ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ – ವಕೀಲ ದೇವರಾಜೇಗೌಡ 3 ದಿನ ಪೊಲೀಸ್ ಕಸ್ಟಡಿಗೆ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ – ವಕೀಲ ದೇವರಾಜೇಗೌಡ 3 ದಿನ ಪೊಲೀಸ್ ಕಸ್ಟಡಿಗೆ

ಹಾಸನ ಪೆನ್‌ ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅರೆಸ್ಟ್‌ ಆಗಿದ್ದರು. ಇದೀಗ ದೇವರಾಜೇಗೌಡ ಅವರನ್ನು 3 ದಿನ ಪೊಲೀಸ್ ಕಸ್ಟಡಿಗೆ ನೀಡಿ  ಹೊಳೆನರಸೀಪುರ ಜೆಎಂಎಫ್​ಸಿ ಕೋರ್ಟ್ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ : ಕ್ಯೂನಲ್ಲಿ ನಿಲ್ಲದೇ ಮತದಾನಕ್ಕೆ ಮುಂದಾದ ಶಾಸಕ – ಕಪಾಳ ಮೋಕ್ಷ ಮಾಡಿದ ಮತದಾರ!

ಶನಿವಾರ ಪೆನ್ ಡ್ರೈವ್‌ ಕೇಸ್‌ಗೆ ಸಂಬಂಧಪಟ್ಟಂತೆ ಅರೆಸ್ಟ್‌ ಮಾಡಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಹೊಳೆನರಸೀಪುರ ಪೊಲೀಸರು ಕಸ್ಟಡಿಗೆ ಒಪ್ಪಿಸುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೊಳೆನರಸೀಪುರ ಜೆಎಂಎಫ್​ಸಿ ಕೋರ್ಟ್‌ ನ್ಯಾಯಾಧೀಶ ಪ್ರವೀಣ್​ ಅರ್ಜಿ ವಿಚಾರಣೆ ನಡೆಸಿದ್ದು, ಮೇ 16ರ ರಾತ್ರಿವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.

ಕಿಡ್ನ್ಯಾಪ್ ಕೇಸ್‌ – ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ಇನ್ನು ಕೆ.ಆರ್ ನಗರ ಸಂತ್ರಸ್ತೆ ಮಹಿಳೆ ಕಿಡ್ನಾಪ್ ಕೇಸ್ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು 42 ನೇ ಎಸಿಎಂಎಂ ನ್ಯಾಯಾಲಯಕ್ಕೆ ಎಸ್​ಐಟಿ ಅಧಿಕಾರಿಗಳು ಕರೆತಂದಿದ್ದರು. ಸಂತ್ರಸ್ತೆ ಕಿಡ್ನಾಪ್​​ಗೆ ಸಹಕರಿಸಿದ್ದ ಆರೋಪ ಹಿನ್ನಲೆ ಬಂಧಿಸಲಾಗಿದೆ. ಮಧು, ಮನು, ಸುಜಯ್ ಮೂವರು ಸತೀಶ್ ಬಾಬುಗೆ ಸಹಾಯ ಮಾಡಿದ ಆರೋಪ ಹಿನ್ನಲೆ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು.

ಇದೀಗ ಸತೀಶ್ ಬಾಬು ಹೊರತು ಪಡಿಸಿ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಾಲ್ಕು ದಿನ ಸತೀಶ್ ಬಾಬು ರನ್ನು ಎಸ್ಐಟಿ ಪೊಲೀಸ್ ಕಸ್ಟಡಿಗೆ ಕೇಳಿದೆ. ಇನ್ನು ವಿಚಾರಣೆ ಬಾಕಿ ಇರುವ ಹಿನ್ನಲೆ ನಾಲ್ಕು ದಿನ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ.

Shwetha M