ಮಗನ ಜೊತೆ ಹಾರ್ದಿಕ್ ಪಾಂಡ್ಯ, ನತಾಶಾ ನಾಪತ್ತೆ – ಸಹೋದರನಿಂದ ಭಾವುಕ ಪೋಸ್ಟ್

ಮಗನ ಜೊತೆ ಹಾರ್ದಿಕ್ ಪಾಂಡ್ಯ, ನತಾಶಾ ನಾಪತ್ತೆ – ಸಹೋದರನಿಂದ ಭಾವುಕ ಪೋಸ್ಟ್

ಟಿ20 ವಿಶ್ವಕಪ್ ಗೆದ್ದಾಗ ಎಲ್ಲಾ ಆಟಗಾರರು ತಮ್ಮ ತಮ್ಮ ಫ್ಯಾಮಿಲಿ ಜೊತೆ ಖುಷಿಯಲ್ಲಿರುವಾಗ ಹಾರ್ದಿಕ್ ಪಾಂಡ್ಯ ಒಂಟಿಯಾಗಿ ಕೂತಿದ್ದರು. ಪಾಂಡ್ಯ ಮುಖದಲ್ಲಿ ನೋವು, ಕಣ್ಣೀರು ನೋಡಿ ಅದೆಷ್ಟೋ ಅಭಿಮಾನಿಗಳು ಕೂಡಾ ಭಾವುಕರಾಗಿದ್ದರು. ಇದೀಗ ಪಾಂಡ್ಯ ಕಣ್ಣೀರಿಗೆ ಪತ್ನಿ ನತಾಶಾ ಕಾರಣ ಅನ್ನೋದು ಮೇಲ್ನೋಟಕ್ಕೆ ಸತ್ಯ ಅನಿಸಿದೆ. ತಮ್ಮ ಮನೆಗೆ ಮರಳಿರುವ ಹಾರ್ದಿಕ್ ಪಾಂಡ್ಯ, ವಿಜಯೋತ್ಸವನ್ನು ಕುಟುಂಬದೊಂದಿಗೆ ಆಚರಿಸಿದ್ದಾರೆ. ಈ ಆಚರಣೆಯ ಫೋಟೋಗಳನ್ನು ಹಾರ್ದಿಕ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಇದ್ರಲ್ಲಿ ಮಗ ಅಗಸ್ತ್ಯನ ಜೊತೆ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಮಡದಿ ನತಾಶಾ ಮಾತ್ರ ಕಾಣಿಸಿಕೊಂಡಿಲ್ಲ. ನಿನಗಾಗಿ ಮಾತ್ರ ಮಾಡುತ್ತೇನೆ ಎಂದು ಮಗನಿಗಾಗಿ ಪಾಂಡ್ಯ ಹಾಕಿರುವ ಪೋಸ್ಟ್ ಕೂಡಾ ಗೊಂದಲಕ್ಕೀಡುಮಾಡಿದೆ.

ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಅವರಿಗಾಗಿ ಸಹೋದರ ಕೃಣಾಲ್‌ ಪಾಂಡ್ಯ ಪಾಂಡ್ಯ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. “ಕಳೆದ ಆರು ತಿಂಗಳು ಹಾರ್ದಿಕ್‌ ಪಾಂಡ್ಯಗೆ ಅತ್ಯಂತ ಕಠಿಣವಾಗಿತ್ತು. ಈ ಸಮಯದಲ್ಲಿ ನಾನು ಅವರಿಗಾಗಿ ತುಂಬಾ ಪಶ್ಚಾತಾಪ ಪಟ್ಟಿದ್ದೇನೆ. ಮೈದಾನದಲ್ಲಿ ಜನರು ಏನೇ ಕೆಟ್ಟದಾಗಿ ಮಾತನಾಡಿದರೂ ದಿನದಾಂತ್ಯಕ್ಕೆ ನಾವು ಅದನ್ನು ಮರೆತು ಬಿಡುತ್ತದ್ದೆವು. ಆದರೆ, ಇವುಗಳನ್ನು ತಮ್ಮ ನಗು ಮುಖದಿಂದ ಹಾರ್ದಿಕ್‌ ಪಾಂಡ್ಯ ಎದುರಿಸಿದ್ದರು. ಇದು ಎಷ್ಟೊಂದು ಕಠಿಣ ಎಂಬುದು ನನಗೆ ಗೊತ್ತಿದೆ. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಅವರು ಸಾಕಷ್ಟು ಕಠಿಣ ಪರಿಶ್ರಮವನ್ನು ಪಟ್ಟಿದ್ದಾರೆ ಎಂದು ಕೃಣಾಲ್‌ ಪಾಂಡ್ಯ ಪಾಂಡ್ಯ ಬರೆದುಕೊಂಡಿದ್ದಾರೆ.

suddiyaana