ಪಂತ್ V/s ಸ್ಯಾಮ್ಸನ್ ಶೀತಲ ಸಮರ – ರಿಷಭ್ ಅಬ್ಬರಕ್ಕೆ ಕೊಚ್ಚಿಹೋದ ಸಂಜು
ಪಂತ್ ಇದ್ರೆ ಟೀಮ್ ಇಂಡಿಯಾ ಗೆಲ್ಲುತ್ತಾ?

ಪಂತ್ V/s ಸ್ಯಾಮ್ಸನ್ ಶೀತಲ ಸಮರ – ರಿಷಭ್ ಅಬ್ಬರಕ್ಕೆ ಕೊಚ್ಚಿಹೋದ ಸಂಜುಪಂತ್ ಇದ್ರೆ ಟೀಮ್ ಇಂಡಿಯಾ ಗೆಲ್ಲುತ್ತಾ?

ಟಿ20 ವಿಶ್ವಕಪ್‌ ನಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲೇ ವಿಕೆಟ್ ಕೀಪರ್ ಕಮ್ ಬ್ಯಾಟರ್ ರಿಷಭ್ ಪಂತ್ ಕಮಾಲ್ ಮಾಡಿದ್ದಾರೆ. ಡೆಲ್ಲಿ ಡೇರ್ ಡೆವಿಲ್ ರಿಷಭ್ ಪಂತ್ ಈ ಮೂಲಕ ರಾಷ್ಟ್ರೀಯ ಪಂದ್ಯಾವಳಿಯಲ್ಲೂ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಪಂತ್ ಕಮ್‌ಬ್ಯಾಕ್‌ನಿಂದ ಇಬ್ಬರು ವಿಕೆಟ್ ಕೀಪರ್ ಮಂಕಾಗಿದ್ದಾರೆ. ಈ ಇಬ್ಬರೂ ಸ್ಟಾರ್ ಪ್ಲೇಯರ್ ಗೆ ಭವಿಷ್ಯದಲ್ಲಿ ಟೀಮ್ ಇಂಡಿಯಾದ ಬಾಗಿಲು ಮುಚ್ಚಿದಂತೆ ಲೆಕ್ಕ ಅನ್ನೋ ಮಾತು ಕೇಳಿಬರ್ತಿದೆ.

ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ ಟಿ20 ವಿಶ್ವಕಪ್​ಗೆ ಸಂಜು ಸ್ಯಾಮ್ಸನ್​ ಮತ್ತು ರಿಷಭ್​ ಪಂತ್​ ಇಬ್ಬರನ್ನು ವಿಕೆಟ್​ ಕೀಪರ್​ಗಳನ್ನಾಗಿ ಆಯ್ಕೆ ಮಾಡಿದೆ. ಹಾಗಾಗಿ ಇಬ್ಬರಲ್ಲಿ ಯಾರನ್ನು ವಿಕೆಟ್​ ಕೀಪರ್​ ಆಗಿ ಕಣಕ್ಕಿಳಿಸಬೇಕು ಎಂದು ಕ್ಯಾಪ್ಟನ್​ ರೋಹಿತ್​ ಶರ್ಮಾ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ರಿಷಭ್​ ಪಂತ್ ಮತ್ತು ಸಂಜು ಸ್ಯಾಮ್ಸನ್ ಇಬ್ಬರು ಪ್ರತಿಭಾವಂತ ಆಟಗಾರರು. ಎಂಥದ್ದೇ ಕಷ್ಟ ಬಂದ್ರೂ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸೋ ಸಾಮರ್ಥ್ಯ ಇಬ್ಬರಿಗೂ ಇದೆ. ಬ್ಯಾಟಿಂಗ್ ಮತ್ತು ಕೀಪಿಂಗ್‌ನಲ್ಲೂ ಇಬ್ಬರೂ ಫವರ್ ಫುಲ್ ಕ್ರಿಕೆಟರ್ಸ್. ಆದ್ರೆ, ಅಂತಿಮವಾಗಿ ಟೀಮ್​ ಇಂಡಿಯಾದ ಪರ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್‌ ಮೊದಲ ಆಯ್ಕೆಯಾಗಿ ಪರಿಗಣಿಸಲಾಗಿದೆ. ಜೊತೆಗೆ ತನಗೆ ಸಿಕ್ಕ ಅವಕಾಶವನ್ನು ಪಂತ್ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ವಿಶ್ವಕಪ್ ನ ಮೊದಲ ಪಂದ್ಯದಲ್ಲೇ ಶೈನ್ ಆಗಿದ್ದಾರೆ ರಿಷಭ್.

ರಸ್ತೆ ಅಪಘಾತದ ಬಳಿಕ ಬರೋಬ್ಬರಿ 18 ತಿಂಗಳ ನಂತರ ಪಂತ್​ ಸಂಪೂರ್ಣ ಫಿಟ್​ ಆಗಿ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಐಪಿಎಲ್ 2024ರಲ್ಲಿ ಪಂತ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ. ಪಂತ್ ಈ ಬಾರಿ ಐಪಿಎಲ್​ನಲ್ಲಿ 13 ಪಂದ್ಯಗಳಲ್ಲಿ 446 ರನ್ ಗಳಿಸಿದ್ದರು. ಇದೇ ಮಿಂಚಿನ ಆಟದಿಂದಾಗಿಯೇ ಟೀಮ್ ಇಂಡಿಯಾದಲ್ಲೂ ಸ್ಥಾನ ಪಡೆದುಕೊಂಡಿದ್ರು. ಜೊತೆಗೆ ಸಂಜು ಸ್ಯಾಮ್ಸನ್ ಅವರನ್ನು ಹಿಂದಿಕ್ಕಿ ಮೊದಲ ಆಯ್ಕೆಯಾಗಿ ಫೀಲ್ಡಿಗಿಳಿದಿದ್ದಾರೆ ಪಂತ್.

ಇನ್ನೊಂದೆಡೆ ರಾಜಸ್ಥಾನ್‌ ತಂಡದ ನಾಯಕನಾಗಿ ಸಂಜು ಸ್ಯಾಮ್ಸನ್​ ತಂಡವನ್ನು ಯಶಸ್ವೀಯಾಗಿ ಮುನ್ನಡೆಸಿದ್ರು. ಐಪಿಎಲ್​ನಲ್ಲಿ ಸಂಜು ವಿಕೆಟ್​ ಕೀಪರ್​​ ಮತ್ತು ಬ್ಯಾಟರ್​ ಆಗಿ ಯಶಸ್ವಿಯಾಗಿದ್ದಾರೆ. ಈ ಐಪಿಎಲ್ ಋತುವಿನಲ್ಲಿ ತಾನು ಆಡಿರೋ 15 ಪಂದ್ಯಗಳಲ್ಲಿ 531 ರನ್ ಗಳಿಸಿದ್ದರು. ಸಂಜು ಸ್ಯಾಮ್ಸನ್ ಕೂಡಾ ಭರ್ಜರಿ ಫಾರ್ಮ್‌ನಲ್ಲಿರೋ ಕಾರಣಕ್ಕಾಗಿಯೇ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವನ್‌ನಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಆದ್ರೆ, ರಿಷಭ್ ಪಂತ್ ಅಬ್ಬರದ ಆಟದ ಮುಂದೆ ಸಂಜು ಸ್ಯಾಮ್ಸನ್ ಮಂಕಾಗಿದ್ದಾರೆ. ವಿದೇಶಿ ನೆಲದಲ್ಲಿ ಪಂತ್‌ ಮೊದಲಿನಿಂದಲೂ ಆಕ್ರಮಣಕಾರಿ ಬ್ಯಾಟರ್‌ ಆಗಿರೋ ಕಾರಣ ಸಂಜು ಸ್ಯಾಮ್ಸನ್‌ಗೆ ಆಡಲು ಸಿಗುವ ಅವಕಾಶ ತೀರಾ ಕಡಿಮೆ.

ರಿಷಭ್ ಪಂತ್ ಭರ್ಜರಿ ಕಮ್‌ಬ್ಯಾಕ್‌ನಿಂದ ಬ್ಯಾಡ್ ಲಕ್ ಬಾಯ್ ಅಂತಾ ಅನಿಸಿಕೊಂಡಿರುವ ಮತ್ತೊಬ್ಬ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್. ಈ ಬಾರಿಯ ಐಪಿಎಲ್‌ನಲ್ಲಿ ಲಕ್ನೋ ತಂಡವನ್ನು ಯಶಸ್ವೀಯಾಗಿ ಮುನ್ನಡೆಸಿದ ಕೆ.ಎಲ್ ರಾಹುಲ್ ಭರ್ಜರಿ ಫಾರ್ಮ್‌ನಲ್ಲಿದ್ದರು. ಹೀಗಾಗಿ ಟೀಮ್ ಇಂಡಿಯಾದಲ್ಲಿ ಈ ಬಾರಿ ಸ್ಥಾನ ಸಿಗೋದು ಗ್ಯಾರಂಟಿ ಅಂತಾನೇ ಹೇಳಲಾಗ್ತಿತ್ತು. ಆದ್ರೆ, ಕೆ.ಎಲ್ ಅಂದುಕೊಂಡಿದ್ದೇ ಒಂದು, ಆಗಿದ್ದೇ ಇನ್ನೊಂದು. ಟೀಮ್ ಇಂಡಿಯಾಕ್ಕೆ ಮರಳಿ ಸೇರುವ ನಿರೀಕ್ಷೆಯಲ್ಲಿದ್ದ ಕೆ.ಎಲ್ ರಾಹುಲ್ ಅವರನ್ನು ಆಯ್ಕೆ ಸಮಿತಿ ಹೊರಗಿಟ್ಟಿತ್ತು. ಟೀಮ್ ಇಂಡಿಯಾದಿಂದ ಔಟ್ ಆಗಿರುವ ಕೆ.ಎಲ್ ರಾಹುಲ್ ಸಿಕ್ಕಾಪಟ್ಟೆ ಅಪ್ಸೆಟ್ ಆಗಿದ್ದು. ಕೆ.ಎಲ್ ರಾಹುಲ್ ಟೀಮ್ ನಿಂದ ಔಟಾಗೋಕೆ ಒನ್ಸೈಗೈನ್ ಕಾರಣವೇ ರಿಷಭ್ ಪಂತ್.

ಪಂತ್ ಆಯ್ಕೆಯಿಂದಾಗಿ ಇಬ್ಬರು ಪ್ರಮುಖ ಆಟಗಾರರು ಮಂಕಾಗಿದ್ದಾರೆ ನಿಜ. ಆದ್ರೆ, ರಿಷಭ್ ಪಂತ್ ಆಟವನ್ನು ಅಭಿನಂದಿಸಲೇಬೇಕು. ಆ ಭೀಕರ ಆಕ್ಸಿಡೆಂಟ್, ಟ್ರೀಟ್‌ಮೆಂಟ್, ಫಿಟ್‌ನೆಸ್ ಸವಾಲ್ ಇದೆಲ್ಲವನ್ನೂ ಮೆಟ್ಟಿನಿಂತಿರೋ ರಿಷಭ್ ಪಂತ್ ಈಗ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಸ್ಥಾನಕ್ಕೆ ನ್ಯಾಯ ಸಲ್ಲಿಸುತ್ತಿದ್ದಾರೆ. ಜೊತೆಗೆ ಬ್ಯಾಟಿಂಗ್ ಮೂಲಕವೂ ಸೌಂಡ್ ಮಾಡ್ತಿದ್ದಾರೆ.

Shwetha M