ಮೋದಿ ಪ್ರಮಾಣವಚನ ಸಮಾರಂಭ – ಕಾರ್ಯಕ್ರಮಕ್ಕೆ ಯಾರಿಗೆಲ್ಲ ಆಹ್ವಾನ?

ಮೋದಿ ಪ್ರಮಾಣವಚನ ಸಮಾರಂಭ – ಕಾರ್ಯಕ್ರಮಕ್ಕೆ ಯಾರಿಗೆಲ್ಲ ಆಹ್ವಾನ?

ಸತತ ಮೂರನೇ ಬಾರಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಭಾನುವಾರ ರಾತ್ರಿ 7.15ಕ್ಕೆ ತಮ್ಮ ಸಂಪುಟ ಸದಸ್ಯರೊಂದಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಪಂಡಿತ್ ಜವಾಹರಲಾಲ್‌ ನೆಹರು ಅವರ ನಂತರ ಸತತ ಮೂರನೇ ಬಾರಿಗೆ ಪ್ರಧಾನಿ ಆದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಮೋದಿ ಭಾಜನರಾಗಲಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ  8 ರಿಂದ 9 ಸಾವಿರ ಮಂದಿ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಪೌರ ಕಾರ್ಮಿಕರಿಂದ ಹಿಡಿದು ವಿದೇಶಿ ಗಣ್ಯರು ಕೂಡ ಸಾಕ್ಷಿಯಾಗಲಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಜೋಡಿ ಡಿವೋರ್ಸ್ – ನಿವೇದಿತಾ-ಚಂದನ್ ಬದುಕಲ್ಲಿ ಆಗಿದ್ದೇನು?

ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪೌರ ಕಾರ್ಮಿಕರು, ಸೆಂಟ್ರಲ್ ವಿಸ್ತಾ ಯೋಜನೆ, ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಮಿಕರು, ತೃತೀಯ ಲಿಂಗಿಗಳು, ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳು, ಉತ್ತರಾಖಂಡ್ ಗಣಿ ಕಾರ್ಮಿಕರ ರಕ್ಷಿಸಿದ ತಂಡ, ವಂದೇ ಭಾರತ್, ಮೆಟ್ರೋದಂಥ ರೈಲ್ವೆ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದವರು, ಎಲ್ಲಾ ಧರ್ಮಗಳ 50 ಧರ್ಮ ಗುರುಗಳಿಗೂ ಜೊತೆಗೆ ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ ಪುರಸ್ಕøತರಿಗೆ, ವಿಕಸಿತ ಭಾರತ್ ಅಂಬಾಸಿಡರ್‍ಗಳು ಹಾಗೂ ಆದಿವಾಸಿ ಮಹಿಳೆಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

ಇನ್ನು  ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಸೀಷೆಲ್ಸ್ ಅಧ್ಯಕ್ಷ ವಾವೆಲ್ ರಾಮ್‍ಕಾಲಾವನ್, ಭೂತಾನ್ ಪ್ರಧಾನಿ ತ್ಶೆರಿಂಗ್ ತೋಗ್ಬೆ, ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್, ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಹಾಗೂ ಮಾಲ್ಡಿವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜುಗೆ ಆಹ್ವಾನ ನೀಡಲಾಗಿದೆ.

ಮೋದಿ ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗುತ್ತಿದೆ. ದೆಹಲಿ ಪೊಲೀಸರು 5 ಹಂತದಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಅರೆಸೈನಿಕ ಸಿಬ್ಬಂದಿ, ಎನ್‍ಎಸ್‍ಜಿ ಕಮಾಂಡೋಗಳು, ಡ್ರೋನ್‍ಗಳು, ಸ್ನೈಪರ್‍ಗಳ ಸೇರಿ ಬಹು ಹಂತದ ಭದ್ರತೆ ಕೈಗೊಳ್ಳಲಾಗುತ್ತಿದೆ.

ರಾಷ್ಟ್ರಪತಿ ಭವನದ ಒಳಗೆ ಹಾಗೂ ಹೊರಗೆ 3 ಹಂತದಲ್ಲಿ ಭದ್ರತೆ ನೀಡಲಾಗುತ್ತಿದ್ದು, 5 ಕಂಪನಿಗಳ ಅರೆಸೇನಾಪಡೆ, ದೆಹಲಿ ಸಶಸ್ತ್ರ ಪೊಲೀಸ್ ಹೀಗೆ ಭದ್ರತೆಗಾಗಿ 2,500 ಪೊಲೀಸರ ಸುತ್ತಲೂ ನೇಮಕ ಮಾಡಲಾಗಿದೆ. ಗಣ್ಯರ ಮಾರ್ಗದಲ್ಲಿ ಸ್ನೈಪರ್‍ಗಳು, ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ವಿದೇಶಿ ಗಣ್ಯರು ಉಳಿಯುವ ಲೀಲಾ, ತಾಜ್, ಐಟಿಸಿ ಮೌರ್ಯ, ಕ್ಲಾರಿಡ್ಜಸ್ ಮತ್ತು ಒಬೆರಾಯ್ ಹೋಟೆಲ್‍ಗಳಲ್ಲೂ ಜಿ20 ಮಾದರಿಯಲ್ಲೇ ವಿಶೇಷ ಭದ್ರತೆ ನಿಯೋಜನೆ ಮಾಡಲಾಗಿದೆ.

Shwetha M