ಐಟಂ ಸಾಂಗ್ ನಲ್ಲಿ ಸಾನಿಯಾ? – ಯಾರ ಪ್ರೀತಿಗೆ ಬಿದ್ರು ಮಿರ್ಜಾ?
ಮೂಗುತಿ ಸುಂದರಿಯ ಬೊಲ್ಡ್ ಮಾತು

ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗ್ತಾನೆ ಇದ್ದಾರೆ.. ಪತಿ ಶೋಯೆಬ್ ಮಲಿಕ್ ಡಿವೊರ್ಸ್ನಿಂದ ಸುದ್ದಿಯಾಗಿದ್ದ ಸಾನಿಯಾ.. ಇದೀಗ ಮಗನೊಂದಿಗೆ ಜೀವನ ಸಾಗಿಸ್ತಾ ಇದ್ದಾರೆ.. ಇತ್ತೀಚಿಗಷ್ಟೇ ನಾನು ಪ್ರೀತಿಯ ಹುಡುಕಾಟದಲ್ಲಿದ್ದೇನೆ ಅಂತ ಹೇಳಿದ್ರು.. ಇದೀಗ ಮತ್ತೊಂದು ವಿಚಾರಕ್ಕೆ ಮೂಗುತಿ ಸುಂದರಿ ಸುದ್ದಿಯಲ್ಲಿದ್ದಾರೆ.. ಸಾನಿಯಾ ಮಿರ್ಜಾಗೆ ಈಗ ಸಾಕಷ್ಟು ಆಫರ್ ಗಳು ಬರ್ತಾ ಇವೆ ಅಂತೆ.. ಸಿನಿಮಾದಲ್ಲಿ ಐಟಂ ಸಾಂಗ್ ಗೆ ಡ್ಯಾನ್ಸ್ ಮಾಡೋ ಅವಕಾಶ ಸಿಕ್ಕಿದ್ಯಂತೆ ಇದೆ ಅಂತೆ..
ಇದನ್ನೂ ಓದಿ: ಟೀಂ ಇಂಡಿಯಾದ ಲಕ್ಕಿ ಗರ್ಲ್ – ಕ್ರಿಕೆಟ್ ಲೋಕದ ಮಾಸ್ಟರ್ ಮೈಂಡ್
ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನ ಪಡೆದಿದ್ದು ಗೊತ್ತೇ ಇದೆ. ಈಗ ಇಬ್ಬರೂ ತಮ್ಮ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.
ಶೋಯೆಬ್ ಮಲಿಕ್ ಮೂರನೇ ಮದುವೆಯಾಗಿದ್ರೆ, ಸಾನಿಯಾ ತಮ್ಮ ವೃತ್ತಿ ಮತ್ತು ಮಗನತ್ತ ಗಮನ ಹರಿಸುತ್ತಿದ್ದಾರೆ. ಸಾನಿಯಾ ಸಿನಿಮಾಗಳಿಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಜೋರಾಗಿತ್ತು. ಇದೀಗ ಈ ವಿಚಾರದಲ್ಲಿ ಸಾನಿಯಾ ಸ್ಪಷ್ಟನೆಯನ್ನೂ ನೀಡಿದ್ದಾರೆ. ಅಷ್ಟೇ ಅಲ್ಲದೇ ತಮಗೆ ಬರ್ತಾ ಇರೋ ಆಫರ್ ಗಳ ಬಗ್ಗೆ ಹೇಳಿದ್ದಾರೆ..
ಸಾನಿಯಾ ಮಿರ್ಜಾ ಕಪಿಲ್ ಶರ್ಮಾ ಶೋನಲ್ಲಿ ಇತ್ತೀಚೆಗೆ ಕಾಣಿಸಿಕೊಂಡರು. ಫರಾ ಖಾನ್, ಕರಣ್ ಜೋಹರ್, ಪರಿಣಿತಿ ಚೋಪ್ರಾ, ಸಾಜಿದ್ ಖಾನ್ ಸೇರಿದಂತೆ ಹಲವು ತಾರೆಯರು ಸಾನಿಯಾಗೆ ಒಳ್ಳೆಯ ಸ್ನೇಹಿತರು. ಸಾನಿಯಾ ಮಿರ್ಜಾ ಮತ್ತು ಫರಾ ಆತ್ಮೀಯ ಸ್ನೇಹಿತರು. ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ವಿಥ್ ಕರಣ್ನ ಇತ್ತೀಚಿನ ಸೀಸನ್ನಲ್ಲಿ ಫರಾ ಮತ್ತು ಸಾನಿಯಾ ಭಾಗವಹಿಸಿದ್ದರು. ಅಲ್ಲಿ ತುಂಬಾ ಬೋಲ್ಡ್ ಆಗಿ ಮಾತನಾಡಿದ್ದಾರೆ. ಇದೇ ವೇಳೆ ತಾನು ಟೆನಿಸ್ ಆಟಗಾರ್ತಿಯಲ್ಲದಿದ್ದರೆ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಸಾನಿಯಾ ಹೇಳಿದ್ದಾರೆ. ಸ್ಟಾರ್ ಹೀರೋಯೊಬ್ಬರು ತಮ್ಮ ಚಿತ್ರದಲ್ಲಿ ಮಿರ್ಜಾಗೆ ಐಟಂ ಸಾಂಗ್ ಆಫರ್ ಮಾಡಿದ್ದನ್ನು ಸಾನಿಯಾ ಹೇಳಿಕೊಂಡಿದ್ದಾರೆ.. ಆಗ ಒಟ್ಟಿಗೆ ಕುಳಿತಿದ್ದ ಫರಾ ಗೆಳತಿಗೆ ಸಿಕ್ಕಿರುವ ಅವಕಾಶಗಳ ಬಗ್ಗೆ ಹೇಳಿದ್ದಾರೆ.. ಸಾನಿಯಾಗೆ ಇದುವರೆಗೆ ಅನೇಕ ದೊಡ್ಡ ಚಿತ್ರಗಳಲ್ಲಿ ಐಟಂ ಸಾಂಗ್ ಗಳಿಗೆ ಸೊಂಟ ಬಳುಕಿಸಲು ಆಫರ್ ಬಂದಿವೆ.. ಆದ್ರೆ ಅದನ್ನ ತಿರಸ್ಕರಿಸಿದ್ದಾರೆ ಎಂದು ಆಕೆಯ ಪಕ್ಕದಲ್ಲಿದ್ದ ಫರಾ ಹೇಳಿದ್ದಾರೆ.
ಫರಾಳ ಮಾತು ಕೇಳಿ ಶಾಕ್ ಆದ ಕರಣ್, ಈ ಪ್ರಸ್ತಾಪವನ್ನು ಏಕೆ ಸ್ವೀಕರಿಸಲಿಲ್ಲ ಎಂದು ಅವರು ಕೇಳಿದರು. ಈ ವೇಳೆ ಫರಾ ಅವರ ಸಹೋದರ ತನಗೆ ಐಟಂ ಸಾಂಗ್ ಆಫರ್ ಮಾಡಿದ್ರು.. ಅದನ್ನ ಕೂಡ ರಿಜೆಕ್ಟ್ ಮಾಡಿದೆ ಅಂತಾ ಸಾನಿಯಾ ಮಿರ್ಜಾ ಹೇಳಿದ್ರು.. ಅಷ್ಟೇ ಅಲ್ಲ ಸಾನಿಯಾ ಮಿರ್ಜಾಗೆ ತೆಲುಗಿನಲ್ಲೂ ಸ್ಟಾರ್ ಹೀರೋಗಳು ಹಲವು ಅವಕಾಶಗಳನ್ನು ಕೊಟ್ಟಿದ್ದಾರೆ. ಆದರೆ ಅದಕ್ಕೂ ಆಕೆ ಬೇಡ ಎಂದಿದ್ದಾರೆ ಅಂತೆ.. ಇದಕ್ಕೆ ಕಾರಣವನ್ನು ಮೂಗುತಿ ಸುಂದರಿ ತಿಳಿಸಿದ್ದಾರೆ.. ಟೆನಿಸ್ ಆಟಗಾರ್ತಿಯಾಗಿರುವ ನಾನು ಈಗ ನಟಿಯಾಗಿ ಅಥವಾ ಗಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲು ನನಗೆ ಆಸಕ್ತಿ ಇಲ್ಲ ಅಂತಾ ಹೇಳಿದ್ದಾರೆ.. ಸಿನಿಮಾದಲ್ಲಿ ನಟಿಸ್ತಾರ ಇಲ್ವಾ ಗೊತ್ತಿಲ್ಲ.. ಆದ್ರೆ ಪ್ರಿತಿಯ ಹುಡುಕಾಟದಲ್ಲಿ ಇದ್ದೇನೆ ಎಂದು ಸಾನಿಯಾ ಹೇಳಿರುವುದು ಅಭಿಮಾನಿಗಳಿಗಂತೂ ಖುಷಿ ಕೊಟ್ಟಿದೆ..