ಅಪಘಾತದಿಂದ ಗಾಯಗೊಂಡ ಯುವತಿಯರು – ನೋವಿನಲ್ಲೂ ಸೆಲ್ಫಿಗೆ ಪೋಸ್ ಕೊಡಲು ಮರೆಯದ ಮಹಿಳಾ ಮಣಿಗಳು!

ಈಗಿನ ಕಾಲದಲ್ಲಿ ಎಲ್ಲರಿಗೂ ಕೈಯಲ್ಲಿ ಫೋನ್ ಇರಲೇಬೇಕು. ಒಂದು ಕ್ಷಣ ಕೈಯಲ್ಲಿ ಫೋನ್ ಇಲ್ಲ ಅಂದ್ರೆ ಪ್ರಪಂಚವೇ ಮುಳುಗಿ ಹೋದಂತೆ ಭಾಸವಾಗುತ್ತದೆ. ದಿನವಿಡೀ ಸೋಶಿಯಲ್ ಮೀಡಿಯಾದಲ್ಲಿ ನೇತಾಡುತ್ತಿರುತ್ತಾರೆ. ರೀಲ್ಸ್ ಪೋಸ್ಟ್ ಅಂತಾ ಅದ್ರಲ್ಲೇ ಕಾಲ ಕಳೆಯುತ್ತಿರುತ್ತಾರೆ. ಇದೀಗ ಇಲ್ಲೊಂದು ಕಡೆ ಯುವತಿಯರಿಗೆ ಅಪಘಾತವಾಗಿದ್ದು, ಆಂಬ್ಯುಲೆನ್ಸ್ ಬರುವವರೆಗೂ ರಸ್ತೆಯಲ್ಲೇ ಕುಳಿತು ಸೆಲ್ಫಿಗೆ ಫೋಸ್ ನೀಡಿದ್ದಾರೆ.
ಇದನ್ನೂ ಓದಿ:ಅಯ್ಯೋ ಪೂನಂ.. ಬಟ್ಟೆ ಎಲ್ಲಮ್ಮ!? – ಬೆತ್ತಲೆ ಫೋಟೋ ಶೇರ್ ಮಾಡಿದ ಬಾಲಿವುಡ್ ನಟಿ!
ಹೌದು, ಅಚ್ಚರಿಯಾದ್ರೂ ಸತ್ಯ. ಈ ವಿಲಕ್ಷಣಕಾರಿ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಯುವತಿಯರು ಕಾರಿನಲ್ಲಿ ಸಂಚರಿಸುತ್ತಿರುವ ವೇಳೆ ಅಪಘಾತವಾಗಿದೆ. ಕಾರಿನಲ್ಲಿದ್ದ ಇಬ್ಬರು ಯುವತಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣ ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಆಂಬ್ಯುಲೆನ್ಸ್ ಬರುವವರೆಗೆ ರಸ್ತೆಯಲ್ಲೇ ಕುಳಿತು ಕಾಯುತ್ತಿದ್ದ ಈ ಯುವತಿರು ಗಾಯಗೊಂಡ ಸ್ಥಿತಿಯಲ್ಲೇ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಅಪಘಾತದ ಮಧ್ಯೆ ಈ ಯವತಿಯರ ಅವತಾರ ಕಂಡು ನೆರೆದಿದ್ದವರು ತಬ್ಬಿಬ್ಬಾಗಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ , ಮೆಕ್ಸಿಕನ್ ನಗರದ ಕ್ಯುರ್ನಾವಾಕಾದ ಬೀದಿಯಲ್ಲಿ ಕಾರು ಅಪಘಾತಗೊಂಡು ಇಬ್ಬರು ಮಹಿಳೆಯರು ಗಾಯಗೊಂಡಿದ್ದರು. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾದಾಗ ಐವರು ಮಹಿಳೆಯರು ಕಾರಿನಲ್ಲಿದ್ದರು. ಆದರೆ ಗಾಯಗೊಂಡಿದ್ದ ಇಬ್ಬರು ಯುವತಿಯರು ಫುಟ್ ಪಾತ್ನಲ್ಲಿ ಕುಳಿತು ಒಟ್ಟಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.
ಈ ಮಧ್ಯೆ, ಅವರ ಕಾರು ರಸ್ತೆಯ ಮಧ್ಯದಲ್ಲಿ ಅದರ ಛಾವಣಿಯ ಮೇಲೆ ಉರುಳಿದ್ದು ಅದರ ಕಿಟಕಿಗಳನ್ನು ಒಡೆದು ಹಾಕಲಾಗಿದೆ. ಅವರೆಲ್ಲರೂ ಮದ್ಯದ ಅಮಲಿನಲ್ಲಿದ್ದ ಶಂಕೆ ವ್ಯಕ್ತವಾಗಿದೆ. ಅಂತಿಮವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾರು ಅಪಘಾತದ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಮೆಕ್ಸಿಕನ್ ಅಧಿಕಾರಿಗಳು ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.