ಹೊಸ ಬಂಗಲೆ ಕಟ್ಟಿಸಿದ KOHLI – ಇಲ್ಲೇ ಸೆಟಲ್ ಆಗ್ತಾರಾ ವಿರಾಟ್?
ಲಂಡನ್​ಗೆ ಶಿಫ್ಟ್ ಆಗಲ್ವಾ KING?

ಹೊಸ ಬಂಗಲೆ ಕಟ್ಟಿಸಿದ KOHLI – ಇಲ್ಲೇ ಸೆಟಲ್ ಆಗ್ತಾರಾ ವಿರಾಟ್?ಲಂಡನ್​ಗೆ ಶಿಫ್ಟ್ ಆಗಲ್ವಾ KING?

ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಏನು ಮಾಡಿದ್ರೂ ಸುದ್ದಿಯೇ. ಅವ್ರು ಯಾವ ನೀರು ಕುಡೀತಾರೆ, ಏನ್ ಊಟ ಮಾಡ್ತಾರೆ, ಅವ್ರ ಡ್ರೆಸ್ಸಿಂಗ್ ಸ್ಟೈಲ್, ವಾಚ್, ಕೂಲಿಂಗ್ ಗ್ಲಾಸ್, ಶೂ ಹೀಗೆ ಎಲ್ಲವುದರ ಬಗ್ಗೆಯೂ ಚರ್ಚೆಯಾಗ್ತಾನೇ ಇರುತ್ತೆ. ಟಿ-20 ವಿಶ್ವಕಪ್ ಮುಗಿದ ಮೇಲಂತೂ ಕಿಂಗ್ ವಿರಾಟ್ ಫೋನ್​ನ ವಾಲ್​ಪೇಪರ್ ಫೋಟೋ ಕೂಡ ಸಾಕಷ್ಟು ಸದ್ದು ಮಾಡಿತ್ತು. ಬಟ್ ಈಗ ಚರ್ಚೆಯಾಗ್ತಿರೋ ವಿಚಾರ ಸ್ವಲ್ಪ ಸೀರಿಯಸ್ ಮ್ಯಾಟರ್. ಅದ್ರಲ್ಲೂ ವಿರಾಟ್ ಅಭಿಮಾನಿಗಳಿಗಂತೂ ತುಂಬಾ ಶಾಕಿಂಗ್ ನ್ಯೂಸ್. ಅದೇನಂದ್ರೆ ಕಿಂಗ್ ವಿರಾಟ್ ತಮ್ಮ ಕ್ರಿಕೆಟ್ ಕರಿಯರ್ ಮುಕ್ತಾಯದ ಬೆನ್ನಲ್ಲೇ ಲಂಡನ್​ಗೆ ಹೋಗಿ ಸೆಟಲ್ ಆಗ್ತಾರೆ ಅನ್ನೋದು. ಈ ವಿಚಾರ ಕೇಳಿದಾಗಿಂದ ಕೋಟಿ ಕೋಟಿ ಭಾರತೀಯರು ತುಂಬಾನೇ ಅಪ್ಸೆಟ್ ಆಗಿದ್ದಾರೆ. ಬಟ್ ವಿರಾಟ್ ಟ್ವೀಟ್ ಮಾಡಿರೋ ಅದೊಂದು ವಿಡಿಯೋ ಈ ಎಲ್ಲಾ ಗಾಸಿಪ್​ಗಳಿಗೆ ಬ್ರೇಕ್ ಹಾಕಿದಂತಿದೆ. ಅಷ್ಟಕ್ಕೂ ಏನದು ವಿಡಿಯೋ? ಹಾಗಾದ್ರೆ ಕೊಹ್ಲಿ ಲಂಡನ್​ಗೆ ಹೋಗಲ್ವಾ? ಈ ಬಗೆಗಿನ ಅಚ್ಚರಿಯ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೋಚ್ ಗಂಭೀರ್​ಗೆ 3 ಸವಾಲು – ದ್ರಾವಿಡ್​ ರೀತಿ ಪ್ಲೇಯರ್ಸ್ ಮನ ಗೆಲ್ತಾರಾ?

ಟೀಂ ಇಂಡಿಯಾ ಟಿ-20 ವಿಶ್ವಕಪ್ ಗೆದ್ದ ಬಳಿಕ ಭಾರತಕ್ಕೆ ಮರಳಿತ್ತು. ಮುಂಬೈನಲ್ಲಿ ಟೀಂ ಇಂಡಿಯಾ ಆಟಗಾರರು ವಿಕ್ಟರಿ ಪರೇಡ್ ನಡೆಸಿದ್ರು. ಬಟ್ ಈ ವಿಕ್ಟರಿ ಪರೇಡ್ ಮುಗಿದ ಬೆನ್ನಲ್ಲೇ ಕಿಂಗ್ ವಿರಾಟ್ ಕೊಹ್ಲಿ ಲಂಡನ್ ಫ್ಲೈಟ್ ಹತ್ತಿದ್ರು. ಅದಕ್ಕೆ ಕಾರಣ ಪತ್ನಿ ಮತ್ತು ಮಕ್ಕಳು. ಪತ್ನಿ ಅನುಷ್ಕಾ ಹಾಗೂ ಮಕ್ಕಳು ಸದ್ಯ ಲಂಡನ್​ನಲ್ಲೇ ಇದ್ದಾರೆ. ಹೀಗಾಗಿ ಅವ್ರ ಜೊತೆ ಟೈಂ ಸ್ಪೆಂಡ್ ಮಾಡಲು ವಿರಾಟ್ ಲಂಡನ್​ಗೆ ತೆರಳಿದ್ದಾರೆ. ಅಷ್ಟಕ್ಕೂ ಅನುಷ್ಕಾ ಮತ್ತು ವಿರಾಟ್ ಲಂಡನ್​ನಲ್ಲೇ ಸ್ಟೇ ಆಗ್ತಾರೆ ಅನ್ನೋದಕ್ಕೆ ಸಾಕಷ್ಟು ಕಾರಣಗಳಿವೆ. ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಮತ್ತು ಅನುಷ್ಕಾ ಲಂಡನ್​ನಲ್ಲೇ ಸಾಕಷ್ಟು ಸಮಯ ಕಳೆದಿದ್ದಾರೆ. ಅದ್ರಲ್ಲೂ 2023 ರಲ್ಲಿ, ವಿರಾಟ್ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ವಿರಾಮ ತೆಗೆದುಕೊಂಡು ಲಂಡನ್​​ನಲ್ಲಿ ಅನುಷ್ಕಾ ಅವರೊಂದಿಗೆ ಸಮಯ ಕಳೆದಿದ್ದರು. ಈ ವೇಳೆ ಅನುಷ್ಕಾ ಪ್ರಗ್ನೆಂಟ್ ಕೂಡ ಆಗಿತ್ತು. ಮಗ ಅಕಾಯ್ ಜನಿಸಿದ್ದೂ ಕೂಡ ಅಲ್ಲೆಯೇ. ಬಾಲಿವುಡ್ ಕಾರ್ಯಕ್ರಮಗಳು ಮತ್ತು ಸಿನಿಮಾಗಳಿಂದ ಅನುಷ್ಕಾ ಶರ್ಮಾ ಕೂಡ ದೂರವೇ ಉಳಿದಿದ್ದಾರೆ. ಅಲ್ದೇ ವಿರಾಟ್ ಕೂಡ ಫ್ಯಾಮಿಲಿ ಜೊತೆ ಟೈಂ ಸ್ಪೆಂಡ್ ಮಾಡೋದು ತುಂಬಾ ಇಷ್ಟ. ಅದ್ರಲ್ಲೂ ಸಾಮಾನ್ಯ ವ್ಯಕ್ತಿಯಾಗಿ ಇರೋಕೆ ಇಷ್ಟ ಪಡ್ತೇನೆ. ನಾನು ಕ್ರಿಕೆಟ್​​ ಮುಗಿದ ನಂತರ ಕುಟುಂಬದ ಜತೆ ಹೋಗುತ್ತೇನೆ. ನೀವು ಸ್ವಲ್ಪ ಸಮಯದವರೆಗೆ ನೋಡಲು ಆಗುವುದಿಲ್ಲ ಎಂದಿದ್ದರು. ಸದ್ಯ ಲಂಡನ್​ನಲ್ಲೇ ಇರುವ ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ. ಅದು ಅವ್ರ ನೂತನ ಐಷಾರಾಮಿ ಮನೆಯ ವಿಡಿಯೋ. ಇದೇ ವಿಡಿಯೋ ಈಗ ವಿರಾಟ್ ಕೊಹ್ಲಿ ಲಂಡನ್​ಗೆ ಹೋಗಿ ಸೆಟಲ್ ಆಗಲ್ಲ. ಭಾರತದಲ್ಲೇ ಉಳಿಯುತ್ತಾರೆ ಅನ್ನೋ ಹೊಸ ಚರ್ಚೆ ಹುಟ್ಟುಹಾಕಿದೆ.

ಕೊಹ್ಲಿ ಹೊಸ ಬಂಗಲೆ!

ವಿರಾಟ್ ಕೊಹ್ಲಿ ಮಹಾರಾಷ್ಟ್ರದ ಅಲಿಬಾಗ್​ನಲ್ಲಿ ಹೊಸ ಐಷಾರಾಮಿ ಬಂಗಲೆಯೊಂದನ್ನ ಕಟ್ಟಿಸಿದ್ದಾರೆ. ಇದೇ ಬಂಗಲೆಯ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದು, ಬಂಗಲೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಹಿಡಿದಿದೆ. ಕೊಹ್ಲಿ ಅವರ ಬಂಗಲೆಯು ಸಮುದ್ರದಿಂದ ಸ್ವಲ್ಪ ದೂರದಲ್ಲಿದೆ. ಈ ಮನೆಯನ್ನು ವಿಶೇಷ ರೀತಿಯಲ್ಲಿ ನಿರ್ಮಿಸಲಾಗಿದೆ. ಬಿಡುವಿನ ಸಂದರ್ಭದಲ್ಲಿ ಅಲ್ಲೇ ಉಳಿದುಕೊಳ್ಳುವುದು ಕೊಹ್ಲಿಯವರ ಪ್ಲಾನ್. ಬಂಗಲೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳೂ ಇವೆ. ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್ ಇವೆ. ಹಾಗೇ ಈ ಮನೆಯ ಇಂಟೀರಿಯರ್ ಡಿಸೈನ್​ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಮನೆಯ ಒಳಗೂ ಮತ್ತು ಹೊರಗೂ ಐಷಾರಾಮಿ ವ್ಯವಸ್ಥೆಗಳಿವೆ. ಮನೆಯ ಹೊರಗೆ ದೊಡ್ಡ ಉದ್ಯಾನವನ ಇದೆ. ಇಲ್ಲಿ ವಾಕಿಂಗ್, ಯೋಗ ಕೂಡ ಮಾಡಬಹುದು. ಈಜುಕೊಳ ಸ್ವಲ್ಪ ದೂರದಲ್ಲಿದೆ. ಈ ಮನೆಯನ್ನು ಕಟ್ಟಲು ಸುಮಾರು ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ. ತಮ್ಮ ನೂತನ ನಿವಾಸದ ಬಗ್ಗೆ ಮಾತನಾಡಿರುವ ವಿರಾಟ್, ಅಲಿಬಾಗ್‌ನಲ್ಲಿ ಮನೆ ಕಟ್ಟಿಸಿದ ಅನುಭವ ನಿಜಕ್ಕೂ ಅವಿಸ್ಮರಣೀಯವಾದದ್ದು. ಇದೀಗ ಎಲ್ಲವನ್ನು ಒಟ್ಟಿಗೆ ನೋಡುವುದು ನಿಜಕ್ಕೂ ಸಂತೋಷದಾಯಕವಾಗಿದೆ. ನಮ್ಮ ಕನಸಿನ ಮನೆಯನ್ನು ನನಸಾಗಿಸಿದ್ದಕ್ಕೆ ಇಡೀ ಆವಾಸ್ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಇದೀಗ ನನ್ನ ಪ್ರೀತಿಪಾತ್ರರೊಂದಿಗೆ ಈ ಮನೆಯಲ್ಲಿ ಕಾಲಕಳೆಯಲು ತುದಿಗಾಲಿನಲ್ಲಿ ನಿಂತಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಜಯಿಸಿದ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ, ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದಾರೆ. ಲಂಡನ್‌ನಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಕ್ಕಳ ಜತೆ  ಸಮಯ ಕಳೆಯುತ್ತಿದ್ದಾರೆ. ಹೀಗಾಗಿ ಶ್ರೀಲಂಕಾ ಎದುರಿನ ಏಕದಿನ ಸರಣಿಯಿಂದಲೂ ಹೊರಗುಳಿಯುವುದು ಬಹುತೇಕ ಖಚಿತ. ಇನ್ನು ವಿರಾಟ್ ಕೊಹ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಲಿರುವ ಬಾಂಗ್ಲಾದೇಶ ಎದುರಿನ ಏಕದಿನ ಸರಣಿಯ ವೇಳೆಗೆ ಭಾರತ ಕ್ರಿಕೆಟ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ಇನ್ನು ವಿರಾಟ್ ಎಲ್ಲ ಫಾರ್ಮೆಟ್‌‌ನ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಲಿದ್ದಾರೆ ಅಂತ ಸುದ್ದಿಯಾಗ್ತಿದೆ. ಚಾಂಪಿಯನ್ಸ್‌‌ ಟ್ರೋಫಿ ಬಳಿಕ ನಿವೃತ್ತಿಯಾಗ್ತಾರೆ ಅಂತ ಹೇಳಲಾಗ್ತಿತ್ತು. ಈ ಬಗ್ಗೆ ಇದೀಗ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಸ್ಪಷ್ಟನೆ ನೀಡಿದ್ದರು. ವಿರಾಟ್ ಕೊಹ್ಲಿ ಇನ್ನೂ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡ್ತಾರೆ ಎಂದಿದ್ದರು. ಹೀಗಾಗಿ ಕೋಚ್ ಅವ್ರ ಹೇಳಿಕೆ, ಮಹಾರಾಷ್ಟ್ರದಲ್ಲಿ ಕೊಹ್ಲಿಯವರ ನೂತನ ನಿವಾಸ ನೋಡಿದ ಅಭಿಮಾನಿಗಳು ವಿರಾಟ್ ಅಂತೂ ಲಂಡನ್​ಗೆ ಹೋಗಿ ಸೆಟಲ್ ಆಗಲ್ಲ ಅಂತಾ ಸ್ವಲ್ಪ ರಿಲ್ಯಾಕ್ಸ್ ಆಗ್ತಿದ್ದಾರೆ.

Shwetha M