ಟಿ-20Iನಲ್ಲಿ RO-KO ಯಾರು ಬೆಸ್ಟ್? – ಸಿಕ್ಸ್, ಫೋರ್, ಕ್ಯಾಪ್ಟನ್ಸಿ ಗೆದ್ದಿದ್ಯಾರು?
ರೋಹಿತ್ & ಕೊಹ್ಲಿ ಬೊಮ್ರಾನ್ಸ್ ಹೇಗಿದೆ?

ಟಿ-20Iನಲ್ಲಿ RO-KO ಯಾರು ಬೆಸ್ಟ್? – ಸಿಕ್ಸ್, ಫೋರ್, ಕ್ಯಾಪ್ಟನ್ಸಿ ಗೆದ್ದಿದ್ಯಾರು?ರೋಹಿತ್ & ಕೊಹ್ಲಿ ಬೊಮ್ರಾನ್ಸ್ ಹೇಗಿದೆ?

ವಿಶ್ವಕ್ರಿಕೆಟ್​ನಲ್ಲಿ ಈಗ ಟೀಂ ಇಂಡಿಯಾ ಹೆಸರು ರಾರಾಜಿಸುತ್ತಿದೆ. ಟಿ-20 ವಿಶ್ವಕಪ್ ಚಾಂಪಿಯನ್ ಆಗಿರೋ ಆಟಗಾರರಿಗೆ ಭರ್ಜರಿ ಸ್ವಾಗತ ಸಿಗ್ತಿದೆ. ಜಗತ್ತನ್ನೇ ಗೆದ್ದ ಐತಿಹಾಸಿಕ ಕ್ಷಣದಲ್ಲೇ ರೋಕೋ ಜೋಡಿ ಚುಟುಕು ಸಮರಕ್ಕೆ ವಿದಾಯ ಕೂಡ ಹೇಳಿದೆ. ಬಾರ್ಬಡೋಸ್‌ ಅಂಗಳದಲ್ಲಿ ವಿರಾಟ್‌ ಮತ್ತು ರೋಹಿತ್ ಭಾರತದ ಫ್ಲ್ಯಾಗ್‌ ಹಿಡಿದು ನೀಡಿದ್ದ ಪೋಟೋ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಬ್ರೋ ಮ್ಯಾನ್ಸ್ ಅಂತಾನೇ ಕರೆಸಿಕೊಳ್ಳೋ ಈ ರೋಕೋ ಜೋಡಿ ವಿಶ್ವಕ್ರಿಕೆಟ್​ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. ಅಷ್ಟಕ್ಕೂ ಇಬ್ರಿಬ್ಬರು ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಏನೆಲ್ಲಾ ಸಾಧನೆ ಮಾಡಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಲಂಡನ್‌ ನಲ್ಲೇ ಸೆಟಲ್ ಆಗ್ತಾರಾ ಕೊಹ್ಲಿ? – ವಿರಾಟ್ ಶಾಕಿಂಗ್ ನಿರ್ಧಾರ ಯಾಕೆ?

ಟಿ-20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ದಕ್ಷಿಣಾ ಆಫ್ರಿಕಾ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿತು ಅಂತಾ ಖುಷಿಯಲ್ಲಿದ್ದ ಅಭಿಮಾನಿಗಳಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಶಾಕ್ ಕೊಟ್ಟಿದ್ರು.  ಫೈನಲ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ 76 ರನ್‌ಗಳನ್ನು ಕಲೆ ಹಾಕುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಪೋಸ್ಟ್‌ ಮ್ಯಾಚ್‌ ಪ್ರಸೆಂಟೇಷನ್‌ನಲ್ಲಿ ವಿರಾಟ್‌ ಕೊಹ್ಲಿ ನಿವೃತ್ತಿಯನ್ನ ಘೋಷಣೆ ಮಾಡಿದ್ದರು. ಬಳಿಕ ನಾಯಕ ರೋಹಿತ್‌ ಶರ್ಮಾ ಸುದ್ದಿಗೋಷ್ಠಿಯಲ್ಲಿ ವಿದಾಯ ಹೇಳಿದ್ದರು. ಬಳಿಕ ರವೀಂದ್ರ ಜಡೇಜಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದರು. ಅಸಲಿಗೆ ಒಟ್ಟೊಟ್ಟಿಗೆ ವಿದಾಯ ಹೇಳಿದ ವಿರಾಟ್ ಮತ್ತು ರೋಹಿತ್ ಟಿ-20ಯಲ್ಲಿ ಹಲವು ದಾಖಲೆಗಳನ್ನ ನಿರ್ಮಿಸಿದ್ದಾರೆ.  ಅತಿ ಹೆಚ್ಚು ರನ್‌ ಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿದ್ದಾರೆ. ಈ ಇಬ್ಬರು ಲೆಜೆಂಡ್​ಗಳ ಟಿ20 ಅಂಕಿಅಂಶಗಳ ಬಗ್ಗೆ ಹೇಳ್ತೇನೆ ನೋಡಿ.

ರೋ-ಕೊ ಕಮಾಲ್!

2007ರಲ್ಲಿ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರೋಹಿತ್‌ ಶರ್ಮಾ 159 ಪಂದ್ಯಗಳನ್ನು ಆಡಿದ್ದಾರೆ. ವಿರಾಟ್ ಕೊಹ್ಲಿ 2010ರಲ್ಲಿ ಪದಾರ್ಪಣೆ ಮಾಡಿ ಇಲ್ಲಿಯವರೆಗೂ 124 ಪಂದ್ಯಗಳನ್ನು ಆಡಿದ್ದಾರೆ. ಜಿಂಬಾಬ್ವೆ ವಿರುದ್ಧ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ರೋಹಿತ್‌ ಶರ್ಮಾ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಡಿದ 159 ಇನಿಂಗ್ಸ್‌ಗಳಿಂದ 140.89ರ ಸ್ಟ್ರೈಕ್‌ ರೇಟ್‌ನಲ್ಲಿ 4231 ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ವಿರಾಟ್‌ ಕೊಹ್ಲಿ 117 ಇನಿಂಗ್ಸ್‌ಗಳಿಂದ 48.69ರ ಸರಾಸರಿಯಲ್ಲಿ 4188 ರನ್‌ಗಳನ್ನು ಗಳಿಸಿದ್ದಾರೆ. ಕೊಹ್ಲಿ ಮೂರೂ ಸ್ವರೂಪದಲ್ಲಿ 50ಕ್ಕೂ ಹೆಚ್ಚಿನ ಸರಾಸರಿಯನ್ನು ಹೊಂದಿದ್ದಾರೆ. ರೋಹಿತ್‌ ಶರ್ಮಾ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಈಗ ಇವರ ಖಾತೆಯಲ್ಲಿ 205 ಸಿಕ್ಸರ್‌ಗಳಿವೆ. ಇನ್ನು ವಿರಾಟ್‌ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ 124 ಸಿಕ್ಸರ್‌ಗಳನ್ನು ಗಳಿಸಿದ್ದಾರೆ. ಒಟ್ಟಾರೆ ಈ ಪಟ್ಟಿಯಲ್ಲಿ ಕೊಹ್ಲಿ 9ನೇ ಸ್ಥಾನದಲ್ಲಿದ್ದಾರೆ. ಇನ್ನು ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳ ಪಟ್ಟಿಯಲ್ಲಿ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರು ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. ರೋಹಿತ್‌ ಖಾತೆಯಲ್ಲಿ 383 ಬೌಂಡರಿಗಳನ್ನು ಗಳಿಸಿದ್ದರೆ, ಕೊಹ್ಲಿ ಖಾತೆಯಲ್ಲಿ 369 ಬೌಂಡರಿಗಳನ್ನು ಸಿಡಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್‌ ಶರ್ಮಾ ಅಗ್ರ ಸ್ಥಾನದಲ್ಲಿದ್ದಾರೆ. ರೋಹಿತ್‌ ಶರ್ಮಾ 5 ಸಿಕ್ಸರ್‌ ಸಿಡಿಸಿ, ಅಷ್ಟೇ ಶತಕಗಳನ್ನು ಸಿಡಿಸಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಜೊತೆ ಜಂಟಿಯಾಗಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ವಿರಾಟ್‌ ಕೊಹ್ಲಿ ಒಂದು ಟಿ20ಐ ಶತಕ ಸಿಡಿಸಿದ್ದಾರೆ. ಇನ್ನು ಕ್ಯಾಪ್ಟನ್ ಆಗಿ ಇಬ್ಬರ ಸಾಧನೆ ಹೇಗಿದೆ ಅನ್ನೋದನ್ನ ನೋಡೋದಾದ್ರೆ ನಾಯಕನಾಗಿ ಅತಿ ಹೆಚ್ಚು ಟಿ20ಐ ಪಂದ್ಯಗಳನ್ನು ಗೆದ್ದಿರುವ ರೋಹಿತ್‌ ಶರ್ಮಾ ಅಗ್ರ ಸ್ಥಾನದಲ್ಲಿದ್ದಾರೆ. 62 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿ 49ರಲ್ಲಿ ಗೆದ್ದಿದ್ದಾರೆ. 2021ರ ಟಿ20 ವಿಶ್ವಕಪ್‌ ಬಳಿಕ ರೋಹಿತ್‌ ಭಾರತಕ್ಕೆ ನಾಯಕರಾಗಿದ್ದರು. ವಿರಾಟ್‌ ಕೊಹ್ಲಿ 50 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, 30ರಲ್ಲಿ ಗೆಲುವು ಪಡೆದಿದ್ದಾರೆ. ಇನ್ನು ಭಾರತ ತಂಡದ ಪರ ನಾಯಕನಾಗಿ ರೋಹಿತ್‌ ಶರ್ಮಾ ಒಂದು ಟಿ20 ವಿಶ್ವಕಪ್‌ ಗೆದ್ದಿದ್ದರೆ, ವಿರಾಟ್‌ ಕೊಹ್ಲಿ ಯಾವುದೇ ಗೆಲುವು ಕಂಡಿಲ್ಲ.

ಸದ್ಯ ಟಿ-20 ವಿಶ್ವಕಪ್ ಗೆದ್ದ ಬಳಿಕ ಇಬ್ಬರೂ ಕೂಡ ಚುಟುಕು ಫಾರ್ಮೇಟ್​ಗೆ ವಿದಾಯ ಹೇಳಿದ್ದು, ಫ್ಯಾಮಿಲಿ ಜೊತೆ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಯಂಗ್ ಪ್ಲೇಯರ್ಸ್ ಜಿಂಬಾಬ್ವೆ ವಿರುದ್ಧ ಟಿ-20ಐ ಸರಣಿ ಆರಂಭಿಸಿದ್ದಾರೆ. ಜಿಂಬಾಬ್ವೆ ಪ್ರವಾಸದ ಬಳಿಕ ಭಾರತ ತಂಡ, ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದೆ. ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಟಿ20 ಸರಣಿಯಲ್ಲಿ ಕಾದಾಟ ನಡೆಸಲಿದೆ. ಆಗಸ್ಟ್‌ 2 ರಂದು ಒಡಿಐ ಸರಣಿ ಆರಂಭವಾಗಲಿದೆ. ಈ ಏಕದಿನ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಇಬ್ಬರೂ ಆಡುವ ಸಾಧ್ಯತೆ ಇದೆ. ಬಳಿಕ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಹಾಗೂ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಟೂರ್ನಿಗಳಲ್ಲೂ ಕಣಕ್ಕಿಳಿಯಲಿದ್ದಾರೆ.

Shwetha M