ನಮ್ಮ ಮೆಟ್ರೋ ವೇಗ ಕಡಿಮೆ ಆಗ್ತಿದ್ಯಾ? – ಬಿಎಂಆರ್‌ಸಿಎಲ್‌ ಹೇಳಿದ್ದೇನು?

ನಮ್ಮ ಮೆಟ್ರೋ ವೇಗ ಕಡಿಮೆ ಆಗ್ತಿದ್ಯಾ? – ಬಿಎಂಆರ್‌ಸಿಎಲ್‌ ಹೇಳಿದ್ದೇನು?

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಲಕ್ಷಾಂತರ ಮಂದಿ ಪ್ರಯಾಣಕ್ಕಾಗಿ ನಮ್ಮ ಮೆಟ್ರೋವನ್ನೇ ಅವಲಂಭಿಸಿದ್ದಾರೆ. ಕಡಿಮೆ ಸಮಯದಲ್ಲಿ ನಿರ್ಧಿಷ್ಟ ಜಾಗಕ್ಕೆ ತಲುಪಬಹುದು ಅನ್ನೋ ಉದ್ದೇಶದಿಂದಾಗಿ ಬಹುತೇಕರು ಮೆಟ್ರೋದಲ್ಲೇ ಪ್ರಯಾಣಿಸುತ್ತಿದ್ದಾರೆ. ಆದರೆ ನಮ್ಮ ಮೆಟ್ರೋ ರೈಲಿನ ವೇಗ ಕಡಿಮೆಯಾಗುತ್ತಿದೆ ಅನ್ನೋ ದೂರು ಕೇಳಿಬರುತ್ತಿದೆ. ಇದೀಗ ಬಿಎಂಆರ್‌ಸಿಎಲ್‌ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಕೋವಿಶೀಲ್ಡ್​ ಪಡೆದವರು ತಂಪುಪಾನಿಯ, ಐಸ್​ ಕ್ರೀಮ್ ಸೇವಿಸಬಹುದಾ? – ಆರೋಗ್ಯ ಇಲಾಖೆ ಹೇಳಿದ್ದೇನು?

ಹೌದು, ಕಳೆದ ಕೆಲವು ದಿನಗಳಿಂದ ರೈಲಿನ ವೇಗ ಕಡಿಮೆಯಾಗುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ರೈಲಿನ ವೇಗ ಕಡಿಮೆಯಾದರೆ ಪ್ರಯಾಣ ಸಮಯ ಹೆಚ್ಚಾಗುತ್ತದೆ. ಇದ್ರಿಂದಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗಿತ್ತು. ಇದೀಗ ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸುರಕ್ಷತೆಗೆ ಆದ್ಯತೆ ನೀಡಿ ರೈಲು ಟ್ರ್ಯಾಕ್‌ನಲ್ಲಿ ತಿರುವುಗಳು ಸಮೀಪಿಸುತ್ತಿದ್ದಂತೆ ವೇಗವನ್ನು ಕಡಿಮೆ ಮಾಡಲು ಮೆಟ್ರೋ ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.

ಪ್ರಯಾಣಿಕರ ಸುರಕ್ಷತೆ ಮತ್ತು ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ನೇರಳೆ ಮಾರ್ಗದ ಉದ್ದಕ್ಕೂ ರೈಲಿನ ವೇಗವನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸುವುದು ನಿರ್ಣಾಯಕವಾಗಿದೆ. ವಿಶೇಷವಾಗಿ ಬಾಗಿದ ಹಳಿಗಳಿರುವ ಪ್ರದೇಶಗಳಲ್ಲಿ ಮೆಟ್ರೋ ರೈಲಿನ ವೇಗವನ್ನು ಕಡಿಮೆ ಮಾಡಬೇಕಾಗಿದೆ. ಈ ನಿರ್ಧಾರವನ್ನು ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಮಾಡಲಾಗಿದೆ ಎಂದು BMRCL ತಿಳಿಸಿದೆ.

Shwetha M