ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! – ಮಾಜಿ ಡ್ರೈವರ್ ಬಂಧನ ಆಗುತ್ತಾ?
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಪ್ರಕರಣಕ್ಕೆ ದೊಡ್ಡ ತಿರುವು ದೊರೆತಿದ್ದು, ರೇವಣ್ಣ ಕುಟುಂಬದ ಮಾಜಿ ಕಾರು ಚಾಲಕ ಕಾರ್ತಿಕ್ ಹಾಸನ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜತೆಗಿರುವ ಫೋಟೊ ವೈರಲ್ ಆಗುತ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಪೆನ್ಡ್ರೈವ್ ವಿಡಿಯೋ ವೈರಲ್ ಮಾಡಿದ ಆರೋಪದಲ್ಲಿ ಪ್ರಜ್ವಲ್ ರೇವಣ್ಣ ಅವರ ಮಾಜಿ ಡ್ರೈವರ್ ಕಾರ್ತಿಕ್ ಗೌಡ ಅವರನ್ನು ಅರೆಸ್ಟ್ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಹಾಸನ ಪೆನ್ಡ್ರೈವ್ ಪ್ರಕರಣ – ಪ್ರಜ್ವಲ್ ರೇವಣ್ಣ ಮೇ 15 ಕ್ಕೆ ಭಾರತಕ್ಕೆ?
ಇತ್ತೀಚೆಗೆ ಪ್ರಜ್ವಲ್ ಮಾಜಿ ಡ್ರೈವರ್ ಪೆನ್ಡ್ರೈವ್ ವಿಡಿಯೋವನ್ನು ದೇವರಾಜೇಗೌಡ ಅವರಿಗೆ ಕೊಟ್ಟಿದ್ದೆ. ತಾನು ವಿಚಾರಣೆಗೆ ರೆಡಿ ಇದ್ದೇನೆ ಅಂತಾ ಹೇಳಿದ್ದರು. ಬಳಿಕ ಕಾರ್ತಿಕ್ ಅವರನ್ನು ವಿಚಾರಣೆ ಮಾಡಲಾಗಿತ್ತು. ಕಳೆದ ಏಪ್ರಿಲ್ 30ರಂದು ಎಸ್ಐಟಿ ವಿಚಾರಣೆಗೆ ಕಾರ್ತಿಕ್ ಗೌಡ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಹಾಸನದ ಪೆನ್ಡ್ರೈವ್ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಹೀಗಾಗಿ ಯಾವುದೇ ಹೇಳಿಕೆ, ದಾಖಲೆಯನ್ನು ಬಹಿರಂಗ ಪಡಿಸಬಾರದು. ಇದರಿಂದ ತನಿಖೆಗೆ ಹಿನ್ನೆಡೆಯಾಗುತ್ತೆ ಎಂದು ಕಾರ್ತಿಕ್ ಗೌಡಗೆ ಎಸ್ಐಟಿ ಸೂಚಿಸಿತ್ತು. ಆದರೆ ಅಧಿಕಾರಿಗಳ ವಾರ್ನಿಂಗ್ಗೆ ಕಾರ್ತಿಕ್ ತಲೆಕೆಡಿಸಿಕೊಂಡಿಲ್ಲ. ಕಾರ್ತಿಕ್ ಗೌಡ ಅವರು ಸಂದರ್ಶನಗಳನ್ನು ನೀಡಿದ್ದು, ಕೆಲವು ಮಹತ್ವದ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ. ಪೋಟೋ, ವಿಡಿಯೋ ವೈರಲ್ ಆಗಿರಬಹುದಾದ ಬಗ್ಗೆ ಆರೋಪಿಯ ಬಗ್ಗೆ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ತಿಕ್ನನ್ನು ಅರೆಸ್ಟ್ ಮಾಡುವ ಸಾಧ್ಯತೆ ಇದೆ.
ಡ್ರೈವರ್ ಕಾರ್ತಿಕ್ ಗೌಡ ಅವರು ಮೊದಲ ವಿಚಾರಣೆಯಲ್ಲಿ ಫೋಟೋ ವಿಡಿಯೋ ಮೊದಲು ನನಗೆ ಸಿಕ್ಕಿದ್ದು ನಂತರ ದೇವರಾಜೇಗೌಡರಿಗೆ ಕೊಟ್ಟಿದ್ದೆ. ಅವರೇ ಪೆನ್ಡ್ರೈವ್ ವಿಡಿಯೋ ವೈರಲ್ ಮಾಡಿರಬಹುದು ಎಂದಿದ್ದರು. ಆದ್ರೀಗ ಪೋಟೋ, ವಿಡಿಯೋಗಳನ್ನು ಪ್ರಜ್ವಲ್ ಸ್ನೇಹಿತ ಮೊದಲು ನನಗೆ ಕೊಟ್ಟಿತ್ತು. ಪ್ರಜ್ವಲ್ ಸ್ನೇಹಿತ ಬ್ಲೂ ಟೂತ್ನಲ್ಲಿ ನನ್ನ ಮೊಬೈಲ್ಗೆ ಕಳಿಸಿದ್ದ. ಅದರಲ್ಲಿ ಕೆಲ ಫೋಟೋಗಳನ್ನ ನಾನು ಭವಾನಿ ರೇವಣ್ಣ ಅವರಿಗೆ ಕಳಿಸಿ ಪ್ರಜ್ವಲ್ ಕೃತ್ಯದ ಬಗ್ಗೆ ಹೇಳಿದ್ದೆ ಎಂದಿದ್ದಾರೆ. ಈ ಹೇಳಿಕೆಗಳ ಹಿನ್ನೆಲೆಯಲ್ಲಿ ಡ್ರೈವರ್ ಕಾರ್ತಿಕ್ ಅವರನ್ನು ವಶಕ್ಕೆ ಪಡೆಯಲು ಎಸ್.ಐ.ಟಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ.