ಕಾಂಗ್ರೆಸ್‌ ಗೆಲ್ಲೋದು ಇದೇ ಮೂರಾ? – 3..4..7 ಯಾವುದೆಲ್ಲಾ ಗೆಲ್ಲುತ್ತೆ?
ಎಕ್ಸಿಟ್‌ ಪೋಲ್‌ ನಂತರದ ಲೆಕ್ಕ!!!

ಕಾಂಗ್ರೆಸ್‌ ಗೆಲ್ಲೋದು ಇದೇ ಮೂರಾ? – 3..4..7 ಯಾವುದೆಲ್ಲಾ ಗೆಲ್ಲುತ್ತೆ?ಎಕ್ಸಿಟ್‌ ಪೋಲ್‌ ನಂತರದ ಲೆಕ್ಕ!!!

ದೇಶದಲ್ಲಿ ಲೋಕಸಭೆ ಚುನಾವಣೆ ಮುಗಿದ್ಮೇಲೆ ಎಕ್ಸಿಟ್‌ ಪೋಲ್‌ಗಳ ಹವಾ ಜೋರಾಗಿದೆ.. ದೇಶದ ಜನರು ನೀಡಿರುವ ತೀರ್ಪು ಜೂನ್‌ 4ರಂದು ಹೊರಬರಲಿದೆ.. ಅದಕ್ಕೂ ಮೊದಲೇ ದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಹ್ಯಾಟ್ರಿಕ್‌ ವಿಜಯ ದಾಖಲಿಸಲಿದೆ ಎಂಬ ವಿಶ್ವಾಸವನ್ನು ಎಕ್ಸಿಟ್‌ ಪೋಲ್‌ಗಳು ವ್ಯಕ್ತಪಡಿಸಿವೆ.. ದೇಶವನ್ನು ಆಳುತ್ತಿರುವ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವ ಹುಮ್ಮಸ್ಸಿನಲ್ಲಿದೆ.. ಅಧಿಕಾರದ ಕನಸು ಕಾಣುತ್ತಿದ್ದ ಪ್ರತಿಪಕ್ಷಗಳ ಇಂಡಿಯಾ ಬ್ಲಾಕ್‌, ಸಮೀಕ್ಷೆಗಳೆಲ್ಲಾ ಸುಳ್ಳಾಗಲಿದೆ ಎಂದು ಹೇಳುತ್ತಿದೆ.. ಆದ್ರೆ ನಿಜಕ್ಕೂ ಏನಾಗಿದೆ ಎನ್ನುವುದಕ್ಕೆ ಎಕ್ಸ್ಯಾಕ್ಟ್‌ ಪೋಲ್‌ ರಿಸಲ್ಟ್‌ ಬರುವವರೆಗೆ ಕಾಯಬೇಕಿದೆ.. ಇದರ ನಡುವೆ ಕರ್ನಾಟಕದಲ್ಲಿ 15.. 20 ಸೀಟು ಗೆಲ್ತೀವಿ ಎನ್ನುತ್ತಿದ್ದ ಕಾಂಗ್ರೆಸ್‌ಗೆ ದೊಡ್ಡ ಆಘಾತ ನೀಡುವಂತೆ ಎಕ್ಸಿಟ್‌ ಪೋಲ್‌ ರಿಸಲ್ಟ್‌ ಬಂದಿದೆ.. ಕೈ ನಾಯಕರ ಖುಷಿಯ ಬಲೂನ್‌ ಸ್ಫೋಟವಾಗಿದೆ.. ಕಾಂಗ್ರೆಸ್‌ಗೆ ಬಹುತೇಕ ಸರ್ವೆಗಳು 3 ಸೀಟು ಕೊಟ್ಟಿದ್ದರೆ ಕೆಲವರು 7ರವರೆಗೆ ಸೀಟುಗಳನ್ನು ಮಾತ್ರ ಗೆಲ್ಲಬಹುದು ಎನ್ನುತ್ತಿವೆ.. ಹಾಗಿದ್ದರೆ ಸರ್ವೆಗಳ ಪ್ರಕಾರ ಕಾಂಗ್ರೆಸ್‌ ಗೆಲ್ಲುವ ಸೀಟುಗಳು ಯಾವುವು? ಎಲ್ಲೆಲ್ಲಿ ಕಾಂಗ್ರೆಸ್‌ ಸೋಲಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕನ್ನಡದಲ್ಲೂ ಹಾರ್ದಿಕ್ ಹೆಂಡ್ತಿ ಡ್ಯಾನ್ಸ್!! – ನತಾಶಾಗೆ ಸಿಕ್ಕ ಪಾಲೆಷ್ಟು?

ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕೌಂಟ್‌ ಡೌನ್‌ ಶುರುವಾಗಿದೆ.  ನಾಳೆ ಅಭ್ಯರ್ಥಿಗಳ ಭವಿಷ್ಯ  ಹೊರ ಬೀಳಲಿದ್ದು, ರಾಜಕೀಯ ಪಕ್ಷಗಳ ನಡುವೆ ಲೆಕ್ಕಾಚಾರ ಆರಂಭವಾಗಿದೆ. ಈಗಾಗಲೇ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬಂದಿದೆ. ನಿರೀಕ್ಷಿಸಿದಂತೆಯೇ ಎನ್‌ಡಿಎ ಒಕ್ಕೂಟ ಬಹುಮತ ಪಡೆದುಕೊಳ್ಳಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಇದೇ ನಿಜವಾದ ರಿಸಲ್ಟ್‌ ಅಥವಾ ಜನರ ತೀರ್ಮಾನ ಹೀಗೆಯೇ ಇರಲಿದೆ ಎಂಬುದಕ್ಕೆ ಯಾವುದೇ ಖಾತ್ರಿಯಿಲ್ಲ..

ಡಾಕ್ಟರ್‌ ವರ್ಸಸ್‌ ಡಿಕೆ ಕ್ಷೇತ್ರದಲ್ಲಿ ಗೆಲ್ಲೋದು ಯಾರು?

ಬಹುಷಃ ರಾಜ್ಯದ ಜನ ಎಲ್ಲಾ ಕ್ಷೇತ್ರಗಳಿಗಿಂತಲೂ ಹೆಚ್ಚಾಗಿ ಕುತೂಹಲದಿಂದ ಎದುರು ನೋಡುತ್ತಿರುವ ಒಂದು ರಿಸಲ್ಟ್‌ ಅಂದ್ರೆ ಅದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ್ದು.. ಇಲ್ಲಿ ಡಾಕ್ಟರ್‌ ಮಂಜುನಾಥ್‌ ಗೆಲ್ತಾರೋ ಅಥವಾ ಹಾಲಿ ಸಂಸದ ಡಿ.ಕೆ.ಸುರೇಶ್‌ ಗೆಲ್ತಾರೋ ಎಂಬ ಚರ್ಚೆ ಜೋರಾಗಿದೆ.. ಅದರಲ್ಲೂ  ಮಂಜುನಾಥ್‌ ಗೆದ್ದೇ ಗೆಲ್ತಾರೆ ಎಂಬ ವಿಶ್ವಾಸ ಜನರಲ್ಲಿದೆ.. ಎಕ್ಸಿಟ್‌ ಪೋಲ್‌ಗಳಲ್ಲೂ ಬಹುತೇಕರು ಡಾಕ್ಟರ್‌ ಮಂಜುನಾಥ್‌ ಗೆಲ್ಲುವ ಸಾಧ್ಯತೆಯ ಬಗ್ಗೆಯೇ ಲೆಕ್ಕಹಾಕಿದ್ದಾರೆ.. ಆದ್ರೆ ಯಾರಿಗೂ ಖಾತ್ರಿಯಾಗಿ ಡಾಕ್ಟರ್‌ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿಲ್ಲ.. ಬಹುತೇಕ ಸರ್ವೆಗಳು ಫಿಫ್ಟಿ ಫಿಫ್ಟಿ ಎಂಬ ರಿಸಲ್ಟ್‌ ಕೊಟ್ಟಿವೆ.. ಹಾಗಿದ್ದರೂ ಬೆಂಗಳೂರು ಭಾಗದಲ್ಲಿ ಬರುವ ಐದು ಲೋಕಸಭಾ ಕ್ಷೇತ್ರಗಳಲ್ಲಿ 1-2 ಸೀಟುಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ ಎಂದು ಬಹುತೇಕ ಎಕ್ಸಿಟ್‌ ಪೋಲ್‌ಗಳು ಹೇಳಿವೆ.. ಅಂದ್ರೆ, ಈ ಒಂದು ಅಥವಾ ಎರಡು ಸೀಟುಗಳಲ್ಲಿ ಕಾಂಗ್ರೆಸ್‌ ಪಕ್ಕಾ ಗೆಲ್ಲೋದು ಬೆಂಗಳೂರು ಗ್ರಾಮಾಂತರ ಎಂದು ಹೇಳಲಾಗುತ್ತಿದೆ.. ಬೆಂಗಳೂರು ಗ್ರಾಮಾಂತರದ ಜೊತೆಗೆ ಬೆಂಗಳೂರು ಸೆಂಟ್ರಲ್‌ ಅಥವಾ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲುವಿನ ನಗೆಬೀರಬಹುದು ಎಂಬ ಲೆಕ್ಕಾಚಾರವಿದೆ..

ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆ ಒಂದೇ ಸೀಟು?

ಇನ್ನು ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಐದಕ್ಕೆ ಐದೂ ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ.. ಇದರ ಜೊತೆಗೆ ಕಿತ್ತೂರು ಕರ್ನಾಟಕ ಹಾಗೂ ಮಧ್ಯಕರ್ನಾಟಕ ಭಾಗದಲ್ಲಿ ಐದರಿಂದ ಆರು ಸೀಟು ಗೆಲ್ಲುವ ವಿಶ್ವಾಸದಲ್ಲಿದ್ದರು. ಆದ್ರೆ ಪ್ರಮುಖ ಸಮೀಕ್ಷಾ ಏಜೆನ್ಸಿಗಳ ಪ್ರಕಾರ ಉತ್ತರ ಕರ್ನಾಟಕ ಭಾಗದ 11 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 1 ಸೀಟು ಗೆದ್ದರೆ ಹೆಚ್ಚಂತೆ.. ಅಂದರೆ ಬಹುತೇಕ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಗೆಲುವಿನ ಕನಸು ಕಾಣಲು ಸಾಧ್ಯವಿದೆ.. ಉಳಿದ ಭಾಗಗಳಲ್ಲಿ ಬಿಜೆಪಿಯೇ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರವನ್ನು ಸಮೀಕ್ಷೆಗಳು ನೀಡಿವೆ..

ಹಳೇ ಮೈಸೂರಿನಲ್ಲಿ ಎಷ್ಟು ಗೆಲ್ಲುತ್ತೆ ಕಾಂಗ್ರೆಸ್‌?

ಹಳೆ ಮೈಸೂರು ಭಾಗದಲ್ಲಿ ಬರುವ ಬೆಂಗಳೂರು ಹೊರತುಪಡಿಸಿ 9 ಲೋಕಸಭಾ ಕ್ಷೇತ್ರಗಳಲ್ಲಿ 1 ಸೀಟು ಕಾಂಗ್ರೆಸ್‌ ಗೆಲ್ಲೋದು ಪಕ್ಕಾ ಎಂದು ಸಮೀಕ್ಷೆಗಳು ಹೇಳ್ತಿವೆ.. ಇದರ ಪ್ರಕಾರ ಚಾಮರಾಜನಗರ ಸೀಟನ್ನು ಮಾತ್ರ ಕಾಂಗ್ರೆಸ್‌ ವಿಶ್ವಾಸದಿಂದ ನೋಡಬಹುದು.. ಚಾಮರಾಜನಗರ ಹೊರತುಪಡಿಸಿದ್ರೆ, ಕೋಲಾರ, ತುಮಕೂರು, ಚಿತ್ರದುರ್ಗ, ಹಾಸನ ಹಾಗೂ ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಟಫ್‌ ಫೈಟ್‌ ಕೊಟ್ಟಿದೆ.. ಇದರಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವಿನ ಸಾಧ್ಯತೆ ಫಿಫ್ಟಿ ಇದೆ.. ಬಹುತೇಕ ಚಿತ್ರದುರ್ಗ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆ ಇದೆ ಎನ್ನುವುದು ಎಕ್ಸಿಟ್‌ ಪೋಲ್‌ಗಳು ನೀಡುತ್ತಿರುವ ಮಾಹಿತಿ..

ಕರಾವಳಿಯಲ್ಲೂ ಒಂದು ಸೀಟು ‘ಕೈ’ ವಶ?

ಹೀಗೆ ಬೆಂಗಳೂರು-ಹಳೆಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಒಂದೊಂದು ಸೀಟು ಗೆಲ್ಲುವ ಮೂಲಕ ಕೇವಲ ಮೂರು ಸೀಟಿಗೆ ಕಾಂಗ್ರೆಸ್‌ ಸೀಮಿತವಾಗಬಹುದು ಎಂಬುದು ಬಹುತೇಕ ಸರ್ವೇಗಳು ನೀಡುತ್ತಿರುವ ಮಾಹಿತಿ.. ಇದರ ಹೊರತಾಗಿ, ಕಾಂಗ್ರೆಸ್‌ ಕರಾವಳಿಯಲ್ಲಿ ಬರುವ ಮೂರು ಕ್ಷೇತ್ರಗಳಲ್ಲಿ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆ ಇದೆಯಂತೆ.. ಇದರಲ್ಲಿ ಉಡುಪಿ-ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಬಲ ಸ್ಪರ್ಧೆಯೊಡ್ಡಿದೆ ಎನ್ನುವುದನ್ನು ಎಕ್ಸಿಟ್‌ ಪೋಲ್‌ ಸರ್ವೇಗಳು ಅಂದಾಜಿಸಿವೆ.. ಆದರೆ ಇದರಲ್ಲಿ ಯಾವುದಾದರೂ ಒಂದು ಸ್ಥಾನ ಮಾತ್ರ ಕಾಂಗ್ರೆಸ್‌ಗೆ ಸಿಕ್ಕರೂ ಸಿಗಬಹುದು  ಎನ್ನುವುದನ್ನು ಸರ್ವೇಗಳು ಹೇಳುತ್ತಿವೆ..

ಹೀಗೆ ಕಾಂಗ್ರೆಸ್‌ ಒಂದೆಡೆ ಗ್ಯಾರಂಟಿಗಳನ್ನು ನೆಚ್ಚಿಕೊಂಡು 15ರಿಂದ 20 ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿತ್ತು.. ಬಿಜೆಪಿ ರಾಜ್ಯ ನಾಯಕತ್ವ ಕೇವಲ ಮೋದಿ ನಾಮಬಲವನ್ನು ಮಾತ್ರ ಸ್ಮರಣೆ ಮಾಡುತ್ತಾ ಕುಳಿತಿತ್ತು.. ಈಗ ಮೋದಿ ಹೆಸರೇ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಕೂಟಕ್ಕೆ ದೊಡ್ಡ ಬೆಂಬಲ ತಂದುಕೊಟ್ಟಂತಿದೆ.. ಅದರಲ್ಲೂ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಜೊತೆಗೆ ಪೆನ್‌ಡ್ರೈವ್‌ ಪ್ರಜ್ವಲ್‌ ಕೂಡ ಗೆದ್ದು ಲೋಕಸಭೆಯನ್ನು ಪ್ರವೇಶಿಸುವ ಸಾಧ್ಯತೆ ಕಂಡುಬರುತ್ತಿದೆ.. ಎಕ್ಸಿಟ್‌ ಪೋಲ್‌ ರಿಸಲ್ಟ್‌ಗಳು ಏನೇ ಹೇಳಿದರೂ ಈಗ ನಿಜವಾಗಿ ಜನರು ಯಾವ ತೀರ್ಪು ನೋಡಿದ್ದಾರೆಂದು ನೋಡಬೇಕಿದೆ..

Shwetha M