ಚೋಕರ್ಸ್ To ಚಾಂಪಿಯನ್ ಫೈಟ್ – ಸೆಮೀಸ್ ನಲ್ಲೇ ಕಾಡ್ತಿತ್ತಾ BAD LUCK?
ಜಗತ್ತನ್ನೇ ಗೆದ್ದಿದ್ದೇಗೆ ಸೌತ್ ಆಫ್ರಿಕಾ?

ಚೋಕರ್ಸ್ To ಚಾಂಪಿಯನ್ ಫೈಟ್ – ಸೆಮೀಸ್ ನಲ್ಲೇ ಕಾಡ್ತಿತ್ತಾ BAD LUCK?ಜಗತ್ತನ್ನೇ ಗೆದ್ದಿದ್ದೇಗೆ ಸೌತ್ ಆಫ್ರಿಕಾ?

2024ರ ಟಿ-20 ವಿಶ್ವಕಪ್​ನಲ್ಲಿ ಅತೀ ಹೆಚ್ಚು ಸದ್ದು ಮಾಡಿದ ತಂಡ ಅಂದ್ರೆ ಅದು ಸೌತ್ ಆಫ್ರಿಕಾ. ಚೋಕರ್ಸ್ ಅಂತಾ ಹಣೆಪಟ್ಟಿ ಕಟ್ಟಿಕೊಂಡು ಹೋರಾಡುತ್ತಿದ್ದ ಅದೇ ತಂಡ ಈ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ತಲುಪಿತ್ತು. ಹೀಯಾಳಿಸಿದ್ದ ಜನರೇ ಚಪ್ಪಾಳೆ ತಟ್ಟಿ ಬೇಷ್ ಎನ್ನುವಂತೆ ಮಾಡಿದ್ರು. ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಒಂಬತ್ತು ವಿಕೆಟ್ ಅಂತರದ ಜಯ ಗಳಿಸಿಸುವ ಮೂಲಕ ಫಿನಾಲೆಗೆ ಗ್ರ್ಯಾಂಡ್ ಎಂಟ್ರಿ ನೀಡಿತ್ತು. ಐಸಿಸಿ ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ ಪುರುಷರ ಕ್ರಿಕೆಟ್ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿತು. ಅಷ್ಟಕ್ಕೂ ದಕ್ಷಿಣಾ ಆಫ್ರಿಕಾ ತಂಡದ ಬ್ಯಾಡ್ ಲಕ್ ಅಂದ್ರೆ ಮಹತ್ವದ ಪಂದ್ಯಗಳಲ್ಲೇ ಎಡವುತ್ತಿದ್ದದ್ದು. ಐಸಿಸಿ ಟೂರ್ನಿಗಳಲ್ಲಿ ನಿರ್ಣಾಯಕ ಸೆಮಿಫೈನಲ್ ಪಂದ್ಯಗಳಲ್ಲೇ ಎಡವುತ್ತಿದ್ದ ದಕ್ಷಿಣ ಆಫ್ರಿಕಾ ಕೊನೆಗೂ ಚೋಕರ್ಸ್ ಹಣೆಪಟ್ಟಿ ಕಳಚಿಕೊಂಡಿದೆ. ಏಳು ಸಲ ಸೆಮಿಫೈನಲ್‌ನಲ್ಲಿ ಮುಗ್ಗರಿಸಿ ಕೊನೆಗೂ ತಾವೇನು ಅನ್ನೋದನ್ನ ಇಡೀ ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದೆ. ಅಷ್ಟಕ್ಕೂ ಐಸಿಸಿ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾಗೆ ಎದುರಾದ ಸೆಮಿಫೈನಲ್ ಸೋಲುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸೆಮೀಸ್ ಸೋಲು!

1992 ಏಕದಿನ ವಿಶ್ವಕಪ್ ನಲ್ಲಿ ಸೌತ್ ಆಫ್ರಿಕಾ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು. ಹಾಗೇ 1999 ಏಕದಿನ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು. ಇನ್ನು 2007ರ ಏಕದಿನ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು. 2009 ಟ್ವೆಂಟಿ-20 ವಿಶ್ವಕಪ್ ನಲ್ಲಿ ಪಾಕಿಸ್ತಾನ  ಹಾಗೇ 2014 ಟ್ವೆಂಟಿ-20 ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಮುಗ್ಗರಿಸಿತ್ತು. ಇನ್ನು 2015 ಏಕದಿನ ವಿಶ್ವಕಪ್ ನಲ್ಲೂ ನ್ಯೂಜಿಲೆಂಡ್ ವಿರುದ್ಧ ಮಂಡಿಯೂರಿತ್ತು. ಕಳೆದ ವರ್ಷ ಅಂದ್ರೆ 2023ರ ಏಕದಿನ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು. ಈ ಮೂಲಕ ಐಸಿಸಿ ಟೂರ್ನಿಗಳಲ್ಲಿ ಸೆಮೀಸ್​ನಲ್ಲೇ ಹೊರಬೀಳ್ತಿತ್ತು. ಆದ್ರೆ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶ ಪಡೆದಿದೆ. ಪ್ರಸಕ್ತ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿರುವ ದಕ್ಷಿಣ ಆಫ್ರಿಕಾ ಸತತ ಎಂಟು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಲೀಗ್ ಗುಂಪಿನಲ್ಲಿ ಎಲ್ಲ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದ್ದ ದಕ್ಷಿಣ ಆಫ್ರಿಕಾ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಸೂಪರ್ 8 ಹಂತಕ್ಕೆ ತಲುಪಿತ್ತು. ಸೂಪರ್ ಎಂಟರ ಹಂತದಲ್ಲೂ ಎಲ್ಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಪೈಕಿ ನೇಪಾಳ ವಿರುದ್ಧ ರೋಚಕ ಒಂದು ರನ್ ಅಂತರದ ಜಯ ಗಳಿಸಿತ್ತು.

ಸದ್ಯ ಕ್ರಿಕೆಟ್ ಲೋಕದಲ್ಲಿ ಚೋಕರ್ಸ್ ಅಂತಾನೇ ಕರೆಸಿಕೊಳ್ಳೋ ದಕ್ಷಿಣ ಆಫ್ರಿಕಾ ಕೊನೆಗೂ ಫೈನಲ್ ಪ್ರವೇಶಿಸೋ ಮೂಲಕ ಆ ಹಣೆಪಟ್ಟಿಯಿಂದ ಹೊರ ಬಂದಿದೆ. ಏಡೆನ್ ಮಾರ್ಕ್ರಂ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ, 2014ರ ಅಂಡರ್-19 ವಿಶ್ವಕಪ್ ಜಯಿಸಿತ್ತು. ಈ ಬಾರಿ ಟಿ-20 ವಿಶ್ವಕಪ್​ನಲ್ಲಿ ಫೈನಲ್‌ಗೆ ತಲುಪುವ ಮೂಲಕ ಇತಿಹಾಸ ರಚಿಸಿದೆ. ಪ್ರಸಕ್ತ ಟೂರ್ನಿಯಲ್ಲಿ ಸೌತ್ ಆಫ್ರಿಕಾ ನೀಡಿದ ಪ್ರದರ್ಶನ ನಿಜಕ್ಕೂ ಅದ್ಬುತವಾಗಿತ್ತು.

Shwetha M