ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಕೇಸ್ಗೆ ಬಿಗ್ಟ್ವಿಸ್ಟ್ – ಎಸ್ಐಟಿ ಸಹಾಯವಾಣಿಗೆ ಬಂತು 30ಕ್ಕೂ ಹೆಚ್ಚು ಕರೆ!
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಕೇಸ್ ಗೆ ದಿನದಿಂದ ದಿನಕ್ಕೆ ಟ್ವಿಸ್ಟ್ ಸಿಗುತ್ತಿದೆ.. ತನಿಖೆಯಲ್ಲಿ ಹೊಸ ಹೊಸ ವಿಚಾರಗಳು ಬಯಲಾಗುತ್ತಲೇ ಇದೆ. ಇದೀಗ ಪ್ರಕರಣ ಸಂಬಂಧ ಸಂತ್ರಸ್ತೆಯರು ದೂರು ನೀಡಲು ಎಸ್ಐಟಿ ಆರಂಭಿಸಿದ್ದ ಸಹಾಯವಾಣಿಗೆ ಈವರೆಗೆ 30ಕ್ಕೂ ಹೆಚ್ಚು ಕರೆಗಳು ಬಂದಿವೆ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಆ ಹುಡುಗಿಯನ್ನು ಮದುವೆ ಆಗಬೇಕು ಅಂದ್ಕೊಂಡಿದ್ದೆ! – ಫಸ್ಟ್ ಟೈಂ ಸಿದ್ಧರಾಮಯ್ಯ ಒನ್ಸೈಡ್ ಲವ್ಸ್ಟೋರಿ ರಿವೀಲ್!
ಎಸ್ಐಟಿ ಅಧಿಕಾರಿಗಳು ಈ ಪ್ರಕರಣದ ಸಂತ್ರಸ್ತ ಮಹಿಳೆಯರಿಗಾಗಿ ಸಹಾಯವಾಣಿ ಸಂಖ್ಯೆ ತೆರೆದಿತ್ತು. ಇದೀಗ ಈ ಸಂಖ್ಯೆಗೆ ದೌರ್ಜನ್ಯ ಸಂಬಂಧ 30 ಕರೆ ಬಂದಿದೆ. ಆದರೆ ಇದುವರೆಗೂ ಸಂತ್ರಸ್ತ ಮಹಿಳೆಯರು ದೂರು ನೀಡಿಲ್ಲ. ಹೀಗಾಗಿ ಹೆಲ್ಪ್ಲೈನ್ ಸಂಪರ್ಕಿಸಿ ಮಾಹಿತಿ ನೀಡುವಂತೆ ಮತ್ತೊಮ್ಮೆ ಎಸ್ಐಟಿ ಮನವಿ ಮಾಡಿದೆ. 6360938947 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ದೂರು ನೀಡಲು ಎಸ್ಐಟಿ ಮನವಿ ಮಾಡಿದೆ. ದೂರು ನೀಡಿದರೆ ಮಾಹಿತಿ ಸಂಗ್ರಹಿಸಲು ಸಿದ್ದರಿದ್ದೇವೆ. ಗುರುತು, ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎಸ್ಐಟಿ ಭರವಸೆ ನೀಡಿದೆ.
ನೇರವಾಗಿ ಅಧಿಕಾರಿಗಳನ್ನೂ ಸಂಪರ್ಕಿಸಿ ದೂರು ನೀಡಹುದು ಎಂದು ಎಸ್ಐಟಿ ಹೇಳಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಹೆಲ್ಪ್ಲೈನ್ ಮೂಲಕ ದಾಖಲಾಗುವ ಹೇಳಿಕೆಗಳನ್ನೂ ಎಸ್ಐಟಿ ಪರಿಗಣಿಸುತ್ತಿದೆ.
ಇನ್ನು ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ ವಿರುದ್ಧದ ಮಹಿಳೆ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಭವಾನಿಯವರ ಕಾರು ಚಾಲಕ ಅಜಿತ್ಗೆ ಎಸ್ಐಟಿ 3ನೇ ಬಾರಿ ನೋಟಿಸ್ ನೀಡಿದೆ. ಈಗಾಗಲೇ ನೀಡಿರುವ 2 ನೋಟಿಸ್ಗೆ ಅಜಿತ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಅಜಿತ್ ವಿಚಾರಣೆ ಮಾಡಿದರೆ ಪ್ರಕರಣಕ್ಕೆ ಸ್ಫೋಟಕ ತಿರುವು ದೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಂತ್ರಸ್ತೆ ವಶಕ್ಕೆ ಪಡೆಯುವ ಮುನ್ನ ವಿಡಿಯೋ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಂತ್ರಸ್ತೆ ವಿಡಿಯೋ ವೈರಲ್ ಮಾಡಿದ್ದು ಅಜಿತ್ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಅಜಿತ್ಗೆ ನೋಟಿಸ್ ನೀಡಲಾಗಿದೆ.