ವಿಶ್ವ ಗೆದ್ದ ಮೊಮ್ಮಗನ ಬರುವಿಕೆಯ ನಿರೀಕ್ಷೆಯಲ್ಲಿ ತಾತ! – ಅಜ್ಜನ ನೋಡಲು ಸ್ಕೈ ಹೋಗ್ತಾರಾ?

ವಿಶ್ವ ಗೆದ್ದ ಮೊಮ್ಮಗನ ಬರುವಿಕೆಯ ನಿರೀಕ್ಷೆಯಲ್ಲಿ ತಾತ! – ಅಜ್ಜನ ನೋಡಲು ಸ್ಕೈ ಹೋಗ್ತಾರಾ?

ಇನ್ನೇನು ಸೋಲು ಖಚಿತ ಅನ್ನೋ ಹೊತ್ತಲ್ಲೇ ಅದೊಂದು ಕ್ಯಾಚ್‌ ಟೀಂ ಇಂಡಿಯಾಗೆ ಭರವಸೆ ಮೂಡಿಸಿತ್ತು. ಸ್ಕೈ ಹಿಡಿದ ಕ್ಯಾಚ್‌ ಟಿ20 ವಿಶ್ವ ಕಪ್‌ ಹಿಡಿಯುವಂತೆ ಮಾಡಿತ್ತು. ಸೂರ್ಯ ಕುಮಾರ್‌ ಯಾದವ್‌ ಆಟವನ್ನ ಇಡೀ ದೇಶವೇ ಕೊಂಡಾಡಿದಿತ್ತು. ಸೂರ್ಯ ಕುಮಾರ್‌ ಆಟಕ್ಕೆ ಎಲ್ಲರೂ ಬೆರಗಾಗಿದ್ರು. ಕಪ್‌ ಗೆಲ್ಲುತ್ತಿಂದ್ದಂತೆ ಅಭಿಮಾನಿಗಳು, ಕುಟುಂಬಸ್ಥರು ಸಂಭ್ರಮದಲ್ಲಿ ತೇಲಾಡಿದ್ರು. ಸೂರ್ಯನ ಬೆರಗಿನ ಆಟಕ್ಕೆ ಮನಸೋತ ಅಭಿಮಾನಿಗಳು ಈಗ ಅವರ ವೈಯಕ್ತಿಕ ಬದುಕಿನ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಸೂರ್ಯ ಕುಮಾರ್‌  ಯಾದವ್‌ ಅವರ ಸ್ವಗ್ರಾಮದ ಫೋಟೋ, ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಅಷ್ಟೇ ಅಲ್ಲ ಮೊಮ್ಮಗನ ಬರುವಿಕೆಗಾಗಿ ಅಜ್ಜ ಕಾಯ್ತಾ ಇದ್ದಾರೆ ಅನ್ನೋ ವಿಚಾರ ಕೂಡ ಸುದ್ದಿಯಾಗುತ್ತಿದೆ.

ಇದನ್ನೂ ಓದಿ: ಧೋನಿ, ಕೊಹ್ಲಿ ಮೀರಿಸಿದ ಯಶಸ್ವಿ ಲುಕ್?  – ಹೇರ್​ ಸ್ಟೈಲ್ ಟ್ರೋಲ್‌ ಆಗಿದ್ಯಾಕೆ?

ಟಿ20 ವಿಶ್ವಕಪ್ ಫೈನಲ್ ಮ್ಯಾಚ್ ವೇಳೆ ಕೊನೆಯ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತವಾದ ಕ್ಯಾಚ್ ಹಿಡಿದರು.. ಅವರು ಆ ಕ್ಯಾಚ್ ಹಿಡಿಯದೇ ಹೋಗಿದ್ದರೆ ಆಗ ಇಡೀ ಪಂದ್ಯದ ರಿಸಲ್ಟ್ ಬದಲಾಗಿ ಹೋಗುತ್ತಿತ್ತು. ಅಕಸ್ಮಾತ್ ಈ ಕ್ಯಾಚ್ ಹಿಡಿಯದೇ ಹೋಗಿದ್ರೆ ಭಾರತ ಸೋಲು ಕಾಣುತ್ತಿತ್ತು. ಹೀಗೆ ಭಾರತದ ಗೆಲುವಿನಲ್ಲಿ ಈ ಕ್ಯಾಚ್ ನಿರ್ಣಾಯಕವಾಗಿತ್ತು. ಇದೀಗ ಅದ್ಬುತ ಕ್ಯಾಚ್‌ ಹಿಡಿದ ಸೂರ್ಯ ಕುಮಾರ್‌ ಯಾದವ್‌ ಗೆ ಪ್ರಶಂಸೆಗಳ ಸುರಿಮಳೆಯೇ ಬರ್ತಾ ಇದೆ.  ಇದೀಗ ಅದೇ ಸೂರ್ಯಕುಮಾರ್ ಯಾದವ್ ಅವರ ಅಜ್ಜ ಮೊಮ್ಮಗನ ಬರುವಿಕೆಗಾಗಿ ಕಾಯ್ತಾ ಇದ್ದಾರಂತೆ. ಸ್ಕೈ ಅವರ  ಸ್ವಗ್ರಾಮದ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಅಂದ್ಹಾಗೆ ಸೂರ್ಯಕುಮಾರ್ ಯಾದವ್ ಮುಂಬೈನಲ್ಲಿ ಜನಿಸಿದವರು. ಅವರ ಪೂರ್ವಜರ ಮನೆ ಇರೋದು ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಗಾಜಿಪುರದಲ್ಲಿ. ಗಾಜಿಪುರದ ಕುಸಾನ್ಹಿ ಗ್ರಾಮದಲ್ಲಿ ಸೂರ್ಯ ಅವರ ಪೂರ್ವಜರು ವಾಸ ಮಾಡ್ತಿದ್ದಾರೆ. ಅವರ ಅಜ್ಜ ವಿಕ್ರಮ್ ಸಿಂಗ್ ಯಾದವ್ ಇನ್ನೂ ಕುಸಾನ್ಹಿಯಲ್ಲಿ ವಾಸಿಸುತ್ತಿದ್ದಾರೆ.

ಇದೀಗ ಸೂರ್ಯ ಕುಮಾರ್‌ ಯಾದವ್‌ ಅವರ ಅಜ್ಜ ಮೊಮ್ಮಗನ ಸಾಧನೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಸಾಧಾರಣವಾಗಿರುವ ಮನೆಯಲ್ಲಿ ಸೂರ್ಯ ತಾತ ವಾಸಿಸುತ್ತಿದ್ದಾರೆ. ಮನೆಯಲ್ಲಿ ಸೂರ್ಯ ಹಾಗೂ ಅವರ ಪತ್ನಿ ದೇವಿಶಾ ಶೆಟ್ಟಿ ಫೋಟೋ ಕೂಡ ಇಟ್ಟುಕೊಂಡಿದ್ದಾರೆ. ಈ ಗ್ರಾಮಕ್ಕೆ ಸೂರ್ಯಕುಮಾರ್ 2017ರಲ್ಲಿ ಬಂದಿದ್ದರಂತೆ. ಪೂರ್ವಜರ ನಿವಾಸಕ್ಕೆ ಬಂದು ಮಾತನಾಡಿಸಿಕೊಂಡು ಹೋಗಿದ್ದರಂತೆ. ಭಾರತ ತಂಡದ ಈ ಸಾಧನೆಗೆ ಇಡೀ ಗ್ರಾಮವೇ ಸಂತಸಗೊಂಡಿದೆ ಎಂದು ಸೂರ್ಯಕುಮಾರ್ ಅವರ ತಾತ ಹೇಳಿದ್ದಾರೆ. ಸೂರ್ಯಕುಮಾರ್ ಬೇಗ ಗ್ರಾಮಕ್ಕೆ ಬಂದು ಎಲ್ಲರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲಿ ಎಂದಿದ್ದಾರೆ.

Shwetha M