನ್ನು ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡಿದ್ರು. ಆಗ ರಿಂಕು ಸಿಂಗ್, ತಮ್ಮ ಶರ್ಟ್‌ ಕಳಚಿದ ಕಟ್ಟುಮಸ್ತಾದ ಬಾಡಿ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ತಿಳಿ ನೀಲಿ ಸಮುದ್ರದ ಮಧ್ಯದಲ್ಲಿನ ರೆಸಾರ್ಟ್‌ ಬದಿಯಲ್ಲಿ ನಿಂತು ಕ್ಲಿಕ್ಕಿಸಿಕೊಂಡ ಫೋಟೋ ಯಾವ ಮಾಡೆಲ್‌ಗೂ ಕಡಿಮೆಯಿಲ್ಲ ಎನ್ನುವಂತೆ ಕಾಣುತ್ತಿತ್ತು. ಈ ಫೋಟೋ ನೋಡಿ ಶುಭ್‌ಮನ್ ಗಿಲ್ ಸಹೋದರಿ ಶೆಹನೀಲ್ ಗಿಲ್‌ ‘ಓ ಹೀರೋ’ ಎಂದು ಕಮೆಂಟ್ ಮಾಡಿದ್ದರು., ಈ ಕಾಮೆಂಟ್ ಕೂಡಾ ಸಾಕಷ್ಟು ವೈರಲ್ ಆಗಿದೆ. ಇದೀಗ ಜೊತೆಯಲ್ಲೇ ಇಬ್ಬರೂ ಹರಾರೆ ಪಾರ್ಕ್‌ನಲ್ಲಿ ಸುತ್ತಾಡೋದು ನೋಡಿ ಗಿಲ್ ಸಹೋದರಿಗೂ ರಿಂಕು ಸಿಂಗ್‌ಗೆ ಲಿಂಕ್ ಇರೋದು ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್. ಜೊತೆಗೆ ಇಬ್ಬರೂ ಕ್ಲೋಸ್ ಆಗಿ ಇರೋದು ನೋಡಿ ಲವ್ವಿಡವ್ವಿ ಶುರುವಾಗಿದೆ ಅನ್ನೋ ಚರ್ಚೆಯೂ ಶುರುವಾಗಿದೆ.

Shwetha M

Leave a Reply

Your email address will not be published. Required fields are marked *