ಜೂನ್ 4ಕ್ಕೆ ಚುನಾವಣಾ ಫಲಿತಾಂಶ – ಮತ ಎಣಿಕೆ ದಿನದಂದು ರಜೆ ಇರುತ್ತಾ?
ಲೋಕಸಭೆ ಚುನಾವಣೆ ಮತದಾನ ಬಹುತೇಕ ಮುಗಿದಿದೆ. ಕೊನೆಯ ಹಂತದ ಮತದಾನ ಜೂ. 1 ರಂದು ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ. ಮತ ಎಣಿಕೆಯಂದು ರಜೆ ಇರಲಿದ್ಯಾ ಅನ್ನೋ ಪ್ರಶ್ನೆ ಈಗ ಹಲವರಲ್ಲಿ ಕಾಡುತ್ತಿದೆ. ಇದೀಗ ಇದಕ್ಕೆ ಉತ್ತರ ಸಿಕ್ಕಿದೆ. ಜೂ. 4 ರಂದು ಯಾವುದೇ ರಜೆ ಇರುವುದಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: World Cupಗೆ ಕೈ ಕೊಟ್ರಾ ಕೊಹ್ಲಿ? – ಮೊದಲ ಪಂದ್ಯದಲ್ಲಿ ಆಡ್ತಿಲ್ಲ ಯಾಕೆ?
ಹೌದು, ಲೋಕಸಭೆಯ 543 ಸ್ಥಾನಗಳಿಗೆ ನಡೆದಿರುವ ಮಹಾ ಚುನಾವಣೆಯಲ್ಲಿ ಮತದಾರರ ಬೆಂಬಲ ಯಾರಿಗೆ ಸಿಕ್ಕಿದೆ ಎನ್ನುವುದು ಜೂನ್ 4ರಂದು ಗೊತ್ತಾಗಲಿದೆ. ಮತ ಎಣಿಕೆ ಪ್ರಕ್ರಿಯೆ ಬೆಳಗ್ಗೆ ಶುರುವಾದರೆ ಮಧ್ಯಾಹ್ನದ ವೇಳೆಗೆ ಫಲಿತಾಂಶದ ಮುನ್ನೋಟ ದೊರಕಿ ಬಿಡುತ್ತದೆ. ಮತ ಎಣಿಕೆ ಪೂರ್ಣಗೊಳ್ಳಲು ತಡರಾತ್ರಿಯಾದರೂ ಆಗಬಹುದು. ಹೀಗಾಗಿ ಆ ದಿನ ರಜೆ ಇದ್ಯಾ ಇಲ್ವಾ ಅಂತ ಅನೇಕರು ಗೊಂದಲದಲ್ಲಿ ಇದ್ದರು. ಮತ ಎಣಿಕೆಯ ದಿನದಂದು ಸಾರ್ವತ್ರಿಕ ರಜೆ ಇರುವುದಿಲ್ಲ. ಮತದಾನ ದಿನಗಳಂದು ಆ ಪ್ರಕ್ರಿಯೆ ನಡೆಯುವ ಪ್ರದೇಶಗಳಲ್ಲಿ ರಜೆ ನೀಡುವ ಸಾಧ್ಯತೆ ಇದೆ. ಸರ್ಕಾರಿ ಕಚೇರಿ, ಬ್ಯಾಂಕು ಇತ್ಯಾದಿ ಎಲ್ಲವೂ ಯಥಾ ಪ್ರಕಾರ ಕಾರ್ಯನಿರ್ವಹಿಸುತ್ತವೆ.
543 ಸದಸ್ಯ ಬಲದ ಲೋಕಸಭೆಗೆ ಏಳು ಹಂತಗಳಲ್ಲಿ ಚುನಾವಣೆ ನಿಗದಿಯಾಗಿದೆ. ಈಗಾಗಲೇ ಆರು ಹಂತದ ಮತದಾನವಾಗಿದೆ. ಜೂನ್ 1ಕ್ಕೆ ಅಂತಿಮ ಹಾಗೂ ಆರನೇ ಹಂತದ ಮತದಾನ ಇದೆ. ಉತ್ತರಪ್ರದೇಶ, ಬಿಹಾರ, ಹಿಮಾಚಲಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಚಂಡೀಗಡ ರಾಜ್ಯಗಳಲ್ಲಿನ 57 ಲೋಕಸಭಾ ಕ್ಷೇತ್ರಗಳಲ್ಲಿ ಶನಿವಾರ ಮತದಾನವಾಗಲಿದೆ.
ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಅಧಿಕಾರಕ್ಕೆ ಬರುವ ಪ್ರಯತ್ನದಲ್ಲಿದೆ. ಯುಪಿಎ ಒಕ್ಕೂಟ ಇಂಡಿಯಾ ಹೆಸರಿನಲ್ಲಿ ಹೊಸ ಅವತಾರದಲ್ಲಿದ್ದು ಹತ್ತು ವರ್ಷ ಬಳಿಕ ಗದ್ದುಗೆ ಹಿಡಿಯಲು ಹೊರಟಿದೆ.