ಕೊಹ್ಲಿ ಶಕ್ತಿಯೇ ನೀಮ್ ಕರೋಲಿ ಬಾಬಾ – ಜಗತ್ತನ್ನೇ ಗೆದ್ದ ಗುರು

ಕೊಹ್ಲಿ ಶಕ್ತಿಯೇ ನೀಮ್ ಕರೋಲಿ ಬಾಬಾ – ಜಗತ್ತನ್ನೇ ಗೆದ್ದ ಗುರು

ವಿರಾಟ್ ಕೊಹ್ಲಿ. ಇಡೀ ಜಗತ್ತೇ ಮೆಚ್ಚಿರುವ ಲೆಜೆಂಡರಿ ಕ್ರಿಕೆಟರ್. ವಿಶ್ವವೇ ಕ್ರಿಕೆಟ್ ಬಗ್ಗೆ ಇಷ್ಟೊಂದು ಕ್ರೇಜ್ ಹೊಂದಿದೆ ಅಂದ್ರೆ ಅದಕ್ಕೆ ಒನ್ ಆಫ್ ದಿ ಮೇನ್ ರೀಸನ್ ಕಿಂಗ್ ವಿರಾಟ್ ಕೊಹ್ಲಿ. ಕ್ರಿಕೆಟ್ ಬಗ್ಗೆ ಗಂಧ ಗಾಳಿಯೂ ಗೊತ್ತಿಲ್ಲದ ನೆಲದಲ್ಲೂ ಕೊಹ್ಲಿ ಹೆಸರು ರಾರಾಜಿಸುತ್ತಿದೆ. ಗೋಟ್ ಅಂತಾನೇ ಕರೆಸಿಕೊಳ್ಳೋ ವಿರಾಟ್​ರನ್ನು ಒಂದು ಸಲನಾದ್ರೂ ನೋಡ್ಬೇಕು ಅಂತಾ ಫ್ಯಾನ್ಸ್​ ಸ್ಟೇಡಿಯಮ್​ಗಳಿಗೆ ಲಗ್ಗೆ ಇಡ್ತಾರೆ. ನಮ್ಮ ದೇಶ ಬಿಡಿ. ವಿದೇಶಗಳಲ್ಲೂ ವಿರಾಟ್​ರನ್ನ ತಲೆ ಮೇಲೆ ಹೊತ್ತು ಮೆರೆಸೋ ಅಭಿಮಾನಿಗಳಿದ್ದಾರೆ. ಅದ್ರಲ್ಲೂ ವಿರಾಟ್​ ಜೊತೆ ಒಂದು ಫೋಟೋ ಸಿಕ್ರಂತೂ ಜೀವನ ಪಾವನ ಅನ್ನೋ ಥರ ಫೀಲ್ ಮಾಡ್ತಾರೆ. ತಮ್ಮ ಫೋನ್ ವಾಲ್​ಪೇಪರ್, ಸೋಶಿಯಲ್ ಮೀಡಿಯಾ ಡಿಪಿಗಳಲ್ಲೂ ವಿರಾಟ್ ಫೋಟೋ ಇಟ್ಟುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಜನರ ಎಮೋಷನ್ಸ್ ಜೊತೆ ಬೆರೆತು ಹೋಗಿದ್ದಾರೆ ವಿರಾಟ್. ಹೀಗೆ ಜನರೆಲ್ಲಾ ವಿರಾಟ್​ರನ್ನ ದೇವರಂತೆ ಆರಾಧಿಸುತ್ತಿದ್ರೆ ವಿರಾಟ್ ತಮ್ಮ ಮನಸ್ಸಲ್ಲಿ ಒಬ್ಬರಿಗೆ ದೇವರ ಸ್ಥಾನ ನೀಡಿದ್ದಾರೆ. ತಮ್ಮ ಮೊಬೈಲ್ ಫೋನ್​ನಲ್ಲಿ ಆ ವ್ಯಕ್ತಿಯ ಫೋಟೋವನ್ನ ವಾಲ್​ಪೇಪರ್ ಇಟ್ಟುಕೊಂಡಿದ್ದಾರೆ. ಅಷ್ಟಕ್ಕೂ ಯಾರು ಆತ? ವಿದೇಶಿ ದೈತ್ಯರು ಮೆಚ್ಚಿರೋ ಆ ವ್ಯಕ್ತಿ ಯಾರು? ಯಾಕಿಷ್ಟು ನಂಬಿಕೆ? ಈ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗಂಭೀರ್ ಕೊಹ್ಲಿ ಒಂದಾಗಿದ್ದು ಇದಕ್ಕಾ? – ಗೌತಮ್ ಗಂಭೀರ್‌ ಗಾಗಿ ಕೊಹ್ಲಿಯನ್ನೇ ಕಡೆಗಣಿಸಿತಾ BCCI

ಟೀಮ್ ಇಂಡಿಯಾದ ಸ್ಟಾರ್ ಅಟಗಾರ. ದಾಖಲೆಗಳ ಸರದಾರ. ರನ್ ಮಷಿನ್ ವಿರಾಟ್ ಕೊಹ್ಲಿ ಅಂದರೆ ಯಾರಿಗ್ ಗೊತ್ತಿಲ್ಲ ಹೇಳಿ? ಕ್ರಿಕೆಟ್ ಇತಿಹಾಸದಲ್ಲಿ ತನ್ನದೇ ಬ್ರ್ಯಾಂಡ್ ಕ್ರಿಯೇಟ್ ಮಾಡಿರೋ ವಿರಾಟ್ ವಿಶ್ವ ಕ್ರಿಕೆಟ್​ನ ಕಿಂಗ್. ಯಂಗ್ ಜನರೇಷನ್​ಗೆ ರೋಲ್ ಮಾಡೆಲ್ ಆಗಿರೋ ವಿರಾಟ್​ರನ್ನ ಸೀನಿಯರ್ ಕ್ರಿಕೆಟರ್ಸೇ ಮುಕ್ತ ಕಂಠದಿಂದ ಗುಣಗಾನ ಮಾಡ್ತಾರೆ. ಅದ್ರಲ್ಲೂ ಟೀಂ ಇಂಡಿಯಾ ಸದಾ ಸಂಕಷ್ಟದಲ್ಲಿ ಇದ್ದಾಗ ಆಸರೆಯಾಗಿ ನಿಲ್ಲೋದೇ ಈ ಕಿಂಗ್. ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಚಾಂಪಿಯನ್ ಆಗುವಲ್ಲಿ ಕೊಹ್ಲಿಯೇ ಮೇನ್ ರೀಸನ್. ಕೊಹ್ಲಿ ಅದೆಷ್ಟರ ಮಟ್ಟಿಗೆ ಇಂಪ್ಯಾಕ್ಟ್ ಮಾಡಿದ್ದಾರೆ ಅಂದ್ರೆ ಬರೀ ಸಾಮಾನ್ಯ ಜನ ಅಷ್ಟೇ ಅಲ್ಲ. ವಿಐಪಿ, ವಿವಿಐಪಿಗಳೂ ಕೂಡ ವಿರಾಟ್ ಅಭಿಮಾನಿಗಳೇ. ಇಷ್ಟೆಲ್ಲಾ ಪಾಪ್ಯುಲಾರಿಟಿ ಹೊಂದಿರೋ ವಿರಾಟ್​ ತಮ್ಮ ಪರ್ಸನಲ್ ಲೈಫ್​ನಲ್ಲೂ ಮಾದರಿಯಾಗಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳನ್ನೂ ಮೀರಿಸೋವಷ್ಟು ನೇಮ್, ಫೇಮ್ ಇದ್ರೂ ಕೂಡ ಅವ್ರ ಫಸ್ಟ್ ಪ್ರಿಯಾರಿಟಿ ಫ್ಯಾಮಿಲಿಗೇ. ಅದ್ರಲ್ಲೂ ಪತ್ನಿ ಅನುಷ್ಕಾ ಶರ್ಮಾ ಅಂದ್ರೆ ವಿರಾಟ್​ಗೆ ಪ್ರಾಣ. ತಮ್ಮ ಮಕ್ಕಳಂದ್ರೆ ಉಸಿರು. ಹೀಗಾಗೇ ಮೈದಾನದಲ್ಲೂ ಕೂಡ ತಮ್ಮ ಸೋಲು, ಗೆಲುವನ್ನ ಫಸ್ಟ್ ಎಕ್ಸ್​ಪ್ರೆಸ್ ಮಾಡೋದು ಫ್ಯಾಮಿಲಿ ಜೊತೆ. ಟಿ-20 ವಿಶ್ವಕಪ್ ಫೈನಲ್ ಗೆದ್ದ ಮೇಲೂ ಪತ್ನಿ ಹಾಗೂ ಮಕ್ಕಳಿಗೆ ವಿಡಿಯೋ ಕಾಲ್ ಮಾಡಿ ಸಂಭ್ರಮಿಸಿದ್ದರು. ಹೀಗೆ ಕುಟುಂಬಕ್ಕೆ ಇಷ್ಟೆಲ್ಲಾ ಪ್ರಾಮುಖ್ಯತೆ ಕೊಡೋ ವಿರಾಟ್ ತಮ್ಮ ಬದುಕಲ್ಲಿ ಕುಟುಂಬಸ್ಥರನ್ನ ಹೊರತು ಪಡಿಸಿ ಅದೊಬ್ಬರಿಗೆ ದೇವರ ಸ್ಥಾನ ಕೊಟ್ಟಿದ್ದಾರೆ. ಅಷ್ಟೇ ಯಾಕೆ ತಮ್ಮ ಫೋನ್​ನ ವಾಲ್​ಪೇಪರ್​ನಲ್ಲಿ ಫೋಟೋ ಕೂಡ ಹಾಕಿಕೊಂಡಿದ್ದಾರೆ. ಅಷ್ಟಕ್ಕೂ ವಿರಾಟ್ ಮನಸ್ಸನ್ನ ಗೆದ್ದಿರೋ ಆ ವ್ಯಕ್ತಿ ಮತ್ಯಾರೂ ಅಲ್ಲ ನೀಮ್ ಕರೋಲಿ ಬಾಬಾ. ಆದ್ರೆ ಈ ಕರೋಲಿ ಬಾಬಾ ನಿಧನರಾಗಿ ದಶಕಗಳೇ ಕಳೆದಿವೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗೋ ಮೊದ್ಲೇ, ಅಂದ್ರೆ 1,900ನೇ ಇಸವಿಯಲ್ಲೇ ಜನಿಸಿದವ್ರು ಈ ಕರೋಲಿ ಬಾಬಾ. ಬಟ್ ಆಗ ಇವ್ರ ಹೆಸ್ರು ಲಕ್ಷ್ಮಣ್ ನಾರಾಯಣ ಶರ್ಮಾ. ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಅಕ್ಬರ್‌ಪುರ ಗ್ರಾಮದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸ್ತಾರೆ. ಇವ್ರಿಗೆ 11 ವರ್ಷ ವಯಸ್ಸಲ್ಲೇ ಮದುವೆ ಮಾಡಲಾಗುತ್ತೆ. ಆದ್ರೆ ಮದುವೆಯಾದ ಕೆಲವೇ ದಿನಗಳಲ್ಲಿ ಆಧ್ಯಾತ್ಮದತ್ತ ಒಲವು ಮೂಡಿ ತಮ್ಮ ಮನೆಯನ್ನು ತೊರೆಯುತ್ತಾರೆ. ಸಾಧುವಾಗಿ ಭಾರತದ ಹಲವೆಡೆ ಸಂಚಾರ ಮಾಡಿ ಅನೇಕ ಹೆಸರುಗಳಿಂದ ಕರೆಸಿಕೊಳ್ತಾರೆ. ಇನ್ನು ತಮ್ಮ 17ನೇ ವಯಸ್ಸಿನಲ್ಲೇ ಎಲ್ಲವನ್ನೂ ತಿಳಿದಿದ್ದರು ಎಂದು ನಂಬಲಾಗಿದೆ. ಹೀಗೆ ಮನೆ ಬಿಟ್ಟು 10-15 ವರ್ಷಗಳ ನಂತರ ಕುಟುಂಬಸ್ಥರ ಕೈಗೆ ಸಿಕ್ಕು ಮತ್ತೆ ಮನೆ ಸೇರ್ತಾರೆ. ಇವ್ರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ. ಹೀಗಿರುವಾಗ್ಲೇ 1962 ರಲ್ಲಿ ಬಾಬಾ ನೀಮ್ ಕರೋಲಿಯಾಗಿ ಬದಲಾದ ಇವ್ರು ಅನೇಕ ಸ್ಥಳಗಳಲ್ಲಿ 108 ಕ್ಕೂ ಹೆಚ್ಚು ದೇವಸ್ಥಾನಗಳನ್ನ ನಿರ್ಮಿಸಿದ್ದಾರಂತೆ. ಅಂತಿಮವಾಗಿ ನೀಬ್ ಕರೋರಿ ಎಂಬ ಗ್ರಾಮದಲ್ಲಿ ನೆಲೆಸಿದ್ದರಿಂದ ಇವ್ರನ್ನ ಇದೇ ಹೆಸರಿನಿಂದ ಕರೆಯಲು ಆರಂಭಿಸಿದ್ರು. ಆದ್​ರೆ ಕೆಲವ್ರು ನೀಮ್​​ ಕರೋಲಿ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ನೀಮ್​ ಕರೋಲಿ ಬಾಬಾ ಎಂದೇ ಜನಪ್ರಿಯರಾದರು. ಇವರು 1973ರಲ್ಲಿ ಅಧ್ಯಾತ್ಮಿಕತೆಯ ದಾರಿಯಲ್ಲಿಯೇ ಸಾಗಿ ದೈವಾಧೀನರಾಗಿದ್ದರು. ಹಲವು ನಗರಗಳಲ್ಲಿ ನೀಮ್​ ಕರೋಲಿ ಬಾಬಾ ಅವರ ಆಶ್ರಮಗಳಿವೆ.

ಕರೋಲಿ ಅವರನ್ನು ಗುರು ಎಂದೇ ಆರಾಧಿಸುವ ವಿರಾಟ್, ತಮ್ಮ ಪತ್ನಿ ಅನುಷ್ಕಾ ಹಾಗೂ ಮಗಳು ವಮಿಕಾ ಜೊತೆಯೂ ಬಾಬಾರ ಆಶ್ರಮಕ್ಕೆ ಭೇಟಿ ನೀಡಿದ್ದರು. ನೈನಿತಾಲ್‌ನಲ್ಲಿರುವ ನೀಮ್ ಕರೋಲಿ ಬಾಬಾ ಅವರ ಆಶ್ರಮದಲ್ಲಿ ವಿರಾಟ್ ದಂಪತಿಗಳು ದಾನ ಕಾರ್ಯಗಳನ್ನು ಮಾಡಿದ್ದರು. ಅದ್ರಲ್ಲೂ ವಿರಾಟ್‌ಗೆ ಆಧ್ಯಾತ್ಮಿಕತೆಯತ್ತ ಒಲವು ಹೆಚ್ಚಿದ್ದೇ ಈ ಬಾಬಾರಿಂದ ಎನ್ನಲಾಗಿದೆ. ಬಾಬಾರನ್ನ ಅತಿಯಾಗಿ ನಂಬುವ ವಿರಾಟ್ ಮಥುರಾದ ವೃಂದಾವನದಲ್ಲಿರುವ ಆಶ್ರಮದಲ್ಲಿ ಧ್ಯಾನ ಮಾಡಿ ಸಮಾಧಿ ದರ್ಶನವನ್ನೂ ಪಡೆದಿದ್ದರು. ಕೊಹ್ಲಿ ಮತ್ತು ಅನುಷ್ಕಾ ಫ್ಯಾಮಿಲಿ ಸದಸ್ಯರೂ ಕೂಡ ಬಾಬಾ ನೀಮ್ ಕರೋಲಿಯ ಕಟ್ಟಾ ಅನುಯಾಯಿಗಳು. ಆದರೆ ಬಹಳಷ್ಟು ಜನರಿಗೆ ಬಾಬಾ ನೀಮ್‌ ಕರೋಲಿ ಬಗ್ಗೆ ಗೊತ್ತಿಲ್ಲ ಅಷ್ಟೇ. ಇನ್ನು ನೀಮ್ ಕರೋಲಿ ಬಾಬಾರನ್ನು ಭಾರತದಲ್ಲಿ ಪ್ರಸಿದ್ಧ ಮತ್ತು ಗೌರವಾನ್ವಿತ ಮಾಸ್ಟರ್ ಎಂದೇ ಕರೆಯಲಾಗುತ್ತೆ. ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಪ್ರಸಿದ್ಧ ವ್ಯಕ್ತಿಗಳೂ ಕೂಡ ನೀಮ್ ಕರೋಲಿ ಬಾಬಾ ಬಗ್ಗೆ ಪ್ರಭಾವಿತರಾಗಿದ್ದಾರೆ. ಪ್ರಖ್ಯಾತ ಸೆಲೆಬ್ರಿಟಿಗಳನ್ನು ಒಳಗೊಂಡಂತೆ ವಿಶ್ವಾದ್ಯಂತ ಅನುಯಾಯಿಗಳನ್ನು ಹಾಗೇ ಆಶ್ರಮಗಳನ್ನ ಹೊಂದಿದ್ದಾರೆ ಈ ಬಾಬಾ. ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್ ಮತ್ತು ಜೂಲಿಯಾ ರಾಬರ್ಟ್ಸ್ ಸಹ ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ನೀಡಿದ್ದರು ಅಂದ್ರೆ ಇವ್ರು ಅದೆಷ್ಟು ಪ್ರಭಾವಿತರು ಅನ್ನೋದನ್ನ ನೀವೇ ಅರ್ಥ ಮಾಡಿಕೊಳ್ಳಿ.

ಇಂದು ಕೋಟ್ಯಂತರ ಬಳಕೆದಾರರನ್ನ ಹೊಂದಿರೋ ಫೇಸ್‌ಬುಕ್ ತನ್ನ ಆರಂಭದ ದಿನಗಳಲ್ಲಿ ತುಂಬಾನೇ ಪ್ರಾಬ್ಲಮ್ಸ್​ ಕ್ರಿಯೇಟ್ ಆಗಿತ್ತು. ಸೋ ಇಂಥಾ ಟೈಮಲ್ಲಿ ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು ಜುಕರ್‌ಬರ್ಗ್‌ ಅವ್ರಿಗೆ ಈ ಬಾಬಾ ಅವ್ರ ಆಶ್ರಮಕ್ಕೆ ಭೇಟಿ ನೀಡುವಂತೆ ಸಲಹೆ ನೀಡಿದ್ದರಂತೆ. 2006ರಲ್ಲಿ, ಸ್ಟೀವ್ ಜಾಬ್ಸ್ ನೀಮ್ ಕರೋಲಿ ಬಾಬಾ ಅವರ ಆಶ್ರಮಕ್ಕೆ ಭೇಟಿ ನೀಡುವಂತೆ ಮಾರ್ಕ್ ಜುಕರ್‌ಬರ್ಗ್‌ಗೆ ಸಲಹೆ ನೀಡಿದರು. ಮಾರ್ಕ್ 2008ರಲ್ಲಿ ಭಾರತಕ್ಕೆ ಬಂದರು ಮತ್ತು ಕೈಂಚಿಧಾಮ್‌ನಲ್ಲಿ ಕೆಲ ದಿನಗಳನ್ನ ಕಳೆದಿದ್ದರು. ಇದಾದ ನಂತರ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಲು ಆರಂಭಿಸಿದ್ದರು ಎನ್ನಲಾಗಿದೆ. ಅಷ್ಟಕ್ಕೂ ಸ್ಟೀವ್ ಜಾಬ್ಸ್ ಇಂಥಾದ್ದೊಂದು ಸಲಹೆ ನೀಡೋಕೆ ಕಾರಣವೂ ಇತ್ತು. ಆ್ಯಪಲ್‌ ಐಫೋನ್‌, ಆ್ಯಪಲ್‌ ಕಂಪ್ಯೂಟರ್‌, ಐಪ್ಯಾಡ್‌ ಇತ್ಯಾದಿ ಉತ್ಪನ್ನಗಳ ಮೂಲಕ ಜಗತ್ತನ್ನೇ ಅಚ್ಚರಿಗೊಳಿಸಿದ ಸ್ಟೀವ್ ಜಾಬ್ಸ್​ಗೆ ಆರಂಭದ ದಿನಗಳಲ್ಲಿ ಎದುರಾದ ಸವಾಲುಗಳು ಅಷ್ಟಿಷ್ಟಲ್ಲ. 1972ರಲ್ಲಿ ಸ್ಟೀವ್ ಜಾಬ್ಸ್ ತೀವ್ರ ಸಂಕಷ್ಟದಲ್ಲಿದ್ದರು. 1974ರ ವೇಳೆ ನೀಮ್ ಕರೋಲಿ ಬಾಬಾ ಬಗ್ಗೆ ಕೇಳಿದ್ದ ಸ್ಟೀವ್ ಜಾಬ್ಸ್ ಅವರು ತಮ್ಮ ಸ್ನೇಹಿತ ಡಾನ್ ಕೊಟ್ಕೆ ಅವರೊಂದಿಗೆ ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದರು. ಬಾಬಾರನ್ನ ಭೇಟಿ ಮಾಡೋದು ಅವರ ಉದ್ದೇಶವಾಗಿತ್ತು. ಬಳಿಕ ಆಶ್ರಮದಲ್ಲೇ ಒಂದೆರಡು ದಿನ ಇದ್ದು ಧ್ಯಾನ ಮಾಡಿದ್ದರು. ದೈವಿಕ ಅನುಭವಗಳ ಜೊತೆ ಭಾರತದಿಂದ ಹಿಂದಿರುಗಿದ ಸ್ವೀವ್ ಜಾಬ್ಸ್ ಮೊದಲ ಆಪಲ್ ಕಂಪ್ಯೂಟರ್ ಅನ್ನು ವಿನ್ಯಾಸಗೊಳಿಸಿದರು. ಮತ್ತು ಅದಕ್ಕೆ ಆಪಲ್ ಎಂದು ಹೆಸರಿಸಿದರು ಮತ್ತು ಅದು ವಿಶ್ವದಲ್ಲಿ ಸಾಕಷ್ಟು ಜನಪ್ರಿಯತೆ ಕೂಡ ಪಡೆಯಿತು. ಅಷ್ಟೇ ಅಲ್ಲದೆ ಆ್ಯಪಲ್ ಲೋಗೋ ಕೂಡ ಬಾಬಾ ಅವರಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ. ಸ್ಟೀವ್ ಜಾಬ್ಸ್ ಬಾಬಾರನ್ನು ನೋಡಲು ಬಂದಾಗ ನೀಮ್ ಕರೋಲಿ ಬಾಬಾ ಅವರಿಗೆ ಬಾಯಿಂದ ಕಚ್ಚಿದ ಸೇಬನ್ನು ನೀಡಿದ್ದರಂತೆ.  ಇದನ್ನೇ ಪ್ರೇರಣೆಯಾಗಿ ಸ್ವೀಕರಿಸಿದ ಸ್ಟೀವ್ ಜಾಬ್ಸ್ ತಮ್ಮ ಕಂಪನಿಗೆ ಆ್ಯಪಲ್ ಎಂದೇ ಹೆಸರಿಟ್ಟಿದ್ದು, ಕಚ್ಚಿದ ಹಣ್ಣಿನ ಲೋಗೋ ಬಳಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಅಮೆರಿಕದ ನಟಿ ಜೂಲಿಯಾ ರಾಬರ್ಟ್ಸ್, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ನೀಮ್ ಕರೋಲಿ ಬಾಬಾನಿಂದ ಪ್ರಭಾವಿತರಾಗಿದ್ದಾರೆ. ಅವರಿಂದಾಗಿಯೇ ಅವರು ಹಿಂದೂ ಧರ್ಮದ ಬಗ್ಗೆ ಆಕರ್ಷಿತರಾಗಿದ್ದಾರೆ ಎನ್ನಲಾಗಿದೆ. ಬರಾಕ್ ಒಬಾಮ ಚುನಾವಣೆಗೂ ಮುನ್ನ, ಅಮೆರಿಕದ ತಂಡವೊಂದು ಇಲ್ಲಿಗೆ ಬಂದು ಒಬಾಮಾ ಗೆಲುವಿಗಾಗಿ ಇಲ್ಲಿ ಹನುಮಾನ್ ಚಾಲೀಸಾ ಪಠಿಸಿತ್ತು. ಇನ್ನು ವೃಂದಾವನದ ಜೊತೆಗೆ, ಋಷಿಕೇಶ, ಶಿಮ್ಲಾ, ದೆಹಲಿ ಮತ್ತು ಅಮೆರಿಕದಲ್ಲೂ  ಬಾಬಾ ನೀಮ್‌ ಕರೋಲಿ ಆಶ್ರಮಗಳಿವೆ.

ಬಾಬಾ ನೀಮ್ ಕರೋಲಿ 20ನೇ ಶತಮಾನದ ಸಂತರಲ್ಲಿ ಪ್ರಮುಖರಾಗಿದ್ದಾರೆ. ಕೆಲವು ಭಕ್ತರು ಅವರನ್ನು ಭಗವಾನ್ ಹನುಮಂತನ ಅವತಾರವೆಂದು ನಂಬಿದ್ದಾರೆ. ಅವರ ಕೀರ್ತಿ, ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಇದೆ. ಆದ್ದರಿಂದಲೇ ಅವರ ಭಕ್ತರು ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಇದ್ದಾರೆ. ಇನ್ನು ಬಾಬಾರ ಅನೇಕ ಭಕ್ತರು ತಮ್ಮ ಆತ್ಮಚರಿತ್ರೆಯಲ್ಲಿ ಬಾಬಾರವರು ಯಾವುದೇ ಮಟ್ಟದಲ್ಲಿ ಏನನ್ನೂ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರು ಎಂದು ಬರೆದಿದ್ದಾರೆ. ಆಧ್ಯಾತ್ಮಿಕ ನಾಯಕರಾದ ಮಾ ಜಯ, ರಾಮ್ ದಾಸ್, ಸಂಗೀತಗಾರರಾದ ಜೈ ಉತ್ತಲ್ ಮತ್ತು ಕೃಷ್ಣ ದಾಸ್, ಮಾನವತಾವಾದಿ ಲ್ಯಾರಿ ಬ್ರಿಲಿಯಂಟ್, ವಿದ್ವಾಂಸ ಮತ್ತು ಬರಹಗಾರ ಯೆವೆಟ್ಟೆ ರೋಸರ್ ಮತ್ತು ಡೇನಿಯಲ್ ಗೋಲ್ಮನ್ ಸಹ ಬಾಬಾರ ಭಕ್ತರಾಗಿದ್ದಾರೆ. ನನ್ನ ಫೋಟೋದ ಮುಂದೆ ಯಾರೇ ಬಂದರೂ ನನ್ನ ಕಣ್ಣಿಗೆ ಬೀಳುತ್ತಾರೆ ಎಂದು ಬಾಬಾ ಹೇಳುತ್ತಿದ್ದರಂತೆ. ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಟಿವಿ ಸಂದರ್ಶನವೊಂದರಲ್ಲಿ ಈ ಮಾತನ್ನ ಹೇಳಿದ್ದು, ನೀಮ್ ಕರೋಲಿ ಬಾಬಾ ಅವರ ಚಿತ್ರವನ್ನು ನೋಡಿದ ನಂತರವೇ ನಾನು ಹಿಂದೂ ಧರ್ಮದತ್ತ ಒಲವು ತೋರಿದೆ ಎಂದಿದ್ದರು.

ಒಟ್ನಲ್ಲಿ ನೀಮ್ ಕರೋಲಿ ಬಾಬಾ ಅದೆಷ್ಟೋ ಸೆಲೆಬ್ರಿಟಿಗಳಿಗೆ ಗುರುವಾಗಿದ್ದಾರೆ. ಅದ್ರಲ್ಲೂ ವಿರಾಟ್ ಕೊಹ್ಲಿಯೇ ನಂಬಿದ್ದಾರೆ ಅನ್ನೋದು ಅದೆಷ್ಟೋ ಅಭಿಮಾನಿಗಳಿಗೆ ಅಚ್ಚರಿ ಉಂಟು ಮಾಡಿದೆ. ಕಿಂಗ್​ ಕೊಹ್ಲಿಯನ್ನ ಆರಾಧಿಸುವ ಕೋಟ್ಯಾಂತರ ಮಂದಿ, ವಿರಾಟ್​ ಕೊಹ್ಲಿಯ ಪೋಟೋವನ್ನೇ ಮೊಬೈಲ್ WALPAPER ಆಗಿ ಇಟ್ಟುಕೊಂಡಿದ್ದಾರೆ. ಅಂಥಾದ್ರಲ್ಲಿ ಕೊಹ್ಲಿಯೇ ತಮ್ಮ ಮೊಬೈಲ್​ನಲ್ಲಿ ಬಾಬಾರ ಫೋಟೋ ಇಟ್ಟುಕೊಂಡಿರೋದು ಕುತೂಹಲಕ್ಕೂ ಕಾರಣವಾಗಿದೆ. ಕೊಹ್ಲಿ ಬಾಬಾರನ್ನ ಆ ಮಟ್ಟಿಗೆ ನಂಬೋಕೆ ಕಾರಣ ಆ ಮೂರು ವರ್ಷ. ವಿರಾಟ್​, ವಿಶ್ವ ಕ್ರಿಕೆಟ್​ನ ಸಾಮ್ರಾಟನಾಗಿ ಮೆರೆದಾಡಿದ್ದರು. ರನ್ ಶಿಖರವೇ ಕಟ್ಟಿದ್ರು. ನನಗಿಲ್ಲ ಸಾಟಿ ಎಂದು ಮುನ್ನುಗ್ಗುತ್ತಿದ್ದ ವಿರಾಟ್​ಗೆ, 2019ರ ನೆವೆಂಬರ್ ಬಳಿಕ ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆ ಕಾಡಿತ್ತು. 3 ವರ್ಷಗಳ ಕಾಲ ಟೀಕೆ, ಟಿಪ್ಪಣೆ, ಅಪಮಾನ ಎದುರಿಸಿದ್ದರು. ಇಂಥಹ ಸಂಕಷ್ಟದಲ್ಲಿ ಕೊಹ್ಲಿ, ತೆರಳಿದ್ದೆ ನೀಮ್ ಕರೋಲಿ ಬಾಬಾ ದರ್ಶನಕ್ಕೆ. 2023ರ ಜನವರಿಯಲ್ಲಿ ಲಂಕಾ ಎದುರಿನ ಸರಣಿಗೂ ಮುನ್ನ ವೃಂದಾವನದ ಆಶ್ರಮಕ್ಕೆ ಭೇಟಿ ನೀಡಿದ್ರು. ಆ ಬಳಿಕ ನಡೆದಿದ್ದೆಲ್ಲ ನಿಜಕ್ಕೂ ಪವಾಡ. ವಿರಾಟ್​ ಕಟ್ಟಿದ್ದು ರನ್ ಶಿಖರ್. ಇದೇ ಕಾರಣಕ್ಕೆ ಕರೋಲಿ ಬಾಬಾ, ವಿರಾಟ್​ ಮೇಲೆ ಅಷ್ಟೊಂದು ಪ್ರಭಾವ ಬೀರಲು ಕಾರಣ ಎನ್ನಲಾಗಿದೆ. ಇಲ್ಲಿ ನೀಮ್ ಕರೋಲಿ ಬಾಬಾ ನಿಜಕ್ಕೂ ಅದೆಷ್ಟು ಪ್ರಭಾವ ಬೀರಿದ್ದಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಅವ್ರ ಒಂದು ಆರಾಧನೆ ಕೊಹ್ಲಿ ಸೇರಿದಂತೆ ಹಲವರನ್ನ ಮಾನಸಿಕವಾಗಿ ಬಲಿಷ್ಠಗೊಳಿಸಿದ್ದಂತೂ ಸತ್ಯ. .

suddiyaana

Leave a Reply

Your email address will not be published. Required fields are marked *