ಹಗಲು ರಾತ್ರಿ ಎನ್ನದೇ ನೂರಾರು ಕುರಿಗಳು ಪ್ರದಕ್ಷಿಣೆ ಹಾಕುತ್ತಿವೆ ಕುರಿಗಳು- ವಿಡಿಯೋ ವೈರಲ್
ಚೀನಾದ ಮಂಗೋಲಿಯಾ ಪ್ರಾಂತ್ಯದಲ್ಲಿ ಆ ಭಾಗದ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ವಿಸ್ಮಯವೊಂದು ಸೆರೆಯಾಗಿದೆ. ಮನುಷ್ಯರ ಸುಳಿವೇ ಇಲ್ಲದ ಕೃಷಿ ಭೂಮಿಯಲ್ಲಿ ನೂರಾರು ಕುರಿಗಳು ವೃತ್ತಾಕಾರವಾಗಿ ಹಗಲು-ಇರುಳು ಎನ್ನದೆ ಸುಮಾರು 14 ದಿನಗಳ ಕಾಲ ಪ್ರದಕ್ಷಿಣೆ ಹಾಕಿದ್ದು, ಇದೀಗ ಈ ದೃಶ್ಯ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ನೂರಾರು ಕುರಿಗಳು ವೃತ್ತಾಕಾರವಾಗಿ ಸುತ್ತುತ್ತಿದ್ದರೆ, ವೃತ್ತದ ಹೊರಗಡೆ ಕೆಲವು ಕುರಿಗಳು ವೀಕ್ಷಕರಂತೆ ನಿಂತು ನೋಡುತ್ತಿವೆ. ಕೆಲವು ಕುರಿಗಳು ಆಗಾಗ ವೃತ್ತದ ಮಧ್ಯ ಭಾಗಕ್ಕೆ ಬಂದು ನಿಲ್ಲುತ್ತವೆ, ಹೊರಗೆ ಹೋಗುತ್ತವೆ. ವೃತ್ತದ ಮಧ್ಯೆ ಬಂದು ನಿಲ್ಲುವ ಕುರಿಗಳು ಸ್ಥಬ್ಧವಾದಂತೆ ಕಂಡು ಬರುವುದನ್ನು ನೋಡಬಹುದು.
ಇದನ್ನೂ ಓದಿ: ತಪ್ಪಿಸಿಕೊಂಡಿದ್ದ ಶ್ವಾನ ಹೋಗಿದ್ದೆಲ್ಲಿ ಗೊತ್ತಾ? ವಿಡಿಯೋ ವೈರಲ್
ಚೀನಾದ ಸರ್ಕಾರಿ ಮಾಧ್ಯಮವಾದ ಪೀಪಲ್ಸ್ ಡೈಲಿಯಲ್ಲಿ ಈ ವಿಡಿಯೋವನ್ನು ಪ್ರಕಟ ಮಾಡಲಾಗಿದ್ದು, ಕುರಿಗಳ ಈ ವರ್ತನೆಯನ್ನು ವಿಚಿತ್ರ ಎಂದೇ ಪೀಪಲ್ಸ್ ಡೈಲಿ ಬಣ್ಣಿಸಿದೆ. ಕುರಿಗಳು ಆರೋಗ್ಯವಂತವಾಗಿದ್ದು, ಅವುಗಳ ಈ ವಿಚಿತ್ರ ವರ್ತನೆಗೆ ಕಾರಣ ತಿಳಿಯುತ್ತಿಲ್ಲ ಎಂದು ವಿವರಿಸಿದೆ.
ಫಾರ್ಮ್ನ ಮಾಲೀಕ ಮಿಯೋ ಕುರಿಗಳ ವರ್ತನೆ ಬಗ್ಗೆ ಮಾತನಾಡಿದ್ದು, ಆರಂಭದಲ್ಲಿ ಕೆಲವು ಕುರಿಗಳು ವೃತ್ತದಲ್ಲಿ ಸುತ್ತಲು ಆರಂಭಿಸುತ್ತವೆ. ಆಗ ಎಲ್ಲ ಕುರಿಗಳೂ ಈ ವೃತ್ತಕ್ಕೆ ಸೇರ್ಪಡೆಗೊಳ್ಳುತ್ತವೆ ಎಂದು ಕುರಿಗಳ ಮಾಲೀಕ ವಿವರಿಸಿದ್ದಾರೆ. ಕುರಿಗಳ ಫಾರ್ಮ್ನಲ್ಲಿ ನೂರಾರು ಕುರಿಗಳನ್ನು ಪ್ರತ್ಯೇಕ ಬ್ಲಾಕ್ಗಳಲ್ಲಿ ಇಡಲಾಗಿದೆ. ಆದರೆ ಎಲ್ಲಾ ಬ್ಲಾಕ್ಗಳಲ್ಲೂ ಕುರಿಗಳು ಈ ರೀತಿ ವರ್ತಿಸುತ್ತಿಲ್ಲ. ಕೇವಲ 13ನೇ ನಂಬರ್ ಬ್ಲಾಕ್ನಲ್ಲಿ ಮಾತ್ರ ಕುರಿಗಳು ಈ ರೀತಿ ವರ್ತಿಸುತ್ತಿವೆ ಎಂದು ಹೇಳಿದ್ದಾರೆ.
The great sheep mystery! Hundreds of sheep walk in a circle for over 10 days in N China’s Inner Mongolia. The sheep are healthy and the reason for the weird behavior is still a mystery. pic.twitter.com/8Jg7yOPmGK
— People’s Daily, China (@PDChina) November 16, 2022
ಕಳೆದ ನವೆಂಬರ್ 4 ರಿಂದಲೂ ಕುರಿಗಳು ಈ ರೀತಿ ವೃತ್ತಾಕಾರವಾಗಿ ಸುತ್ತು ಹಾಕುತ್ತಿವೆ. ಕುರಿಗಳ ಈ ವಿಚಿತ್ರ ವರ್ತನೆಗೆ ಬ್ಯಾಕ್ಟೀರಿಯಾ ಸೋಂಕು ಕಾರಣವಿರಬಹುದೇ ಎಂಬ ಶಂಕೆಗಳೂ ವ್ಯಕ್ತವಾಗುತ್ತಿವೆ. ಕುರಿಗಳು ಒಂದರ ಹಿಂದೆ ಒಂದರಂತೆ ಸಾಗುತ್ತಿದೆ. ಇದಕ್ಕೆ ಈ ರೀತಿ ಪ್ರದಕ್ಷಿಣೆ ಹಾಕಲು ಮಾನಸಿಕ ಸಮಸ್ಯೆ ಇರಬಹುದೆ ಎಂಬ ವ್ಯಾಖ್ಯಾನಗಳನ್ನೂ ಮಾಡಲಾಗುತ್ತಿದೆ.
ಕೋವಿಡ್ಗೆ ಚೀನಾ ದೇಶವೇ ಮೂಲ ಎಂಬ ಅಪವಾದಗಳ ಹಿನ್ನೆಲೆಯಲ್ಲಿ ಕುಖ್ಯಾತವಾಗಿರುವ ಕಮ್ಯುನಿಸ್ಟ್ ರಾಷ್ಟ್ರದಲ್ಲಿ ಈ ರೀತಿಯಾದ ವಿಚಿತ್ರ ವರ್ತನೆ ತೋರುವ ಕುರಿಗಳ ವಿಡಿಯೋ ವಿಶ್ವಾದ್ಯಂತ ವೈರಲ್ ಆಗಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪಶು ತಜ್ಞರು, ಪ್ರಾಣಿ ಮನೋ ವಿಜ್ಞಾನಿಗಳು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ. ಅಲ್ಲದೇ ಈ ಕುರಿಗಳ ವರ್ತನೆಯನ್ನು ವೀಕ್ಷಿಸಲು ಜನರು, ಮಾಧ್ಯಮ ಪ್ರತಿನಿಧಿಗಳು ತಂಡೋಪ ತಂಡವಾಗಿ ಆಗಮಿಸುತ್ತಿದ್ದು, ಕುರಿಗಳ ಈ ವಿಚಿತ್ರ ವರ್ತನೆ ಫಾರ್ಮ್ ಮಾಲೀಕರಿಗೂ ತಲೆ ನೋವಾಗಿ ಪರಿಣಮಿಸಿದೆ.