ಆರ್‌ಸಿಬಿ ಟೀಮ್‌ನಿಂದ ಮ್ಯಾಕ್ಸಿ ಔಟಾದ್ರೆ ಸಾಕು..! – ಗ್ಲೆನ್ ಮ್ಯಾಕ್ಸ್‌ವೆಲ್ ನೆನಪಾದಾಗಲೆಲ್ಲಾ ಅಭಿಮಾನಿಗಳು ಉರಿದು ಬೀಳೋದು ಯಾಕೆ?
ಹೊಸ ಅಧ್ಯಾಯದೊಂದಿಗೆ ಆರ್‌ಸಿಬಿ ತಂಡ ಕೋಟಿ ಕೋಟಿ ಕನ್ನಡಿಗರಿಗೆ ಕಪ್ ಗೆದ್ದು ಕೊಡುವ ನಿರೀಕ್ಷೆ ಮೂಡಿಸಿತ್ತು. ಆರ್‌ಸಿಬಿ ಕಮ್‌ಬ್ಯಾಕ್ ಮಾಡಿರೋ ರೀತಿಗೆ ಕಮರುತ್ತಿದ್ದ ಕನಸುಗಳು ಮತ್ತೆ ಗರಿಗೆದರಿದ್ದವು. ಈ ಸಲ ಕಪ್ ನಮ್ದೇ ಗುರೂ ಅಂತಾ ಆರ್‌ಸಿಬಿ ಅಭಿಮಾನಿಗಳು ಕೂಡಾ ಪುಟಿದೆದ್ದು ಆಸೆ ಕಂಗಳಿಂದ ಕಾಯುತ್ತಿದ್ರು. ಅದ್ರಲ್ಲೂ ಚೆನ್ನೈ ಟೀಮ್ ನ್ನು ಸೋಲಿಸಿರೋ ಪರಿ ನೋಡಿ ಫೈನಲ್‌ಗೂ ಇದೇ ಆಟ ಅಂತಾ ಫ್ಯಾನ್ಸ್ ಎಷ್ಟೊಂದು ಖುಷಿಯಾಗಿದ್ರು ಅಂದ್ರೆ ಪದಗಳಲ್ಲಿ ವಿವರಿಸಲು ಸಾಧ್ಯವೇ ಇಲ್ಲ. ಕೋಟಿ ಕೋಟಿ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ್ದು ಮಾತ್ರ ಆತನೊಬ್ಬನೇ. ಆತ ಇಲ್ಲದಿದ್ರೂ ಕೂಡಾ ನಮ್ ಟೀಮ್ ಕಪ್ ನಮ್ಮದಾಗಿಸಿಕೊಡ್ತಿತ್ತು. ಆದ್ರೆ, ಆತ ಆರ್‌ಸಿಬಿ ಪಾಲಿಗೆ ವಿಲನ್ ಆದ. ಆರ್‌ಸಿಬಿ ಫ್ಯಾನ್ಸ್ ಕಣ್ಣಲ್ಲಿ ಝೀರೋ ಆದ. ಆರ್‌ಸಿಬಿ ಕಪ್ ಗೆಲ್ಲದಿದ್ರೂ ಫ್ಯಾನ್ಸ್ ತಂಡದ ಬಗ್ಗೆ ಫ್ರೌಡ್ ಫೀಲ್ ಮಾಡ್ತಿದ್ರೂ ಕೂಡಾ ಗ್ಲೆನ್ ಮ್ಯಾಕ್ಸ್‌ವೆಲ್ ನೆನಪಾದಾಗಲೆಲ್ಲಾ ಉರಿದು ಬೀಳ್ತಿದ್ದಾರೆ. ಈ ಬಾರಿ ಆರ್‌ಸಿಬಿ ಟೀಮ್‌ನಿಂದ ಮ್ಯಾಕ್ಸಿ ಔಟಾದ್ರೆ ಸಾಕು ಅಂತಾ ಫ್ಯಾನ್ಸ್ ಕಾಯ್ತಿದ್ದಾರೆ. ಹಾಗಾದ್ರೆ, ಮ್ಯಾಕ್ಸಿ ಮಾಡಿದ ತಪ್ಪೇನು?, ರಣಬೇಟೆಗಾರನಂತೆ ರನ್ ಬೇಟೆಯಾಡೋ ಮ್ಯಾಕ್ಸಿಗೆ ಆರ್‌ಸಿಬಿಯಲ್ಲಿ ಅಂಥಾದ್ದೇನಾಗಿತ್ತು ಎಂಬ ಇನ್‌ಸೈಡ್ ಸ್ಟೋರಿ ಇಲ್ಲಿದೆ.
ಇದನ್ನೂ ಓದಿ: CSK ವಿರುದ್ಧ ಹೀರೋ! – RR ಎದುರು ಝೀರೋ! -RCB ಮಾಡಿದ ತಪ್ಪೇನು?
ಗ್ಲೆನ್ ಮ್ಯಾಕ್ಸ್‌ವೆಲ್. ವಿಶ್ವಕಪ್ ನಲ್ಲಿ ಅಬ್ಬರದ ಬ್ಯಾಟಿಂಗ್ ನೋಡಿ ಆರ್‌ಸಿಬಿ ಅಭಿಮಾನಿಗಳು ಒಳಗೊಳಗೆ ಖುಷಿ ಪಟ್ಟಿದ್ರು. ಆರ್‌ಸಿಬಿಗೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಬ್ಯಾಕ್‌ಬೋನ್ ಆಗಿ ನಿಂತ್ರೆ, ಮ್ಯಾಕ್ಸಿ ರನ್ ಮಳೆ ಸುರಿಸ್ತಾರೆ ಅಂತಾನೇ ನಂಬಿದ್ರು. ಆದ್ರೆ, ಮ್ಯಾಕ್ಸವೆಲ್ ಮಾತ್ರ ನಾನೇನಿದ್ರೂ ದೇಶಕ್ಕಾಗಿ ಆಡುವವನು ಅನ್ನೋ ರೀತಿ ತನ್ನೆಲ್ಲಾ ಬ್ಯಾಟಿಂಗ್ ಶಕ್ತಿಯನ್ನು ಟಿ20 ವಿಶ್ವಕಪ್‌ಗೆ ಮೀಸಲಿಟ್ಟಂತೆ ಬ್ಯಾಟ್ ಬೀಸಲೇ ಇಲ್ಲ. ಆರ್‌ಬಿಸಿ ಅಂದ್ರೆ ಕೆಜಿಎಫ್ ಗ್ಯಾಂಗ್ ಅಂತಾ ಆರ್‌ಸಿಬಿ ಫ್ಯಾನ್ಸ್ ಕಲರ್ ಕಲರ್ ಕನಸು ಕಂಡಿದ್ದೇ ಬಂತು. ಕೆಜಿಎಫ್‌ನ ಜಿ, ಅಂದ್ರೆ ಗ್ಲೆನ್ ಮ್ಯಾಕ್ಸ್‌ವೆಲ್ ಸೌಂಡ್ ಮಾಡಲೇ ಇಲ್ಲ. ಐಪಿಎಲ್‌ನ ಮೊದಲಾರ್ಧದ ಕೆಲ ಪಂದ್ಯಗಳಲ್ಲಿ ಝೀರೋ ರನ್ ಬಾರಿಸಿ ಫ್ಯಾನ್ಸ್ ಹೃದಯದಲ್ಲೂ ಝೀರೋ ಆದ್ರು. ಆದ್ರೆ, ಲೀಗ್ ಸ್ಟೇಜ್ನ ಫಸ್ಟ್ ಹಾಫ್ನಲ್ಲಿ ಹಳಿತಪ್ಪಿದ್ದ ಆರ್‌ಸಿಬಿ, ಸೆಕೆಂಡ್ ಹಾಫ್ನಲ್ಲಿ ರೈಟ್ ಟ್ರ್ಯಾಕ್ಗೆ ಬಂದಿತ್ತು. ಅಬ್ಬರದ ಬ್ಯಾಟಿಂಗ್, ಬಿರುಗಾಳಿಯಂತಾ ಬೌಲಿಂಗ್, ಅಲ್ಟಿಮೇಟ್ ಫೀಲ್ಡಿಂಗ್.. ಸತತ 6 ಪಂದ್ಯ ಗೆದ್ದು ಗೆಲುವಿನ ಕೇಕೆ ಹಾಕಿತ್ತು ಆರ್‌ಸಿಬಿ ಟೀಮ್. ಚೆನ್ನೈ ಎದುರಿನ ಕೊನೇ ಪಂದ್ಯದಲ್ಲಿ ಆರ್ಭಟಿಸಿದ್ದ ಬೆಂಗಳೂರು ತಂಡ ಪ್ಲೇ ಆಫ್ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಎಂಟ್ರಿ ಕೊಟ್ಟಿತ್ತು. ಕಪ್ ಆಸೆಯನ್ನ ಕೈ ಬಿಟ್ಟಿದ್ದ ಫ್ಯಾನ್ಸ್ ಮತ್ತೆ ಕಪ್ ನಮ್ದೇ ಅನ್ನೋಕೆ ಶುರು ಮಾಡಿದ್ರು.
ಸ್ನೇಹಿತರೇ ಇಲ್ಲೊಂದು ಮಾತು ಹೇಳಲೇಬೇಕು. ಚೆನ್ನೈ ಆರ್‌ಸಿಬಿ ಮ್ಯಾಚ್ ಅಂದ್ರೆ ಯಾವಾಗಲೂ ಹೈವೋಲ್ಟೇಜ್ ಮ್ಯಾಚ್. ಇದ್ರಲ್ಲಿ ಮಾತ್ರ ಗ್ಲೆನ್ ಮ್ಯಾಕ್ಸ್ ವೆಲ್ ಬೆಂಗಳೂರು ಫ್ಯಾನ್ಸ್‌ಗೆ ನಿರಾಶೆ ಮಾಡಲಿಲ್ಲ. ಒಂಥರಾ ಮ್ಯಾಚ್ ಹೀರೋ ಆದ್ರೂ ಅಂದ್ರೂ ತಪ್ಪಾಗಲ್ಲ. ಚೆನ್ನೈನ ಬ್ಯಾಟಿಂಗ್ ಬೆನ್ನೆಲುಬು ಮೊದಲ ಬಾಲ್‌ನಲ್ಲಿ ಮುರಿದಿದ್ದೇ ಇದೇ ಮ್ಯಾಕ್ಸ್‌ವೆಲ್. ಮ್ಯಾಕ್ಸಿ ಕಮ್ ಬ್ಯಾಕ್ ಆಗಿದ್ದು ನೋಡಿ ಆರ್‌ಸಿಬಿ ಫ್ಯಾನ್ಸ್, ಏನೇ ಹೇಳ್ ಮಗಾ, ಈ ಸಲ ಕಪ್ ನಮ್ದೇ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಹಾಕಿ ಖುಷಿಪಟ್ಟಿದ್ರು. ಆದ್ರೆ, ಎಲಿಮಿನೇಟರ್ ಫೈಟ್ನಲ್ಲಿ ಎದುರಾಗಿದ್ದು ಮತ್ತದೇ ನಿರಾಸೆ, ಹತಾಶೆ, ಸೋಲಿನ ನೋವು. ಆದ್ರೆ, ಇಲ್ಲಿ ಆರ್‌ಸಿಬಿಯ ಸೋಲಿಗೆ ಕಾರಣವಾಗಿತ್ತು, ಫ್ಯಾನ್ಸ್ ಕಣ್ಣಲ್ಲಿ ವಿಲನ್ ಆಗಿದ್ದು ಇದೇ ಮ್ಯಾಕ್ಸ್‌ವೆಲ್.
ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದು ಆರ್‌ಸಿಬಿ ಕ್ವಾಲಿಫೈಯರ್ 2ಗೆ ಎಂಟ್ರಿ ಕೊಡಲಿ ಅನ್ನೋದು ಕೋಟ್ಯಾನುಕೋಟಿ ಅಭಿಮಾನಿಗಳ ಕನಸಾಗಿತ್ತು. ಅಭಿಮಾನಿಗಳ ಈ ಎಮೋಶನ್ ಗೆ ಆಸಿಸ್ ಬ್ಯಾಟರ್ ಗ್ಲೇನ್ ಮ್ಯಾಕ್ಸ್ವೆಲ್ಗೆ ಕಿಂಚಿತ್ತೂ ಬೆಲೆ ಕೊಡಲೇ ಇಲ್ಲ. ಇಂಪಾರ್ಟೆಂಟ್ ಮ್ಯಾಚ್ ನಲ್ಲಿ ಪ್ರಮುಖ ವಿಕೆಟ್ಗಳು ಉರುಳಿದ ಸಮಯದಲ್ಲಿ ಒಬ್ಬ ಸೀನಿಯರ್ ಆಟಗಾರ ಎಷ್ಟು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಬೇಕಿತ್ತೋ, ಅದ್ರ ತದ್ವಿರುದ್ಧ ಮ್ಯಾಕ್ಸಿ ಬ್ಯಾಟ್ ಬೀಸಿದ್ದರು. ಮೊದಲ ಎಸೆತದಲ್ಲೇ ಬಿಗ್ ಶಾಟ್ ಹೊಡೆಯಲು ಝೀರೋ ಸುತ್ತಿ ವಾಪಾಸಾದ್ರು. ಸ್ಕೋರ್ ನೋಡಿದ ಮೇಲೂ ಮ್ಯಾಕ್ಸಿ ಸ್ವಲ್ಪ ಎಚ್ಚರಿಕೆಯ ಆಟವಾಡಬೇಕಿತ್ತು. ಆದ್ರೆ, ಇಂಥಾ ಪಂದ್ಯದಲ್ಲೂ 11 ಕೋಟಿ ವೀರ ಅಟ್ಟರ್ಫ್ಲಾಫ್ ಆಗಿದ್ರು. ಈ ಸೀಸನ್ನ ಆರಂಭದಲ್ಲೀ ಆರ್ಸಿಬಿಯನ್ನ ಸಂಕಷ್ಟಕ್ಕೆ ಸಿಲುಕಿಸಿದ್ದು ಈತನ ಆಟವೇ.. ಕೊನೆಗೂ ಆರ್‌ಸಿಬಿಯನ್ನು ಈ ಸೀಸನ್ ನಿಂದ ಔಟ್ ಮಾಡಿದ್ದು ಈತನೇ ಆಟವೇ. ಹೇಳಿಕೊಳ್ಳೋಕೆ ವಿಶ್ವ ಶ್ರೇಷ್ಟ ಆಟಗಾರ, ಆಡಿದ ಆಟ ಮಾತ್ರ ಡೊಮೆಸ್ಟಿಕ್ ಕ್ರಿಕೆಟರ್ಸ್ಗಿಂತ ಕಡೆ. ಈ ಸೀಸನ್ನಲ್ಲಿ ಮ್ಯಾಕ್ಸ್‌ವೆಲ್ ಪರ್ಫಾಮೆನ್ಸ್ ಕೇಳಿದ್ರೆ ನಗಬೇಕೋ ಅಳಬೇಕೋ. ಯಾಕೆಂದ್ರೆ, ಈ ಐಪಿಎಲ್ನಲ್ಲಿ 10 ಪಂದ್ಯಗಳನ್ನಾಡಿದ ಗ್ಲೇನ್ ಮ್ಯಾಕ್ಸ್‌ವೆಲ್ ಗಳಿಸಿದ್ದು ಕೇವಲ 52 ರನ್ಗಳಷ್ಟೇ.
ಬ್ಯಾಟಿಂಗ್ನಲ್ಲಿ ಅಟ್ಟರ್ ಫ್ಲಾಫ್ ಆದ ಮ್ಯಾಕ್ಸ್‌ವೆಲ್ ಬೌಲಿಂಗ್ನಲ್ಲಿ ಕಬಳಿಸಿದ್ದು ಕೇವಲ 6 ವಿಕೆಟ್ ಗಳಷ್ಟೇ. ಇದೇ 11 ಕೋಟಿ ಪಡೆದ ಮ್ಯಾಕ್ಸಿಯ ದೊಡ್ಡ ಸಾಧನೆ. ಈ ಸೀಸನ್ನ ಅಧ್ಯಾಯ ಮುಗೀತು. ಇದೀಗ ಮುಂದಿನ ಸೀಸನ್ಗೆ ಸಿದ್ಧತೆಗಳು ತೆರೆ ಮರೆಯಲ್ಲಿ ಜೋರಾಗಿವೆ. ವರ್ಷಾಂತ್ಯದಲ್ಲಿ ಮೆಗಾ ಆಕ್ಷನ್ ನಡೆಯೋದ್ರಿಂದ ರಿಟೈನ್, ರಿಲೀಸ್ನ ಲೆಕ್ಕಾಚಾರ ಜೋರಾಗಿವೆ. ಈಗಲೇ ಅಲ್ಲದಿದ್ರೂ, ಇನ್ನು ಕೆಲವೇ ದಿನಗಳಲ್ಲಿ ಆರ್‌ಸಿಬಿ ಕ್ಯಾಂಪ್ನಲ್ಲೂ ಈ ಚಟುವಟಿಕೆ ಆರಂಭವಾಗಲಿದೆ. ಈ ಸೀಸನ್ನ ಪರ್ಫಾಮೆನ್ಸ್ ನೋಡಿದ್ರೆ, ಮ್ಯಾಕ್ಸ್‌ವೆಲ್ ಅಗತ್ಯತೆ ತಂಡಕ್ಕೆ 1%ನಷ್ಟು ಇಲ್ಲ. ಫ್ಲಾಪ್ ಶೋ ನೀಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಬೇಡವೇ ಬೇಡ ಅಂತಿದ್ದಾರೆ ಫ್ಯಾನ್ಸ್. ಫೈನಲಿ ಈ ಸ್ಟಾರ್ ಆಟಗಾರ ಬೇಕಾ ಬೇಡ್ವಾ ಅನ್ನೋದು ಪ್ರಾಂಚೈಸಿಗೆ ಬಿಟ್ಟ ವಿಚಾರ. ಒಂದಂತೂ ಸತ್ಯ, ಆರ್‌ಸಿಬಿಯ ಕೋಟಿ ಕೋಟಿ ಫ್ಯಾನ್ಸ್ ಕನಸು ನುಚ್ಚುನೂರು ಮಾಡಿದ ಮ್ಯಾಕ್ಸವೆಲ್ ಬದಲಿಗೆ ಬೇರೆ ಆಟಗಾರ ಬಂದ್ರೆ ಟೀಮ್ ಕೂಡಾ ಸ್ಟ್ರಾಂಗ್ ಆಗಬಹುದು.