ಬ್ಯಾಗು ಹಿಡೀ.. ಸೀದಾ ನಡೀ.. – ವಿಶ್ವಕಪ್ ನಿಂದ PAKಗೆ ಗೇಟ್ ಪಾಸ್
ಬಾಬರ್ ಬಿಲ್ಡಪ್.. ಫುಲ್ ಟ್ರೋಲ್
2022ರಲ್ಲಿ ಟ್ರೋಫಿ ಜಸ್ಟ್ ಮಿಸ್ ಆಗಿತ್ತು. ಸೋ 2024ರಲ್ಲಿ ಕಪ್ ತಗೊಂಡೇ ದೇಶಕ್ಕೆ ವಾಪಸ್ ಹೋಗೋದು ಅಂತಾ ತುಂಬಾ ಜೋಶ್ನಲ್ಲೇ ಟಿ-20 ವಿಶ್ವಕಪ್ ಅಖಾಡಕ್ಕೆ ಇಳಿದಿದ್ದ ಪಾಕಿಸ್ತಾನ ತಂಡಕ್ಕೆ ಇದೀಗ ಟೂರ್ನಿಯಿಂದ್ಲೇ ಗೇಟ್ಪಾಸ್ ಸಿಕ್ಕಿದೆ.. ಬ್ಯಾಗು ಹಿಡೀ ಸೀದಾ ನಡೀ ಅಂತಾ ಹ್ಯಾಪ್ ಮೋರೆ ಹಾಕ್ಕೊಂಡು ರಿಟರ್ನ್ ಫ್ಲೈಟ್ ಹತ್ತೋಕೆ ರೆಡಿಯಾಗಿದ್ದಾರೆ. ವಿಶ್ವಯುದ್ಧದಲ್ಲಿ ಸೋತು ಸುಣ್ಣವಾಗಿರೋ ಆಟಗಾರರನ್ನ ಸೋಶಿಯಲ್ ಮೀಡಿಯಾದಲ್ಲಿ ಅವ್ರದ್ದೇ ಫ್ಯಾನ್ಸ್ ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ. ದೇಶದ್ರೋಹ ಪ್ರಕರಣವನ್ನೂ ಹಾಕಿ ಕೆಂಡವಾಗಿದ್ದಾರೆ. ಅಷ್ಟಕ್ಕೂ ಪಾಕ್ ಟೀಂ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದ್ದೇಗೆ? ಬಾಬರ್ ಅಜಂ ತಂಡವನ್ನ ಸೋಲಿಸಿದ್ರಾ? ಸೋಶಿಯಲ್ ಮೀಡಿಯಾದಲ್ಲಿ ಹೇಗಿದೆ ಟ್ರೋಲ್ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸೇವಂತಿ ಸೇವಂತಿ ಸಿನಿಮಾ ಕಥೆ ಸೀರಿಯಲ್‌ನಲ್ಲಿ! – ನಿದ್ದೆಯಲ್ಲಿದ್ದ ಭಾವನಾ ಕೊರಳಲ್ಲಿ ತಾಳಿ
ಟಿ20 ವಿಶ್ವಕಪ್‌ನಲ್ಲಿ ಕಳೆದ ಬಾರಿ ಪಾಕಿಸ್ತಾನ ತಂಡ ಫೈನಲ್ ಪ್ರವೇಶ ಮಾಡಿತ್ತು. ಆದ್ರೆ ಇಂಗ್ಲೆಂಡ್ ವಿರುದ್ಧ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಸೋ ಈ ಬಾರಿಯಾದ್ರೂ ಟ್ರೋಫಿ ಗೆಲ್ಲಲೇಬೇಕು ಎಂಬ ಹಠದೊಂದಿಗೇ ಟೂರ್ನಿಗೆ ಕಾಲಿಟ್ಟಿದ್ರು. ಬಟ್ ಬ್ಯಾಡ್ಲಕ್ ಸೂಪರ್ 8 ಹಂತಕ್ಕೆ ತಲುಪೋಕೂ ಕೂಡ ಆಗದೆ ಹೊರ ಬಿದ್ದಿದ್ದಾರೆ. ಇನ್ನೂ ಒಂದು ಪಂದ್ಯ ಇದ್ದಂತಿಯೇ ಟೂರ್ನಿಯಿಂದ ಹೊರ ಬಿದ್ದಿದೆ. ಅದ್ರಲ್ಲೂ ಗೆಲ್ಲೋ ಪಂದ್ಯಗಳನ್ನೂ ಕೈ ಚೆಲ್ಲಿದ ನಾಯಕ ಬಾಬರ್ ವಿರುದ್ಧ ಪಾಕ್ ಅಭಿಮಾನಿಗಳು ಕೆಂಡವಾಗಿದ್ದಾರೆ.
ಟಿ-20 ವಿಶ್ವಕಪ್ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಶಿಶು ಅಮೆರಿಕ ವಿರುದ್ಧ ಕಣಕ್ಕಿಳಿದಿದ್ದ ಪಾಕಿಸ್ತಾನ ಸೋಲಿನೊಂದಿಗೆ ಟೂರ್ನಿ ಆರಂಭಿಸಿತ್ತು. ಜೂನ್ 6ರಂದು ನಡೆದ ಪಂದ್ಯದಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. ಚೇಸಿಂಗ್ಗೆ ಇಳಿದಿದ್ದ ಅಮೆರಿಕ ಟೀಂ 20 ಓವರ್ಗಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಕಲೆ ಹಾಕಿದ್ರು. ಈ ಮೂಲಕ ಮ್ಯಾಚ್ ಟೈ ಆಗಿ ಸೂಪರ್ ಓವರ್ ಆಡಿಸಲಾಗಿತ್ತು. ಅಮೆರಿಕ ಆಟಗಾರರು ಸೂಪರ್ ಓವರ್ನಲ್ಲಿ 18 ರನ್ಗಳ ಟಾರ್ಗೆಟ್ ನೀಡಿದ್ರು. ಬಟ್ ಪಾಕಿಸ್ತಾನ ಒಂದು ವಿಕೆಟ್ ನಷ್ಟದೊಂದಿಗೆ 13 ರನ್ ಗಳಿಸಿ ಯುಎಸ್ ತಂಡದ ವಿರುದ್ಧ ಮೊದಲ ಸೋಲೊಪ್ಪಿಕೊಳ್ತು. ಬಳಿಕ ಸೆಕೆಂಡ್ ಮ್ಯಾಚ್ ಇದ್ದದ್ದು ಭಾರತದ ವಿರುದ್ಧ. ವಿಶ್ವಕಪ್ ಅಖಾಡಕ್ಕೆ ಇಳಿಯೋ ಮುನ್ನ ಪಾಕ್ ಆಟಗಾರರಿಗೆ ಟ್ರೋಫಿಗಿಂತ ಜಾಸ್ತಿ ಟೀಂ ಇಂಡಿಯಾವನ್ನ ಸೋಲಿಸ್ಬೇಕು ಅನ್ನೋ ಟಾರ್ಗೆಟ್ ಇಟ್ಕೊಂಡು ಬಂದಿದ್ರು. ಜೂನ್ 9ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತ ಭಾರತ ಫಸ್ಟ್ ಬ್ಯಾಟಿಂಗ್ ಮಾಡಿತ್ತು. ಬಟ್ ಟೀಂ ಇಂಡಿಯಾ 19 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 119 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಈ ಟಾರ್ಗೆಟ್ ನೋಡಿದ್ದಾಗಲೇ ಪಾಕ್ ಆಟಗಾರರು ಮತ್ತು ಫ್ಯಾನ್ಸ್ ಖುಷಿಯಲ್ಲಿ ತೇಲಾಡಿದ್ರು. ಒಂದು ಬಾಲ್ಗೆ ಒಂದು ರನ್ ಲೆಕ್ಕದಲ್ಲಿ 120 ರನ್ ಹೊಡ್ದು ಬಿಸಾಕ್ತಾರೆ ಅಂತಾ ಸೆಲೆಬ್ರೇಷನ್ ಶುರುವಿಟ್ಕೊಂಡಿದ್ರು. ಪಂದ್ಯ ಮುಗಿಯೋಕೂ ಮುನ್ನವೇ ಕಪ್ ಗೆದ್ದವರಂತೆ ಕುಣಿದು ಕುಪ್ಪಳಿಸ್ತಿದ್ರು. ಬಟ್ ನಮ್ಮ ಟೀಂ ಇಂಡಿಯಾದ ಬ್ರಹ್ಮಾಸ್ತ್ರ ಜಸ್ಪ್ರೀತ್ ಬುಮ್ರಾ ಪಾಕ್ ಕೈಯಲ್ಲಿದ್ದ ಗೆಲುವನ್ನ ತಮ್ಮ ಬೌಲಿಂಗ್ ಜಾದೂ ಮೂಲಕ ಕಿತ್ತುಕೊಂಡಿದ್ರು. ಪಾಕಿಸ್ತಾನ 20 ಓವರ್‌ಗಳಲ್ಲಿ 113 ರನ್‌ಗಳಿಸಿ 6 ರನ್ಗಳಿಂದ 2ನೇ ಸೋಲು ಕಾಣ್ತು. ಬಳಿಕ ಜೂನ್ 11ರಂದು ನಡೆದಿದ್ದ ಕೆನಡಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತನ್ನ ಮೊದಲ ಗೆಲುವು ಸಾಧಿಸಿತ್ತು. ನಾಲ್ಕನೇ ಪಂದ್ಯವನ್ನ ಜೂನ್ 16ರಂದು ಐರ್ಲೆಂಡ್ ವಿರುದ್ಧ ಗೆಲ್ಲುವ ಮೂಲಕ ಸೂಪರ್ 8ಗೆ ಏರೋ ಕನಸನ್ನ ಕಾಣ್ತಿತ್ತು. ಪಾಕಿಸ್ತಾನ ಇದೀಗ ಮಳೆರಾಯ ಇದ್ದ ಒಂದು ಅವಕಾಶವನ್ನು ಕಿತ್ತುಕೊಂಡಿದ್ದಾರೆ. ಗುರುವಾರ ಯುಎಸ್ಎ ಮತ್ತು ಐರ್ಲ್ಯಾಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದೆ. ಈಗಾಗ್ಲೇ 2 ಪಂದ್ಯಗಳನ್ನ ಗೆದ್ದು ನಾಲ್ಕು ಅಂಕ ಪಡೆದಿದ್ದ ಅಮೆರಿಕ ಪಂದ್ಯ ಕ್ಯಾನ್ಸಲ್ ಆಗಿದ್ದರಿಂದ 1 ಅಂಕ ಪಡೆದು ಒಟ್ಟಾರೆ ಐದು ಪಾಯಿಂಟ್ಸ್ನೊಂದಿಗೆ ಸೂಪರ್ 8 ಹಂತಕ್ಕೆ ಸೆಲೆಕ್ಟ್ ಆಗಿದೆ. ಪಾಕ್ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೂ 4 ಅಂಕ ಮಾ ಪಡೆಯಲಿದೆ. ಈ ಮೂಲಕ ಪಾಕಿಸ್ತಾನದ ಸೂಪರ್ 8 ಕನಸು ನುಚ್ಚು ನೂರಾಗಿದೆ.
ಸದ್ಯ ಬಾಬರ್ ಅಜಮ್ ಪಡೆ ಪ್ರಸಕ್ತ ಟೂರ್ನಿಯಲ್ಲಿ ಲೀಗ್ನಿಂದಲೇ ಹೊರ ಬಿದ್ದಿದ್ದು, ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಪಾಕ್ ವಿರುದ್ಧ ಫ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೇಳ್ಕೊಳ್ಳೋಕೆ ಅತ್ಯುತ್ತಮ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗ ಹೊಂದಿದ್ದರೂ ಸಾಂಘಿಕ ಪ್ರದರ್ಶನ ನೀಡದೆ ಫೇಲ್ಯೂರ್ ಅನುಭವಿಸಿದ್ರು 2009ರಲ್ಲಿ ಚಾಂಪಿಯನ್ ಆಗಿದ್ದ ಪಾಕ್ 2022ರಲ್ಲಿ ಫೈನಲ್ ತಲುಪಿತ್ತು. 2007ರ ಟಿ20 ವಿಶ್ವಕಪ್ನಲ್ಲೂ ರನ್ನರ್ಅಪ್ ಆಗಿತ್ತು. ಆದ್ರೆ ಈ ಬಾರಿ ತಂಡದ ಕಳಪೆ ಪ್ರದರ್ಶನದ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕ್ ತಂಡದ ನಾಯಕ ಬಾಬರ್ ಆಝಂ ಹಾಗೂ ಪಾಕಿಸ್ತಾನ್ ತಂಡವನ್ನು ಟ್ರೋಲ್ ಮಾಡಲಾಗುತ್ತಿದೆ. ಇನ್ನೊಂದು ಅಚ್ಚರಿ ವಿಷ್ಯ ಏನಪ್ಪಾ ಅಂದ್ರೆ ಟಿ20 ವಿಶ್ವಕಪ್ಗೂ ಮುನ್ನ ಪಾಕ್ ಆಟಗಾರರು ಆರ್ಮಿ ಟ್ರೈನಿಂಗ್ ಪಡ್ಕೊಂಡ್ರು ಬಂದಿದ್ರು. ಬಟ್ ಹೀನಾಯ ಪ್ರದರ್ಶನ ತೋರಿದ್ರು. ಹೀಗಾಗಿ ಪಾಕ್ ಆಟಗಾರರನ್ನು ಸ್ಟೇಡಿಯಂ ನವೀಕರಣಕ್ಕಾಗಿ ಬಳಸಿಕೊಳ್ಳಬೇಕೆಂದು ಅಭಿಮಾನಿಯೊಬ್ಬರು ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಮತ್ತೊಂದು ಪೋಸ್ಟರ್ನಲ್ಲಿ ಪಾಕಿಸ್ತಾನ್ ತಂಡವು ಕರಾಚಿ ಏರ್ಪೋರ್ಟ್ಗೆ ಅರ್ಹತೆ ಪಡೆದುಕೊಂಡಿದೆ ಎಂದು ಟ್ರೋಲ್ ಮಾಡಲಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ, ಪೋಸ್ಟರ್, ಮಿಮ್ಸ್ ಮೂಲಕ ತಮ್ಮ ಸಿಟ್ಟನ್ನ ಹೊರ ಹಾಕುತ್ತಿದ್ದಾರೆ.
ಸದ್ಯ ಲೀಗ್ ಮುಕ್ತಾಯದ ಹಂತ ತಲುಪಿದ್ದು, ಒಟ್ಟು 6 ತಂಡಗಳು ಸೂಪರ್-8ಕ್ಕೆ ಲಗ್ಗೆ ಇಟ್ಟಿವೆ. ಇನ್ನೆರಡು ಸ್ಥಾನಕ್ಕೆ ಬಾಂಗ್ಲಾದೇಶ-ಇಂಗ್ಲೆಂಡ್ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ. ಎ ಗುಂಪಿಯನಲ್ಲಿ ಭಾರತ ಮತ್ತು ಅಮೆರಿಕ, ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ ಅರ್ಹತೆ ಪಡೆದಿದೆ. ಮತ್ತೊಂದು ಸ್ಥಾನಕ್ಕೆ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಸಿ ಗುಂಪಿನಲ್ಲಿ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಅರ್ಹತೆ ಪಡೆದಿವೆ. ಡಿ ಗುಂಪಿನಲ್ಲಿ ಸೌತ್ ಆಫ್ರಿಕಾ ಸೂಪರ್-8ಕ್ಕೆ ಎಂಟ್ರಿಕೊಟ್ಟಿದ್ದು, ಬಾಂಗ್ಲಾ ಎರಡನೇ ತಂಡವಾಗಿ ಅವಕಾಶ ನಿರೀಕ್ಷೆ ಇದೆ. ಒಟ್ಟಿನಲ್ಲಿ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಆರ್ಮಿ ಟ್ರೈನಿಂಗ್ನೊಂದಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ಪಾಕಿಸ್ತಾನ್ ತಂಡವು ಲೀಗ್ ಹಂತದಲ್ಲೇ ಮುಗ್ಗರಿಸಿ ಇದೀಗ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಅದರಲ್ಲೂ ಬಾಬರ್ ಪಡೆಯ ಈ ಹೀನಾಯ ಪ್ರದರ್ಶನವನ್ನು ಪಾಕಿಸ್ತಾನ್ ಕ್ರಿಕೆಟ್ ಪ್ರೇಮಿಗಳೇ ಟ್ರೋಲ್ ಮಾಡುತ್ತಿದ್ದಾರೆ. ಬಾಬರ್ ಅಜಂ ಪಡೆ ತಮ್ಮ ಅಭಿಮಾಣಿಗಳಿಗೆ ಮುಖ ತೋರಿಸೋಕೂ ಆಗದಂತ ಪರಿಸ್ಥಿತಿಯಲ್ಲಿದ್ದಾರೆ.