ಸ್ಟಾರ್ಕ್ ಅದೃಷ್ಟ ದೇವತೆ ಅಲಿಸ್ಸಾ ಹೀಲಿ – ಪತ್ನಿಯ ಸವಾಲ್.. ಗಂಡನ ಸಕ್ಸಸ್
ಒಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆಯಿರುತ್ತಾಳೆ ಅನ್ನೋದು ಲೋಕಾರೂಡಿ. ಇದು ಸ್ಟಾರ್ ಕ್ರಿಕೆಟರ್ ಒಬ್ಬರಿಗೆ ಹೇಳಿ ಮಾಡಿಸಿದ ಮಾತು. ಯಾಕೆಂದ್ರೆ, ಈ ಸ್ಟಾರ್ ಪ್ಲೇಯರ್ ಸತತವಾಗಿ ಫ್ಲಾಪ್ ಸ್ಟಾರ್ ಆಗಿ ಕುಸಿದುಹೋಗಿದ್ದರು. ಒಂದರ ಹಿಂದೆ ಒಂದು ಪಂದ್ಯ ಅಂತಾ ಪ್ರತಿ ಪಂದ್ಯದಲ್ಲೂ ಫೆಲ್ಯೂರ್ ಆಗಿದ್ರು. ಆಮೇಲೆ ನೋಡಿ ಬಂದೇಬಿಟ್ಟರು ಆ ಸ್ಟಾರ್ ಪ್ಲೇಯರ್ ನ ಮುದ್ದಿನ ಮಡದಿ. ನಂತರ ನಡೆದಿದ್ದೆಲ್ಲಾ ಮ್ಯಾಜಿಕ್. ಫಸ್ಟ್ ಹಾಫ್‌ನಲ್ಲಿ ಯಾರೆಲ್ಲಾ ಟೀಕಿಸಿದ್ರೋ ಸೆಕೆಂಡ್ ಹಾಫ್‌ನಲ್ಲಿ ಮೂಗಿನ ಮೇಲೆ ಬೆರಳಿಟ್ಟುಕೊಂಡ್ರು. ಕೋಟಿ ವೀರ ಕುಗ್ಗಿಹೋಗಿದ್ದು, ನಂತರ ಪುಟಿದೆದ್ದು ಬಂದಿರೋ ಇಂಟ್ರಿಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಭವಾನಿ ರೇವಣ್ಣಗೆ ಬಂಧನದ ಭೀತಿ – ಒಂದೂವರೆ ಕೋಟಿ ಕಾರಿನ ಒಡತಿಗೆ 15 ಲಕ್ಷದ ಪೊಲೀಸ್ ಜೀಪ್ ಫಿಕ್ಸಾ?
ಐಪಿಎಲ್ ಕ್ರೇಜ್ ಮುಗಿದು ಈಗ ಇಡೀ ವಿಶ್ವವೇ ಟಿ20 ವಿಶ್ವಕಪ್‌ನತ್ತ ಕಣ್ಣಿಟ್ಟಿದೆ. ಆದ್ರೆ, ಇಲ್ಲೊಬ್ಬ ಸ್ಟಾರ್ ಪ್ಲೇಯರ್ ಮಾತ್ರ ಇವತ್ತಿಗೂ ಟ್ರೆಂಡಿಂಗ್‌ನಲ್ಲಿದ್ದಾರೆ. ಚೆಪಾಕ್ ಅಂಗಳದಲ್ಲಿ ಹೈದ್ರಾಬಾದ್ ಮಣಿಸಿ ಕೆಕೆಆರ್ ಐಪಿಎಲ್ ಚಾಂಪಿಯನ್ ಆದಾಗ ಶುರುವಾದ ಈ ವಿಚಾರ ಈಗಲೂ ಅದೆಷ್ಟೋ ಮಂದಿಗೆ ಸ್ಪೂರ್ತಿ ನೀಡ್ತಿದೆ. ಕೆಕೆಆರ್ ಸಕ್ಸಸ್ನ ಕ್ರೆಡಿಟ್, ಮಿಚೆಲ್ ಸ್ಟಾರ್ಕ್ ಸಾಲಿಡ್ ಪರ್ಫಾಮೆನ್ಸ್ ಗೆ ಕಾರಣ ಈ ದಿಟ್ಟ ಮಹಿಳೆ. ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಅಲಿಸಾ ಹೀಲಿ. ಆಸೀಸ್ ಮಹಿಳಾ ಕ್ರಿಕೆಟರ್ ಅಲಿಸಾ ಹೀಲಿ ಐಪಿಎಲ್ ಅಂಗಳಕ್ಕೆ ಎಂಟ್ರಿಕೊಟ್ಟಿದ್ದೇ ತಡ, ಮಿಚೆಲ್ ಸ್ಟಾರ್ಕ್ ಚಾರ್ಮ್ ಕಂಪ್ಲೀಟ್ ಚೇಂಜ್ ಆಯ್ತು. ಮೊದಲಾರ್ಧಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ ಮಿಚೆಲ್ ಸ್ಟಾರ್ಕ್ ಸೆಕೆಂಡ್ ಹಾಫ್‌ನಲ್ಲಿ ಕೆಕೆಆರ್ ತಂಡದ ಗೆಲುವಿನ ಕೇಕೆಗೆ ಕಾರಣವಾದ್ರು. ಈ ಅಲಿಸಾ ಹೀಲಿ ಮಿಚೆಲ್ ಸ್ಟಾರ್ಕ್‌ನ ಮುದ್ದಿನ ಮಡದಿ. ಜೊತೆಗೆ ಗಂಡನ ಯಶಸ್ಸಿನ ಹಿಂದಿರೋ ಧೈರ್ಯವಂತ ಮಹಿಳೆ. ಅಲಿಸಾ ಕೆಕೆಆರ್ ಕ್ಯಾಂಪ್ ಸೇರಿಕೊಂಡ ಮೇಲೆ ಮಿಚೆಲ್ ಸ್ಟಾರ್ಕ್ ಆಡಿದ್ದೆಲ್ಲಾ ದಾಖಲೆಯಾಗಿ ಹೋಗಿದ್ದು ನಿಮಗೆಲ್ಲಾ ಗೊತ್ತೇ ಇದೆ.
ಅಂದು ಹರಾಜಿನ ಕಣದಲ್ಲಿ ಸ್ಟಾರ್ಕ್ ಗೆ ಬರೋಬ್ಬರಿ 24.75 ಕೋಟಿ ನೀಡಿ ಕೆಕೆಆರ್ ಖರೀದಿಸಿತ್ತು. ಯಾರೂ ಊಹಿಸಲಾಗದಷ್ಟು ದೊಡ್ಡ ಮೊತ್ತಕ್ಕೆ ಸೇಲಾದ ಮಿಚೆಲ್ ಸ್ಟಾರ್ಕ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ನಿರೀಕ್ಷೆ ಇಟ್ಟು ಕಾದ ಅಭಿಮಾನಿಗಳಿಗೆ ಆಗಿದ್ದು ನಿರಾಸೆ. ಮೊದಲಾರ್ಧದಲ್ಲಿ ನಿರಾಸೆ ಮೂಡಿಸಿದ್ದ ಸ್ಟಾರ್ಕ್ ಕೆಕೆಆರ್ ಪಾಲಿಗೆ ದುಬಾರಿ ಬೌಲರ್ ಆದ್ರು. ಯಾವಾಗ ಮಿಚೆಲ್ ಸ್ಟಾರ್ಕ್ ಮೆಂಟಲಿ ವೀಕ್ ಆಗೋಕೆ ಶುರುವಾದ್ರೋ ಆಗ್ಲೇ ಆಸ್ಟ್ರೇಲಿಯಾದಿಂದ ಹಾರಿಕೊಂಡು ಓಡೋಡಿ ಬಂದ್ರು ಅಲಿಸಾ. ಆಸ್ಟ್ರೇಲಿಯಾದಿಂದ ಬಂದ ಪತ್ನಿ ಅಲಿಸಾ ಹೀಲಿ, ಕೆಕೆಆರ್ ಕ್ಯಾಂಪ್ ಸೇರಿಕೊಂಡ್ರು. ಕುಗ್ಗಿ ಹೋಗಿದ್ದ ಸ್ಟಾರ್ಕ್ಗೆ ಮಾನಸಿಕ ಸ್ಥೈರ್ಯ ತುಂಬಿದ್ರು. ಪತ್ನಿಯ ಆತ್ಮವಿಶ್ವಾಸದ ಮಾತುಗಳಿಂದ ವೇಗಿ ಪುಟಿದೆದ್ರು. ಪತ್ನಿ ಅಲಿಸಾ ಹೀಲಿ, ಮಿಚೆಲ್ ಸ್ಟಾರ್ಕ್ ಜೊತೆ ಮಾತನಾಡಿ ಧೈರ್ಯ ತುಂಬಿದ ಮೇಲೆ ಸ್ಟಾರ್ಕ್ ತಿರುಗಿ ನೋಡಿದ್ದೇ ಇಲ್ಲ.
ತನ್ನ ಹುಮ್ಮಸ್ಸಿಗೆ ಕಾರಣ ಅಲಿಸಾ ಹೀಲಿ ಅನ್ನೋದನ್ನು ಖುಷಿಯಲ್ಲೇ ಹೇಳಿಕೊಂಡಿದ್ರು ಮಿಚೆಲ್ ಸ್ಟಾರ್ಕ್. ಅಲಿಸಾ ಹೀಲಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ, ಮಹಿಳಾ ಪ್ರೀಮಿಯರ್ ಲೀಗ್ನ ಗುಜರಾತ್ ಜೈಂಟ್ಸ್ ತಂಡದ ನಾಯಕಿಯಾಗಿ ಕ್ರಿಕೆಟ್ ಜಗತ್ತಿನಲ್ಲಿ ಮೆರೆಯುತ್ತಿದ್ದಾರೆ. ಸ್ಟಾರ್ಕ್ಗೆ ಸದಾ ಬೆಂಬಲವಾಗಿ ನಿಂತಿದ್ದಾರೆ ಅಲಿಸಾ. ಸ್ಟಾರ್ಕ್ ಕೂಡ ಅಷ್ಟೇ, ಪತ್ನಿ ಎಲ್ಲೇ ಪಂದ್ಯವನ್ನಾಡಿದ್ರೂ ಬಿಡುವು ಮಾಡಿಕೊಂಡು ಹೋಗಿ ಚಿಯರ್ ಮಾಡ್ತಾರೆ. COUPLE GOALS ಅಂತಾರಲ್ಲ ಅದಕ್ಕೆ ಈ ಜೋಡಿ ಸಖತ್ ಸೂಟ್ ಆಗುತ್ತೆ.