ಬಿಎಸ್‌ವೈ ಪುತ್ರನನ್ನು ಬಂಧಿಸಿ – ರಿಸಲ್ಟ್‌ ಗೂ ಮುನ್ನವೇ ಈಶ್ವರಪ್ಪಗೆ ಸೋಲಿನ ಭಯ?

ಬಿಎಸ್‌ವೈ ಪುತ್ರನನ್ನು ಬಂಧಿಸಿ – ರಿಸಲ್ಟ್‌ ಗೂ ಮುನ್ನವೇ ಈಶ್ವರಪ್ಪಗೆ ಸೋಲಿನ ಭಯ?

ಬಿಎಸ್‌ವೈ ಕುಟುಂಬದ ವಿರುದ್ಧ ಕೆಎಸ್‌ ಈಶ್ವರಪ್ಪ ತೊಡೆತಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು ಆಯ್ತು.. ರಾಜ್ಯದಲ್ಲಿ ಎರಡು ಹಂತದ ಮತದಾನವೂ ಮುಗೀತು.. ಇನ್ನೇನಿದ್ರೂ ರಿಸಲ್ಟ್‌ ಮಾತ್ರ ಬರೋದು ಬಾಕಿ.. ಆದ್ರೂ ಕೂಡ ಈಶ್ವರಪ್ಪ, ಬಿಎಸ್‌ವೈ ಕುಟುಂಬದ ವಿರುದ್ದ ಕಿಡಿಕಾರುತ್ತಲೇ ಇದ್ದಾರೆ.. ಇದೀಗ ಈಗ ಈಶ್ವರಪ್ಪಗೆ ಸೋಲಿನ ಭಯ ಕಾಡುತ್ತಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ. ಮತದಾನಕ್ಕೆ ಮುನ್ನ ಎಲ್ಲಾ ರೀತಿಯ ಷಡ್ಯಂತ್ರವನ್ನು ವಿಶೇಷವಾಗಿ ರಾಘವೇಂದ್ರ ಅವರು ಮಾಡಿದ್ದಾರೆ. ನನ್ನ ವಿರುದ್ಧ ವಾಮಾಚಾರ ನಡೆದಿದೆ. ಯಡಿಯೂರಪ್ಪನವರ ಪುತ್ರನನ್ನು ಬಂಧಿಸಿ ಅಂತಾ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಸ್‌ ಈಶ್ವರಪ್ಪ , ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರು ಜಾತಿ ಹೆಸರಿನಲ್ಲಿ ಮತಯಾಚಿಸಿದ್ದಾರೆ. ಬಿಜೆಪಿ ಮತ್ತು ಹಿಂದುತ್ವದ ವಿಚಾರದಲ್ಲಿ ಜನರು ಜಾಗ್ರತರಾಗಬೇಕು ಎನ್ನುವುದು ನನ್ನ ಸ್ಪರ್ಧೆಯ ಉದ್ದೇಶವಾಗಿತ್ತು, ಹಾಗಾಗಿ ಈ ಚುನಾವಣೆಯನ್ನು ನಾನು ಗೆಲ್ಲುತ್ತೇನೆ.  ಆದರೆ, ಮತದಾನಕ್ಕೆ ಮುನ್ನ ಎಲ್ಲಾ ರೀತಿಯ ಷಡ್ಯಂತ್ರವನ್ನು ವಿಶೇಷವಾಗಿ ರಾಘವೇಂದ್ರ ಅವರು ಮಾಡಿದ್ದಾರೆ. ಚುನಾವಣೆಯಲ್ಲಿ ನಮಗೆ ಸರಿಯಾಗಿ ಪ್ರಚಾರ ಮಾಡಲು ಬಿಡದೇ ಇದ್ದದ್ದು, ಶಿಕಾರಿಪುರದಲ್ಲಿ ನನ್ನ ವಿರುದ್ದ ವಾಮಾಚಾರ ಕೂಡಾ ನಡೆದಿದೆ  ಎಂದು ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ಶಿಕಾರಿಪುರದ ನಮ್ಮ ಕಚೇರಿಯ ಮುಂದೆ ಅರಸಿನ, ಕುಂಕುಮ, ಲಿಂಬೆಹಣ್ಣನ್ನು ಹಾಕಿ ವಾಮಾಚಾರ ನಡೆಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ನನ್ನ ಅನುಮತಿಯಿಲ್ಲದೇ ನನ್ನ ಹಳೆಯ ಫೋಟೋ ಮತ್ತು ವಿಡಿಯೋಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ರಾಘವೇಂದ್ರ ಅವರು ವ್ಯವಸ್ಥಿತವಾಗಿ ಸುಳ್ಳು ಸುದ್ದಿಯನ್ನು ಹರಡಿದ್ದಾರೆ, ಶಿವಮೊಗ್ಗದ ಎಲ್ಲಾ ಕಡೆಯಿಂದ ನನಗೆ ಜನರು ಫೋನ್ ಮಾಡುತ್ತಿದ್ದಾರೆ. ಕೊನೆಯ ಕ್ಷಣದಲ್ಲಿ ಈ ಗೊಂದಲವನ್ನು ರಾಘವೇಂದ್ರ ಹುಟ್ಟುಹಾಕಿದ್ದರಿಂದ ನನಗೆ ಸಾಕಷ್ಟು ಮತಗಳು ಕಮ್ಮಿಯಾಗಿವೆ ಎಂದು ಈಶ್ವರಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ. ರಾಘವೇಂದ್ರ ಅವರ ವ್ಯವಸ್ಥಿತ ಪಿತೂರಿಯಿಂದ ನನಗೆ ಮತಗಳು ಕಮ್ಮಿಬಿದ್ದಿವೆ. ಈಗಾಗಲೇ ಸಂಬಂಧ ಪಟ್ಟವರಿಗೆ ದೂರು ನೀಡಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರು ಜಾತಿ ಹೆಸರಿನಲ್ಲಿ ಮತಯಾಚಿಸಿದ್ದಾರೆ. ಬಿಜೆಪಿ ಮತ್ತು ಹಿಂದುತ್ವದ ವಿಚಾರದಲ್ಲಿ ಜನರು ಜಾಗ್ರತರಾಗಬೇಕು ಎನ್ನುವುದು ನನ್ನ ಸ್ಪರ್ಧೆಯ ಉದ್ದೇಶವಾಗಿತ್ತು, ಹಾಗಾಗಿ ಈ ಚುನಾವಣೆಯನ್ನು ನಾನು ಗೆಲ್ಲುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

Shwetha M