IND ರಿಯಲ್ ಬಾಹುಬಲಿ KOHLI – ಪ್ರಭಾಸ್ ಫಿಲ್ಮ್ ರಿ ಕ್ರಿಯೇಟ್ ಮಾಡಿದ್ರಾ?
ಮುಂಬೈ ಸ್ಟೇಡಿಯಮ್ನಲ್ಲಿ ಏನಿದು ಮ್ಯಾಜಿಕ್?
ವಿರಾಟ್ ಕೊಹ್ಲಿಗೆ ಇರೋ ಪಾಪ್ಯುಲಾರಿಟಿ ಬಗ್ಗೆ ಹೇಳೋದೇ ಬೇಡ. ಟೀಂ ಇಂಡಿಯಾದ ಈ ಕೊಹಿನೂರ್ ವಜ್ರ ಇಡೀ ಕ್ರಿಕೆಟ್ ಜಗತ್ತಿಗೇ ಕಿರೀಟವಿದ್ದಂತೆ. ಗಲ್ಲಿಯಿಂದ ಹಿಡ್ದು ವಿದೇಶದ ಯಾವುದೋ ಮೂಲೆಯಲ್ಲಿರೋ ಜನ್ರಿಗೂ ಕೂಡ ನಮ್ಮ ವಿರಾಟ್ ಯಾರು ಅನ್ನೋದು ಗೊತ್ತಿದೆ. ಮೊದ್ಲೆಲ್ಲಾ ಫುಟ್ಬಾಲ್ ಪ್ಲೇಯರ್ಸ್ಗೆ ಮಾತ್ರ ಜಗತ್ತಿನಾದ್ಯಂತ ಕ್ರೇಜ್ ಇರ್ತಿತ್ತು. ಬಟ್ ಫಾರ್ ದಿ ಫಸ್ಟ್ ಟೈಂ ವಿರಾಟ್ ಕ್ರಿಕೆಟ್ನಲ್ಲಿ ಕಿಂಗ್ ಆಗಿ ಮೆರೀತಿದ್ದಾರೆ. ಅದ್ರಲ್ಲೂ ಈಗ ಟಿ-20 ವಿಶ್ವಕಪ್ ಫೈನಲ್ ಮ್ಯಾಚ್ನಲ್ಲಿ ವಿರಾಟ ರೂಪ ತೋರಿಸಿದ ಮೇಲೆ ಆ ಕ್ರೇಜ್ ಇನ್ನೂ ಡಬಲ್ ಆಗಿದೆ. ರಿಯಲ್ ಬಾಹುಬಲಿ ಆಗಿ ಕಾಣಿಸ್ತಿದ್ದಾರೆ. ಗಣ್ಯಾತಿಗಣ್ಯ ವ್ಯಕ್ತಿಗಳೇ ವಿರಾಟ್ರನ್ನ ನೋಡಿ ಮೈ ಮರೆಯುತ್ತಿದ್ದಾರೆ. ಕ್ರಿಕೆಟ್ನ ಲೈವ್ ಲೆಜೆಂಡ್ ವಿರಾಟ್ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರೋಹಿತ್ ನಿವೃತ್ತಿಗೆ ರಿತಿಕಾ ರಿಲ್ಯಾಕ್ಸ್ – ಪತ್ನಿಯ 4 ಬೆರಳಿನ ತಪಸ್ಸು ಈಡೇರಿತಾ?
ವಿರಾಟ್ ಕೊಹ್ಲಿ. ಇದೊಂದು ಹೆಸರು ಸಾಕು. ಕ್ರಿಕೆಟ್ ಮೈದಾನದಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯೋಕೆ. ಬ್ಯಾಟ್ ಹಿಡಿದ್ರೆ ಭಯಂಕರ. ಫೀಲ್ಡಿಂಗ್ನಲ್ಲಿ ಚಿರತೆ ವೇಗದ ಆಟಗಾರ. ಸದಾ ಆಕ್ಟಿವ್ ಆಗಿರೋ ಇದೇ ವಿರಾಟ್ ಈಗ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋ. ಇನ್ಸ್ಟಾಗ್ರಾಮ್ನಲ್ಲಿ 270 ಮಿಲಿಯನ್ ಫಾಲೋವರ್ಸ್ ಹೊಂದಿರೋ ವಿರಾಟ್ ಕೊಹ್ಲಿ ಸಂಪಾದನೆ ಮಾಡಿರೋ ಅಭಿಮಾನ ಅಂತಿಂಥಾದಲ್ಲ. ದ್ವೇಷಿಸುವವರನ್ನೂ ಪ್ರೀತಿಸುವಂತೆ ಮಾಡೋ ತಾಕತ್ತು ವಿರಾಟ್ಗೆ ಮಾತ್ರ ಇದೆ. ಯಾಕಂದ್ರೆ ವಿರಾಟ್ ಕ್ರೀಸ್ನಲ್ಲಿದ್ದಾರೆ ಅಂದ್ರೆ ಭಾರತೀಯ ಅಭಿಮಾನಿಗಳಿಗೆ ಅದೇನೋ ಭರವಸೆ. ಗೆದ್ದೇ ಗೆಲ್ಲುತ್ತೇವೆ ಅನ್ನೋ ನಂಬಿಕೆ. ಫೀಲ್ಡಿಂಗ್ನಲ್ಲೂ ಕೂಡ ಕೊಹ್ಲಿ ಥರ ವಿಕೆಟ್ಸ್ಗೆ ಟಾರ್ಗೆಟ್ ಇಟ್ಟು ಬಾಲ್ ಎಸೆಯೋಕೆ ಮತ್ಯಾರಿಂದಲೂ ಸಾಧ್ಯನೇ ಇಲ್ಲ. ಕ್ಯಾಚ್ ಹಿಡಿಯೋ ಫ್ಲೆಕ್ಸಿಬಿಲಿಟಿ ಕೂಡ ಅದ್ಭುತ. ಏಕಾಂಗಿಯಾಗಿ ನಿಂತು ಅದೆಷ್ಟೋ ಬಾರಿ ಭಾರತವನ್ನ ಗೆಲ್ಲಿಸಿರೋ ವಿರಾಟ್ಗೆ ಸಾಮಾನ್ಯ ಜನ ಮಾತ್ರ ಅಲ್ಲ. ಕ್ರಿಕೆಟರ್ಸ್ ಕೂಡ ಫ್ಯಾನ್ ಆಗಿದ್ದಾರೆ. ಗಣ್ಯ ವ್ಯಕ್ತಿಗಳೂ ಕೂಡ ವಿರಾಟ್ ಅಭಿಮಾನಿಯಾಗಿದ್ದಾರೆ. ಕ್ರಿಕೆಟ್ ಕಿಂಗ್ ಅಂತಾ ಕರೆಸಿಕೊಳ್ಳೋ ವಿರಾಟ್ ಕೊಹ್ಲಿ ಟಿ-20 ವಿಶ್ವಕಪ್ ಗೆದ್ದ ಮೇಲಂತೂ ರಿಯಲ್ ಬಾಹುಬಲಿಯಾಗಿದ್ದಾರೆ. ಅಭಿಮಾನಿಗಳ ಪಾಲಿಗೆ ಕೊಹ್ಲಿಯೇ ಹೀರೋ, ಕೊಹ್ಲಿಯೇ ಇನ್ಸ್ಪಿರೇಷನ್, ಕೊಹ್ಲಿಯೇ ರೋಲ್ ಮಾಡೆಲ್. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಗುರುವಾರ ರಾತ್ರಿ ಮುಂಬೈನ ವಾಂಖೆಡೆ ಸ್ಟೇರಿಯಂನಲ್ಲಿ ನಡೆದ ಅದೊಂದು ಘಟನೆ.
ಬಾಹುಬಲಿ ವಿರಾಟ್!
ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಸಿನಿಮಾ ಅಂದ್ರೆ ಅದು ಪ್ರಭಾಸ್ ಅಭಿನಯದ ಬಾಹುಬಲಿ. ಅದ್ರಲ್ಲೂ ಪಾರ್ಟ್ 2 ಅಂತೂ ಅಲ್ಟಿಮೇಟ್. ಈ ಸಿನಿಮಾ ನೋಡಿದ ಎಲ್ಲರ ಮನಸ್ಸಲ್ಲೂ ಅಚ್ಚಳಿಯದೇ ಉಳಿದ ಸೀನ್ ಅಂದ್ರೆ ಅದು ಇಂಟರ್ವೆಲ್ ದೃಶ್ಯ. ಈಗ ಅಂತಹದ್ದೇ ದೃಶ್ಯವನ್ನು ರಿಯಲ್ಲಾಗಿ ರಿಕ್ರಿಯೇಟ್ ಮಾಡಿದ್ದಾರೆ ವಿರಾಟ್ ಕೊಹ್ಲಿ. ಬಲ್ಲಾಳದೇವ ಮಾಹಿಷ್ಮತಿ ಸಾಮ್ರಾಜ್ಯದ ರಾಜನಾಗಿ ಪಟ್ಟಾಭಿಷೇಕ ಪಡೆದ ವೇಳೆ ತನ್ನ ಸೈನಿಕರು ಮತ್ತು ಬೆಂಬಲಿಗರು ಮಾತ್ರ ಜೈಕಾರ ಕೂಗ್ತಾರೆ. ಆದ್ರೆ ಅಮರೇಂದ್ರ ಬಾಹುಬಲಿ ಸರ್ವಸೈನ್ಯಾಧಿಪತಿಯಾಗಿ ಅಧಿಕಾರ ಸ್ವೀಕರಿಸಿದ ವೇಳೆ ಪ್ರಜೆಗಳ ಜೈಕಾರದ ಕೂಗಿಗೆ ಇಡೀ ಆಸ್ಥಾನವೇ ಅಲುಗಾಡಿತ್ತು. ಬಾಹುಬಲಿ ಸಂಪಾದಿಸಿದ ಪ್ರೀತಿ ಕಂಡು ರಾಜನೇ ಮೂಕವಿಸ್ಮಿತನಾಗುತ್ತಾನೆ. ಗುರುವಾರ ಅಂತಹದ್ದೇ ದೃಶ್ಯ ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಮರು ಸೃಷ್ಟಿಯಾಗಿದೆ. ಐಕಾನಿಕ್ ಕ್ರಿಕೆಟ್ ಮೈದಾನ ವಾಂಖೆಡೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿರಾಟ್ ಕೊಹ್ಲಿ ಕೂಡ ಬಾಹುಬಲಿ-2 ಚಿತ್ರದ ಇಂಟರ್ವೆಲ್ ಚಿತ್ರದ ಸನ್ನಿವೇಶ ಎದುರಿಸಿದ್ರು. ನಿರೂಪಕ ಗೌರವ್ ಅವರು, ಟಿ20 ವಿಶ್ವಕಪ್ ಗೆಲುವಿನ ಕುರಿತು ಮಾತನಾಡಲು ಕೊಹ್ಲಿಯನ್ನು ವೇದಿಕೆ ಮೇಲೆ ಕರೆದ್ರು. ವಿರಾಟ್ ವೇದಿಕೆಯತ್ತ ಬರುತ್ತಿದ್ದಂತೆ, ಅಭಿಮಾನಿಗಳು ಕೊಹ್ಲಿ, ಕೊಹ್ಲಿ ಎಂದು ಜೋರಾಗಿ ಕೂಗಿದ್ದಾರೆ. ಅದು ಹೇಗಿತ್ತು ಅಂದ್ರೆ ಇಡೀ ಮೈದಾನವೇ ರಿಸೌಂಡ್ ಬರುತ್ತಿತ್ತು. ಸಹ ಆಟಗಾರರು, ಬಿಸಿಸಿಐ ಅಧಿಕಾರಿಗಳು ಕೂಡ ಕೊಹ್ಲಿ ಫ್ಯಾನ್ ಫಾಲೋಯಿಂಗ್ ಕಂಡು ಒಂದು ಕ್ಷಣ ದಂಗಾಗಿದ್ರು. ವೇದಿಕೆಗೆ ಆಗಮಿಸಿದ ನಂತರ ಅಭಿಮಾನಿಗಳತ್ತ ಕೈಬೀಸಿದ ಕೊಹ್ಲಿ ಮಾತನಾಡಲು ಆರಂಭಿಸಿದರು. ಆದರೆ, ಫ್ಯಾನ್ಸ್ ಅದಕ್ಕೆ ಅವಕಾಶವೇ ಮಾಡಿಕೊಡಲಿಲ್ಲ. ಕೆಲ ಹೊತ್ತಾದ ನಂತರ ಮೊದಲಿಗೆ ಎಂದು ಮಾತು ಶುರು ಮಾಡಿದರು. ಆಗ ಅಭಿಮಾನಿಗಳ ಜೈಕಾರ ಮತ್ತಷ್ಟು ಹೆಚ್ಚಾಯಿತು. ಕೊಹ್ಲಿ, ಕೊಹ್ಲಿ, ಕೊಹ್ಲಿ ಎಂದು ಕೂಗತೊಡಗಿದರು. ಈ ವೇಳೆ ವಿರಾಟ್ ಕೂಡ ಭಾವುಕಕ್ಕೆ ಒಳಗಾದರು. ಈ ದೃಶ್ಯ ನೋಡಿದ ಎಷ್ಟೋ ಅಭಿಮಾನಿಗಳಿಗೆ ಅಕ್ಷರಶಃ ಬಾಹುಬಲಿ-2 ಚಿತ್ರದ ಇಂಟರ್ವೆಲ್ ದೃಶ್ಯ ನೋಡಿದಂತೆಯೇ ಭಾಸವಾಗಿದೆ. ಆದರೆ, ಇಲ್ಲಿ ಯಾವುದೇ ಪಟ್ಟಾಭಿಷೇಕ ಇರಲಿಲ್ಲ ಅಷ್ಟೇ.
ಅಸಲಿಗೆ ವಿರಾಟ್ ಮೇಲೆ ಅಭಿಮಾನಿಗಳು ಇಷ್ಟೊಂದು ಪ್ರೀತಿ ತೋರಿಸೋಕೆ ಕಾರಣವೂ ಇದೆ. ಟಿ20 ವಿಶ್ವಕಪ್ ಫೈನಲ್ನಲ್ಲಿ ಗೆದ್ದು ಭಾರತ 17 ವರ್ಷಗಳ ನಂತರ ಚುಟುಕು ವಿಶ್ವಕಪ್ಗೆ ಮುತ್ತಿಕ್ಕಿತು. ಜವಾಬ್ದಾರಿ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 76 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಗೆಲುವಿನಲ್ಲಿ ಕೊಹ್ಲಿಗೂ ಕೂಡ ಕ್ರೆಡಿಟ್ ಸಲ್ಲಬೇಕು. ಇನ್ನು ಕಿಂಗ್ ಕೊಹ್ಲಿಗೆ ಇರೋ ಜನಪ್ರಿಯತೆಗೆ ಇನ್ನೊಂದು ಎಕ್ಸಾಂಪಲ್ ಗುರುವಾರ ಸನ್ಮಾನ ಕಾರ್ಯಕ್ರಮದಲ್ಲಿ ನಡೆದಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವಿಶ್ವಕಪ್ ಪ್ರದರ್ಶಿಸಲಾಯಿತು. ಈ ವೇಳೆ ಜಯ್ ಶಾ ಅವರಿಗೆ ವಿರಾಟ್ ಕೊಹ್ಲಿ ಶೇಕ್ ಹ್ಯಾಂಡ್ ಮಾಡಿದ್ರು. ಇದಾದ ಬೆನ್ನಲ್ಲೇ ಅವರನ್ನೇ ನೋಡುತ್ತಾ ನಿಂತಿದ್ದಾರೆ. ಜಯ್ ಶಾ ವಿರಾಟ್ನ ನೋಡುವುದರಲ್ಲಿ ಎಷ್ಟು ಮಗ್ನರಾಗಿದ್ದರು ಎಂದರೆ ನಂತರ ಬಂದ ಆಟಗಾರರಿಗೆ ಕೈ ಕುಲುಕುವುದನ್ನೇ ಮರೆತುಬಿಟ್ಟಿದ್ರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಟ್ನಲ್ಲಿ ವಿರಾಟ್ ಕೊಹ್ಲಿಗೆ ಇರೋ ನೇಮ್ ಫೇಮ್ ಸದ್ಯಕ್ಕಂತೂ ಯಾವ ಕ್ರಿಕೆಟರ್ಗೂ ಇಲ್ಲ. ಆದ್ರೆ ಈ ಅಭಿಮಾನ ಸಂಪಾದನೆ ಮಾಡೋಕೆ ವಿರಾಟ್ ತುಂಬಾನೇ ಸ್ಯಾಕ್ರಿಫೈಸ್ ಮಾಡಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.