ಗಿಲ್ ಗೆ ಕ್ಯಾಪ್ಟನ್ ಪಟ್ಟ ಕಟ್ಟಿದ BCCI – ಕನ್ನಡಿಗ ರಾಹುಲ್ ಗೆ ಮೋಸ ಮಾಡಿದ್ರಾ?

ಟೀಮ್ ಇಂಡಿಯಾದ ಅನುಭವಿಗಳ ತಂಡ ಟಿ20 ವಿಶ್ವಕಪ್ನಲ್ಲಿ ಅಜೇಯವಾಗಿ ಸೆಮೀಸ್ಗೆ ಕಾಲಿಟ್ಟಿದೆ. 2024ರ ಚುಟುಕು ಸಮರದ ಚಾಂಪಿಯನ್ ಪಟ್ಟಕ್ಕೇರೋ ಉತ್ಸಾಹದಲ್ಲಿದೆ. ಮತ್ತೊಂದೆಡೆ ಭಾರತದ ಯುವ ಪಡೆ ಜಿಂಬಾಬ್ವೆ ಪ್ರವಾಸಕ್ಕೆ ಸನ್ನದ್ಧವಾಗಿದೆ. ಟೀಂ ಇಂಡಿಯಾದ ಜಿಂಬಾಬ್ವೆ ಪ್ರವಾಸಕ್ಕೆ ಬಿಸಿಸಿಐ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆದ್ರೆ ತಂಡದ ಕ್ಯಾಪ್ಟನ್ಸಿ ಹಾಗೇ ಆಟಗಾರರ ಆಯ್ಕೆಯೇ ಬಾರೀ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಎರಡು ಮದುವೆ.. ಅದೇ ಸೀನ್! – ಡೈರೆಕ್ಟರ್ ದಾರಿ ತಪ್ಪಿದ್ದೆಲ್ಲಿ?
ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ಭವಿಷ್ಯದ ಲೆಕ್ಕಾಚಾರ ಹಾಕಿಕೊಂಡೇ ‘ಯಂಗ್ ಇಂಡಿಯಾ’ ಟೀಂ ಕಟ್ಟಿದೆ. ಶುಭ್ಮನ್ ಗಿಲ್ಗೆ ನಾಯಕತ್ವ ನೀಡಿ ಸರ್ಪ್ರೈಸ್ ಕೊಟ್ಟಿದ್ರೆ ಹಲವರಿಗೆ ಕೊಕ್ ಕೊಟ್ಟು ಬಿಗ್ಶಾಕ್ ನೀಡಿದೆ. ಅಚ್ಚರಿಯ ಸಂಗತಿಯೆಂದರೆ ಟಿ20 ವಿಶ್ವಕಪ್ನಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿರುವ ಒಬ್ಬನೇ ಒಬ್ಬ ಆಟಗಾರ ಈ ಸರಣಿಗಾಗಿ ತಂಡದಲ್ಲಿ ಆಯ್ಕೆಯಾಗಿಲ್ಲ. ಟಿ20 ವಿಶ್ವಕಪ್ ನ ಅಬ್ಬರದ ನಡುವೆ ಮುಂದಿನ ಸರಣಿಗೆ ಟೀಮ್ ಇಂಡಿಯಾ ಸಿದ್ಧತೆ
ಟಿ20 ವಿಶ್ವಕಪ್ನ ಅಬ್ಬರದ ನಡುವೆ ಮುಂದಿನ ಸರಣಿಗೆ ಟೀಮ್ ಇಂಡಿಯಾದ ಸಿದ್ಧತೆ ಆರಂಭವಾಗಿದೆ. ಜಿಂಬಾಬ್ವೆ ಪ್ರವಾಸಕ್ಕೆ ಅಳೆದು ತೂಗಿ ಲೆಕ್ಕಾಚಾರ ಹಾಕಿ ಸೆಲೆಕ್ಷನ್ ಕಮಿಟಿ ಟೀಮ್ ಅನೌನ್ಸ್ ಮಾಡಿದೆ. ನಿರೀಕ್ಷೆಯಂತೆ ಜಿಂಬಾಬ್ವೆ ಪ್ರವಾಸದ ತಂಡದಲ್ಲಿ ಸೀನಿಯರ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರಿತ್ ಬೂಮ್ರಾ ಸೇರಿದಂತೆ ಟಿ20 ವಿಶ್ವಕಪ್ ತಂಡದಲ್ಲಿರೋ ಹಿರಿಯ ಆಟಗಾರರಿಗೆಲ್ಲಾ ರೆಸ್ಟ್ ನೀಡಲಾಗಿದೆ. ಜುಲೈ 6ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ 15 ಆಟಗಾರರನ್ನ ಆಯ್ಕೆ ಮಾಡಲಾಗಿದೆ. ಶುಭ್ಮನ್ ಗಿಲ್ ಕ್ಯಾಪ್ಟನ್ ಆಗಿದ್ರೆ ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಧ್ರುವ್ ಜುರೆಲ್, ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭಾರತ ಟಿ20 ತಂಡದಲ್ಲಿ ಮೊದಲ ಬಾರಿಗೆ ಐವರು ಆಟಗಾರರು ಸ್ಥಾನ ಪಡೆದಿದ್ದಾರೆ. ಕಳೆದ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ನಿತೀಶ್ ರೆಡ್ಡಿ, ತುಷಾರ್ ದೇಶಪಾಂಡೆ ಮತ್ತು ಧ್ರುವ ಜುರೆಲ್ಗೆ ಚಾನ್ಸ್ ಸಿಕ್ಕಿದೆ. ಹಾಗೇ ಜಿಂಬಾಬ್ವೆ ಸರಣಿಯೊಂದಿಗೆ ನಾಲ್ವರು ಆಟಗಾರರು ಟೀಂ ಇಂಡಿಯಾಕ್ಕೆ ಮರಳಿದ್ದು, ರುತುರಾಜ್ ಗಾಯಕ್ವಾಡ್ಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್, ವೇಗಿ ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್ ತಂಡಕ್ಕೆ ಮರಳಿದ್ದಾರೆ. ಬಟ್ ಇಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ಗೆ ಅವಕಾಶ ಕೊಟ್ಟಿಲ್ಲ. ಸದ್ಯ 15 ಜನರ ತಂಡ ನೋಡಿದ್ರೆ ಆಯ್ಕೆ ಮಂಡಳಿ ಸಂಪೂರ್ಣವಾಗಿ ಯುವ ಆಟಗಾರರಿಗೆ ಮಣೆ ಹಾಕಿದೆ. ಆದರೆ ಐಪಿಎಲ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್ಗೆ ಮತ್ತೊಮ್ಮೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಟಿ20 ವಿಶ್ವಕಪ್ನಿಂದಲೂ ರಾಹುಲ್ರನ್ನು ಕೈಬಿಡಲಾಗಿತ್ತು. ಇದೀಗ ಜಿಂಬಾಬ್ವೆ ಸರಣಿಗೂ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.
ಅಂತೂ ಇಂತೂ ಯುವ ಆಟಗಾರರಿಗೆ ಮಣೆ ಹಾಕಿರುವ ಸೆಲೆಕ್ಷನ್ ಕಮಿಟಿ, ಅವಕಾಶದ ನಿರೀಕ್ಷೆಯಲ್ಲಿದ್ದ ಹಲವರಿಗೆ ಶಾಕ್ ನೀಡಿದೆ. ತಂಡದಿಂದ ಇಶಾನ್ ಕಿಶನ್ರನ್ನ ಕೈ ಬಿಟ್ಟಿರೋದು ಕುತೂಹಲ ಮೂಡಿಸಿದೆ. ಜೊತೆಗೆ ಸ್ಥಾನದ ನಿರೀಕ್ಷೆಯಲ್ಲಿದ್ದ ತಿಲಕ್ ವರ್ಮಾ, ಹರ್ಷಿತ್ ರಾಣಾ, ರಜತ್ ಪಾಟಿದಾರ್ಗೆ ಶಾಕ್ ನೀಡಲಾಗಿದೆ. ಆದ್ರೀಗ ಹಿರಿಯ ಆಟಗಾರರನ್ನ ಕೈ ಬಿಟ್ಟಿರುವ ಬೆನ್ನಲ್ಲೇ ಹೊಸ ಚರ್ಚೆ ಶುರುವಾಗಿದೆ. ಟಿ-20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಚುಟುಕು ಕ್ರಿಕೆಟ್ಗೆ ಗುಡ್ಬೈ ಹೇಳ್ತಾರಾ ಎಂಬ ಪ್ರಶ್ನೆ ಎದ್ದಿದೆ. ಅದೇನೇ ಇದ್ರೂ ಫೈನಲಿ ತಂಡದಲ್ಲಿ ಯಾರಿದ್ದಾರೆ ಅನ್ನೋದಕ್ಕಿಂಥ ಭಾರತ ಗೆಲ್ಲೋದೇ ಮುಖ್ಯ. ಸೋ ಟಿ-20 ವಿಶ್ವಕಪ್ನಲ್ಲಿ ಹಿರಿಯರು ಗೆದ್ದು ಚಾಂಪಿಯನ್ಸ್ ಆಗಲಿ. ಬಳಿಕ ಜಿಂಬಾಬ್ವೆ ಸರಣಿಯಲ್ಲಿ ಯಂಗ್ ಸ್ಟರ್ಸ್ ವಿನ್ ಆಗಲಿ ಅನ್ನೋದೇ ಕ್ರಿಕೆಟ್ ಅಭಿಮಾನಿಗಳ ಆಶಯ.