SKY ವರ್ಲ್ಡ್ ಕಪ್ ಆಟ! -ಆರೆಂಜ್ ಆರ್ಮಿ ಔಟ್? -ಆರ್ಸಿಬಿಗೆ ಕುದುರಿತಾ ಲಕ್?

ಐಪಿಎಲ್ನಿಂದ ಆಲ್ರೆಡಿ ಔಟಾಗಿರುವ ಮುಂಬೈ ಈಗ ಉಳಿದವರ ಪ್ಲೇ ಆಫ್ ಕನಸನ್ನು ಭಗ್ನ ಮಾಡಲು ಹೊರಟಿದೆ.. ಆರೆಂಜ್ ಆರ್ಮಿ ಹೈದ್ರಾಬಾದ್ ಈ ಸೀಸನ್ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕವೇ ಸಂಚಲನ ಸೃಷ್ಟಿಸಿತ್ತು.. ಆದ್ರೆ ಪ್ಲೇಆಫ್ಗೆ ಎಂಟ್ರಿ ಕೊಡುವ ಹಂತದಲ್ಲಿ ಮುಗ್ಗರಿಸಿರುವ ಎಸ್ಆರ್ಹೆಚ್, ಕಳೆದ ಐದು ಪಂದ್ಯಗಳಲ್ಲಿ ಮೂರನ್ನು ಸೋತಿದೆ.. ಇನ್ನುಳಿದ ಮೂರರಲ್ಲಿ ಎರಡನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.. ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ ಭರ್ಜರಿ ಸೆಂಚುರಿಯ ಜೊತೆಗೆ ವರ್ಲ್ಡ್ ಕಪ್ಗೂ ಭರ್ಜರಿ ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ:1 WIN.. 3 ಟೀಂ ಹಿಂದಿಕ್ಕಿದ RCB – ಪ್ಲೇ ಆಫ್ ಗೇರಲು 3 ದಾರಿಗಳೇನು?
ಸತತ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಕಡೆಗೂ ಗೆದ್ದಿದೆ.. ಅದೃಷ್ಟ ಕೈಕೊಟ್ಟಿದ್ದೋ.. ಅಥವಾ ನಾಯಕ ಹಾರ್ದಿಕ್ ಪಾಂಡ್ಯಾ ಅವರ ಬಗ್ಗೆ ಅಭಿಮಾನಿಗಳಿಗೆ ಇರುವ ಸಿಟ್ಟಿಗೋ ಏನೋ.. ಮುಂಬೈ ಮಾತ್ರ ಸೋಲಿನ ಸುಳಿಯಲ್ಲಿ ಸಿಲುಕಿ ಒದ್ದಾಡ್ತಾ ಇತ್ತು.. ಆಡಿದ 12 ಪಂದ್ಯಗಳಲ್ಲಿ ಸೋಮವಾರದ್ದೂ ಸೇರಿ ಕೇವಲ ನಾಲ್ಕು ಪಂದ್ಯಗಳಲ್ಲಿ ಗೆದ್ದಿರುವ ಮುಂಬೈ ಪಾಯಿಂಟ್ ಟೇಬಲ್ನಲ್ಲಿ 9ನೇ ಸ್ಥಾನದಲ್ಲಿದೆ.. ಇಷ್ಟು ದಿನದ ಸೋಲಿನ ಗಾಯಕ್ಕೆ ಸೀಸನ್ನ ಕಡೆಯ ಹಂತದಲ್ಲಿ ಗೆಲುವಿನ ಮುಲಾಮು ಹಚ್ಚಲು ತಂಡ ಮುಂದಾಗಿದೆ.. ಗೆಲ್ಲೋದಿಕ್ಕೆ 174 ರನ್ಗಳ ಸುಲಭ ಗುರಿಯಿದ್ದರೂ 31 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಒದ್ದಾಡುವ ಹಂತಕ್ಕೆ ಮುಂಬೈ ತಲುಪಿತ್ತು.. ಆದ್ರೆ ಸ್ಕೈ ಮಾತ್ರ ತಮ್ಮ ಸುಮ್ಮನಾಗಲಿಲ್ಲ.. ಸ್ವಲ್ಪ ನಿಧಾನಕ್ಕೆ ಇನ್ನಿಂಗ್ಸ್ ಕಟ್ಟಲು ಆರಂಭಿಸಿದ್ದರು.. ಒಂದೆಡೆ ತಿಲಕ್ ವರ್ಮಾ ಕೂಡ ಉತ್ತಮ ಸಾಥ್ ಕೊಟ್ಟರು.. ಮತ್ತೊಂದೆಡೆ ಸೂರ್ಯ ನಿಧಾನಕ್ಕೆ ಪ್ರಜ್ವಲಿಸಲು ಶುರುವಾದ್ಮೇಲೆ ಹೈದ್ರಾಬಾದ್ ಬೌಲರ್ಗಳಿಗೆ ಹೊಡೆಸಿಕೊಳ್ಳೋದು ಬಿಟ್ಟರೆ ಬೇರೆ ಗತಿಯಿಲ್ಲ ಎಂಬಂತಾಗಿತ್ತು.. 51 ಎಸೆತಗಳಲ್ಲಿ ಭರ್ಜರಿ 102 ರನ್ ಗಳಿಸಿ ನಾಟೌಟ್ ಆಗಿ ಉಳಿದ ಸೂರ್ಯ, ತಂಡ ಗೆಲ್ಲುವುದನ್ನು ನೋಡಿಕೊಂಡರು.. ಮತ್ತೊಂದು ಎಂಡ್ನಲ್ಲಿದ್ದ ತಿಲಕ್ ವರ್ಮಾ 32 ಎಸೆತಗಳಲ್ಲಿ 37 ರನ್ ಹೊಡೆದು, ತಾನೇನಿದ್ದರೂ ಸ್ಟ್ರೈಕ್ ರೊಟೇಟ್ ಮಾಡೋದಿಕ್ಕಷ್ಟೇ ಇರೋದು ಎಂಬ ರೀತಿಯಲ್ಲಿ ಜವಾಬ್ದಾರಿಯುತವಾಗಿ ಆಡಿದ್ರು.. ಇದ್ರಿಂದಾಗಿ 17.3 ಓವರ್ಗಳಲ್ಲಿ ಟಾರ್ಗೆಟ್ ತಲುಪಿದ ಮುಂಬೈ ಇಂಡಿಯನ್ಸ್ 7 ವಿಕೆಟ್ಗಳ ಅಂತರದ ಗೆಲುವು ಸಾಧಿಸಿತು..
ಇನ್ನು ಮುಂಬೈ ಇಂಡಿಯನ್ಸ್ ತಂಡ ಎಸ್ಆರ್ಹೆಚ್ ವಿರುದ್ಧ ಗೆಲುವು ದಾಖಲಿಸಿಕೊಳ್ಳುವುದರ ಜೊತೆಗೆ ಹೈದ್ರಾಬಾದ್ನ ಪ್ಲೇಆಫ್ ಕನಸಿಗೂ ಸಂಚಕಾರ ತಂದಿಟ್ಟಿದೆ.. ಈಗ ಮುಂದಿನ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನಾದ್ರೂ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಹೈದ್ರಾಬಾದ್ ತಂಡವಿದೆ.. ಒಂದು ವೇಳೆ ಎಸ್ಆರ್ಹೆಚ್ ಮುಂದಿನ ಮೂರು ಪಂದ್ಯಗಳಲ್ಲಿ ಕೇವಲ ಒಂದನ್ನು ಮಾತ್ರ ಗೆದ್ದರೆ, ಆಗ ಆರ್ಸಿಬಿಗೆ ಕೂಡ ಪ್ಲೇಆಫ್ಗೆ ನುಗ್ಗುವ ಅವಕಾಶ ಇದ್ದೇ ಇದೆ.. ದೊಡ್ಡ ಅಂತರಗಳ ಗೆಲುವು ಮಾತ್ರ ಈಗ ಆರ್ಸಿಬಿಯನ್ನು ಕೈಹಿಡಿಯಬೇಕಿರುವುದು.. ಹೀಗೆ ಮುಂಬೈಯ ಒಂದು ಗೆಲುವು ಈಗ ಪಾಯಿಂಟ್ ಟೇಬಲ್ನಲ್ಲಿ ಸಂಚಲನ ಸೃಷ್ಟಿಸಿದೆ.. ಈಗ ಐಪಿಎಲ್ ಇಂಟ್ರೆಸ್ಟಿಂಗ್ ಸ್ಟೇಜ್ಗೆ ಬಂದು ನಿಂತಿದ್ದು ಯಾರು ಪ್ಲೇಆಫ್ಗೆ ಎಂಟ್ರಿ ಕೊಡ್ತಾರೆ ಎನ್ನುವುದನ್ನು ನೋಡಬೇಕಿದೆ.. ಆಲ್ರೆಡಿ ಎರಡು ಸೀಟುಗಳು ಪ್ಲೇಆಫ್ನಲ್ಲಿ ಭರ್ತಿಯಾಗಿವೆ.. ಖಾಲಿ ಇರೋ ಇನ್ನೆರಡು ಸ್ಥಾನಗಳಿಗೆ ಐದು ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಇಲ್ಲಿ ಚೆನ್ನೈನಿಂದ ಹಿಡಿದು ಆರ್ಸಿಬಿಯವರೆಗೆ ಯಾವುದೇ ತಂಡ ಬೇಕಿದ್ದರೂ ಟಾಪ್ 4ರಲ್ಲಿ ಕಾಣಿಸಿಕೊಳ್ಳಬಹುದು.. ಆದರೆ ಹಾಗೆ ಆಗ್ಬೇಕು ಅಂದ್ರೆ ಇನ್ನೊಬ್ಬರ ಸೋಲು ಕೂಡ ಅಷ್ಟೇ ಮುಖ್ಯ ಪಾತ್ರ ನಿರ್ವಹಿಸಲಿದೆ..