ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂ ಹೊಸ ಪ್ಲಾನ್ – ಗ್ರಾಹಕರಿಗಾಗಿ ವಾಟ್ಸಾಪ್ ನಂಬರ್ ಬಿಡುಗಡೆ
ರಾಜ್ಯದಲ್ಲಿ ಈಗಾಗಲೇ ಮಳೆರಾಯನ ಎಂಟ್ರಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಕೂಡ ಆರಂಭವಾಗಲಿದೆ. ಮಳೆಯಿಂದಾಗಿ ಹಲವು ಕಡೆಗಳಲ್ಲಿ ವಿದ್ಯುತ್ ಸಮಸ್ಯೆಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಸಮಸ್ಯೆ ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ಎಂಟು ಜಿಲ್ಲೆಗಳಿಗೆ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: 17 ವರ್ಷ.. 248 ಪಂದ್ಯ.. 7,805 ರನ್ – ಕಿಂಗ್ ಕೊಹ್ಲಿಗೆ RCBಯೇ ಉಸಿರು!
ಮಳೆಗಾಲದಲ್ಲಿ ಹಲವು ಕಡೆಗಳಲ್ಲಿ ಮರಗಳು ಧರೆಗೆ ಉರುಳುವುದು, ಕೇಬಲ್ ಕಟ್ ಆಗುವುದು, ವಿದ್ಯುತ್ ಕಂಬ ಧರೆಗೆ ಉರುಳುವ ಸಾಧ್ಯತೆ ಇರುತ್ತವೆ. ಹೀಗಾಗಿ ಬೆಸ್ಕಾಂ ಶ್ರೀಘದಲ್ಲೇ ಸಮಸ್ಯೆ ಪರಿಹರಿಸಲು ಪ್ಲಾನ್ ಮಾಡಿಕೊಂಡಿದೆ. ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಯ ಜನರು ಸಮಸ್ಯೆಯನ್ನು ಪೋಟೋ ಸಮೇತ ವಾಟ್ಸಾಪ್ ಮಾಡಿದರೆ ಕೂಡಲೇ ಪರಿಹಾರ ಒದಗಿಸಲಾಗುತ್ತದೆ. ಎಂಟು ಜಿಲ್ಲೆಗಳಿಗೂ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಿದ್ದು, ವಾಟ್ಸಾಪ್ ನಂಬರ್ನಲ್ಲಿ ದೂರು ಸಲ್ಲಿಸಲು ಬೆಸ್ಕಾಂ ಸೂಚನೆ ನೀಡಿದೆ. ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಬೆಂಗಳೂರು ಪಶ್ಚಿಮ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಿದೆ.
ಮಳೆಗಾಲದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ತನ್ನ ವ್ಯಾಪ್ತಿಯ ಎಂಟೂ ಜಿಲ್ಲೆಗಳಲ್ಲಿ ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿಗೆ ಪರ್ಯಾಯವಾಗಿ ಎಂಟು ಪ್ರತ್ಯೇಕ ವಾಟ್ಸಾಪ್ ಸಂಖ್ಯೆಗಳನ್ನು ನೀಡಿದೆ. ಈ ಮೂಲಕ ವಿದ್ಯುತ್ ಸಮಸ್ಯೆ ಬಗ್ಗೆ ಗ್ರಾಹಕರು ತಮ್ಮ ಪ್ರದೇಶಕ್ಕೆ ಅನುಗುಣವಾಗಿ ದೂರು ಸಲ್ಲಿಸಬಹುದು.
ಬೆಂಗಳೂರು ಪೂರ್ವ ಕ್ಕೆ 8277884013, ಬೆಂಗಳೂರು ಪಶ್ಚಿಮಕ್ಕೆ 8277884012, ಬೆಂಗಳೂರು ಉತ್ತರಕ್ಕೆ 8277884014, ಬೆಂಗಳೂರು ದಕ್ಷಿಣಕ್ಕೆ 8277884017 ಬೆಸ್ಕಾಂ ಈ ನಂಬರ್ ನೀಡಿದೆ.