ಸೀತಾ – ರಾಮ ನಿಶ್ಚಿತಾರ್ಥ – ಮದುವೆ ರೀಲಾ – ರಿಯಲ್ಲಾ?
ಸೀರಿಯಲ್ ಸೀಕ್ರೆಟ್ ರಿವೀಲ್?
ಸಿನಿಮಾ ಇರ್ಲಿ.. ಸೀರಿಯಲ್ ಇರ್ಲಿ.. ಅದ್ರ ಪಾತ್ರಗಳು, ಕತೆ ಪ್ರೇಕ್ಷಕರ ಮನಸಿಗೆ ತುಂಬಾ ಹತ್ತಿರವಾಗಿರುತ್ತೆ.. ರೀಲ್ ಆದ್ರೂ ಎಲ್ಲವನ್ನೂ ರಿಯಲ್ ಎಂಬಂತೆ ತೋರಿಸಲಾಗುತ್ತೆ.. ಹೀಗಾಗಿ ಎಲ್ಲಾ ಪಾತ್ರಗಳು ಜನರ ಮನಸಿಗೆ ಹತ್ತಿರವಾಗಿರುತ್ತವೆ.. ವಿಲನ್ ಆಕ್ಟರ್ ನ ಬೈಕೊಂಡ್ರೆ.. ಹೀರೋಯಿನ್ ಕಷ್ಟಗಳಿಗೆ ಮರುಗುತ್ತಾರೆ.. ಇನ್ನೂ ಸೀರಿಯಲ್ ನಲ್ಲಿ ನಾಯಕ ನಾಯಕಿಯ ಪಾತ್ರ ಮಾಡ್ತಿದ್ರೆ.. ಅವ್ರು ಇಬ್ರೂ ನಿಜವಾಗಿಯೂ ಮದ್ವೆ ಆಗ್ತಿದ್ದಾರಾ? ಅವರಿಬ್ರು ನಿಜವಾಗಿಯೂ ಗಂಡ ಹೆಂಡ್ತೀನಾ ಅಂತಾ ಫಾನ್ಸ್ ಹೇಳಿಕೊಂಡಿದ್ದು ಇದೆ.. ಇದೀಗ ಸೀತಾರಾಮ ಸೀರಿಯಲ್ ನಲ್ಲಿ ವೀಕ್ಷಕರು ಕಾಯ್ತಾ ಇದ್ದಾ ಗಳಿಗೆ ಬಂದೇ ಬಿಟ್ಟಿದೆ.. ಎಲ್ಲಾ ಅಡೆತಡೆಗಳು ಮೀರಿ ಸೀತಾ ರಾಮ ನಿಶ್ಚಿತಾರ್ಥ ನಡೆದಿದೆ. ಆದ್ರೆ ಈಗ ಸೀತಾ ಮತ್ತು ರಾಮ ರಿಯಲ್ ಆಗಿ ಮದುವೆ ಆಗ್ತಿದ್ದಾರಾ ಅನ್ನೋ ಪ್ರಶ್ನೆ ವೀಕ್ಷಕರಿಗೆ ಮೂಡಿದೆ..
ಇದನ್ನೂ ಓದಿ: ಭವಾನಿ ರೇವಣ್ಣಗೆ ಬಂಧನದ ಭೀತಿ – ಒಂದೂವರೆ ಕೋಟಿ ಕಾರಿನ ಒಡತಿಗೆ 15 ಲಕ್ಷದ ಪೊಲೀಸ್ ಜೀಪ್ ಫಿಕ್ಸಾ?
ಸೀರಿಯಲ್, ಸಿನಿಮಾ ಅಂದ್ರೆ ಹಾಗೆ.. ಕಾಲ್ಪನಿಕ ಕತೆ ಆದ್ರೂ ಇಲ್ಲಿ ಎಲ್ಲವನ್ನೂ ರಿಯಲ್ ಅನ್ನೋ ರೀತಿಯಲ್ಲೇ ತೋರಿಸಲಾಗುತ್ತೆ.. ಮದುವೆ, ನಿಶ್ಚಿತಾರ್ಥ ಅಥವಾ ಇನ್ನಾವುದೇ ಹಬ್ಬ-ಹರಿದಿನಗಳು ಬಂದರೂ ಅದನ್ನು ರಿಯಲ್ ಆಗಿಯೇ ತೋರಿಸಲಾಗುತ್ತದೆ. ಹೀಗಾಗಿಯೇ ಸೀರಿಯಲ್ಗಳು ಇಂದು ಜನರಿಗೆ ಅಷ್ಟು ಆಪ್ತ ಆಗಿರುವುದು. ಇದೀಗ ಸೀತಾರಾಮ ಸೀರಿಯಲ್ನಲ್ಲಿಯೂ ಮದುವೆ ಸಂಭ್ರಮ ತೋರಿಸಲಾಗುತ್ತಿದೆ..ಎಲ್ಲಾ ಅಡೆತಡೆಗಳನ್ನು ಮೀರಿ ಸೀತಾ ರಾಮ ಕಲ್ಯಾಣಕ್ಕೆ ಸಿದ್ದತೆ ನಡಿತಾ ಇದೆ..
ಕೆಲವು ದಿನಗಳ ಹಿಂದೆ ಅಶೋಕ್ ಮತ್ತು ಪ್ರಿಯಾ ಮದುವೆಯನ್ನೂ ಅದ್ದೂರಿಯಾಗಿ ನಡೆಸಲಾಗಿತ್ತು.. ಅವರ ಫಸ್ಟ್ನೈಟ್ ಡೆಕೋರೇಷನ್ ನೋಡಿದವರೂ ಇದು ರಿಯಲ್ಲಾ, ರೀಲಾ ಕೇಳಿದ್ದರು. ಅಶೋಕ ಮದುವೆಯೇ ಅಷ್ಟೊಂದು ಅದ್ದೂರಿಯಾಗಿ ತೋರಿಸಿದ್ರು.. ಇನ್ನು ಸೀತಾ ಮತ್ತು ರಾಮನ ಮದುವೆ, ಎಂಗೇಜ್ಮೆಂಟ್ ಅಂದ ಮೇಲೆ ಕೇಳಬೇಕೆ? ವರ್ಷದಿಂದ ಸೀರಿಯಲ್ ಪ್ರಿಯರು ಕಾಯುತ್ತಿದ್ದ ಸವಿ ಗಳಿಗೆ ಬಂದೇ ಬಿಟ್ಟಿದೆ. ಹಲವು ಅಡೆತಡೆಗಳನ್ನು ಎದುರಿಸಿ ಇವರ ಎಂಗೇಜ್ಮೆಂಟ್ ನಡೆದಿದೆ. ಅತ್ತ ರುದ್ರಪ್ರತಾಪ್ ಈ ಎಂಗೇಜ್ಮೆಂಟ್ ಅನ್ನು ತಡೆಯಲು ಹರಸಾಹಸ ಮಾಡಿದ್ದ. ಆದರೆ ವಿಲನ್ ಭಾರ್ಗವಿ ಕೂಡ ಆತನಿಗೆ ಸಾಥ್ ನೀಡಿಲ್ಲ. ಏಕೆಂದರೆ ಅವಳ ಪ್ಲ್ಯಾನ್ ಬೇರೆಯದ್ದೇ ಇದೆ. ಇದೂ ವೀಕ್ಷಕರಿಗೆ ಕೊಂಚ ಭಯ ತರ್ಸಿದ್ರೂ ಸೀತಾ ರಾಮ ಕಲ್ಯಾಣ ನಡೆದೇ ನಡೆಯುತ್ತೆ ಅನ್ನೋ ಭರವಸೆ ವೀಕ್ಷಕರಿಗೆ ಇದೆ.. ಯಾವುದೇ ವಿಘ್ನ ಇಲ್ದೇ ಮದುವೆ ಆಗ್ಲಿ ಅಂತಾ ವೀಕ್ಷಕರು ಬಯಸ್ತಾ ಇದ್ದಾರೆ. ಸೀರಿಯಲ್ ಅಂದ ಮೇಲೆ ಟ್ವಿಸ್ ಇದ್ದೇ ಇರುತ್ತೆ ಅಲ್ವಾ.. ಹೀಗಾಗಿ ಇಲ್ಲಿ ಸಿಹಿ ಹಿನ್ನೆಲೆ ಗೊತ್ತಾಗೋ ಸಾಧ್ಯತೆ ಇದೆ ಅಂತಾ ವೀಕ್ಷಕರು ಮಾತಾಡ್ಕೊಳ್ತಿದ್ದಾರೆ..
ಇನ್ನು ಸೀತಾ ಮತ್ತು ರಾಮರ ಎಂಗೇಜ್ಮೆಂಟ್ಗೆ ಭರ್ಜರಿ ಸೆಟ್ ಹಾಕಲಾಗಿತ್ತು. ರಿಯಲ್ ರೀತಿಯಲ್ಲಿಯೇ ಕಾಣುವಂತೆ ಆಮಂತ್ರಣ ಪತ್ರಿಕೆಯನ್ನೂ ರೆಡಿ ಮಾಡಲಾಗಿತ್ತು. ನಿಜವಾಗಿಯೂ ಶ್ರೀಮಂತರ ಮದುವೆ ಎಂದರೆ ಹೇಗೆ ಇರುತ್ತದೆಯೋ ಅದೇ ರೀತಿ ಸೆಟ್ ಅಪ್ ಮಾಡಲಾಗಿದೆ. ಆದ್ದರಿಂದ ಈ ಎಂಗೇಜ್ಮೆಂಟ್ ನೋಡಿದವರು ನಿಜವಾಗಿಯೂ ಇವರಿಬ್ಬರು ಮದ್ವೆ ಆಗ್ತಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ.
ಅಷ್ಟಕ್ಕೂ ಬಹುತೇಕ ಸೀರಿಯಲ್ಗಳಲ್ಲಿನ ನಾಯಕ-ನಾಯಕಿಯ ಜೋಡಿಯನ್ನು ನೋಡಿ ವೀಕ್ಷಕರು ನೀವಿಬ್ಬರೂ ಯಾಕೆ ಒಟ್ಟಾಗಬಾರದು? ಮದ್ವೆಯಾಗ್ಬಾರದು ಎಂದೆಲ್ಲಾ ಕೇಳುವುದು ಇದೆ. ಅದೇ ನಾಯಕ ಅಥವಾ ನಾಯಕಿ ಇನ್ನೊಂದು ಸೀರಿಯಲ್ನಲ್ಲಿ ಬೇರೊಬ್ಬರ ಜೊತೆ ನಟಿಸುವಾಗಲೂ ಅದೇ ಪ್ರಶ್ನೆ ಎದುರಾಗುತ್ತದೆ. ಈಗಾಗಲೇ ಸೀತಾ ಮತ್ತು ರಾಮ್ ಪಾತ್ರಧಾರಿಗಳಿಗೆ ಹಲವು ಅಭಿಮಾನಿಗಳು ಇದೇ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.