ಸಂಜು Weds ಚಾರು! – ಎಲ್ಲಿ ಶುರುವಾಯ್ತು ಸ್ಯಾಮ್ಸನ್ ಲವ್?
ಸಂಜು ಸ್ಯಾಮ್ಸನ್.. ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಐಪಿಎಲ್ ನಲ್ಲಿ ಒಳ್ಳೆ ಪ್ರದರ್ಶನ ನೀಡ್ತಾ ಇದ್ದಾರೆ.. ಕೂಲ್ ಕ್ಯಾಫ್ಟನ್ ಸಂಜು ತನ್ನ ಪ್ರತಿಭೆಯಿಂದಲೇ ಈಗ ಟೀಂ ಇಂಡಿಯಾದಲ್ಲೂ ಸ್ಥಾನ ಪಡೆದಿದ್ದಾರೆ. ಕೇರಳದ ಹುಡುಗನ ಲವ್ ಸ್ಟೋರಿ ಯಾವ ಸಿನಿಮಾ ಸ್ಟೋರಿಗೂ ಕಡ್ಮೆ ಇಲ್ಲ.. ಸಂಜು ಸ್ಯಾಮ್ಸನ್ ಎದೆಯಲ್ಲಿ ಪ್ರೀತಿ ಹುಟ್ಟಿದ್ದು ಯಾವಾಗ.. ಅವ್ರ ಮಡದಿ ಯಾರು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಚಾರ್ ಧಾಮ್ ಯಾತ್ರೆಯಲ್ಲಿ ಭಕ್ತರ ಸಂಖ್ಯೆ ದುಪ್ಪಟ್ಟು – ದೇಗುಲಗಳ ಬಳಿ ವಿಡಿಯೋ, ರೀಲ್ಸ್ ಗೆ ನಿಷೇಧ
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಯಾವಾಗ್ಲೂ ಫೀಲ್ಡ್ ನಲ್ಲಿ ಕೂಲ್ ಕೂಲ್ ಆಗಿರುವ ಆಟಗಾರ.. ನಗುಮುಖದ ಸಂಜು ತಾಳ್ಮೆಯಿಂದಲೇ ವಿಕೆಟ್ ಕೀಪಿಂಗ್ ಮಾಡ್ತಿರುತ್ತಾರೆ. ಬ್ಯಾಟಿಂಗ್ನಲ್ಲಿ ಒಮ್ಮೆ ಸೆಟ್ ಆದ್ರು ಅಂದ್ರೆ ಮತ್ತೆ ಸಂಜು ಸಿಡಿಲಬ್ಬರ ಎದುರಿಸೋದು ಕಷ್ಟ. ಆಟದ ಜೊತೆಗೆ ಸಂಜು ಸ್ಯಾಮ್ಸನ್ ಪರ್ಸನಲ್ ಲೈಫ್ಕೂಡ ತುಂಬಾನೆ ಇಂಟರೆಸ್ಟಿಂಗ್ ಆಗಿದೆ. ಸಂಜು ಪತ್ನಿ ಚಾರುಲತಾ ಕೂಡ ಕೇರಳದವರು. ಚಾರು ತಿರುವನಂತಪುರಂ ಮೂಲದವರು. ಬಿಎಸ್ಸಿ ಪದವಿ ಮುಗಿಸಿದ್ದ ಚಾರು ನಂತರ ಹೆಚ್ಆರ್ ನಲ್ಲಿ ಪಿಜಿ ಮುಗಿಸಿ, ಉದ್ಯಮಿಯಾಗಿದ್ದರು. ಆದ್ರೆ ಇವರಿಬ್ಬರು ಪರಿಚಯ ಆಗಿದ್ದರ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ.. ಸಂಜು ಸ್ಯಾಮ್ಸನ್ ಮತ್ತು ಚಾರುಲತಾ ಅವರು ತಿರುವನಂತಪುರಂನ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಭೇಟಿಯಾದರು.. ಮೊದಲ ನೋಟಕ್ಕೆ ಸಂಜುಗೆ ಚಾರುಲತಾ ಮೇಲೆ ಲವ್ ಆಗಿದೆ.. ಆ ಕಾಲದಲ್ಲಿ ಫೇಸ್ ಬುಕ್ ತುಂಬಾನೇ ಫೇಮಸ್ ಆಗಿತ್ತು.. ಹೀಗಾಗಿ ಎಲ್ಲರಂತೆ ಸಂಜು ಹಾಗೂ ಚಾರುಲತಾ ಪ್ರೀತಿಗೂ ಫೇಸ್ ಬುಕ್ ಸೇತುವೆಯಂತೆ ಇತ್ತು.. ಮೊದಲ ನೋಟಕ್ಕೆ ಮನಸೋತಿದ್ದ ಸಂಜು, ಚಾರುಲತಾಗೆ ಫೇಸ್ ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು.. ಚಾರುಲತಾ ಕೂಡ ಇವ್ರ ಫ್ರೆಂಡ್ ರಿಕ್ವೆಸ್ಟ್ ಬರ್ಲಿ ಅಂತಾ ಕಾಯ್ತಾ ಇದ್ರೋ ಏನೋ.. ಫ್ರೆಂಡ್ ರಿಕ್ವೆಸ್ಟ್ ಬಂದ ಕೂಡಲೇ ಅಸೆಫ್ಟ್ ಮಾಡಿದ್ದಾರೆ.. ಅಲ್ಲಿಂದಲೇ ಒಂದು ಮುದ್ದಾದ ಪ್ರೇಮಕಥೆ ಪ್ರಾರಂಭವಾಯಿತು.
ಸಂಜು ಸ್ಯಾಮ್ಸನ್ ಮತ್ತು ಚಾರುಲತಾ ಮದುವೆಯಾಗಲು ಮತ್ತು ಜೀವನವನ್ನು ಒಟ್ಟಿಗೆ ಕಳೆಯಲು ನಿರ್ಧರಿಸುವ ಮೊದಲು ಐದು ವರ್ಷಗಳ ಕಾಲ ಡೇಟಿಂಗ್ ಮಾಡ್ತಾ ಬಂದಿದ್ರು.. ಡಿಸೆಂಬರ್ 22, 2018 ರಂದು ಇಬ್ಬರು ಮನೆಯವರನ್ನು ಒಪ್ಪಿಸಿ ಕೇರಳದ ಕೋವಲಂನಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು… ಅವರ ಮದುವೆಯಲ್ಲಿ ಸಂಜುಸ್ಯಾಮ್ಸನ್ಗೆ ಐಪಿಎಲ್ನಲ್ಲಿಅವಕಾಶ ಕೊಟ್ಟು ಅವರ ಕ್ರಿಕೆಟ್ ಕೆರಿಯರ್ ಅನ್ನೇಬದಲಿಸಿದ್ದ ರಾಹುಲ್ ದ್ರಾವಿಡ್ ಕೂಡ ಭಾಗಿಯಾಗಿದ್ದರು.. ಸಂಜು ಸ್ಯಾಮ್ಸನ್ ಕ್ರಿಶ್ಚಿಯನ್ ಮತ್ತು ಚಾರುಲತಾ ಹಿಂದೂ ನಾಯರ್ ಆಗಿದ್ದಾರೆ. ಆದ್ದರಿಂದ ಅವರ ವಿವಾಹವನ್ನು ವಿಶೇಷ ವಿವಾಹ ಕಾಯ್ದೆಯಡಿ ವಿಧಿವತ್ತಾಗಿ ಮಾಡಲಾಗಿತ್ತು. ಚಾರುಲತಾ ಇತರ ಕ್ರಿಕೆಟರ್ ಪತ್ನಿಯರಂತೆ ಅಲ್ಲ, ಯಾವಾಗಲೂ ಇವರು ಪ್ರಚಾರದಿಂದ ದೂರ ಇರುತ್ತಾರೆ ಮತ್ತು ತನ್ನ ಗಂಡನ ಯಶಸ್ಸಿನಿಂದ ಗಮನ ಸೆಳೆಯಲು ಪ್ರಯತ್ನಿಸುವುದಿಲ್ಲ. ಸ್ಟೇಡಿಯಂನಲ್ಲು ಚಾರು ಕಾಣಿಸಿಕೊಳ್ಳೊದು ಕಡಿಮೆ. ಆದರೆ Instagram ನಲ್ಲಿ ಮಾತ್ರ ತಮ್ಮ ಹಾಲಿಡೇ ಮತ್ತು ವಿಶೇಷ ಸಂದರ್ಭಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.