ಜಿಂಬಾಬ್ವೆ ವಿರುದ್ಧ ಸೇಡು ತೀರಿಸಿಕೊಂಡ ಗಿಲ್ – 134 ರನ್‌ಗಳಿಗೆ ಜಿಂಬಾಬ್ವೆ ಆಲೌಟ್‌

ಜಿಂಬಾಬ್ವೆ ವಿರುದ್ಧ ಸೇಡು ತೀರಿಸಿಕೊಂಡ ಗಿಲ್ – 134 ರನ್‌ಗಳಿಗೆ ಜಿಂಬಾಬ್ವೆ ಆಲೌಟ್‌

ಜಿಂಬಾಬ್ವೆ ವಿರುದ್ಧ ಮೊದಲ ಪಂದ್ಯದಲ್ಲಿ ಸೋತು ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್​​ಬ್ಯಾಕ್ ಮಾಡಿದೆ. ಅಭಿಷೇಕ್‌ ಶರ್ಮಾ ಭರ್ಜರಿ ಶತಕ, ರುತುರಾಜ್‌ ಗಾಯಕ್ವಾಡ್‌ , ರಿಂಕು ಸಿಂಗ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡವು ಜಿಂಬಾಬ್ವೆ ವಿರುದ್ಧ 100 ರನ್‌ಗಳ ಅಂತರದಲ್ಲಿ ಗೆದ್ದು ಬೀಗಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

ಇದನ್ನೂ ಓದಿ: ಡ್ಯಾನ್ಸ್ ಗೂ ಸೈ, ನಟನೆಗೂ ಸೈ.. – ಜಯಂತ್‌ ನ ಚಿನ್ನುಮರಿ ಚಂದನ  

ಹರಾರೆ ಸ್ಫೋರ್ಟ್‌ ಕ್ಲಬ್‌ ಮೈದಾನದಲ್ಲಿ ಜಿಂಬಾಬ್ವೆ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 234 ರನ್‌ ಸಿಡಿಸಿತ್ತು. 235 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಜಿಂಬಾಬ್ವೆ 18.4 ಓವರ್‌ಗಳಲ್ಲಿ 134 ರನ್‌ಗಳಿಗೆ ಸರ್ವಪತನ ಕಂಡಿತು. ಚೇಸಿಂಗ್‌ ಆರಂಭಿಸಿದ ಜಿಂಬಾಬ್ವೆ ಮೊದಲ ಓವರ್‌ನಿಂದಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 2ನೇ ವಿಕೆಟ್‌ಗೆ 15 ಎಸೆತಗಳಲ್ಲಿ 36 ರನ್‌ಗಳ ಸ್ಫೋಟಕ ಜೊತೆಯಾಟ ನಂತರ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಲು ವಿಫಲರಾದರು. ಅವೇಶ್‌ ಖಾನ್‌, ಮುಕೇಶ್‌ ಕುಮಾರ್‌ ಬೌಲಿಂಗ್‌ ಪ್ರಹಾರಕ್ಕೆ ಜಿಂಬಾಬ್ವೆ ಬ್ಯಾಟರ್‌ಗಳು ಮಕಾಡೆ ಮಲಗಿದರು. ಅಂತಿಮವಾಗಿ ಭಾರತ 100 ರನ್‌ಗಳ ಗೆಲುವು ಸಾಧಿಸಿತು.

ಜಿಂಬಾಬ್ವೆ ಪರ ವೆಸ್ಲಿ ಮಾಧೆವೆರೆ 43 ರನ್‌, ಬ್ರಿಯಾನ್ ಬೆನೆಟ್ 26 ರನ್‌, ಲ್ಯೂಕ್ ಜೊಂಗ್ವೆ 33 ರನ್‌ ಗಳಿಸಿದರು. ಇನ್ನೂ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮುಕೇಶ್‌ ಕುಮಾರ್‌ ಮತ್ತು ಅವೇಶ್‌ ಖಾನ್‌ ತಲಾ 3 ವಿಕೆಟ್‌ ಕಿತ್ತರೆ, ರವಿ ಬಿಷ್ಣೋಯಿ 2 ವಿಕೆಟ್‌, ವಾಷಿಂಗ್ಟನ್‌ ಸುಂದರ್‌ 1 ವಿಕೆಟ್‌ ಪಡೆದರು.

Shwetha M