ಪಾಕ್‌ ಸೊಂಟ ಮುರಿದ ಬುಮ್ರಾ!! – ರೋಹಿತ್‌ಗೆ ಮಂಡಿಯೂರಿದ ಬಾಬರ್‌!
Chewing Gum ತಿನ್ನೋಕಿರೋದಾ ಸೂರ್ಯ?

ಪಾಕ್‌ ಸೊಂಟ ಮುರಿದ ಬುಮ್ರಾ!! – ರೋಹಿತ್‌ಗೆ ಮಂಡಿಯೂರಿದ ಬಾಬರ್‌!Chewing Gum ತಿನ್ನೋಕಿರೋದಾ ಸೂರ್ಯ?

ನೂರ ಇಪ್ಪತ್ತು ಎಸೆತಕ್ಕೆ ಕೇವಲ ನೂರ ಇಪ್ಪತ್ತು ರನ್‌ ಗಳಿಸುವ ಟಾರ್ಗೆಟ್‌ ಕೊಟ್ಟೂ ಗೆದ್ದಿದೆ ಭಾರತ.. ಬದ್ಧವೈರಿ ಪಾಕಿಸ್ತಾನಕ್ಕೆ ನ್ಯೂಯಾರ್ಕ್‌ನ ನೆಲದಲ್ಲೂ ಮಣ್ಣುಮುಕ್ಕಿಸಿದೆ ರೋಹಿತ್‌ ಬಳಗ.. ಲೋ ಸ್ಕೋರ್‌ ಮ್ಯಾಚ್‌ನಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ, ಈಗ ಖುಷಿಯಲ್ಲಿದೆ.. ಆದ್ರೆ ದುರ್ಬಲ ಪಾಕಿಸ್ತಾನದ ವಿರುದ್ಧವೂ ಬ್ಲೂಬಾಯ್ಸ್‌ ಕಡಿಮೆ ರನ್‌ ಪೇರಿಸಿದ್ದು ವರ್ಲ್ಡ್‌ಕಪ್‌ ಗೆಲ್ಲೋ ವಿಚಾರದಲ್ಲಿ ಆಂತಕ ಸೃಷ್ಟಿಸಿದೆ.. ಅದರಲ್ಲೂ ಸ್ಟಾರ್‌ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟಿದ್ದು.. ಅದರಲ್ಲೂ ಸ್ಟೈಲಾಗಿ ಕ್ರೀಸ್‌ ಬಂದು ಚ್ಯೂಯಿಂಗ್‌ ಜಗಿಯೋದಕ್ಕಷ್ಟೇ ಸೀಮಿತವಾಗಿರುವ ಸೂರ್ಯ ಕುಮಾರ್‌ ಯಾದವ್‌, ತಾನು ಟೀಮಲ್ಲಿರೋದೇಕೆ ಇನ್ನೂ ಅರ್ಥವಾಗದಂತೆ ಆಡುತ್ತಿರುವ ಶಿವಂ ದುಬೆ.. ಅಷ್ಟೇ ಏಕೆ, ಐಪಿಎಲ್‌ನ ಮಾದರಿಯಲ್ಲೇ ವಿರಾಟ್‌ ಕೊಹ್ಲಿಯನ್ನು ಓಪನಿಂಗ್‌ ಕಳಿಸುತ್ತಿರುವ ಟೀಂ ಮ್ಯಾನೇಜ್‌ಮೆಂಟ್‌ನ ಲೆಕ್ಕಾಚಾರದ ಬಗ್ಗೆಯೂ ಈ ಗೆದ್ದಿರುವ ಮ್ಯಾಚ್‌ನಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ..

ಇದನ್ನೂ ಓದಿ: ಸೆಲೆಬ್ರಿಟಿಗಳ ಸೀಕ್ರೆಟ್ ಖಾಯಿಲೆ! – ಫಾಫಾ ಮಾತ್ರವಲ್ಲ..‌ಸಲ್ಮಾನ್ ಗೂ ಖಾಯಿಲೆ!

ಪಾಕಿಸ್ತಾನದ ವಿರುದ್ಧದ ಮ್ಯಾಚ್‌ ನೋಡ್ತಿದ್ದವರಲ್ಲಿ ಬಹುತೇಕರು ಭಾರತದ ಬ್ಯಾಟಿಂಗ್‌ ಮುಗಿಯುತ್ತಿದ್ದಂತೆ ಟಿವಿ ಆಫ್‌ ಮಾಡಿದ್ದರು.. ರಾತ್ರಿ ಹೊತ್ತಲ್ಲಿ  ನಿದ್ದೆ ಬಿಟ್ಟು ಟೀಂ ಇಂಡಿಯಾ ಸೋಲೋದನ್ನು ನೋಡ್ಬೇಕಾ ಎಂಬ ಬೇಸರ ಕ್ರಿಕೆಟ್‌ ಅಭಿಮಾನಿಗಳಲ್ಲಿ ಮನೆಮಾಡಿತ್ತು.. ಆದ್ರೆ ಬೆಳಗ್ಗೆದ್ದು ನೋಡಿದವರಿಗೆ ರೋಹಿತ್‌ ಶರ್ಮಾ ಬಳಗ ಭರ್ಜರಿ ಗಿಫ್ಟ್‌ ಕೊಟ್ಟಿದೆ.. ಲೋ ಸ್ಕೋರ್‌ ಮ್ಯಾಚನ್ನೂ ಗೆದ್ದು, ಪಾಕಿಸ್ತಾನಕ್ಕೆ ವರ್ಲ್ಡ್‌ಕಪ್‌ನಲ್ಲಿ ಭಾರತವನ್ನು ಸೋಲಿಸೋದು ಅಷ್ಟು ಸುಲಭವಲ್ಲ ಎಂದು ಮತ್ತೆ ಟೀಂ ಇಂಡಿಯಾ ಸಾಬೀತುಪಡಿಸಿದೆ.. ಬುಮ್‌ ಬುಮ್‌ ಬುಮ್ರಾ ಮತ್ತೆ ಪಾಕಿಸ್ತಾನದ ಸೊಂಟ ಮುರಿದಿದ್ದಾರೆ.. ಸಿರಾಜ್‌ ಬಾಯ್‌ ವಿಕೆಟ್‌ ಕೀಳದಿದ್ದರೂ,. ರನ್‌ ಕೊಡದೆ ಕಾಡಿದ್ದಾರೆ.. ಹಾರ್ದಿಕ್‌ ಪಾಂಡ್ಯಾ, ತಾನು ಟೀಂ ಇಂಡಿಯಾದಲ್ಲಿ ಹೇಗೆ ಕೀ ಫ್ಯಾಕ್ಟರ್‌ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.. ಅರ್ಷದೀಪ್‌ ಸಿಂಗ್‌, ಮತ್ತೆ ಭಾರತ ತಂಡಕ್ಕೆ ನೆರವಾಗಿದ್ದಾರೆ.. ಅಮೆರಿಕಾದ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚು ಕೆಲಸವಿಲ್ಲದೇ ಇದ್ರೂ ರವೀಂದ್ರ ಜಡೇಜಾ ಮತ್ತು ಅಕ್ಷರ್‌ ಪಟೇಲ್‌ ಕೊಟ್ಟ ಟಾಸ್ಕ್‌ಅನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ.. ಪರಿಣಾಮ ಟೀಂ ಇಂಡಿಯಾ ಭರ್ಜರಿಯಾಗಿ ಆರು ರನ್‌ಗಳ ಅಂತರದಿಂದ ಗೆದ್ದುಬೀಗಿದೆ..

ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತ ಮಳೆಯ ಕಾಟವನ್ನೂ ಎದುರಿಸಬೇಕಾಯಿತು.. ಮಳೆಯಿಂದಾಗಿ ಪಂದ್ಯ ಮುಂದೂಡಿಕೆಯಾದ ನಂತರ ವಿಕೆಟ್‌ಗಳು ಮಳೆಯ ಹೊಡೆತಕ್ಕೆ ಸಿಲುಕಿದಂತೆ ಒಂದಾದಮೇಲೊಂದರಂತೆ ಉರುಳೋದಿಕ್ಕೆ ಶುರುವಾಯ್ತು.. ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಇನ್ನಿಂಗ್ಸ್‌ ಆರಂಭಿಸಲು ತಂಡದ ಆಧಾರ ಸ್ತಂಭ ವಿರಾಟ್‌ ಕೊಹ್ಲಿಯನ್ನು ಕಳಿಸೋದು ಸರಿಯೇ ಎಂಬ ಪ್ರಶ್ನೆ ಮತ್ತೆ ಮೂಡಿದೆ.. ಕೇವಲ ಒಂದು ಬೌಂಡರಿ ಬಾರಿಸಿ ವಿರಾಟ್‌ ಔಟಾಗುವುದರೊಂದಿಗೆ ಭಾರತದ ಪತನ ಕೂಡ ಶುರುವಾಗಿತ್ತು.. ಪಾಕ್‌ ವಿರುದ್ಧ ಯಾವತ್ತೂ ಅಬ್ಬರಿಸುವ ವಿರಾಟ್‌ ಕೊಹ್ಲಿ, ನ್ಯೂಯಾರ್ಕ್‌ನಲ್ಲಿ ಮಾತ್ರ ವಿಫಲರಾದರು.. ಪುಟಿದೆದ್ದ ಬಾಲನ್ನು ಅಂದಾಜಿಸುವಲ್ಲಿ ಕೊಹ್ಲಿಗೂ ಒಂದು ಕ್ಷಣ ಸಾಧ್ಯವಾಗಲಿಲ್ಲ.. ಕೊಹ್ಲಿ ಔಟಾದ ನಂತರ ಬಂದ ರಿಷಬ್‌ ಪಂತ್‌ ಮಾತ್ರ ತಮಗೆ ಬ್ಯಾಟಿಂಗ್‌ ಆರ್ಡರ್‌ನಲ್ಲಿ ಕೊಟ್ಟ ಭಡ್ತಿಯನ್ನು ಭರ್ಜರಿಯಾಗಿಯೇ ಉಪಯೋಗಿಸಿಕೊಳ್ಳುತ್ತಿದ್ದಾರೆ.. ಪಂತ್‌ ಹೊರತುಪಡಿಸಿದ್ರೆ ಅಕ್ಸರ್‌ ಪಟೇಲ್‌ ಅವರೇ ಟೀಂ ಇಂಡಿಯಾದ ಸೆಕೆಂಡ್‌ ಹೈಯೆಸ್ಟ್‌ ಸ್ಕೋರರ್‌ ಆದ್ರು.. ರೋಹಿತ್‌ ಶರ್ಮಾ ವಿಕೆಟ್‌ ಬೀಳುತ್ತಿದ್ದಂತೆ, ಅಕ್ಸರ್‌ ಪಟೇಲ್‌ ಅವರನ್ನು ಎರಡನೇ ವಿಕೆಟ್‌ಗೆ ಕಳಿಸಿಕೊಟ್ಟ ನಿರ್ಧಾರವನ್ನು ಸರಿ ಎಂಬಂತೆ ಪಟೇಲ್‌ ಆಡಿದ್ರು.. ಆದ್ರೆ ಪಟೇಲ್‌ ವಿಕೆಟ್‌ ಉರುಳಿದ ನಂತರ ಮಾತ್ರ ಭಾರತದ ಬ್ಯಾಟ್ಸ್‌ಮನ್‌ಗಳು ತಾವಿರೋದೇ ಔಟಾಗೋದಿಕ್ಕೆ ಎಂಬಂತೆಯೇ ಆಡುತ್ತಾ ಹೋದ್ರು.. ಅದರಲ್ಲೂ ಟಿ20 ಸ್ಪೆಷಲಿಸ್ಟ್‌ಗಳಾದ ಸೂರ್ಯಕುಮಾರ್‌ ಯಾದವ್‌ ಮತ್ತು ಶಿವಂ ದುಬೆಗೆ ಇನ್ನೂ ತಾವು ಟೀಂನಲ್ಲಿರೋದು ಏಕೆ? ತಮ್ಮ ಜವಾಬ್ದಾರಿ ಏನು ಎಂಬುದೇ ಅರ್ಥವಾದಂತಿಲ್ಲ.. ಬಾಯಲ್ಲಿ ಚೂಯಿಂಗ್‌ ಗಮ್‌ ಜಗಿಯುತ್ತಲೇ ಆಡಲು ಬರುವ ಸೂರ್ಯಕುಮಾರ್‌ ಯಾದವ್‌, 8 ಬಾಲ್‌ ತಿಂದು ಕೇವಲ 7 ರನ್‌ ಮಾತ್ರ ಗಳಿಸಿ, ಕೆಟ್ಟ ಶಾಟ್‌ಗೆ ಕೈಹಾಕಿ ಔಟಾದ್ರು.. ನಂತರ ಬಂದ ಶಿವಂ ದುಬೆಯಂತೆ ಇರೋ ಒತ್ತಡವೆಲ್ಲಾ ತನ್ನ ಮೇಲೆಯೇ ಇದೆ ಎಂಬಂತೆ ಇನ್ನಿಂಗ್ಸ್‌ ಆರಂಭಿಸಿ, ಬೌಲರ್‌ಗೆ ರಿಟರ್ನ್‌ ಕ್ಯಾಚ್‌ ನೀಡಿ ಔಟಾದ್ರು.. ಅಲ್ಲಿಗೆ ಭಾರತದ ಬ್ಯಾಟಿಂಗ್‌ ಲೈನ್‌ ಅಪ್‌ ಮೇಲೆ ಪಾಕ್‌ ಬೌಲರ್‌ಗಳು ಸಂಪೂರ್ಣ ಮೇಲುಗೈ ಸಾಧಿಸಿದ್ರು.. ಒಂದು ಹಂತದಲ್ಲಿ ನೂರು ರನ್‌ ದಾಟುತ್ತೋ ಇಲ್ಲವೋ ಎಂಬ ಅನುಮಾನ ಮೂಡುವಂತೆ ಬ್ಯಾಟಿಂಗ್‌ ಸಾಗಿತ್ತು.. ಆದ್ರೆ ಕಡೆಯಲ್ಲಿ ಅರ್ಷದೀಪ್‌ ಸಿಂಗ್‌ ಮತ್ತು ಮೊಹಮದ್‌ ಸಿರಾಜ್‌ ತಂಡದ ಸ್ಕೋರ್‌ 119 ರನ್‌ ತಲುಪುವಂತೆ ಮಾಡಿದ್ರು.. ಸಿರಾಜ್‌ ಹುಚ್ಚಾಟದ ಓಟಕ್ಕೆ ಅರ್ಷದೀಪ್‌ ರನೌಟ್‌ ಆಗದೇ ಇರುತ್ತಿದ್ದಂತೆ ಇನ್ನೂ ಐದಾರು ರನ್‌ ಗಳಿಸುವ ಅವಕಾಶ ತಂಡಕ್ಕಿತ್ತು..  ಆದ್ರೆ ಕೇವಲ ಅಂತಿಮವಾಗಿ ಕೇವಲ 120 ರನ್‌ಗಳ ಟಾರ್ಗೆಟ್‌ ಮಾತ್ರ ನಿಗದಿ ಮಾಡಲು ಸಾಧ್ಯವಾಯ್ತು..

ಪಾಕಿಸ್ತಾನದ ಬ್ಯಾಟಿಂಗ್‌ ಆರಂಭವಾದಾಗ ಟೀಂ ಇಂಡಿಯಾಗೆ ಸೋಲು ಖಚಿತವೇನೋ ಎಂಬ ಸನ್ನಿವೇಶ ಸೃಷ್ಟಿಯಾಗಿತ್ತು.. ಕ್ಯಾಪ್ಟನ್‌ ಬಾಬರ್‌ ಆಜಂ ಆರಂಭದಿಂದಲೇ ಬಿಗ್‌ ಶಾಟ್‌ಗಳಿಗೆ ಕೈಹಾಕಿದ್ರು.. ವಿಕೆಟ್‌ ಕೀಪರ್‌ ಮೊಹಮ್ಮದ್‌ ರಿಜ್ವಾನ್‌ ಜವಾಬ್ದಾರಿಯುತ ಇನ್ನಿಂಗ್ಸ್‌ ಕಟ್ಟಲು ಶುರು ಮಾಡಿದ್ದರು.. ಆದ್ರೆ ಬಾಬರ್‌ ವಿಕೆಟ್‌ ಬಿದ್ದ ನಂತರ ಫಕರ್‌ ಜಮಾನ್ ಔಟಾಗುವವರೆಗೂ ಮ್ಯಾಚ್‌ ಪಾಕ್‌ ಕೈಯಲ್ಲೇ ಇತ್ತು.. 12.2 ಓವರ್‌ಗಳಲ್ಲಿ 73 ರನ್‌ಗೆ ಪಾಕಿಸ್ತಾನ ಮೂರು ವಿಕೆಟ್‌ ಕಳೆದುಕೊಂಡಿತ್ತು.. ಆಗ 46 ಎಸೆತಕ್ಕೆ 47 ರನ್‌ಗಳಿಸುವ ಟಾಸ್ಕ್‌ ಮಾತ್ರವೇ ಇತ್ತು.. ಆದ್ರೆ ಪಾಕಿಸ್ತಾನದ ಬೆನ್ನಮೂಳೆಯನ್ನೇ ಮುರಿದ ಜಸ್‌ಪ್ರೀತ್‌ ಬುಮ್ರಾ ಮತ್ತು ಹಾರ್ದಿಕ್‌ ಪಟೇಲ್‌, ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಸಂಪೂರ್ಣವಾಗಿ ಕಟ್ಟಿಹಾಕಿದ್ರು.. ಅವರಿಗೆ ಸಾಥ್‌ ಕೊಟ್ಟಿದ್ದು ಅರ್ಷದೀಪ್‌ ಮತ್ತು ಅಕ್ಸರ್‌ ಪಟೇಲ್‌.. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕಡೆಯ ಮೂರು ಎಸೆತಗಳಲ್ಲಿ 16 ರನ್‌ಗಳಿಸುವ ಟಾರ್ಗೆಟ್‌ ಅಂತಿವಾಗಿ ಪಾಕ್‌ ಬ್ಯಾಟ್ಸ್‌ಮನ್‌ಗಳ ಮುಂದಿತ್ತು.. ಅಲ್ಲಿ ಎರಡು ಬೌಂಡರಿ ಬಾರಿಸಲು ಮಾತ್ರ ನಸೀಂ ಶಾಗೆ ಸಾಧ್ಯವಾಯ್ತು.. ಕೇವಲ ಹತ್ತು ರನ್‌ ಮಾತ್ರ ಬಿಟ್ಟುಕೊಟ್ಟ ಅರ್ಷದೀಪ್‌ ತಂಡದ ಗೆಲುವನ್ನು ಖಾತ್ರಿಪಡಿಸಿದ್ರು.. ಭಾರತದ ಎದುರು ಮಂಡಿಯೂರಿದ ಶಾಕ್‌ನಲ್ಲಿ ನಸೀಂ ಶಾ ಮೈದಾನದಲ್ಲೇ ಕಣ್ಣೀರು ಹಾಕಿದ್ರು.. ಇದರೊಂದಿಗೆ ಟೀಂ ಇಂಡಿಯಾ ಗ್ರೂಪ್‌ ಸ್ಟೇಜ್‌ನಲ್ಲಿ ಭರ್ಜರಿ ಆಟ ಮುಂದುವರಿಸಿದೆ.. ಪಾಕ್‌ ವಿರುದ್ಧ ಗೆದ್ದರೂ, ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಈಗ ಆಗಿರುವ ತಪ್ಪುಗಳಿಂದ ಪಾಠ ಕಲಿಯಲೇಬೇಕಿದೆ.. ಹಾಗಿದ್ದರೆ ಮಾತ್ರ ವರ್ಲ್ಡ್‌ಕಪ್‌ ಗೆಲ್ಲುವ ಕನಸು ನನಸಾಗಲು ಸಾಧ್ಯ.

 

Shwetha M