4 ಪಂದ್ಯ ಗೆಲುವು.. 2 ಸವಾಲು – RCB ಪ್ಲೇ ಆಫ್ ಹಾದಿ ತೆರೆಯಿತಾ?
ಕೊಹ್ಲಿ LOGIC.. ಬೆಂಗಳೂರಿಗೆ CUP?
ಫಸ್ಟ್ ಆಫ್ನಲ್ಲಿ ಬಾರೀ ನಿರಾಸೆ ಮೂಡಿಸಿದ್ದ ಆರ್ಸಿಬಿ ಸೆಕೆಂಡ್ ಆಫ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದೆ. ಸತತ ನಾಲ್ಕು ಪಂದ್ಯಗಳಲ್ಲಿ ರಣರೋಚಕ ಜಯಭೇರಿ ಬಾರಿಸಿದೆ. ಅದ್ರಲ್ಲೂ ಗುರುವಾರದ ಪಂದ್ಯದಲ್ಲಿ ಪಂಜಾಬ್ ತಂಡವನ್ನ ಆಲ್ಔಟ್ ಮಾಡಿದ ಆರ್ಸಿಬಿ ಆಟಗಾರರು ಭರ್ಜರಿ 60 ರನ್ಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಈ ಮೂಲಕ ಪ್ಲೇ ಆಫ್ ಕನಸನ್ನ ಇನ್ನೂ ಜೀವಂತವಾಗಿ ಇರಿಸಿಕೊಂಡಿದ್ದಾರೆ. ಇಲ್ಲಿ ಇನ್ನೊಂದು ಮುಖ್ಯವಾದ ವಿಚಾರ ಅಂದ್ರೆ ಮೇ 4ರಂದು ನಡೆದ ಗುಜರಾತ್ ವಿರುದ್ಧದ ಪಂದ್ಯದವರೆಗೂ ಪಾಯಿಂಟ್ಸ್ ಟೇಬಲ್ನಲ್ಲಿ ಆರ್ಸಿಇಬಿ 10ನೇ ಸ್ಥಾನದಲ್ಲಿತ್ತು. ಆದ್ರೆ ಗಿಲ್ ನೇತೃತ್ವದ ಜಿಟಿ ತಂಡವನ್ನ ಚಿನ್ನಸ್ವಾಮಿ ಅಂಗಳದಲ್ಲೇ ಸೋಲಿಸುವ ಮೂಲಕ 7ನೇ ಸ್ಥಾನಕ್ಕೆ ಜಿಗಿದಿತ್ತು. ಇದೀಗ ಪಂಜಾಬ್ ವಿರುದ್ಧದ ಪಂದ್ಯದಲ್ಲೂ ಗೆಲುವು ಸಾಧಿಸಿದ್ದು, ಪ್ಲೇ ಆಫ್ ಚಾನ್ಸ್ನ ದಿಢೀರ್ ಏರಿಕೆ ಮಾಡಿಕೊಂಡಿದೆ.
ಇದನ್ನೂ ಓದಿ: LSG ನಾಯಕತ್ವಗೆ ಕೆಎಲ್ ಗುಡ್ ಬೈ? – RCB ಗೆ ಬರ್ತಾರಾ ಕೆ.ಎಲ್ ರಾಹುಲ್?
ಪ್ಲೇ ಆಫ್ ಚಾನ್ಸ್ ದುಪ್ಪಟ್ಟು!
ಐಪಿಎಲ್ ಸೀಸನ್ 17 ಆರಂಭದ ಪಂದ್ಯಗಳಲ್ಲಿ ಆರ್ಸಿಬಿ ಪ್ರದರ್ಶನವೇನು ಚೆನ್ನಾಗಿರಲಿಲ್ಲ. ಪಂಜಾಬ್ ವಿರುದ್ಧದ ಗೆಲುವು ಬಿಟ್ರೆ ಸತತ 6 ಪಂದ್ಯಗಳನ್ನ ಕೈ ಚೆಲ್ಲಿಕೊಂಡಿತ್ತು. ಹೀಗಾಗಿ ಆರ್ಸಿಬಿ ಪ್ಲೇ ಆಫ್ ಅವಕಾಶ ಜಸ್ಟ್ 3 ಪರ್ಸೆಂಟ್ ಅಷ್ಟೇ ಇತ್ತು. ಆದ್ರೆ ಗುರುವಾರದ ಗೆಲುವಿನಿಂದ ಆರ್ಸಿಬಿ ಪ್ಲೇ ಆಫ್ ಚಾನ್ಸ್ ಧಿಡೀರ್ ಏರಿಕೆಯಾಗಿದೆ. ನೋಡ ನೋಡುತ್ತಲೇ ಆರ್ಸಿಬಿ ಪ್ಲೇಆಫ್ ರೇಸ್ನಲ್ಲಿ ಮುಂದೆ ಮುಂದೆ ಹೋಗುತ್ತಿದೆ. ಧರ್ಮಶಾಲಾದಲ್ಲಿ ನಡೆದ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಆರ್ಸಿಬಿ ಸೋಲಿಸಿದೆ. ಈ ಮೂಲಕ ಆರ್ಸಿಬಿ ಪ್ಲೇಆಫ್ ಹಾದಿ ಇನ್ನೂ ತೆರೆದಿದೆ. 3 ಪರ್ಸೆಂಟ್ ಇದ್ದ ಪ್ಲೇ ಆಫ್ ಚಾನ್ಸ್ ಇದೀಗ 16% ಗೆ ಏರಿಕೆಯಾಗಿದೆ. ಉಳಿದ ಎರಡು ಪಂದ್ಯಗಳನ್ನು ಉತ್ತಮ ರನ್ರೇಟ್ನೊಂದಿಗೆ ಗೆದ್ರೆ ಖಂಡಿತ ಆರ್ಸಿಬಿ ಒಂದು ಅವಕಾಶ ಇದ್ದೇ ಇರುತ್ತೆ. ಒಂದು ವೇಳೆ ಅಂದುಕೊಂಡಂತೆ 2 ಮ್ಯಾಚ್ಗಳನ್ನ ಬಾರೀ ಅಂತರದಲ್ಲಿ ಗೆದ್ದು ಇತರೆ ತಂಡಗಳ ಸೋಲು ಗೆಲುವು ತಾಳೆ ಆದ್ರೆ ಆರ್ಸಿಬಿ ಪ್ಲೇಆಫ್ ಆಡೋದ್ರಲ್ಲಿ ಡೌಟೇ ಇಲ್ಲ. ಸದ್ಯ ಏಳನೇ ಸ್ಥಾನದಲ್ಲಿ ಇರುವ ಬೆಂಗಳೂರು ತಂಡ ನಾಲ್ಕನೇ ಸ್ಥಾನಕ್ಕೆ ಹೋಗಲಿದೆ ಎಂದು ನಿರೀಕ್ಷಿಸಲಾಗಿದೆ.
ಸದ್ಯದ ಪಾಯಿಂಟ್ಸ್ ಟೇಬಲ್ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಟಾಪ್ನಲ್ಲಿವೆ. ಈ ಎರಡು ತಂಡಗಳು ಈಗಾಗಲೇ 16 ಅಂಕಗಳನ್ನು ಗಳಿಸಿರೋದ್ರಿಂದ ಪ್ಲೇ-ಆಫ್ ಹಾದಿ ಸುಗಮವಾಗಿದೆ. ಜೊತೆಗೆ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಪ್ಲೇ-ಆಫ್ ಪ್ರವೇಶಿಸಲು ಪೈಪೋಟಿ ನಡೆಸುತ್ತಿವೆ. ಮತ್ತೊಂದೆಡೆ 2022ರಲ್ಲಿ ಚೊಚ್ಚಲ ಸೀಸನ್ನಲ್ಲೇ ಚಾಂಪಿಯನ್ ಆಗಿದ್ದ ಗುಜರಾತ್ ಟೈಟನ್ಸ್ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ತಂಡ ಪ್ಲೇ ಆಫ್ಗೆ ಬರೋ ಸಾಧ್ಯತೆ ಕಡಿಮೆ ಇದೆ. ಹಾಗೇ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಕೂಡ ರೇಸ್ನಿಂದ ಔಟ್ ಆಗಿದ್ದಾರೆ. ಆರ್ಸಿಬಿಯ ಹಾದಿ ಕಠಿಣವಾಗಿದ್ರೂ ತನ್ನ ಮುಂದಿನ 2 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಸದ್ಯ ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್ಸಿಬಿ ತಂಡವು ಆಡಿರುವ 12 ಪಂದ್ಯಗಳ ಪೈಕಿ 5 ಪಂದ್ಯಗಳನ್ನು ಗೆದ್ದಿದ್ದು 10 ಪಾಯಿಂಟ್ಸ್ ಗಳಿಸಿದೆ. 10 ಪಾಯಿಂಟ್ಸ್ ಗಳಿಸಿರುವ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ 7ನೇ ಸ್ಥಾನದಲ್ಲಿದೆ. ಖುಷಿಯ ವಿಚಾರ ಏನೆಂದರೆ ನೆಟ್ ರನ್ ರೇಟ್ ಉತ್ತಮವಾಗಿದೆ. ಮೇ 12ರಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮೇ 18ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ಸಿಬಿ ಸೆಣಸಾಟ ನಡೆಸಲಿದೆ. ಈ ಎರಡೂ ಪಂದ್ಯಗಳನ್ನು ಆರ್ಸಿಬಿ ಗೆಲ್ಲಬೇಕು. ಆಗ ಮಾತ್ರ ಆರ್ಸಿಬಿ ಪಾಯಿಂಟ್ಸ್ 14ಕ್ಕೇ ಏರಿಕೆ ಆಗಲಿದೆ. 14 ಅಂಕ ಗಳಿಸಿದರೂ ಆರ್ಸಿಬಿ ಭವಿಷ್ಯ ಹೈದರಾಬಾದ್, ಚೆನ್ನೈ, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಪಂದ್ಯಗಳ ಫಲಿತಾಂಶವನ್ನು ಅವಲಂಭಿಸಿರುತ್ತದೆ. ಫೈನಲಿ ಆರ್ಸಿಬಿ ಪ್ಲೇ ಆಫ್ಗೆ ಹೋಗ್ಬೇಕು ಅಂದ್ರೆ ಬರೀ ಆರ್ಸಿಬಿ ಗೆದ್ರೆ ಸಾಕಾಗೋದಿಲ್ಲ. ಇತರೆ ತಂಡಗಳು ಸೋಲಬೇಕಾದ ಅವಶ್ಯತೆಯೂ ಇದೆ.