ಪ್ರಜ್ವಲ್ ಪೆನ್ಡ್ರೈವ್ ಕೇಸ್ ನಲ್ಲಿ ಪ್ರೀತಂಗೌಡ ಆಪ್ತರು ಆರೆಸ್ಟ್! – ದಳಪತಿಗಳಿಗೆ ಮತ್ತಷ್ಟು ಸಂಕಷ್ಟ

ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಟ್ವಿಸ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಎಸ್ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಮಾಜಿ ಶಾಸಕ ಪ್ರೀತಂಗೌಡ ಆಪ್ತರು ಎನ್ನಲಾಗಿರುವ ಇಬ್ಬರನ್ನು ಎಸ್ಐಟಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಇದೀಗ ಬಂಧಿತರನ್ನ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಇದನ್ನೂ ಓದಿ: ಅಯ್ಯೋ.. ಇದೆಂಥಾ ಹುಚ್ಚಾಟ? – ಪ್ಯಾರಾಚೂಟ್ ಇಲ್ಲದೆ 12,500 ಅಡಿಯಿಂದ ಜಿಗಿದ ವ್ಯಕ್ತಿ
ರಾಜ್ಯದಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ವಿಡಿಯೋ ಭಾರಿ ವೈರಲ್ ಆಗಿತ್ತು. ಹಾಸನದಾದ್ಯಂತ ಪೆನ್ಡ್ರೈವ್ ಹಂಚಿಕೆ ಮಾಡಲಾಗಿತ್ತು. ಹಾಸನದಲ್ಲಿ ಪೆನ್ಡ್ರೈವ್ ಹಂಚಿಕೆ ಮಾಡಿದ್ದು ಯಾರು ಅಂತಾ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಪ್ರಜ್ವಲ್ ಪೆನ್ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಚೇತನ್ ಹಾಗೂ ಲಿಖಿತ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಈ ಇಬ್ಬರು ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಹಾಕಿದ್ದರು. ಈ ಅರ್ಜಿ ವಜಾಗೊಂಡಟ ಬೆನ್ನಲ್ಲೇ ಇಬ್ಬರನ್ನೂ ತನಿಖಾಧಿಕಾರಿಗಳು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಜೊತೆಗೆ ಕೋರ್ಟ್ ಇಬ್ಬರನ್ನೂ ಜೈಲಿಗೆ ಕಳುಹಿಸಿದೆ..
ಇನ್ನು ಬಂಧಿತ ಆರೋಪಿಗಳನ್ನ ಪೊಲೀಸರು ಕರೆದೊಯ್ಯುತ್ತಿದ್ದಾಗ ಲಿಖಿತ್ ತಂದೆ ಕೂಡಾ ಅಲ್ಲಿಗೆ ಧಾವಿಸಿದ್ರು.. ಇದೇ ವೇಳೆ ಲಿಖಿತ್ಗೆ ಆತನ ತಂದೆ ಪ್ರಕಾಶ್, ಮೆಡಿಕಲ್ ಟೆಸ್ಟ್ಗೆ ಕರೆದೊಯ್ಯುವಾಗ ಹೆದರಬೇಡ ಅಂತ ಧೈರ್ಯ ತುಂಬಿದ್ದಾರೆ. ಅಲ್ಲದೇ ಪ್ರಪಂಚದಲ್ಲಿ ಆಗಬಾರದೇನು ಆಗಿಲ್ಲ ಎನ್ನುತ್ತಾ ಲಿಖಿತ್ ತಂದೆ ಅಭಯ ನೀಡಿದ್ದಾರೆ.
ಪ್ರಜ್ವಲ್ ಪೆನ್ಡ್ರೈವ್ ವೈರಲ್ ಪ್ರಕರಣವನ್ನ ಎಸ್ಐಟಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಅದರ ಮೂಲ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಬಂಧಿತರಲ್ಲಿ ಆರೋಪಿ ಚೇತನ್ ಹಾಸನದ ಮಾಜಿ ಸಚಿವರ ಕಚೇರಿಯಲ್ಲಿ ಕೆಲಸ ಮಾಡಿದ್ದ ಅನ್ನೋದು ಗೊತ್ತಾಗಿದೆ. ಇದೀಗ ಇಡೀ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.