SSLC ಫಲಿತಾಂಶಕ್ಕೆ  ಕೌಂಟ್‌ಡೌನ್‌ – ಗುರುವಾರ ನಿರ್ಧಾರವಾಗಲಿದೆ ವಿದ್ಯಾರ್ಥಿಗಳ ಭವಿಷ್ಯ!

SSLC ಫಲಿತಾಂಶಕ್ಕೆ  ಕೌಂಟ್‌ಡೌನ್‌ – ಗುರುವಾರ ನಿರ್ಧಾರವಾಗಲಿದೆ ವಿದ್ಯಾರ್ಥಿಗಳ ಭವಿಷ್ಯ!

2023-24ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶಕ್ಕೆ  ಕೌಂಟ್‌ಡೌನ್‌ ಶುರುವಾಗಿದೆ. ಗುರುವಾರ (ಮೇ 09) ಬೆಳಗ್ಗೆ 10.30ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಟಿಯಲ್ಲಿ ಫಲಿತಾಂಶ ಪ್ರಕಟ ಮಾಡಲಿದೆ.

ಇದನ್ನೂ ಓದಿ: ನದಿ ನೀರಲ್ಲಿ ಆನೆ ಮರಿಯ ಆಟ – ಮನಸ್ಸಿಗೆ ಮುದ ನೀಡುತ್ತದೆ ಈ ಆನಂದದಾಯಕ ದೃಶ್ಯ!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಸಕ್ತ ಸಾಲಿನ ಫಲಿತಾಂಶ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ karresults.nic.in ಅಥವಾ kseab.karnataka.gov.in ನಲ್ಲಿ KSEAB ಪರಿಶೀಲಿಸಬಹುದು. ಮಾರ್ಚ್ 25ರಿಂದ ಏಪ್ರಿಲ್ 6ರವರೆಗೆ ಎಸ್​​ಎಸ್​ಎಲ್​​ಸಿ ಪರೀಕ್ಷೆಯನ್ನು ನಡೆಸಲಾಗಿತ್ತು.

ಎಸ್​ಎಸ್​ಎಲ್​​ಸಿ ಫಲಿತಾಂಶ ನೋಡುವುದು, ಡೌನ್​ಲೋಡ್ ಮಾಡುವುದು ಹೇಗೆ?

  • KSEAB ಗೆ ಭೇಟಿ ನೀಡಿ, karresults.nic.in ನಲ್ಲಿ ಅಧಿಕೃತ ವೆಬ್‌ಸೈಟ್ ಓಪನ್​​ ಮಾಡಿ
  • ಮುಖಪುಟದಲ್ಲಿ, ಫಲಿತಾಂಶದ ಲಿಂಕ್​​ನ್ನು ಕ್ಲಿಕ್ ಮಾಡಿ
  • ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ
  • ಸಲ್ಲಿಸು ವಿಭಾಗವನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ
  • ನಿಮ್ಮ ಫಲಿತಾಂಶವನ್ನು ವೀಕ್ಷಿಸಿ ಮತ್ತು ಆ ಪುಟವನ್ನು ಡೌನ್‌ಲೋಡ್ ಮಾಡಿ
  • ಪ್ರಿಂಟ್‌ಔಟ್ ತೆಗೆದುಕೊಳ್ಳಿ

SMS ಮೂಲಕ ಪರಿಶೀಲಿಸಿ ಫಲಿತಾಂಶ ಪರಿಶೀಲಿಸುವುದು ಹೇಗೆ?

  • ನಿಮ್ಮ ಮೊಬೈಲ್ ಫೋನ್‌ನ ಸಂದೇಶ ಕಳುಹಿಸುವ ಅಪ್ಲಿಕೇಶನ್ ತೆರೆಯಿರಿ
  • KSEEB10 (ರೋಲ್ ಸಂಖ್ಯೆ) ಟೈಪ್ ಮಾಡಿ
  • ರೋಲ್ ಸಂಖ್ಯೆ 56263 ಗೆ SMS ಮಾಡಿ
  • SSLC ಫಲಿತಾಂಶದ ಅಂಕಗಳನ್ನು ಅದೇ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ

Shwetha M