ಆರ್‌ಸಿಬಿ ಮತ್ತು ಸಿಎಸ್‌ಕೆ ಕದನಕ್ಕೆ ಕೌಂಟ್‌ಡೌನ್ – RCBಗೆ ಧೋನಿ, ಜಡ್ಡು ಭಯ..!

ಆರ್‌ಸಿಬಿ ಮತ್ತು ಸಿಎಸ್‌ಕೆ ಕದನಕ್ಕೆ ಕೌಂಟ್‌ಡೌನ್ – RCBಗೆ ಧೋನಿ, ಜಡ್ಡು ಭಯ..!

ಆರ್‌ಸಿಬಿ ಮತ್ತು ಸಿಎಸ್‌ಕೆ ಕದನಕ್ಕೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಆರ್​​ಸಿಬಿ ತಂಡದಲ್ಲಿ ಇವತ್ತು ಭಾರೀ ಬದಲಾವಣೆ ನಿರೀಕ್ಷೆ ಮಾಡಲಾಗಿದೆ. ಸ್ಫೋಟಕ ಬ್ಯಾಟ್ಸ್​​ಮನ್ ವಿಲ್ ಜಾಕ್ಸ್ ಹಾಗೂ ಟೋಪ್ಲಿ ಇವತ್ತು ಆರ್​ಸಿಬಿ ಟೀಮ್‌ನಲ್ಲಿ ಇಲ್ಲ. ಹೀಗಾಗಿ ವಿಲ್ ಜಾಕ್ಸ್ ಸ್ಥಾನವನ್ನು ಆಸ್ಟ್ರೇಲಿಯಾದ ಆಲ್​ರೌಂಡರ್ ಮ್ಯಾಕ್ಸ್​ವೆಲ್ ತುಂಬುವ ಭರವಸೆಯಿದೆ. ಜೊತೆಗೆ ವೇಗಿ ವೈಶಾಖ್ ವಿಜಯ್ ಕೂಡ ಪ್ಲೇಯಿಂಗ್ -11ರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಆರ್‌ಸಿಬಿ Vs ಸಿಎಸ್‌ಕೆ ಹೈವೋಲ್ಟೇಜ್‌ ಮ್ಯಾಚ್‌ – ಈ ರಸ್ತೆಯಲ್ಲಿ ಸಂಚಾರದಲ್ಲಿ ಭಾರಿ ಬದಲಾವಣೆ  

ಹೋಮ್‌ಗ್ರೌಂಡ್‌ನಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು. ಆದರೆ, ಚೆನ್ನೈ ತಂಡವನ್ನು ಲೈಟ್ ಆಗಿ ತೆಗೆದುಕೊಳ್ಳೋಕೆ ಚಾನ್ಸೇ ಇಲ್ಲ. ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಫಿನಿಷರ್​ ಧೋನಿ ಹಾಗೂ ರವೀಂದ್ರ ಜಡೇಜಾ ಭಯವಿದೆ. ಯಾಕಂದ್ರೆ, ಬೆಂಗಳೂರಿನಲ್ಲಿ ಧೋನಿ ದರ್ಬಾರ್ ಜೋರಾಗಿದೆ. ಚಿನ್ನಸ್ವಾಮಿಯಲ್ಲಿ 413 ರನ್ ಸಿಡಿಸಿರುವ ಧೋನಿ, 82.6ರ ಅವರೇಜ್​ ಹೊಂದಿದ್ದಾರೆ. ಮತ್ತೊಂದೆಡೆ ಬೌಲಿಂಗ್​ನಲ್ಲಿ ಜಡ್ಡು ವಿಲನ್ ಆಗಿ ಕಾಡುವ ಸಾಧ್ಯತೆ ಇದೆ. ಯಾಕಂದ್ರೆ, ಐಪಿಎಲ್​ನಲ್ಲಿ ಗ್ಲೆನ್​​ ಮ್ಯಾಕ್ಸ್​ವೆಲ್​​ರನ್ನ 6 ಬಾರಿ ಔಟ್​​ ಮಾಡಿರೋ ಜಡೇಜಾ, ಕೊಹ್ಲಿಗೂ ಕಂಟಕವಾಗಿದ್ದಾರೆ.

ಇನ್ನು ಚೆನ್ನೈ ಟೀಮ್‌ಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಹತ್ವದ ಪಂದ್ಯ. ಚೆನ್ನೈ ಟೀಮ್‌ನಲ್ಲೂ ಕೂಡಾ ಬದಲಾವಣೆ ಕಂಡು ಬರಲಿದೆ. ಸ್ಟಾರ್ ವೇಗಿ ದೀಪಕ್ ಚಹಾರ್ ಇವತ್ತು ಟೀಮ್‌ಗೆ ಜಾಯ್ನ್ ಆಗಬಹುದು ಎನ್ನಲಾಗ್ತಿದೆ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ರೂ. 14 ಕೋಟಿಗೆ ಸಹಿ ಮಾಡಿದ ಚಹಾರ್, ಮೇ 1 ರಿಂದ ಸಿಎಸ್‌ಕೆ ಪರ ಆಡಿಲ್ಲ. ಇಂಜುರಿಗೆ ತುತ್ತಾದ ಪರಿಣಾಮ ಅವರು ಪಂದ್ಯದಿಂದ ಹೊರಗುಳಿದಿದ್ದರು. ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಈಗ ಚಹಾರ್ ಹಂಚಿಕೊಂಡಿದ್ದಾರೆ. ಹೀಗಾಗಿ ಇವತ್ತು ಚಹರ್ ಎಂಟ್ರಿ ಗ್ಯಾರಂಟಿ. ಮುಂಬೈ ವಿರುದ್ಧದ ಪಂದ್ಯದಲ್ಲಿ ಗೆಲುವಿನೊಂದಿಗೆ ಲಕ್ನೋ ತಂಡ ಈ ಬಾರಿಯ ಐಪಿಎಲ್‌ಗೆ ವಿದಾಯ ಹೇಳಿದೆ. ಆದ್ರೆ, ಈ ಗೆಲುವಿನ ಬೆನ್ನಲ್ಲೇ ಎಲ್​​ಎಸ್​ಜಿ ತಂಡವು ಪಾಯಿಂಟ್ಸ್​ ಟೇಬಲ್​ನಲ್ಲಿ ಒಂದು ಸ್ಥಾನ ಜಿಗಿತ ಕಂಡಿದೆ. 7ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಜಂಪ್ ಆಗಿದೆ. ಇನ್ನು, ನಮ್ಮ ಆರ್​ಸಿಬಿ 7ನೇ ಸ್ಥಾನಕ್ಕೆ ಕುಸಿದಿದೆ. ಇವತ್ತು ಆರ್​ಸಿಬಿ ಎಸ್​ಕೆ ವಿರುದ್ಧ ಪ್ಲೇ-ಆಫ್ ಡಿಸೈಡರ್ ಪಂದ್ಯವನ್ನಾಡಲಿದೆ. ಇವತ್ತಿನ ಪಂದ್ಯದಲ್ಲಿ ಆರ್​ಸಿಬಿ ಸಿಎಸ್​ಕೆ ವಿರುದ್ಧ 18 ರನ್​ಗಳ ಅಂತರ ಅಥವಾ 18.1 ಓವರ್​ ಒಳಗೆ ಗೆಲುವು ಸಾಧಿಸಬೇಕಿದೆ. ಹೀಗಾದರೆ ಆರ್​ಸಿಬಿ ಪ್ಲೇ-ಆಫ್​​ಗೆ ಹೋಗಲಿದೆ.

 

Sulekha