ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈಗೆ ಐದು ವಿಕೆಟ್ಗಳ ಗೆಲುವು – ಸಿಎಸ್ಕೆ ಗೆ ಪ್ಲೇ ಆಫ್ ಹಾದಿ ಮತ್ತಷ್ಟು ಹತ್ತಿರ
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸಿಎಸ್ಕೆ ಗೆದ್ದು ಬೀಗಿದೆ. ಸಿಎಸ್ಕೆ, ರಾಜಸ್ಥಾನ್ ವಿರುದ್ಧ 5 ವಿಕೆಟ್ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ ಪ್ಲೇ ಆಫ್ ಹಾದಿಗೆ ಮತ್ತಷ್ಟು ಹತ್ತಿರವಾಗಿದೆ.
ಇದನ್ನೂ ಓದಿ: RCB ಕ್ಯಾಪ್ಟನ್ ಫಾಫ್ ಫ್ಯಾಮಿಲಿ ಹೇಗಿದೆ? – ಬ್ಯೂಟಿಕ್ವೀನ್ ಗೆ ಡುಪ್ಲೆಸಿಸ್ ಕ್ಲೀನ್ ಬೋಲ್ಡ್
ಚೆನ್ನೈನಲ್ಲಿ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ಫೀಲ್ಡಿಂಗ್ ಮಾಡುವ ಅವಕಾಶವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಟ್ಟುಕೊಟ್ಟಿತು. ನಿಧಾನಗತಿಯ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ತಂಡಕ್ಕೆ ಅಗ್ರ ಕ್ರಮಾಂಕದ ಬ್ಯಾಟರ್ಗಳು ಕೈಕೊಟ್ಟ ಪರಿಣಾಮ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ 18.2 ಓವರ್ಗಳಲ್ಲೇ 5 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ಪ್ಲೇ-ಆಫ್ ಪ್ರವೇಶ ಮಾಡಲು ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಸಿಎಸ್ಕೆ ಈ ಗುರಿಯನ್ನು ಐದು ವಿಕೆಟ್ ಕಳೆದುಕೊಂಡು 18.2 ಓವರ್ನಲ್ಲಿ ಮುಟ್ಟಿತು. ಸಿಎಸ್ಕೆ ಗೆಲುವಿಗೆ ನಾಯಕ ಗಾಯಕ್ವಾಡ್ ಜವಾಬ್ದಾರಿಯುತ ಆಟ ಆಡಿದರು. ವಿಕೆಟ್ಗಳು ಬೀಳುತ್ತಿದ್ದ ಸಂದರ್ಭದಲ್ಲಿ ಕ್ರೀಸ್ನಲ್ಲಿ ಬಲವಾಗಿ ನಿಂತು 41 ಬಾಲ್ನಲ್ಲಿ 42 ರನ್ಗಳಿಸಿದರು. ರಾಚಿನ್ ರವೀಂದ್ರ 27, ಮಿಚೆಲ್ 22, ಅಲಿ 10, ದುಬೆ 18 ರನ್ಗಳಿಸಿದರು.
ಕೇವಲ 141 ರನ್ಗಳಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಟ್ಟಿಹಾಕುವಲ್ಲಿ ಸಿಎಸ್ಕೆ ಯಶಸ್ವಿಯಾಗಿತ್ತು. ಸಿಎಸ್ಕೆ ಪರ ಸಿಮರ್ಜೀತ್ ಸಿಂಗ್ ಮೂರು ವಿಕೆಟ್ ಪಡೆದು ಮಿಂಚಿದರು. ನಾಲ್ಕು ಓವರ್ ಮಾಡಿ ಕೇವಲ 26 ರನ್ ನೀಡಿದರು. ಇನ್ನು ರವೀಂದ್ರ ಜಡೇಜಾ ಕೂಡ ಅದ್ಭುತ ಬೌಲಿಂಗ್ ಮಾಡಿದರು ನಾಲ್ಕು ಓವರ್ ಮುಗಿಸಿ 24 ರನ್ ನೀಡಿದರು. ಇನ್ನು ತುಷಾರ್ ದೇಶಪಾಂಡೆ ಕೂಡ ಎರಡು ವಿಕೆಟ್ ಪಡೆದು ಮಿಂಚಿದರು. ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 24, ಬಟ್ಲರ್ 21, ಸ್ಯಾಮ್ಸನ್ 15, ಪರಾಗ್ 47, ಧ್ರುವ್ ಜರೇಲ್ 28 ರನ್ಗಳಿಸಿದರು. ಈ ಮೂಲಕ ನಿಗದಿತ 20 ಓವರ್ಗೆ 5 ವಿಕೆಟ್ ಕಳೆದುಕೊಂಡ ರಾಜಸ್ಥಾನ್ ರಾಯಲ್ಸ್ ಕೇವಲ 141 ರನ್ಗೆ ಇನ್ನಿಂಗ್ಸ್ ಮುಗಿಸಿತ್ತು.