ದೇವರನ್ನೇ ನಂಬದ ವಿರಾಟ್ ಈಗ ಅಪ್ಪಟ ಭಕ್ತ – ಅದೆಷ್ಟು ನಂಬಿಕೆ?

ದೇವರನ್ನೇ ನಂಬದ ವಿರಾಟ್ ಈಗ ಅಪ್ಪಟ ಭಕ್ತ – ಅದೆಷ್ಟು ನಂಬಿಕೆ?

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಕಿಂಗ್ ಕೊಹ್ಲಿ ಬೇರೆಲ್ಲಾ ಕ್ರಿಕೆಟರ್ಸ್‌ಗಿಂತ ಡಿಫರೆಂಟ್ ಆಗಿ ಕಾಣೋದು ಅವರ ಲೈಫ್ ಸ್ಟೈಲ್ ಮೂಲಕ. ಕ್ರಿಕೆಟ್‌ನಲ್ಲಿ ರನ್ ಮೆಷಿನ್, ಕಿಂಗ್ ಅಂತೆಲ್ಲಾ ಕರೆಸಿಕೊಳ್ಳೋ ವಿರಾಟ್, ಆರಂಭಿಕ ದಿನಗಳಲ್ಲಿ ಹೇಗಿದ್ದರು. ಈಗ ಹೇಗೆ ಬದಲಾದ್ರು ಅನ್ನೋದೇ ನಿಜಕ್ಕೂ ಸರ್‌ಪ್ರೈಸ್. ಅಂದು ತನ್ನ ಸಾಧನೆಗೆ ತಾನೊಬ್ಬನೇ ಕಾರಣ ಅಂತಾ ಮೆರೆಯುತ್ತಿದ್ದ ಕಿಂಗ್ ಇವತ್ತು ತನ್ನೆಲ್ಲಾ ಸಾಧನೆಯನ್ನ ದೇವರಿಗೆ ಅರ್ಪಿಸುತ್ತಿದ್ದಾರೆ. ಒಂದು ಕಾಲದಲ್ಲಿ ದೇವರನ್ನ ನಾನು ನಂಬ್ತೀನಾ, ನಿಮಗೆ ಹಾಗೆ ಅನ್ನಿಸುತ್ತಾ, ನೋ ಚಾನ್ಸ್. ನನ್ನ ಬ್ಯಾಟಿಂಗ್ ಶಕ್ತಿಗೆ ನಾನೇ ಕಾರಣ ಎಂದಿದ್ದ ಇದೇ ಕಿಂಗ್ ಕೊಹ್ಲಿ ಈಗ ದೇವರ ಆಶೀರ್ವಾದವೇ ನನ್ನ ಸಾಧನೆಗೆ ಕಾರಣ ಅಂತಾ ಹೇಳುತ್ತಿರೋದ್ಯಾಕೆ, ಅಷ್ಟೇ ಅಲ್ಲ, ಕೊಹ್ಲಿ ಧರಿಸಿರುವ ಒಂದೊಂದು ವಸ್ತುವಿನಲ್ಲೂ ಒಂದೊಂದು ನಂಬಿಕೆಯಿದೆ. ಅದ್ಯಾಕೆ?, ಇದು ನಂಬಿಕೆಯೋ, ಇಲ್ಲಾ ಪಾಸಿಟಿವ್ ಫೀಲೋ? ಕ್ರಿಕೆಟ್ ಜಗತ್ತನ್ನೇ ಗೆದ್ದ ಕಿಂಗ್ ಖದರ್ ಈಗ ಫುಲ್ ಚೇಂಜ್ ಆಗಿದ್ದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗಂಭೀರ್ ಕೊಹ್ಲಿ ಒಂದಾಗಿದ್ದು ಇದಕ್ಕಾ? – ಗೌತಮ್ ಗಂಭೀರ್‌ ಗಾಗಿ ಕೊಹ್ಲಿಯನ್ನೇ ಕಡೆಗಣಿಸಿತಾ BCCI

ಟೀಮ್ ಇಂಡಿಯಾಕ್ಕೆ ಸೇರುವಾಗ ಯಂಗ್ ಟೈಗರ್.. ಬರ್ತಾ ಬರ್ತಾ ಕ್ರಿಕೆಟ್ ಲೋಕದ ಕಿಂಗ್.. ಎಲ್ಲರ ಲೈಫ್ ಜರ್ನಿಯಂತೆ ವಿರಾಟ್ ಕೊಹ್ಲಿ ಲೈಫ್ ಜರ್ನಿ ಕೂಡಾ ಏಳು ಬೀಳು, ಸೋಲು ಗೆಲುವಿನಿಂದ ಕೂಡಿದೆ. ಇದ್ರಲ್ಲಿ ಒಂದು ಹೈಲೆಟ್ ಆಗಿ ಕಾಣಿಸ್ತಿರೋದು ನಂಬಿಕೆ ವಿಚಾರ. ಯಾಕೆಂದ್ರೆ, ವಿರಾಟ್ ಎಂಬ ಯಂಗ್ ಟೈಗರ್ ಬ್ಯಾಟ್ ಹಿಡ್ಕೊಂಡು ಮೈದಾನಕ್ಕೆ ಎಂಟ್ರಿಕೊಟ್ಟ ಆರಂಭದ ದಿನಗಳಲ್ಲಿ ಎದುರಾಳಿಗಳು ಗಡಗಡ ನಡುಗುತ್ತಿದ್ರು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಉತ್ತರಾಧಿಕಾರಿ ಇವ್ರೇ ಅಂತಾ ಕೊಹ್ಲಿಯನ್ನ ಹೊಗಳುತ್ತಿದ್ದ ಕಾಲವದು. ಕ್ರಿಕೆಟ್ ಲೋಕದಲ್ಲಿ ಸಾಧನೆಯ ಉತ್ತುಂಗ ಶಿಖರದಲ್ಲಿದ್ದಾಗ ವಿರಾಟ್ ಕೊಹ್ಲಿ ಹತ್ರ ನೀವು ದೇವರನ್ನು ನಂಬ್ತೀರಾ, ಮೂಢನಂಬಿಕೆ ವಿಚಾರದಲ್ಲಿ ನಿಮ್ಮ ನಿಲುವೇನು ಅಂತಾ ಕೇಳಿದಾಗ ವಿರಾಟ್ ಹೇಳ್ತಾರೆ. ನಾನು ಪೂಜೆ ಮಾಡುವನ ರೀತಿ ಕಾಣ್ತೀನಾ..? ನನಗೆ ಆಶ್ಚರ್ಯವಾಗ್ತಿದೆ. ನಿಜವಾಗಿಯೂ ಹೆಚ್ಚು ಮಂದಿ ತಪ್ಪು ತಿಳಿದುಕೊಂಡಿದ್ದೀರಿ. ನನ್ನಲ್ಲಿ ಟ್ಯಾಟೋಗಳಿವೆ. ಸ್ಟ್ರೈಲಿಶ್ ಬಟ್ಟೆಗಳನ್ನ ಧರಿಸುತ್ತೇನೆ. ನೆಗೆಟಿವ್ ವಿಚಾರಗಳನ್ನು ಹರಡುವುದು ಸುಲಭ. ಆದರೆ ನಾನು ಅದೇನು ಮಾಡಲ್ಲ. ಓರ್ವ ಕ್ರಿಕೆಟರ್​ ಆಗಿ ಪ್ರತಿನಿತ್ಯ ಸ್ಕಿಲ್ಸ್​ ಮೇಲೆ ವರ್ಕೌಟ್ ಮಾಡ್ತೀನಿ. ಅದೇ ನನ್ನನ್ನು ಒಳ್ಳೇ ಕ್ರಿಕೆಟರ್‌ನಾಗಿ ಮಾಡಿದೆ ಅಂತಾ ಹೇಳಿದ್ದರು. ಸಕ್ಸಸ್​ ಎಂಬ ಅಲೆಯಲ್ಲಿ ತೇಲಾಡುತ್ತಿದ್ದ ವಿರಾಟ್, ಅಂದು ದೇವರನ್ನ ಅಷ್ಟಾಗಿ ನಂಬುತ್ತಿರಲಿಲ್ಲ. ಸ್ವಪ್ರಯತ್ನವೇ ಸಕ್ಸಸ್​ ಸಿಕ್ರೇಟ್​ ಎಂದೆಲ್ಲ ಹೇಳ್ತಿದ್ರು. ತಾಯಿ ಜೊತೆ ಒಮ್ಮೆ ಗುರುದ್ವಾರಕ್ಕೆ ಹೋಗಿದ್ದು ಬಿಟ್ರೆ, ಬಹಿರಂಗವಾಗಿ ದೇವಸ್ಥಾನಕ್ಕೆ, ಮಠ ಮಾನ್ಯಗಳಿಗೆ ತೆರಳಿದ್ದು ತೀರಾ ಕಡಿಮೆ. ಆದ್ರೆ, ಈಗ ಕಥೆಯೇ ಬೇರೆ. ಒಂದು ಸಲ ಫಾರ್ಮ್ ಕಳೆದುಕೊಂಡ ಕೊಹ್ಲಿ ನಂತರ  ಕಲಿತಿದ್ದು ಬದುಕಿನ ಪಾಠ..!

2019ರ ನವೆಂಬರ್​ನಿಂದ ಹಿಡಿದು 2022ರ ಏಷ್ಯಾಕಪ್​ವರೆಗಿನ ಕಾಲ ಅದು. ಕೊಹ್ಲಿ ಪಾಲಿನ ಕರಾಳ ದಿನಗಳು. ಕಿಂಗ್​ ಮುಟ್ಟಿದ್ದೆಲ್ಲಾ ಚಿನ್ನ ಅಂತಿದ್ದ ದಿನಗಳು ದೂರವಾಗಿ ಟೀಕೆಗಳು, ಹತಾಶೆ, ನೋವು, ಅವಮಾನಗಳು ಕೊಹ್ಲಿ ಎಂಬ ಸಾಮ್ರಾಟನ ಆವರಿಸಿಕೊಂಡಿದ್ವು. ಎಷ್ಟೇ ಕಷ್ಟ ಪಟ್ರೂ, ಹಾರ್ಡ್​ವರ್ಕ್​ ಮಾಡಿದ್ರೂ, ಫಾರ್ಮ್​ ಅನ್ನೋದು ಮರೀಚಿಕೆಯಾಗಿತ್ತು. ನಾನು ಯಾರನ್ನಾದರು ಗೆಲ್ಲಬಲ್ಲೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ತೇಲಾಡಿದ್ದ ವಿರಾಟ್, ಇಂಥಹ ಸಂದಿಗ್ದ ಪರಿಸ್ಥಿತಿಯಲ್ಲಿ ಹೋಗಿದ್ದೆ ಆಧ್ಯಾತ್ಮದತ್ತ.  ನಂತರ ಪ್ರತಿಕ್ಷಣ, ಪ್ರತಿಗಳಿಗೆ ವಿರಾಟ್ ಕೊಹ್ಲಿ ದೇವರನ್ನ ನೆನೆಸಿಕೊಳ್ಳಲು ಶುರುಮಾಡಿದ್ರು.

ನಂಬಿಕೆ ವಿಚಾರದಲ್ಲೂ ಕೊಹ್ಲಿ ನಂಬರ್ 1 

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಕಿವಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸಿಲ್ವರ್ ರಿಂಗ್ ಕಾಣ್ತಿದೆ. ಫ್ಯಾಶನ್​ ಉದ್ದೇಶಕ್ಕಾಗಿ ಕೊಹ್ಲಿ ಇದನ್ನ ಧರಿಸ್ತಿಲ್ಲ. ಇದ್ರ ಹಿಂದೆ ಒಂದು ಬಲವಾದ ನಂಬಿಕೆಯಿದೆ. ಇತ್ತೀಚೆಗೆ ಕಿವಿಯಲ್ಲಿ ಕಾಣಿಸ್ತಿರೋ SILVER EARRING​ ಕೂಡ ಆ ನಂಬಿಕೆಯ ಭಾಗವಾಗಿದೆ. ಕಳೆದ ವರ್ಷದ ವೆಸ್ಟ್​ ಇಂಡೀಸ್​ ಪ್ರವಾಸದಿಂದ ವಿರಾಟ್​ ಕೊಹ್ಲಿ ಕಿವಿಯಲ್ಲಿ SILVER EARRING ಕಾಣಿಸ್ತಿದೆ. ಇದ್ರ ಹಿಂದಿನ ಕಾರಣ ಫ್ಯಾಶನ್ ಅಲ್ಲ. ಒಂದು ಬಲವಾದ ನಂಬಿಕೆ. ಹೌದು.. ಈ SILVER EARRING ಅನ್ನ ಎನರ್ಜಿ ಬೂಸ್ಟರ್​ ಎಂದು ಕೊಹ್ಲಿ ನಂಬ್ತಾರೆ. ಮೈದಾನದಲ್ಲಿ ಆಡುವಾಗ, ಜಿಮ್​ ಸೆಷನ್​, ಟ್ರೈನಿಂಗ್ ಸೆಷನ್​ಗಳಲ್ಲಿ ಇದ್ರಿಂದ ನನ್ನ ಎನರ್ಜಿ ಹೆಚ್ಚಾಗುತ್ತೆ ಅನ್ನೋದು ಕೊಹ್ಲಿಯ ನಂಬಿಕೆ. ಹೀಗಾಗಿ ಈ ಕಿವಿಯೋಲೆಯನ್ನ ಧರಿಸೋ ಅಭ್ಯಾಸ ಮಾಡಿಕೊಂಡಿದ್ದಾರೆ. ಕರಿಯರ್​ ಆರಂಭದಲ್ಲಿ ಅಂದ್ರೆ ಅಂಡರ್​ 19 ದಿನಗಳಲ್ಲೂ ಕೊಹ್ಲಿ ಕಿವಿಯೋಲೆಯನ್ನ ಧರಿಸ್ತಿದ್ರು. ನಂತರ ಈಗ ಮತ್ತೊಂದು ಇಯರಿಂಗ್ ಧರಿಸಲು ಶುರುಮಾಡಿದ್ದಾರೆ. ಆದ್ರೆ, ನೆನಪಿರಲಿ, ಈ ಹೊಸ ಬೆಳ್ಳಿಯ ಕಿವಿಯೋಲೇ ಇತ್ತೀಚಿಗೆ ಕಿವಿಗೆ ಧರಿಸಿದ್ದು, ವಿರಾಟ್ ನಂಬಿಕೆಯ ಪ್ರಕಾರ ಈ ಬೆಳ್ಳಿಯ ಶಕ್ತಿಯಿಂದಲೇ ಗೆಲುವು ಸಿಕ್ಕಿದ್ದು. ಇನ್ನು ಕೊಹ್ಲಿ ಯಾವಾಗಲೂ ಬಿಳಿ ಶೂವನ್ನೇ ಧರಿಸುತ್ತಾರೆ. ಯಾವ ಫಾರ್ಮ್ಯಾಟ್ ಪಂದ್ಯವೇ ಇರಲಿ, ವೈಟ್ ಶೂ ಕಂಪಲ್ಸರಿ ಧರಿಸ್ತಾರೆ ಕೊಹ್ಲಿ. ಜೊತೆಗೆ ಗ್ಲೌಸ್ ವಿಚಾರದಲ್ಲೂ ಕೊಹ್ಲಿಗೆ ಬಲವಾದ ನಂಬಿಕೆಯಿದೆ. ಯಾವಾಗ ಕೊಹ್ಲಿ ಸೆಂಚೂರಿ ಹೊಡಿತಾರೋ ಆಗ ಗ್ಲೌಸ್ ನ್ನ ಮುಂದಿನ ಮ್ಯಾಚ್‌ಗೆ ಅದನ್ನೇ ಯೂಸ್ ಮಾಡ್ತಾರೆ.

ಏನೇ ಆದ್ರೂ ಕ್ರಿಕೆಟ್ ಲೋಕದ​ ರನ್ ಸರ್ದಾರ ವಿರಾಟ್ ಕೊಹ್ಲಿ ಯಶಸ್ಸಿನ ಹಿಂದೆ ಕಠಿಣ ಪರಿಶ್ರಮವಿದೆ. ತಾನೇ ಮಾಡಿದ ಕೆಲ ತಪ್ಪುಗಳಿಂದ ಕಲಿತ ಪಾಠವೂ ಇದೆ. ಜೊತೆಗೆ ನಂಬಿಕೆ ವಿಚಾರಕ್ಕೆ ಬಂದ್ರೆ ಕೊಹ್ಲಿಯನ್ನ ಮೀರಿಸೋ ಕ್ರಿಕೆಟರ್ ಯಾರೂ ಇಲ್ಲ. ಬೇಕಿದ್ರೆ ವಿರಾಟ್ ಮೈಮೇಲಿನ ಟ್ಯಾಟೂವನ್ನೇ ಗಮನಿಸಿ. ಮಗನ ಯಶಸ್ಸು ಕಾಣದೇ ತಂದೆ ಪ್ರೇಮ್ ಕೊಹ್ಲಿ ಮೃತಪಟ್ಟಿದ್ದರು. ತಮ್ಮ ಅಪ್ಪ ಮತ್ತು ಅಮ್ಮನ ಮೇಲಿನ ಪ್ರೀತಿಯಿಂದ ಬಲಗೈಯ ಭುಜದ ಮೇಲೆ ತಮ್ಮ ತಂದೆಯ ಹೆಸರು ಹಾಗೂ ತಾಯಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ ವಿರಾಟ್ ಕೊಹ್ಲಿ. ನಂತರ ಟೀಂ ಇಂಡಿಯಾ ಪರ ಏಕದಿನ ಪಂದ್ಯವನ್ನಾಡಿದ 175ನೇ ಆಟಗಾರ ಹಾಗೂ ಟೆಸ್ಟ್‌ಗೆ ಪದಾರ್ಪಣೆ ಮಾಡಿದ 269ನೇ ಆಟಗಾರ ಅಂತಾ ಕರೆಸಿಕೊಂಡಿದ್ದರ ನೆನಪಿಗೆ 175 ಮತ್ತು 269 ಸಂಖ್ಯೆಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಮೂರನೇ ಟ್ಯಾಟೂವನ್ನು ಕೊಹ್ಲಿ ದೇವರ ಕಣ್ಣು ಎಂದು ಹೇಳಿದ್ದಾರೆ. ಕೊಹ್ಲಿ ಎಡಗೈ ಭುಜದ ಮೇಲೆ ಕಣ್ಣಿನ ಆಕಾರವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಕಣ್ಣು ದೇವರು ಮತ್ತು ಯಾವಾಗಲೂ ಆ ಕಣ್ಣಿನಿಂದ ತನ್ನನ್ನು ನೋಡುತ್ತೇನೆ ಎಂದು ಕೊಹ್ಲಿ ಒಂದು ಸಂದರ್ಭದಲ್ಲಿ ಹೇಳಿದ್ದಾರೆ. ನಾಲ್ಕನೇ ಹಚ್ಚೆ ದೇವರ ಕಣ್ಣಿನ ಸುತ್ತಲೂ ಕೆತ್ತಲಾಗಿದೆ. ಈ ಓಂಕಾರ ಎಂದರೆ ಕೊಹ್ಲಿಗೆ ತುಂಬಾ ಇಷ್ಟ. ಟ್ಯಾಟೂ ಅವರು ಎಲ್ಲಿಂದ ಬಂದಿದ್ದಾರೆ ಎಂಬುದನ್ನು ನೆನಪಿಸುತ್ತದೆ ಮತ್ತು ತನಗೆ ಶಕ್ತಿಯನ್ನು ನೀಡುತ್ತದೆ ಎಂದು ಕೊಹ್ಲಿ ನಂಬುತ್ತಾರೆ. ಅಂದರೆ ಕೊಹ್ಲಿಗೆ ಈ ಟ್ಯಾಟೂ ಮೇಲೂ ನಂಬಿಕೆಯಿದೆ. ಈ ಟ್ಯಾಟು ನನಗೆ ಉತ್ತಮ ನಡವಳಿಕೆಗೆ ಸಹಾಯ ಮಾಡುತ್ತದೆ ಎಂದು ಕೊಹ್ಲಿ ಬಲವಾಗಿ ನಂಬಿದ್ದಾರೆ. ಇಷ್ಟೇ ಅಲ್ಲ ಕೊಹ್ಲಿ ಬರೋಬ್ಬರಿ 11 ಟ್ಯಾಟೂಗಳನ್ನ ಹಾಕಿಸಿಕೊಂಡಿದ್ದಾರೆ.. ಪ್ರತಿ ಟ್ಯಾಟೂ ಹಿಂದೆಯೂ ಒಂದೊಂದು ಕಥೆ ಇರುವುದು ವಿಶೇಷ. ಹೀಗೆ ತನ್ನ ಲೈಫ್‌ನ ಪ್ರತಿ ಹೆಜ್ಜೆಯಲ್ಲೂ ಆಧ್ಯಾತ್ಮ, ನಂಬಿಕೆ ಮತ್ತು ದೇವರನ್ನು ಬಲವಾಗಿ ನಂಬುತ್ತಿದ್ದಾರೆ ವಿರಾಟ್ ಕೊಹ್ಲಿ. ಹಿಂದೊಮ್ಮೆ ನಾನು ದೇವರನ್ನು ನಂಬೋದಾ, ನೋ ವೇ.. ಚಾನ್ಸೇ ಇಲ್ಲ ಅಂತಾ ಯಂಗ್ ಟೈಗರ್ ಈಗ ರನ್ ಮೆಷಿನ್ ಅಂತಾ ಕರೆಸಿಕೊಂಡಿದ್ದಾರೆ. ಜೊತೆಗೆ ದೇವರೇ ನನಗೆ ಶಕ್ತಿ. ನನ್ನ ಅಹಂಕಾರ ಅಳಿಸಿ, ನನ್ನನ್ನ ಸಕ್ಸಸ್ ಕಡೆಗೆ ಕೊಂಡೊಯ್ದಿರೋದು ದೇವರ ಮೇಲೆ ನಾನಿಟ್ಟ ನಂಬಿಕೆ ಅಂತಿದ್ದಾರೆ ಕೊಹ್ಲಿ. ಎನಿ ವೇ.. ಕೊಹ್ಲಿಗೆ ಆಟದಲ್ಲಿ ಎಷ್ಟು ಶೃದ್ಧೆಯಿದೆಯೋ ನಂಬಿಕೆಯಲ್ಲೂ ಅಷ್ಟೇ ಶೃದ್ಧೆಯಿದೆ. ಒಬ್ಬ ಆಟಗಾರ ಪರಿಪೂರ್ಣನಾಗಲು ಈ ನಂಬಿಕೆಯೂ ಬೇಕು ಅನ್ನೋದು ಕೊಹ್ಲಿ ಮಾತು.

suddiyaana

Leave a Reply

Your email address will not be published. Required fields are marked *