ಸಂಕಷ್ಟದಲ್ಲಿದ್ದ ಮುಂಬೈ ತಂಡವನ್ನ ಪಾರು ಮಾಡಿದ ಮಿಸ್ಟರ್ 360 – ಮುಂಬೈಗೆ ಭರ್ಜರಿ ಗೆಲುವು

ಸಂಕಷ್ಟದಲ್ಲಿದ್ದ ಮುಂಬೈ ತಂಡವನ್ನ ಪಾರು ಮಾಡಿದ ಮಿಸ್ಟರ್ 360 – ಮುಂಬೈಗೆ ಭರ್ಜರಿ ಗೆಲುವು

ಮುಂಬೈ ಇಂಡಿಯನ್ಸ್​ ಹಾಗೂ ಸನ್ ರೈಸರ್ಸ್ ಹೈದರಾಬಾದ್‌ ತಂಡದ ನಡವೆ ನಡೆಗ ಹೈವೋಲ್ಟೇಜ್‌ ಪಂದ್ಯದಲ್ಲಿ ಮುಂಬೈ ಭರ್ಜರಿ ಜಯ ಗಳಿಸಿದೆ. ಹೈದರಾಬಾದ್‌ ವಿರುದ್ದ 7 ವಿಕೆಟ್‌ಗಳ ಗೆಲುವು ಪಡೆದಿದೆ.

ಇದನ್ನೂ ಓದಿ: 1 WIN.. 3 ಟೀಂ ಹಿಂದಿಕ್ಕಿದ RCB – ಪ್ಲೇ ಆಫ್ ಗೇರಲು 3 ದಾರಿಗಳೇನು?

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​​ನ ಪಂದ್ಯದಲ್ಲಿ 174 ರನ್​ಗಳ ಗುರಿ ಬೆನ್ನಟ್ಟಿದ್ದ ಮುಂಬೈ ಟೀಮ್​ 31 ರನ್​ಗೆ ರೋಹಿತ್ ಶರ್ಮಾ ಸೇರಿ 3 ಪ್ರಮುಖ ವಿಕೆಟ್​ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್​ಗೆ ಆಗಮಿಸಿದ ವಿಶ್ವದ ನಂಬರ್‌-1 ಟಿ20 ಬ್ಯಾಟರ್‌ ಸೂರ್ಯಕುಮಾರ್ ಆಕರ್ಷಕ ಬ್ಯಾಟಿಂಗ್‌ ನಡೆಸಿ ಈ ಟೂರ್ನಿಯಲ್ಲಿ ಫಸ್ಟ್ ಸೆಂಚುರಿ ಹಾಗೂ ಐಪಿಎಲ್‌ನಲ್ಲಿ 2ನೇ ಶತಕ ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕೇವಲ 51 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ ಅಜೇಯ 102 ರನ್‌ಗಳನ್ನು ಸಿಡಿಸಿದರು.

200ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಸೂರ್ಯ, 51 ಎಸೆತಗಳಲ್ಲಿ 12 ಫೋರ್, 6 ಆಕಾಶದೆತ್ತರ ಸಿಕ್ಸರ್‌ ಸಮೇತ 102 ರನ್‌ ಗಳಿಸುವ ಮೂಲಕ ಮುಂಬೈ ತಂಡವನ್ನು ಗೆಲ್ಲಿಸಿದರು. ಈ ಪಂದ್ಯದ 18ನೇ ಓವರ್​​ನಲ್ಲಿ ತಂಡದ ಗೆಲುವಿಗೆ 6 ರನ್ ಬೇಕಿದ್ದರೇ ಸೂರ್ಯ ಸೆಂಚುರಿಗೆ 4 ರನ್ ಬೇಕಿತ್ತು. ಈ ವೇಳೆ ಆಫ್​ ಸೈಡ್​ನಲ್ಲಿ ಸಖತ್ ಆಗಿರೋ ಸಿಕ್ಸರ್​ ಸಿಡಿಸಿದ ಸೂರ್ಯಕುಮಾರ್ ತಂಡದ ಗೆಲುವಿನೊಂದಿಗೆ ಶತಕ ಪೂರೈಸಿದರು. ಈ ಮೂಲಕ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ರೋಹಿತ್‌ ಶರ್ಮಾ ನಂತರ 2 ಸೆಂಚುರಿ ಸಿಡಿಸಿದ 2ನೇ ಬ್ಯಾಟ್ಸ್​ಮನ್ ಸೂರ್ಯ ಆಗಿದ್ದಾರೆ. ಹೀಗಾಗಿ ಐಪಿಎಲ್​ನಲ್ಲಿ ಸೆಂಚುರಿ ಸಿಡಿಸಿದ ಸಾಲಿನಲ್ಲಿ ರೋಹಿತ್ ಜೊತೆ ಈಗ ಸೂರ್ಯ ಕೂಡ ಇರಲಿದ್ದಾರೆ.

Shwetha M