ವೋಟ್ ಮಾಡಲು ಬಂದವರಿಗೆ ಸಿಕ್ತು ವಜ್ರದ ಉಂಗುರ, ಟಿವಿ, ರೆಫ್ರಿಜರೇಟರ್!
ಮತದಾನದ ಹಕ್ಕು ಅತ್ಯಂತ ಶ್ರೇಷ್ಠವಾದುದು. ಇದರ ಮೌಲ್ಯ ತಿಳಿದವರಿಗಷ್ಟೇ ಗೊತ್ತು. ಆದ್ರೆ ಅನೇಕರು ಮನೆ ಹತ್ತಿರವೇ ಮತಗಟ್ಟೆ ಇದ್ರೂ ಮತದಾನ ಮಾಡುವುದಿಲ್ಲ. ಇನ್ನು ದೂರದೂರಿನಲ್ಲಿದ್ದವರು ಕೆಲಸ ಇದೆ. ಬ್ಯೂಸಿ ಇದ್ದೇವೆ.. ನಾನೊಬ್ಬ ಮತದಾನ ಮಾಡಿಲ್ಲ ಅಂದ್ರೆ ಊರು ಮುಳುಗಲ್ಲ ಅಂತಾ ಏನೇನೋ ಕಾರಣ ಕೊಟ್ಟು ಮತದಾನ ಮಾತದಾನ ಬಹಿಷ್ಕರಿಸುತ್ತಾರೆ. ಹೀಗಾಗಿ ಚುನಾವಣಾ ಅಧಿಕಾರಿಗಳು ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಲೇ ಇರುತ್ತಾರೆ. ಇದೀಗ ಇಲ್ಲೊಂದು ಕಡೆ ಮತದಾನ ಮಾಡಿದ ವ್ಯಕ್ತಿಗೆ ಡೈಮಂಡ್ ರಿಂಗ್ ಸಿಕ್ಕಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! – ಮಾಜಿ ಡ್ರೈವರ್ ಬಂಧನ ಆಗುತ್ತಾ?
ಹೌದು, ಮಂಗಳವಾರ (07) ದೇಶದ ಹಲವು ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ನಡೆದಿದೆ. ಮತದಾರರನ್ನು ಓಲೈಸಲು ಮತ್ತು ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಚುನಾವಣಾ ಇಲಾಖೆ ನಾನಾ ಸರ್ಕಸ್ ಕೂಡ ನಡೆಸಿತ್ತು. ಹಲವು ಕಡೆಗಳಲ್ಲಿ ಬೂತ್ ಅನ್ನು ವಿಶೇಷವಾಗಿ ವಿನ್ಯಾಸ ಮಾಡಿ ಮತ ಚಲಾಯಿಸಿ ಎಂಬ ಸಂದೇಶ ಸಾರಲಾಗಿತ್ತು. ಆದ್ರೆ ಬೋಫಾಲ್ನಲ್ಲಿ ಮಾತ್ರ ಮತದಾರರಿಗಾಗಿ ಭರ್ಜರಿ ಗಿಫ್ಟ್ ನೀಡಲಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಮತದಾನ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಭೋಪಾಲ್ನ ಪ್ರತಿ ಬೂತ್ನಲ್ಲಿ ಲಕ್ಕಿ ಡ್ರಾ ನಡೆಸಿದ್ದಾರೆ. ಅದರಲ್ಲಿ ಅದೃಷ್ಟಶಾಲಿ ಮತದಾರರಿಗೆ ಉಡುಗೊರೆ ಸಿಗಲಿದೆ ಎಂದು ಘೋಷಣೆ ಮಾಡಲಾಗಿತ್ತು. ಹೀಗೇ ಮತದಾರರನ್ನು ಕಡ್ಡಾಯವಾಗಿ ಮತ ಚಲಾಯಿಸಲು ಬರುವಂತೆ ಓಲೈಸಲಾಗಿತ್ತು. ಅದರಂತೆ ಲಕ್ಕಿ ಡ್ರಾದಲ್ಲಿ ಓರ್ವ ಮತದಾರನಿಗೆ ವಜ್ರದ ಉಂಗುರ ಸಿಕ್ಕಿದೆ.
ಸಹಾಯಕ ನೋಡಲ್ ಅಧಿಕಾರಿ ರಿತೇಶ್ ಶರ್ಮಾ ಮಾತನಾಡಿ, ಕಳೆದ ಎರಡು ವರ್ಷದಲ್ಲಿ ಮತದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ಮತದಾನದ ಶೇಕಡಾವಾರು ಗಮನದಲ್ಲಿಟ್ಟುಕೊಂಡು ಭೋಪಾಲ್ ಆಡಳಿತವು ಮತದಾರರನ್ನು ಮತ ಚಲಾಯಿಸುವಂತೆ ಓಲೈಸಿದೆ. ಕೊನೆಗೆ ಮತದಾರರನ್ನು ಉತ್ತೇಜಿಸುವ ಅಲುವಾಗಿ ಲಕ್ಕಿ ಡ್ರಾ ಇಡಲಾಗಿದೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ಮೂವರು ಮತದಾರರಿಗೆ ಲಕ್ಕಿ ಡ್ರಾ ಬಹುಮಾನ ದೊರೆತಿದೆ. ಅದರಲ್ಲಿ ಮತಗಟ್ಟೆ 211ರಲ್ಲಿ ಮತದಾರನೊಬ್ಬನಿಗೆ ವಜ್ರದ ಉಂಗುರ ಸಿಕ್ಕಿದೆ. 2 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮೂರು ಲಕ್ಕಿ ಡ್ರಾ ನಡೆಸಲಾಗಿದೆ. ಇದಲ್ಲಿ ವಿಜೇತರೊಗೆ ರೆಫ್ರಿಜರೇಟರ್, ಟಿವಿ, ಉಂಗುರವನ್ನು ಬಹುಮಾನವಾಗಿ ನೀಡಲಾಗಿದೆ ಎಂದು ರಿತೇಶ್ ಶರ್ಮಾ ಹೇಳಿದ್ದಾರೆ.