RCBಗೆ DK ರಿಟರ್ನ್ ಫಿಕ್ಸ್ -ABD ವಿಚಾರದಲ್ಲಿ ಮಾಡಿದ ತಪ್ಪೇನು?
2025ರ IPLಗೆ ಏನೆಲ್ಲಾ ಬದಲಾವಣೆ?
2024ರ ಐಪಿಎಲ್ನಲ್ಲಿ ಬೆಂಗಳೂರು ತಂಡ ಪ್ಲೇಆಫ್ಗೆ ರಣರೋಚಕವಾಗಿ ಲಗ್ಗೆ ಇಟ್ಟಿದ್ರೂ ಕೂಡ ಕ್ವಾಲಿಫೈಯಲ್ 1ರಲ್ಲಿ ಮುಗ್ಗರಿಸಿತ್ತು. ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರ ಬಿದ್ದಿತ್ತು. ಆರ್ಸಿಬಿ ಟ್ರೋಫಿ ಗೆಲ್ಲುತ್ತೆ ಅಂತಾ ಕಾಯ್ತಿದ್ದ ಕೋಟ್ಯಂತರ ಅಭಿಮಾನಿಗಳು ನಿರಾಸೆಗೊಂಡಿದ್ರು. ಆದ್ರಿಲ್ಲಿ ಬೆಂಗಳೂರು ತಂಡ ಸೋಲ್ತು ಅನ್ನೋದಕ್ಕಿಂತ ಹೆಚ್ಚು ನೋವಾಗಿದ್ದು ಡಿಕೆ ಬಾಸ್ ನಿವೃತ್ತಿ. ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಎಲಿಮಿನೇಟರ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಆಡಿದ್ದರು. ಈ ಪಂದ್ಯ ಕಾರ್ತಿಕ್ ಪಾಲಿಗೆ ಕೊನೆಯ ಐಪಿಎಲ್ ಹಣಾಹಣಿಯಾಗಿತ್ತು. ಆರ್ಸಿಬಿಗೆ ಚೊಚ್ಚಲ ಕಪ್ ಗೆದ್ದುಕೊಡುವ ಮೂಲಕ ಐಪಿಎಲ್ ವೃತ್ತಿ ಜೀವನವನ್ನು ಮುಗಿಸಲು ಎದುರು ನೋಡುತ್ತಿದ್ದ ದಿನೇಶ್ ಕಾರ್ತಿಕ್ ಸೋಲಿನ ಮೂಲಕ ತಮ್ಮ ವೃತ್ತಿ ಜೀವನ ಮುಗಿಸಬೇಕಾಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಕಷ್ಟದಲ್ಲಿದ್ದಾಗಲೆಲ್ಲಾ ಆಸರೆಯಾಗ್ತಿದ್ದ ದಿನೇಶ್ ಕಾರ್ತಿಕ್ ಐಪಿಎಲ್ಗೆ ವಿದಾಯ ಹೇಳಿದ್ದು ಆರ್ಸಿಬಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಆದ್ರೀಗ ಅದೇ ಡಿಕೆ ಬೆಂಗಳೂರು ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುಂದಿನ ಐಪಿಎಲ್ಗೂ ದಿನೇಶ್ ಕಾರ್ತಿಕ್ ದರ್ಶನವಾಗಲಿದೆ. ಹೇಗೆ ಅನ್ನೋದನ್ನ ಹೇಳ್ತೇನೆ ನೋಡಿ.
RCB ಗೆ ಡಿಕೆ ರಿಟರ್ನ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ ಅವರಿಗೆ ಇದು ಕೊನೇ ಸೀಸನ್. ಬರೋಬ್ಬರಿ 17 ಸೀಸನ್ಗಳ ಬಳಿಕ ಐಪಿಎಲ್ನಿಂದ ನಿವೃತ್ತಿಯಾಗಿದ್ದಾರೆ. ಇದು ಆರ್ಸಿಬಿ ಟೀಮ್ಗೆ ಬಹಳ ಶಾಕಿಂಗ್ ಆಗಿತ್ತು. ಆದ್ರಿಗ ಫ್ಯಾನ್ಸ್ಗೆ ದಿನೇಶ್ ಕಾರ್ತಿಕ್ ಗುಡ್ನ್ಯೂಸ್ ನೀಡಿದ್ದಾರೆ. ದಿನೇಶ್ ಕಾರ್ತಿಕ್ ಮುಂದಿನ ಸೀಸನ್ನಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಆದರೆ, ವಿಶೇಷ ಏನಂದ್ರೆ ದಿನೇಶ್ ಕಾರ್ತಿಕ್ ಆರ್ಸಿಬಿ ತಂಡದ ಆಟಗಾರನಾಗಿ ಇರುವುದಿಲ್ಲ, ಬದಲಿಗೆ ಕೋಚಿಂಗ್ ಟೀಮ್ ಭಾಗವಾಗುವ ಸಾಧ್ಯತೆ ಇದೆ. ಆರ್ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಅಥವಾ ಸಪೋರ್ಟಿಂಗ್ ಸ್ಟಾಫ್ ಭಾಗವಾಗಲಿದ್ದಾರೆ. ಐಪಿಎಲ್ ಟೂರ್ನಿ ಬಳಿಕ ಮಾತನಾಡಿದ್ದ ಡಿಕೆ, ಭವಿಷ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನನ್ನಿಂದ ಸಾಧ್ಯವಾದಷ್ಟು ಕೊಡುಗೆ ನೀಡಲು ಸಿದ್ದ ಎಂದು ಹೇಳಿಕೊಂಡಿದ್ದರು. ಆ ಮೂಲಕ ಆರ್ಸಿಬಿ ತಂಡದ ಕೋಚಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಆಸಕ್ತಿಯನ್ನು ವ್ಯಕ್ತಪಡಿಸಿದ್ರು. ಇದೀಗ ಬೆಂಗಳೂರು ಫ್ರಾಂಚೈಸಿ ಕೂಡ ಮುಂದಿನ ವರ್ಷಕ್ಕೆ ಡಿಕೆಯನ್ನ ಉಳಿಸಿಕೊಳ್ಳೋಕೆ ಪ್ಲ್ಯಾನ್ ಮಾಡಿದೆ. ಮತ್ತೊಂದೆಡೆ ಟಿ20 ವಿಶ್ವಕಪ್ ಶುರುವಾಗಲಿದ್ದು, ಐಸಿಸಿ ಮೆಗಾ ಟೂರ್ನಿಗೆ ಟೀಮ್ ಇಂಡಿಯಾ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಪ್ರತಿನಿಧಿಯಾಗಿ ಫುಲ್ ಟೈಮ್ ಕಾಮೆಂಟೇಟರ್ ಆಗಿ ದಿನೇಶ್ ಕಾರ್ತಿಕ್ ಕಾಣಿಸಿಕೊಳ್ಳಲಿದ್ದಾರೆ.
ವಿಕೆಟ್ ಕೀಪರ್-ಬ್ಯಾಟರ್ ತಮ್ಮ ಐಪಿಎಲ್ ವೃತ್ತಿಜೀವನದುದ್ದಕ್ಕೂ ಆರು ತಂಡಗಳನ್ನು ಪ್ರತಿನಿಧಿಸಿದ್ದಾರೆ. 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ದಿನೇಶ್ ಕಾರ್ತಿಕ್ ಅವರನ್ನು ಖರೀದಿಸಿತ್ತು. ಅದರಂತೆ ಈ ಆವೃತ್ತಿಯಲ್ಲಿ ಮ್ಯಾಚ್ ಫಿನಿಷರ್ ಆಗಿ ಆರ್ಸಿಬಿಗೆ ನೆರವು ನೀಡಿದ್ದರು. ಇದರ ಯಶಸ್ಸಿನ ಫಲವಾಗಿ 2022ರ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಇನ್ನು ದಿನೇಶ್ ಕಾರ್ತಿಕ್ ಐಪಿಎಲ್ 2024ರ ಆವೃತ್ತಿಯಲ್ಲಿ 15 ಪಂದ್ಯಗಳನ್ನ ಆಡಿದ್ದು, 187ರ ಸ್ಟ್ರೈಕ್ ರೇಟ್ನಲ್ಲಿ 326 ರನ್ ಗಳಿಸಿದ್ರು. ದಿನೇಶ್ ಕಾರ್ತಿಕ್ 257 ಐಪಿಎಲ್ ಪಂದ್ಯಗಳಲ್ಲಿ 22 ಅರ್ಧಶತಕಗಳೊಂದಿಗೆ 4842 ರನ್ ಗಳಿಸಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪೂರ್ಣಗೊಳಿಸಲಿದ್ದಾರೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಈ ಬಾರಿ ಭಾರತದ ಟಿ20 ವಿಶ್ವಕಪ್ 2024 ತಂಡವನ್ನು ಆಯ್ಕೆ ಮಾಡುವ ಮೊದಲು ದಿನೇಶ್ ಕಾರ್ತಿಕ್ ಹೆಸ್ರೂ ಕೂಡ ಚರ್ಚೆಯಲ್ಲಿತ್ತು. ಆದ್ರೆ ಅಂತಿಮವಾಗಿ ಡಿಕೆ ತಂಡಕ್ಕೆ ಸೆಲೆಕ್ಟ್ ಆಗಲಿಲ್ಲ. ಒಟ್ನಲ್ಲಿ ಆರ್ಸಿಬಿ ತಂಡ ಈ ಮೊದಲು ಎಬಿ ಡಿವಿಲಿಯರ್ಸ್ ಅವರನ್ನು ತಂಡಕ್ಕೆ ಮೆಂಟರ್ ಆಗಿ ಮಾಡಿಕೊಳ್ಳುವ ಅವಕಾಶ ಇದ್ದರೂ ಅದನ್ನು ಬಳಸಿಕೊಳ್ಳಲಿಲ್ಲ. ಆದರೆ ದಿನೇಶ್ ಕಾರ್ತಿಕ್ ತಂಡದ ಮೆಂಟರ್ ಅಥವಾ ಬ್ಯಾಟಿಂಗ್ ಕೋಚ್ ಆಗಲು ಅತ್ಯುತ್ತಮ ಆಯ್ಕೆಯಾಗಿದ್ದಾರೆ. ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡುವ ಅವರಿಗೆ, ವಿಶ್ವದ ವಿವಿಧ ತಂಡಗಳ ಆಟಗಾರರ ಬಗ್ಗೆ ಮಾಹಿತಿ ಇರುತ್ತದೆ. ದೇಶೀಯ ಕ್ರಿಕೆಟ್ನಲ್ಲಿ ಕೂಡ ಅವರು ಆಡಿದ್ದು, ಭಾರತೀಯ ಯುವ ಆಟಗಾರರ ಬಗ್ಗೆ ಕೂಡ ಮಾಹಿತಿ ಇರುತ್ತದೆ. ಅವರ ಅಪಾರ ಅನುಭವ ಐಪಿಎಲ್ 2025ರಲ್ಲಿ ಬೆಂಗಳೂರು ತಂಡಕ್ಕೆ ಅನುಕೂಲ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.