PAN Card​ಗೆ ಆಧಾರ್ ಲಿಂಕ್ ಮಾಡಲು ಮೇ 31 ಡೆಡ್​ಲೈನ್! – ಲಿಂಕ್‌ ಆಗಿಲ್ಲಾ ಅಂದ್ರೆ ಏನಾಗುತ್ತೆ?

PAN Card​ಗೆ ಆಧಾರ್ ಲಿಂಕ್ ಮಾಡಲು ಮೇ 31 ಡೆಡ್​ಲೈನ್! – ಲಿಂಕ್‌ ಆಗಿಲ್ಲಾ ಅಂದ್ರೆ ಏನಾಗುತ್ತೆ?

ಪ್ಯಾನ್ ಕಾರ್ಡ್​ಗೆ ಆಧಾರ್ ಅನ್ನು ಲಿಂಕ್  ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಹೇಳುತ್ತಲೇ ಬಂದಿದೆ. ಮೇ.31ಕ್ಕೆ ಡೆಡ್‌ಲೈನ್‌ ಕೂಡ ನೀಡಿದೆ. ಆದ್ರೆ ಜನರು ಮಾತ್ರ ಈ ಬಗ್ಗೆ ಒಲವು ತೋರಿಸುತ್ತಲೇ ಇಲ್ಲ.  ಇದೀಗ ಈ ಡೆಡ್‌ಲೈನ್‌ ಮುಗಿಯುತ್ತಾ ಬಂದಿದ್ದು, ಆದಾಯ ತೆರಿಗೆ ಇಲಾಖೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಮೇ 31ರೊಳಗೆ ನೀವು ಲಿಂಕ್ ಮಾಡಿಕೊಳ್ಳದಿದ್ರೆ ಭಾರೀ ಪ್ರಮಾಣದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ವಿದೇಶದಿಂದ ಭಾರತಕ್ಕೆ ಬರುವ ಮುನ್ನವೇ ಸಂಸದ ಪ್ರಜ್ವಲ್​ ರೇವಣ್ಣ ಮಾಸ್ಟರ್​​ ಪ್ಲಾನ್!

ಹೌದು, ಆಧಾರ್​ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಒಂದು ವೇಳೆ ನೀವು ಈ ಗಡುವನ್ನು ತಪ್ಪಿಸಿಕೊಂಡ್ರೆ ದುಪ್ಪಟ್ಟು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ತೆರಿಗೆದಾರರಿಗೆ, ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಇದೇ 31 ರೊಳಗೆ ಆಧಾರ್ ಲಿಂಕ್ ಮಾಡುವಂತೆ ಸೂಚನೆ ನೀಡಿದೆ.

ಈ ಹಿನ್ನೆಲೆ 31ರೊಳಗೆ ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಅವಶ್ಯಕವಾಗಿದೆ. ಒಂದು ವೇಳೆ ಲಿಂಕ್ ಮಾಡದಿದ್ರೆ ಡಬಲ್ ಟಿಡಿಎಸ್ ಪಾವತಿಸಬೇಕಾಗುತ್ತದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರ್ ಟ್ಯಾಕ್ಸ್ ಸುತ್ತೋಲೆ ಹೊರಡಿಸಿದೆ. ನೀವು ಹೆಚ್ಚುವರಿ ತೆರಿಗೆಯನ್ನು ತಪ್ಪಿಸಿಕೊಳ್ಳಬೇಕು ಅಂದರೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಮನೆಯಲ್ಲೇ ಕುಳಿತು ಆಧಾರ್‌ಗೆ ಪ್ಯಾನ್ ಲಿಂಕ್ ಮಾಡಬಹುದು.

ಪ್ಯಾನ್ಗೆ ಆಧಾರ್ಲಿಂಕ್ ಮಾಡೋದು ಹೇಗೆ..?

  • ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ https://www.incometax.gov.in/iec/foportal/ ಗೆ ಹೋಗಬೇಕು.
  • Adhar Links ಮೇಲೆ ಕ್ಲಿಕ್ ಮಾಡಿ ಮತ್ತು ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ
  • ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ, ವ್ಯಾಲಿಡೇಟ್ ಕ್ಲಿಕ್ ಮಾಡಿ
  • ಆಧಾರ್ ಕಾರ್ಡ್‌ನಲ್ಲಿ ಬರೆದಿರುವ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ, ಲಿಂಕ್ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
  • ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ಭರ್ತಿ ಮಾಡಿ ಮತ್ತು Validate ಮೇಲೆ ಕ್ಲಿಕ್ ಮಾಡಿ.

Shwetha M