‘ಕಥೆ ಕದಿಯುವುದೇ ನನ್ನ ಯಶಸ್ಸಿನ ಗುಟ್ಟು’- ಖ್ಯಾತ ಕಥೆಗಾರ ವಿಜಯೇಂದ್ರ ಪ್ರಸಾದ್
‘ಉತ್ತಮವಾಗಿ ಸುಳ್ಳುಗಳನ್ನು ಹೇಳಬಲ್ಲಂತಹ ವ್ಯಕ್ತಿ ಉತ್ತಮ ಕಥೆಗಾರನಾಗಬಲ್ಲ’-ವಿಜಯೇಂದ್ರ ಪ್ರಸಾದ್

‘ಕಥೆ ಕದಿಯುವುದೇ ನನ್ನ ಯಶಸ್ಸಿನ ಗುಟ್ಟು’- ಖ್ಯಾತ ಕಥೆಗಾರ ವಿಜಯೇಂದ್ರ ಪ್ರಸಾದ್‘ಉತ್ತಮವಾಗಿ ಸುಳ್ಳುಗಳನ್ನು ಹೇಳಬಲ್ಲಂತಹ ವ್ಯಕ್ತಿ ಉತ್ತಮ ಕಥೆಗಾರನಾಗಬಲ್ಲ’-ವಿಜಯೇಂದ್ರ ಪ್ರಸಾದ್

ತೆಲುಗು ಚಿತ್ರರಂಗದ ಸಕ್ಸಸ್ ಚಿತ್ರಗಳಿಗೆ ಕಥೆ ಬರೆದಿರುವ ವಿಜಯೇಂದ್ರ ಪ್ರಸಾದ್ ತನ್ನ ಯಶಸ್ಸಿನ ಗುಟ್ಟನ್ನ, ಯಶಸ್ಸಿನ ಹಿಂದಿರೋ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ನಾನು ಕಥೆ ಕದಿಯುತ್ತೇನೆ. ಅದು ಕೂಡಾ ನಿಮ್ಮ ನಡುವೆ ಇರುವ ಕಥೆಗಳನ್ನು ಕದಿಯುತ್ತೇನೆ ಎಂದು ತನ್ನ ಬರವಣಿಗೆಯ ಗುಟ್ಟನ್ನ ಅಭಿಮಾನಿಗಳೆದುರು ಹೇಳಿದ್ದಾರೆ. ಖ್ಯಾತ ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರಪ್ರಸಾದ್ ಅವರು ಬರೆದಿರುವ ಬಹುತೇಕ ಚಿತ್ರಗಳು ಸೂಪರ್ ಹಿಟ್ ಆಗಿವೆ.

ಇದನ್ನೂ ಓದಿ :  ಬಿಗ್ ಬಜೆಟ್ ತೆಲುಗು ಸಿನಿಮಾ “ಹನು-ಮಾನ್” ಟೀಸರ್ ರಿಲೀಸ್

ಗೋವಾದಲ್ಲಿ ನವೆಂಬರ್ 20ರಿಂದ ಅಂತಾರಾಷ್ಟ್ರೀಯ ಭಾರತೀಯ ಸಿನಿಮೋತ್ಸವ ನಡೆಯುತ್ತಿದೆ. ಇದರಲ್ಲಿನ ಒಂದು ಸಂವಾದ ಕಾರ್ಯಕ್ರಮದಲ್ಲಿ ವಿಜಯೇಂದ್ರ ಪ್ರಸಾದ್​ ಅವರು ಭಾಗವಹಿಸಿದ್ದರು. ಈ ವೇಳೆ ಅವರು ಸಿನಿಮಾಗಾಗಿ ಕಥೆ ಬರೆಯುವ ಸೀಕ್ರೆಟ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ‘ನಾನು ಕಥೆ ಬರೆಯುವುದಿಲ್ಲ. ಕಥೆ ಕದಿಯುತ್ತೇನೆ. ನಿಮ್ಮ ನಡುವೆ ಇರುವ ಕಥೆಯನ್ನೇ ಕದಿಯುತ್ತೇನೆ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳಾಗಿರಲಿ ಅಥವಾ ನಿಜ ಜೀವನದ ಘಟನೆಗಳೇ ಆಗಿರಲಿ.. ಎಲ್ಲ ಕಡೆಗಳಲ್ಲಿ ಕಥೆಗಳಿವೆ. ಅದನ್ನು ನೀವು ನಿಮ್ಮದೇ ಆದಂತಹ ವಿಶೇಷ ಶೈಲಿಯಲ್ಲಿ ಪ್ರಸ್ತುತ ಪಡಿಸಬೇಕು’ ಎಂದು ವಿಜಯೇಂದ್ರ ಪ್ರಸಾದ್​ ಹೇಳಿದ್ದಾರೆ.

ವಿಜಯೇಂದ್ರ ಪ್ರಸಾದ್, ಬಾಹುಬಲಿ, ಮಗಧೀರ, ವಿಕ್ರಮಾರ್ಕುಡು, ‘ಆರ್​ಆರ್​ಆರ್​’ ಸೇರಿದಂತೆ ತೆಲುಗಿನ ಹಲವು ಚಿತ್ರಗಳಿಗೆ ಕಥೆ ಬರೆದಿದ್ದಾರೆ. ಸಲ್ಮಾನ್​ ಖಾನ್​ ನಟನೆಯ ಸೂಪರ್​ ಹಿಟ್​ ಚಿತ್ರ ‘ಭಜರಂಗಿ ಭಾಯಿಜಾನ್​’ ಚಿತ್ರದ ಕಥೆ ಕೂಡ ವಿಜಯೇಂದ್ರ ಪ್ರಸಾದ್​ ಅವರೇ ಬರೆದಿದ್ದು. ಇನ್ನು

‘ಆರ್​ಆರ್​ಆರ್​’ ಸಿನಿಮಾದ ಎರಡನೇ ಭಾಗಕ್ಕೂ ವಿಜಯೇಂದ್ರ ಪ್ರಸಾದ್ ಅವರೇ ಕಥೆ ಬರೆಯುತ್ತಿದ್ದಾರೆ. ಕಥೆ ಬರೆಯುವುದು ಎಂದರೆ ಶೂನ್ಯದಿಂದ ಏನನ್ನಾದರೂ ಸೃಷ್ಟಿಸುವುದು. ಒಂದು ಸುಳ್ಳನ್ನು ಸತ್ಯ ಎಂಬಂತೆ ಪ್ರಸ್ತುತ ಪಡಿಸಬೇಕು. ಉತ್ತಮವಾಗಿ ಸುಳ್ಳುಗಳನ್ನು ಹೇಳಬಲ್ಲಂತಹ ವ್ಯಕ್ತಿ ಉತ್ತಮ ಕಥೆಗಾರನಾಗಬಲ್ಲ ಎಂದು ವಿಜಯೇಂದ್ರ ಪ್ರಸಾದ್​ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

suddiyaana