ನೆಹರು ದಾಖಲೆ ಮುರಿದ್ರಾ ಮೋದಿ? – ಹ್ಯಾಟ್ರಿಕ್‌ ಗೆಲುವಿನ ವ್ಯತ್ಯಾಸವೇನು? – 1962.. 2024ರ ಲೆಕ್ಕ!!!

ನೆಹರು ದಾಖಲೆ ಮುರಿದ್ರಾ ಮೋದಿ? – ಹ್ಯಾಟ್ರಿಕ್‌ ಗೆಲುವಿನ ವ್ಯತ್ಯಾಸವೇನು? – 1962.. 2024ರ ಲೆಕ್ಕ!!!

ನರೇಂದ್ರ ಮೋದಿಯವರನ್ನು ಮೂರನೇ ಬಾರಿ ಪ್ರಧಾನಮಂತ್ರಿಯೆಂದು ಬಿಜೆಪಿ ಘೋಷಣೆ ಮಾಡಿದೆ.. ಬಿಜೆಪಿ ಕಚೇರಿಯಲ್ಲಿ ಮಂಗಳವಾರ ರಾತ್ರಿ ನಡೆದಿದ್ದ ಸಂಭ್ರಮಾಚರಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮೋದಿಯವರೇ ಮತ್ತೊಮ್ಮ ಪ್ರಧಾನಮಂತ್ರಿ ಎಂದು ಘೋಷಿಸಿದ್ದಾರೆ.

ಇಷ್ಟಕ್ಕೂ ಮೋದಿಯವರು ಮೂರನೇ ಬಾರಿ ಪ್ರಧಾನಮಂತ್ರಿ ಆಗೋದಿಕ್ಕೂ ದೇಶದ ಮೊದಲ ಪ್ರಧಾನಮಂತ್ರಿ ಪಂಡಿತ್‌ ನೆಹರೂ ಅವರಿಗೂ ಹೊಲಿಕೆಯಿದೆ ಎನ್ನುವುದನ್ನು ಬಿಜೆಪಿ ಹೇಳುತ್ತದೆ.. ಅಷ್ಟೇ ಏಕೆ ಖುದ್ದು ಪ್ರಧಾನಮಂತ್ರಿ ಮೋದಿಯವರು ಕೂಡ ತಮ್ಮ ಮೂರನೇ ಅವಧಿಯನ್ನು ನೇರವಾಗಿ ನೆಹರೂ ಜೊತೆಗೇ ಹೊಲಿಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:  ವಿಪಕ್ಷ ನಾಯಕನ ಜೊತೆ ಕಾಣಿಸಿಕೊಂಡ ನಿತೀಶ್ ಕುಮಾರ್! – ಎನ್‌ಡಿಎ ಗೆ ಕೈ ಕೊಡ್ತಾರಾ ಬಿಹಾರ ಸಿಎಂ?

1962ರ ನಂತರ ಹ್ಯಾಟ್ರಿಕ್‌ ಸಾಧನೆಯೊಂದಿಗೆ ಪ್ರಧಾನಿಯಾಗಿದ್ದು ತಾವು ಎನ್ನುವುದನ್ನು ಮೋದಿ ಹೇಳಿಕೊಂಡಿದ್ದಾರೆ.. ಆದ್ರೆ ಮೋದಿ ಹಾಗೂ ನೆಹರೂ ಅವರ ದಾಖಲೆಗಳ ನಡುವೆ ಒಂದು ವ್ಯತ್ಯಾಸವಿದೆ.. ಅದೇನು ಅನ್ನೋ ಮಾಹಿತಿ ಇಲ್ಲಿದೆ.

2014ರಲ್ಲಿ ಮೊದಲ ಬಾರಿಗೆ ಪ್ರಧಾಮಂತ್ರಿಯಾದ ನರೇಂದ್ರ ಮೋದಿಯವರು ಈಗ ಮೂರನೇ ಬಾರಿ ಪ್ರಧಾನಿಯಾಗಲು ಸಜ್ಜಾಗಿದ್ದಾರೆ.. 2014ರಲ್ಲಿ 282 ಸೀಟುಗಳೊಂದಿಗೆ ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ 303 ಸೀಟುಗಳನ್ನು ಗೆದ್ದು ಭರ್ಜರಿ ಬಹುಮತ ಸಾಧಿಸಿತ್ತು.. ಹೀಗೆ ಸತತ ಎರಡು ಬಾರಿ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸಿದ್ದ ಬಿಜೆಪಿಗೆ 2024ರಲ್ಲಿ ಅದೇ ಅದೃಷ್ಟ ಒಲಿದಿಲ್ಲ.. ಕೇವಲ 240 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿರುವ ಬಿಜೆಪಿ ಈಗ ಮಿತ್ರರ ಸಹಾಯದೊಂದಿಗೆ ಸಮ್ಮಿಶ್ರ ಸರ್ಕಾರ ನಡೆಸಬೇಕಿದೆ.. ಮೋದಿಯವರು ಈಗ ಸಮ್ಮಿಶ್ರ ಸರ್ಕಾರದ ಮೂಲಕವೇ ಮೂರನೇ ಬಾರಿ ಪ್ರಧಾನಮಂತ್ರಿ ಆಗುತ್ತಿದ್ದಾರೆ.. ಇಲ್ಲೇ ಇರುವುದು ಮೋದಿಯವರಿಗೂ ನೆಹರೂ ಅವರಿಗೂ ಇರುವ ವ್ಯತ್ಯಾಸ..

ದೇಶಕ್ಕೆ ಸ್ವಾತಂತ್ರ್ಯ ಬಂದಾಗಲೇ ಪ್ರಧಾನಮಂತ್ರಿಯಾಗಿದ್ದ ನೆಹರೂ ಮೊದಲು ಲೋಕಸಭಾ ಚುನಾವಣೆ ಎದುರಿಸಿ ಪ್ರಧಾನಿಯಾಗಿದ್ದು 1952ರಲ್ಲಿ.. ಆಗ ಕಾಂಗ್ರೆಸ್‌ ಗೆದ್ದಿದ್ದು 364 ಸೀಟುಗಳನ್ನು.. ಇದಾದ ನಂತರ ನಡೆದ ಎರಡನೇ ಮಹಾ ಚುನಾವಣೆಯಲ್ಲಿ 1957ರಲ್ಲಿ ನೆಹರೂ ನೇತೃತ್ವದ ಕಾಂಗ್ರೆಸ್‌ 371 ಸ್ಥಾನಗಳ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಪಂಡಿತ್ ನೆಹರು ಪ್ರಧಾನಮಂತ್ರಿಯಾಗಿದ್ದರು.. ಇನ್ನು ನೆಹರು 1962ರಲ್ಲಿ ಮೂರನೇ ಬಾರಿ ಪ್ರಧಾನಿಯಾದಾಗ ಕಾಂಗ್ರೆಸ್‌ 361 ಸೀಟುಗಳಲ್ಲಿ ಗೆಲುವು ಸಾಧಿಸಿತ್ತು.. ಹೀಗೆ ಸತತ ಮೂರು ಬಾರಿ ಪೂರ್ಣಬಹುಮತದೊಂದಿಗೆ ಅಧಿಕಾರಕ್ಕೆ ಏರಿದ್ದು ನೆಹರು ಮಾತ್ರ.. ಅಲ್ಲಿಂದ ನಂತರವೂ 1972ರ ಲೋಕಸಭಾ ಚುನಾವಣೆಯವರೆಗೂ ಅಂದರೆ ಒಟ್ಟು ಸತತ ಐದು ಚುನಾವಣೆಗಳಲ್ಲಿ ಕಾಂಗ್ರೆಸ್‌ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿತ್ತು.. ಮೋದಿಯವರೂ ಈಗ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗುತ್ತಿದ್ದಾರೆ.. ಆದ್ರೆ ಪೂರ್ಣ ಬಹುಮತದ ಸರ್ಕಾರದ ಬದಲು ಸಮ್ಮಿಶ್ರ ಸರ್ಕಾರದ ಮೂಲಕ ಎನ್ನುವುದಷ್ಟೇ ವ್ಯತ್ಯಾಸ.. ಹಾಗಿದ್ದರೂ ನೆಹರು ಅವರ ಚುನಾವಣೆಗೂ ಪೂರ್ವ ಪ್ರಧಾನಿಯಾಗಿದ್ದ ಅವಧಿಯನ್ನು ಹೊರತುಪಡಿಸಿದರೆ, ಚುನಾಯಿತ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಅವಧಿಯ ದಾಖಲೆಯನ್ನು ಮುರಿಯುವ ಅವಕಾಶ ಈಗ ಮೋದಿಯವರಿಗೆ ಸಿಕ್ಕಿದೆ.. ಹಾಗಿದ್ದರೂ ಚುನಾಯಿತ ಪ್ರಧಾನಿಯಾಗಿ ಸುದೀರ್ಘ ವರ್ಷ ಆಳಿದ ದಾಖಲೆ ಇಂದಿರಾ ಗಾಂಧಿಯವರ ಹೆಸರಿನಲ್ಲೇ ಉಳಿಯಲಿದೆ.. ಇಂದಿರಾಗಾಂಧಿ 15 ವರ್ಷ 350 ದಿನಗಳ ಕಾಲ ಪ್ರಧಾನಮಂತ್ರಿಯಾಗಿದ್ದರು.. ನೆಹರು ಅವರು, ಚುನಾವಣೆಗೂ ಮುಂಚಿತವಾಗಿಯೂ ಪ್ರಧಾನಮಂತ್ರಿಯಾಗಿದ್ದ ಅವಧಿಯನ್ನು ಸೇರಿಸಿ, 16 ವರ್ಷ 286 ದಿನಗಳ ಕಾಲ ಪ್ರಧಾನಿಯಾಗಿದ್ದರು.. ಆ ಮೂಲಕ ದೇಶದಲ್ಲಿ ಅತಿಹೆಚ್ಚು ಕಾಲ ಸತತ ಪ್ರಧಾನಮಂತ್ರಿಯಾಗಿದ್ದ ದಾಖಲೆ ನೆಹರು ಹೆಸರಿನಲ್ಲಿಯೇ ಇದೆ.. ಈ ದಾಖಲೆಗಳನ್ನು ಮುರೀಬೇಕು ಅಂದ್ರೆ ಈಗ ಐದು ವರ್ಷ ಕಂಪ್ಲೀಟ್‌ ಮಾಡಿ, ಮೋದಿ 2029ರಲ್ಲಿ ಮತ್ತೆ ಪ್ರಧಾನಿಯಾಗುತ್ತಾರಾ ಎಂದು ನೋಡಬೇಕಿದೆ..

Shwetha M