ಲಂಡನ್ ನಲ್ಲೇ ಸೆಟಲ್ ಆಗ್ತಾರಾ ಕೊಹ್ಲಿ? – ವಿರಾಟ್ ಶಾಕಿಂಗ್ ನಿರ್ಧಾರ ಯಾಕೆ?
ಕಿಂಗ್ ಭಾರತ ಬಿಡಲು 4 ಕಾರಣಗಳು
ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದಿದ್ದು, ತವರಿನಲ್ಲಿ ಭರ್ಜರಿ ಸ್ವಾಗತ ಮಾಡಲಾಗಿದೆ.. ವಾಂಖೆಡೆ ಸ್ಟೇಡಿಯಂ ನಲ್ಲಿ ವಿನ್ನಿಂಗ್ ಪರೇಡ್ ಬಳಿಕ ಕಿಂಗ್ ಕೊಹ್ಲಿ ವಿದೇಶಕ್ಕೆ ಹಾರಿದ್ದಾರೆ.. ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಕ್ಕಳ ಜೊತೆ ಸಮಯ ಕಳೆಯಲು ಲಂಡನ್‌ಗೆ ಹೋಗಿದ್ದಾರೆ.. ಇದೀಗ ವಿರಾಟ್ ವಿದೇಶ ಹೋಗ್ತಿದಂತೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ.. ಕಿಂಗ್ ಕೊಹ್ಲಿ ಭಾರತ ಬಿಟ್ಟು ವಿದೇಶದಲ್ಲಿ ನೆಲೆಸಲಿದ್ದಾರಾ ಅಂತಾ.. ಲಂಡನ್ ನಲ್ಲೇ ವಿರಾಟ್ ಫ್ಯಾಮಿಲಿ ಸೆಟಲ್ ಆಗಲಿದ್ದಾರೆ ಅನ್ನೋದಕ್ಕೆ ನಾಲ್ಕು ಬಲವಾದ ಕಾರಣ ಕೂಡ ಇದೆ..
ಇದನ್ನೂ ಓದಿ: IND Vs ZIM ಸಮರ ಗೆಲ್ಲೋದ್ಯಾರು? – ಗಿಲ್ ಗೆ ಅಗ್ನಿಪರೀಕ್ಷೆ.. ಗೆದ್ರೆ ಅದೃಷ್ಟ
ಟೀಂ ಇಂಡಿಯಾದ ಕಿಂಗ್ ಕೊಹ್ಲಿ, ಈಗ ವಿಶ್ವ ಕ್ರಿಕೆಟ್ ನ ಕಿಂಗ್. ಇತ್ತೀಚಿನ ಟಿ20 ವಿಶ್ವಕಪ್ ಗೆಲುವಿನ ನಂತರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದು ನಿಮ್ಗೆಲ್ಲಾ ಗೊತ್ತೆ ಇದೆ.. ವಾಂಖೆಡೆ ಸ್ಟೇಡಿಯಂ ನಲ್ಲಿ ವಿನ್ನಿಂಗ್ ಪರೇಡ್ ಮುಗಿಸಿ ವಿರಾಟ್ ಲಂಡನ್ ಗೆ ತೆರಳಿದ್ದಾರೆ.. ಕಿಂಗ್ ಲಂಡನ್‌ಗೆ ಹೋಗ್ತಿದ್ದಂತೆ ಸೋಸಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ.. ವಿರಾಟ್ ಭಾರತ ಬಿಟ್ಟು ಲಂಡನ್ ಗೆ ತೆರಳಿ ಅಲ್ಲೇ ಶಾಶ್ವತವಾಗಿ ನೆಲೆಸಲು ನಿರ್ಧರಿಸಿದ್ದಾರೆ ಅಂತಾ ಅಭಿಮಾನಿಗಳು ಚರ್ಚೆ ನಡೆಸ್ತಾ ಇದ್ದಾರೆ. ಹೌದು, ಕಳೆದ ಕೆಲವು ತಿಂಗಳಿಂದ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಿಧಾನವಾಗಿ ಯುನೈಟೆಡ್ ಕಿಂಗ್ ಡಮ್‌ನತ್ತ ಒಲವು ತೋರುತ್ತಿದ್ದಾರೆ ಅಂತಾ ಹೇಳಲಾಗ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ವಿರಾಟ್ ಕೊಹ್ಲಿ ಆಗಾಗಾ ಲಂಡನ್ ಗೆ ಹೋಗಿ ಬರ್ತಾ ಇದ್ದಾರೆ.. ಐಪಿಎಲ್ ಮುಗಿದ ಮೇಲು ವಿರಾಟ್ ಲಂಡನ್‌ಗೆ ಹೋಗಿದ್ರು.. ಟಿ 20 ವಿಶ್ವಕಪ್ ಟೂರ್ನಿಗೆ ಅಲ್ಲಿಂದಲೇ ಕೊಹ್ಲಿ ಬಂದಿದ್ರು.. ಇದೀಗ ಟಿ 20 ವಿಶ್ವ ಕಪ್‌ಗೆ ವಿದಾಯ ಹೇಳಿದ ಮೇಲೂ ಕಿಂಗ್ ಲಂಡನ್ ಗೆ ತೆರಳಿದ್ದಾರೆ.. ವಿರಾಟ್ ಕೊಹ್ಲಿ ಕ್ರಿಕೆಟ್ ನಿಂದ ನಿವೃತ್ತರಾದ ನಂತರ ಭಾರತದಿಂದ ಹೊರಹೋಗಲು ಮತ್ತು ಯುಕೆಯಲ್ಲಿ ನೆಲೆಸಲು ಯೋಜಿಸುತ್ತಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರವಾಗಿ ಕಾಣುತ್ತಿದೆ ಈ 4 ಕಾರಣಗಳು.
ಇದರಲ್ಲಿ ಮೊದಲನೆಯ ಕಾರಣ ಏನಂದ್ರೆ, ಇತ್ತೀಚೆಗೆ ಅತೀ ಹೆಚ್ಚು ಸಮಯವನ್ನ ಕೊಹ್ಲಿ ಲಂಡನ್ನಲ್ಲಿ ಕಳೆಯುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ, ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಲಂಡನ್ ಮತ್ತು ಸುತ್ತಮುತ್ತ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 2023 ರಲ್ಲಿ, ಕೊಹ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಕ್ರಿಕೆಟ್ನಿಂದ ಸ್ವಲ್ಪ ಸಮಯ ವಿರಾಮ ತೆಗೆದು ಕೊಂಡು ಯುಕೆಗೆ ಹಾರಿದರು. ನಂತರ ಕೊಹ್ಲಿ ಮತ್ತು ಅನುಷ್ಕಾ ಲಂಡನ್ ನ ರೆಸ್ಟೋರೆಂಟ್ನಲ್ಲಿ ಕಾಣಿಸಿಕೊಂಡಿದ್ರು. ಈ ವರ್ಷದ ಫೆಬ್ರವರಿಯಲ್ಲಿ, ಕೊಹ್ಲಿ ಮತ್ತೆ ಲಂಡನ್ ನಲ್ಲಿ ತಮ್ಮ ಮಗಳು ವಮಿಕಾಳೊಂದಿಗೆ ಕಾಣಿಸಿಕೊಂಡರು. ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮಗ ಅಕಾಯ್ ನ ಜನನವನ್ನು ಘೋಷಿಸಿದ ಕೆಲವೇ ದಿನಗಳಲ್ಲಿ ಲಂಡನ್ ರೆಸ್ಟೋರೆಂಟ್ ನಲ್ಲಿ ತಂದೆ-ಮಗಳ ಫೋಟೋ ವೈರಲ್ ಆಗಿತ್ತು.
ಇನ್ನು ಎರಡನೇಯ ಕಾರಣ, ಫೆಬ್ರವರಿ 20 ರಂದು ವಿರಾಟ್ ಮತ್ತು ಅನುಷ್ಕಾ ತಮ್ಮ ಗಂಡು ಮಗುವಿನ ಜನನವನ್ನು ಅನೌನ್ಸ್ ಮಾಡಿದ್ರು.. ಅದು ಮಗು ಜನಿಸಿದ ಐದು ದಿನಗಳ ನಂತರ. ಆದರೆ ಆ ಮಗು ಜನನವಾಗಿದ್ದು ಭಾರತದಲ್ಲಲ್ಲ ಅನ್ನೋದು ಗಮನಾರ್ಹ. ಅಕಾಯ್ ಕೊಹ್ಲಿ ಹುಟ್ಟಿದ್ದು ಯುಕೆ ಆಸ್ಪತ್ರೆಯಲ್ಲಿ ಎಂದು ವರದಿಯಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯನ್ನು ಕೊಹ್ಲಿ ಮದ್ಯದಲ್ಲೆ ಬಿಟ್ಟು, ಮಗನ ಜನನದ ಸಂಭ್ರಮಕ್ಕಾಗಿ, ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿದ್ರು ಎಂದು ವರದಿಗಳು ತಿಳಿಸಿದ್ದವು. ತಮ್ಮ ಮಗನ ಜನನದ ಕೆಲವು ದಿನಗಳ ನಂತರ ಲಂಡನ್ನಲ್ಲಿ ಕೊಹ್ಲಿ ತನ್ನ ಮಗನ ಜೊತೆಗಿನ ಫೋಟೋ ಹಂಚಿಕೊಂಡಿದ್ಗದರು.. ಇದು ಮತ್ತೆ ಈ ವದಂತಿಗಳನ್ನು ಬಲಪಡಿಸಿತು.
ಇನ್ನು ಮೂರನೇ ಕಾರಣ ವಿರಾಟ್ ಕೊಹ್ಲಿಗೆ ಲಂಡನ್ ಅಂದ್ರೆ ಇಷ್ಟವಂತೆ. ವಿರಾಟ್ ಸಂದರ್ಶನವೊಂದರಲ್ಲಿ ಹೇಳಿರೊ ಮಾತು ಇಲ್ಲಿ ಉಲ್ಲೇಖಿಸಲೇ ಬೇಕು. ವಿದೇಶದಲ್ಲಿ ಇರೋದಕ್ಕೆ ನಂಗಿಷ್ಟ.. ಯಾಕಂದ್ರೆ ಅಲ್ಲಿ ನಮ್ಮನ್ನ ಯಾರು ಗುರುತಿಸೋದಿಲ್ಲ. ಸಾಮಾನ್ಯ ಜೀವನ ಸಾಗಿಸಲು ಸಾದ್ಯವಾಗುತ್ತೆ. ನನಗೆ ಸಾಮಾನ್ಯ ಜೀವನ ನಡೆಸುವುದೆಂದರೆ ತುಂಬಾ ಇಷ್ಟ ಅಂತಾ ಸ್ವತಃ ಕೊಹ್ಲಿ ಹೇಳಿಕೊಂಡಿದ್ದರು.
ನಾವು ದೇಶದಲ್ಲಿ ಇರಲಿಲ್ಲ. ಎರಡು ತಿಂಗಳ ಕಾಲ ಸಾಮಾನ್ಯ ಭಾವನೆ – ನನಗೆ, ನನ್ನ ಕುಟುಂಬಕ್ಕೆ- ಇದು ಅತಿವಾಸ್ತವಿಕ ಅನುಭವವಾಗಿದೆ. ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶಕ್ಕಾಗಿ ದೇವರಿಗೆ ಹೆಚ್ಚು ಕೃತಜ್ಞರಾಗಿದ್ದೇನೆ. ರಸ್ತೆಯಲ್ಲಿ ಒಬ್ಬ ಸಾಮನ್ಯ ವ್ಯಕ್ತಿಯಾಗಿ ಗುರುತಿಸಿಕೊಳ್ಳವ ಅನುಭವ ಸುಂದರ” ಎಂದು ಕೊಹ್ಲಿ ಹೇಳಿಕೊಂಡಿದ್ದರು.
ಇನ್ನು ನಾಲ್ಕನೇ ಕಾರಣ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮ್ಯಾಜಿಕ್ ಲ್ಯಾಂಪ್ ನ ನಿರ್ದೇಶಕರ ಪಟ್ಟಿಯಲ್ಲಿದ್ದಾರೆ. UK ಸರ್ಕಾರದ ಫೈಂಡ್ ಮತ್ತು ಅಪ್ಡೇಟ್ ಕಂಪನಿ ಮಾಹಿತಿ ಸೇವೆಯ ಪ್ರಕಾರ, ಮ್ಯಾಜಿಕ್ ಲ್ಯಾಂಪ್ ಒಂದು ನಿರ್ವಹಣಾ ಸಲಹಾ ಸಂಸ್ಥೆಯಾಗಿದ್ದು, ಇದನ್ನು ಆಗಸ್ಟ್ 1, 2022 ರಂದು ಸ್ಥಾಪಿಸಲಾಗಿದೆ. ಕಂಪನಿಯ ಮೂವರು ನಿರ್ದೇಶಕರಲ್ಲಿ ಕೊಹ್ಲಿ ಮತ್ತು ಅನುಷ್ಕಾ ಕೂಡಾ ಇದ್ದಾರೆ ಅನ್ನೋದು ಈಗಾಗಲೇ ತಿಳಿದು ಬಂದಿದೆ. ಈ ಎಲ್ಲಾ ಕಾರಣಗಳಿಂದಾಗಿ ವಿರಾಟ್ ಕೊಹ್ಲಿ ಫ್ಯಾಮಿಲಿ ವಿದೇಶದಲ್ಲಿ ನೆಲೆಸಲಿದ್ದಾರೆ ಅಂತಾ ಹೇಳಲಾಗ್ತಿದೆ..