IND Vs USA.. ದುಬೆಗೆ ಕೊಕ್ – ಜೈಸ್ವಾಲ್ ಎಂಟ್ರಿ ಕೊಹ್ಲಿಗೆ ಲಾಭನಾ?
ರೋHIT ಗೆ ಕಾಡ್ತಿದ್ಯಾ ಅಮೆರಿಕ ಟೆನ್ಷನ್?

IND Vs USA.. ದುಬೆಗೆ ಕೊಕ್ – ಜೈಸ್ವಾಲ್ ಎಂಟ್ರಿ ಕೊಹ್ಲಿಗೆ ಲಾಭನಾ?ರೋHIT ಗೆ ಕಾಡ್ತಿದ್ಯಾ ಅಮೆರಿಕ ಟೆನ್ಷನ್?

ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆಲುವಿನ ನಾಗಾಲೋಟ ಮುಂದುವರಿಸಿದ್ದು ಬುಧವಾರ ಅಮೆರಿಕ ವಿರುದ್ಧ ಕಣಕ್ಕಿಳಿಯಲಿದೆ. ಆದ್ರೆ ಕಳೆದ ಎರಡು ಪಂದ್ಯಗಳನ್ನ ಗೆದ್ದಿದ್ರೂ ಟೆನ್ಷನ್ ಮಾತ್ರ ಇದ್ದೇ ಇದೆ. ಯಾಕಂದ್ರೆ ಇಲ್ಲಿ ಭಾರತ ತನ್ನ ಸಾಮರ್ಥ್ಯದಿಂದ ಗೆಲ್ತು ಅನ್ನೋದಕ್ಕಿಂತ ಎದುರಾಳಿಗಳ ವೀಕ್ನೆಸ್​ನಿಂದ ವಿನ್ ಆಯ್ತು ಅಂತಾ ಹೇಳಬಹುದು. ಬ್ಯಾಟಿಂಗ್ ವಿಭಾಗದಲ್ಲಿ ಎರಡೂ ಪಂದ್ಯಗಳನ್ನ ಗಮನಿಸಿದ್ರೆ ರಿಷಬ್ ಪಂತ್ ಒಬ್ರನ್ನ ಬಿಟ್ರೆ ಭಾರತದ ಯಾವೊಬ್ಬ ಆಟಗಾರರು ಉತ್ತಮ ಪ್ರದರ್ಶನ ನೀಡಿಲ್ಲ. ಅದ್ರಲ್ಲೂ ರನ್ ಮಿಷನ್ ಅಂತಾ ಕರೆಸಿಕೊಳ್ಳೋ ವಿರಾಟ್ ಕೊಹ್ಲಿಯವ್ರ ಎರಡು ಸಲವೂ ಒಂದಂಕಿ ದಾಟೋಕೆ ಸಾಧ್ಯವಾಗಿಲ್ಲ. ಸೋ ಇದೇ ಕಾರಣಕ್ಕೆ ಬುಧವಾರದ ಪಂದ್ಯದ ಪ್ಲೇಯಿಂಗ್ ಇಲೆವೆನ್​ನಲ್ಲಿ ಸಾಕಷ್ಟು ಬದಲಾವಣೆ ಮಾಡೋ ಸಾಧ್ಯತೆ ಇದೆ. ಕೆಲವ್ರನ್ನ ಡ್ರಾಪ್ ಮಾಡಿ ಬೇರೆಯವ್ರಿಗೆ ಚಾನ್ಸ್ ಕೊಡೋಕೆ ನಿರ್ಧಾರ ಮಾಡಲಾಗಿದೆ. ಹಾಗಾದ್ರೆ ಬುಧವಾರದ ಪಂದ್ಯದಲ್ಲಿ ಯಾರಿಗೆ ಕೊಕ್ ಕೊಡಲಾಗುತ್ತೆ? ಯಾರು ಚಾನ್ಸ್ ಪಡೀತಾರೆ? ಅಮೆರಿಕ ಟೀಂ ಸ್ಟ್ರೆಂತ್ ಹೇಗಿದೆ? ಭಾರತಕ್ಕೆ ಇರೋ ಚಾಲೆಂಜಸ್ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  15 ವರ್ಷ.. 10 ಪಂದ್ಯ.. 95 ರನ್ – ಬ್ಯಾಟಿಂಗ್ ಮರೆತ್ರಾ JADEJA?

ಟೀಂ ಇಂಡಿಯಾ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಿದ ಎರಡು ಲೀಗ್ ಪಂದ್ಯಗಳನ್ನು ಗೆದ್ದಿದೆ. ಐರ್ಲೆಂಡ್ ವಿರುದ್ಧ ಮತ್ತು ಪಾಕಿಸ್ತಾನ ವಿರುದ್ಧ ಜಯ ಸಾಧಿಸಿದೆ. ಟೂರ್ನಿಯ ಮೂರನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ಅಮೆರಿಕ ವಿರುದ್ಧ ಆಡಲಿದೆ. ಜೂನ್ 12ರ ಬುಧವಾರ ನಡೆಯಲಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ಕೆಲವೊಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಎರಡು ಪಂದ್ಯಗಳನ್ನು ಆಡಿರುವ ಭಾರತ ಮತ್ತು ಯುಎಸ್ಎ ಎರಡನ್ನೂ ಗೆದ್ದಿವೆ. ಬುಧವಾರದ ಪಂದ್ಯದಲ್ಲಿ ಗೆಲ್ಲುವ ತಂಡ A ಗುಂಪಿನಿಂದ ಸೂಪರ್ 8ಕ್ಕೆ ಅರ್ಹತೆ ಪಡೆಯುವ ಮೊದಲ ತಂಡವಾಗಲಿದೆ. ಅಮೆರಿಕ ವಿರುದ್ಧದ ಪಂದ್ಯದಲ್ಲಿ ಶಿವಂ ದುಬೆ ಬದಲಿಗೆ ಸಂಜು ಸ್ಯಾಮ್ಸನ್ ಅಥವಾ ಯಶಸ್ವಿ ಜೈಸ್ವಾಲ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ಐಪಿಎಲ್‌ನ ದ್ವಿತೀಯಾರ್ಧದಿಂದಲೂ ಆಲ್‌ರೌಂಡರ್ ದುಬೆ ಫಾರ್ಮ್‌ನಲ್ಲಿಲ್ಲ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 9 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಬ್ಯಾಟರ್ ಆಗಿ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಫೇಲ್ ಆಗಿದ್ದಾರೆ. ಅಲ್ದೇ ಮೊದಲೆರಡು ಪಂದ್ಯಗಳಲ್ಲಿ ದುಬೆ ಅವರನ್ನು ರೋಹಿತ್ ಶರ್ಮಾ ಬೌಲರ್ ಆಗಿಯೂ ಬಳಸಿಕೊಳ್ಳಲಿಲ್ಲ. ಇದೀಗ ಯಶಸ್ವಿ ಜೈಸ್ವಾಲ್ ಅವರು ಸ್ಪೆಷಲಿಸ್ಟ್ ಓಪನರ್ ಆಗಿರುವುದರಿಂದ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯಬಹುದು. ಹಾಗೇನಾದ್ರೂ ಜೈಸ್ವಾಲ್ ಓಪನರ್ ಆದ್ರೆ ವಿರಾಟ್ ಕೊಹ್ಲಿ ಒನ್ ಡೌನ್ ಅಂದ್ರೆ 3ನೇ ಸ್ಲಾಟ್​ನಲ್ಲಿ ಕಣಕ್ಕಿಳಿಯಬಹುದು. ಐಪಿಎಲ್​ನಲ್ಲಿ ಓಪನರ್ ಆಗಿ ಅಬ್ಬರಿಸಿದ್ದ ಕಿಂಗ್ ಕೊಹ್ಲಿಯವ್ರನ್ನ ವಿಶ್ವಕಪ್​ನಲ್ಲೂ ಆರಂಭಿಕರಾಗೇ ಕಣಕ್ಕಿಳಿಸಲಾಗ್ತಿದೆ. ಬಟ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಈ ಫಾರ್ಮುಲಾ ಫೇಲ್ ಆದಂತೆ ಕಾಣ್ತಿದೆ. ಯಾಕಂದ್ರೆ ಕೊಹ್ಲಿ ಓಪನರ್ ಆಗಿ ಐರ್ಲೆಂಡ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಜಸ್ಟ್ 1 ರನ್ ಗಳಿಸಿ ಔಟಾಗಿದ್ರು. ಹಾಗೇ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲೂ ನಾಲ್ಕು ರನ್​ಗಳಿಗೆ ಪೆವಿಲಿಯನ್ ಸೇರಿದ್ರು. ಹೀಗಾಗಿ ಜೈಸ್ವಾಲ್​ ಟೀಮ್​ಗೆ ಇನ್ ಆದ್ರೆ ಕೊಹ್ಲಿ ಮೂರನೇ ಕ್ರಮಾಂಕದಲ್ಲೇ ಆಡಲಿದ್ದಾರೆ.

ಈ ಲೆಕ್ಕಾಚಾರದ ಪ್ರಕಾರ ಜೈಸ್ವಾಲ್ ರೋಹಿತ್ ಜೊತೆಗೆ ಅಮೆರಿಕ ವಿರುದ್ಧ ಓಪನರ್‌ ಆಗಿ ಆಡಿಸಬಹದು. ಆಕ್ರಮಣಕಾರಿ ಆಟವಾಡುವ ಜೈಸ್ವಾಲ್ ಪವರ್‌ಪ್ಲೇಯಲ್ಲಿಯೇ ಎದುರಾಳಿಗಳ ಮೇಲೆ ಮೇಲುಗೈ ಸಾಧಿಸಬಲ್ಲರು. ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಜೊತೆಗೆ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ರವೀಂದ್ರ ಜಡೇಜಾ ಮಾತ್ರ ಅವರ ಮಟ್ಟಕ್ಕೆ ತಕ್ಕಂತೆ ಆಡ್ತಿಲ್ಲಲ್ಲ. ಅದ್ರಲ್ಲೂ ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 35 ವರ್ಷದ ಸ್ಟಾರ್ ಕ್ರಿಕೆಟಿಗ ಜಡ್ಡು ಗೋಲ್ಡನ್ ಡಕ್‌ಗೆ ಔಟಾದರು. ಎರಡು ಪಂದ್ಯಗಳಲ್ಲಿ ಒಂದೂ ವಿಕೆಟ್ ಪಡೆದಿರಲಿಲ್ಲ. ಹೀಗಿದ್ರೂ ಕೂಡ ಜಡೇಜಾರನ್ನ ಪ್ಲೇಯಿಂಗ್ ಇಲೆವೆನ್​ನಿಂದ ಹೊರಗಿಡೋದು ಅನುಮಾನ. ಇದೇ ಟೀಂ ಕಂಟಿನ್ಯೂ ಮಾಡಿದ್ರೆ ಕುಲದೀಪ್ ಯಾದವ್ ಹಾಗೇ ಯುಜ್ವೇಂದ್ರ ಚಹಾಲ್ ಮುಂದಿನ ಪಂದ್ಯದಲ್ಲೂ ಅವಕಾಶ ಪಡೆಯದೇ ಇರಬಹುದು. ಆದರೆ ಶಿವಂ ದುಬೆ ಬದಲು ಜೈಸ್ವಾಲ್‌ ಆಯ್ಕೆ ಬಹುತೇಕ ಕನ್ಫರ್ಮ್. ಇನ್ನು ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆಲ್ ನೋಡೋದಾದ್ರೆ ಎಂದಿನಂತೆ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಓಪನರ್ ಆಗಿ ಕಣಕ್ಕಿಳೀತಾರೆ. ಅವ್ರ ಜೊತೆಗೆ ಯಶಸ್ವಿ ಜೈಸ್ವಾಲ್ ಆರಂಭಿಕರಾಗೋದು ಪಕ್ಕಾ. ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದರೆ, ಪಂತ್‌ ನಂತರದ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದಾಗಿದೆ. ಕಠಿಣ ನ್ಯೂಯಾರ್ಕ್ ಪಿಚ್‌ನಲ್ಲಿ ಈವರೆಗಿನ ಎರಡೂ ಪಂದ್ಯಗಳಲ್ಲಿ ಪಂತ್‌ ನಿರ್ಣಾಯಕ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರ ಪ್ರದರ್ಶನ ತಂಡಕ್ಕೆ ನಿರ್ಣಾಯಕವಾಗಿದೆ. ಉಳಿದಂತೆ ಬೌಲರ್‌ಗಳಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಟೂರ್ನಿಯಲ್ಲಿ ಭಾರತೀಯ ವೇಗಿಗಳು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಬುಮ್ರಾ ಎರಡೂ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಐದನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಆರನೇ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಆಡಲಿದ್ದಾರೆ.

ಇಂದಿನ ಪಂದ್ಯ ಅಮೆರಿಕ ಹಾಗೇ ಭಾರತ ಎರಡೂ ತಂಡಗಳಿಗೆ ಸ್ಪೆಷಲ್ ಅಂತಾನೇ ಹೇಳ್ಬೋದು. ಯಾಕಂದ್ರೆ ಉಭಯ ತಂಡಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೇ ಮೊದಲ ಬಾರಿರಗೆ ಪರಸ್ಪರ ಮುಖಾಮುಖಿಯಾಗುತ್ತಿವೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡವು ಈ ಬಾರಿಯ ಟೂರ್ನಿಯ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯಲಿದೆ. ಉಭಯ ತಂಡಗಳು ಟೂರ್ನಿಯಲ್ಲಿ ಅಜೇಯವಾಗಿ ಮುನ್ನಡೆಯುತ್ತಿದ್ದು, ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದು ಬೀಗಿವೆ. ಬುಧವಾರ ಕೂಡ ಅಜೇಯ ಓಟ ಮುಂದುವರೆಸುವ ತಂಡವು ಮುಂದಿನ ಹಂತದಲ್ಲಿ ಕಾಣಿಸಿಕೊಳ್ಳಲಿದೆ. ರೋಹಿತ್ ಶರ್ಮಾ ನೇತೃತ್ವದ ಟೀಮ್‌ ಇಂಡಿಯಾ, ಐರ್ಲೆಂಡ್ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಿತು. ನಂತರದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಆರು ರನ್‌ಗಳಿಂದ ಮಣಿಸಿತು. ಅತ್ತ ಯುಎಸ್ಎ ತಂಡ ಆರಂಭಿಕ ಪಂದ್ಯದಲ್ಲಿ ಕೆನಡಾ ವಿರುದ್ಧ ಜಯಗಳಿಸಿದರೆ, ನಂತರದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿತ್ತು.‌ ಇದೀಗ ಭಾರತವನ್ನು ಕೂಡಾ ಮಣಿಸಬಹುದು ಎಂಬ ಲೆಕ್ಕಾಚಾರದಲ್ಲಿ ತಂಡವಿದೆ. ಬಟ್ ನಸ್ಸೌ ಕೌಂಟಿ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಅತ್ಯಂತ ಸವಾಲಿನ ಪಿಚ್‌ ಎಂಬುದು ಈಗಾಗಲೇ ಸಾಬೀತಾಗಿದೆ. ಟೂರ್ನಿಯಲ್ಲಿ ಈವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲಿ ಅನುಭವಿ ಬ್ಯಾಟರ್‌ಗಳು ಕೂಡಾ ರನ್‌ ಗಳಿಸಲು ಪರದಾಡಿದ್ದಾರೆ. ನಿಧಾನಗತಿಯ ಸ್ವಭಾವದಿಂದಾಗಿ ಇಲ್ಲಿ ಬೌಲರ್‌ಗಳೇ ಮೇಲುಗೈ ಸಾಧಿಸುತ್ತಾರೆ. ಸ್ಪಿನ್ ಬೌಲರ್‌ಗಳಿಗಿಂತ ವೇಗದ ಬೌಲರ್‌ಗಳಿಗೆ ವಿಕೆಟ್ ಹೆಚ್ಚು ಅನುಕೂಲಕರವಾಗಿದೆ. ಈ ಪಿಚ್‌ನಲ್ಲಿ ರನ್ ಗಳಿಸಲು ‌ ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡಬೇಕಾಗುತ್ತದೆ. ಮತ್ತೊಂದೆಡೆ ಅಮೆರಿಕ ತಂಡದಲ್ಲಿ 7 ಆಟಗಾರರು ಭಾರತೀಯ ಮೂಲಕದವರೇ ಆಗಿದ್ದು ಈ ಕದನ ಒಂಥರಾ ಭಾರತೀಯರು ವರ್ಸಸ್ ಭಾರತೀಯರು ಎಂಬಂತೆಯೇ ನಡೆಯಲಿದೆ. ಅಲ್ಲದೆ ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ಸದ್ದು ಮಾಡ್ತಿರೋದು ನಾನ್​​​ ಅಮೆರಿಕನ್ಸ್​ ಟೀಮ್ ಎಂಬ ಹಣೆಪಟ್ಟಿಯಿಂದ. ತಂಡದಲ್ಲಿರುವ ಬಹುತೇಕ ಆಟಗಾರರು  ಭಾರತ, ನ್ಯೂಜಿಲೆಂಡ್, ಸೌತ್ ಆಫ್ರಿಕಾ, ಪಾಕಿಸ್ತಾನದವರೇ ಆಗಿದ್ದಾರೆ. ಭಾರತದಲ್ಲಿ ಅವಕಾಶ ಸಿಗದ ಎಷ್ಟೋ ಮಂದಿ, ಈಗ ಅಮೆರಿಕ ತಂಡದ ಬಿಗ್ ಮ್ಯಾಚ್ ವಿನ್ನರ್​ಗಳಾಗಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಕೆನಡಾ ಹಾಗೂ ಪಾಕ್ ಎದುರಿನ ಗೆಲುವಿನಲ್ಲಿ ಭಾರತೀಯ ಮೂಲದ ಆಟಗಾರರ ಆಟವೇ ಗೆಲುವಿಗೆ ಕ್ರೂಶಿಯಲ್ ಆಗಿತ್ತು. ಹೀಗಾಗಿ ಇಂದು ಹಿಟ್​ಮ್ಯಾನ್ ರೋಹಿತ್ ಪಡೆಗೆ ಅನಿವಾಸಿ ಭಾರತೀಯ ಆಟಗಾರರೇ ದೊಡ್ಡ ಸವಾಲಾಗಲಿದ್ದಾರೆ.

Shwetha M